ವಾಟ್ಸಾಪ್ ಪಾರ್ಟ್ ಟೈಂ ಜಾಬ್ ಆಫರ್ ನಂಬಿ ಹೋದ ಮಹಿಳೆಗೆ ಆಗಿದ್ದೇನು?
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಸಂದೇಶಗಳ ಮೂಲಕ ಜನರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಅದರಲ್ಲೂ ಪಾರ್ಟ್ ಟೈಂ ಜಾಬ್ ಆಫರ್ ಹೆಸರಿನ ಸಂದೇಶಗಳ ಮೂಲಕ ಹಣ ವಂಚಿಸುತ್ತಿರುವ ಘಟನೆಗಳು ಹೆಚ್ಚಿನ ಪ್ರಮಾಣದಲ್ಲಿದೆ. ಇದೀಗ ಅಂತಹದ್ದೇ ಘಟನೆ ನೋಯ್ಡಾದಲ್ಲಿ ಕೂಡ ನಡೆದಿದೆ.
ಹೌದು, ನೋಯ್ಡಾದ ಮಹಿಳೆಯೊಬ್ಬರು ವಾಟ್ಸಾಪ್ ಪಾರ್ಟ್ ಟೈಂ ಜಾಬ್ ಆಫರ್ ಸಂದೇಶದ ಬಲೆಗೆ ಬಿದ್ದು 4.3 ಲಕ್ಷ ರೂ.ಕಳೆದುಕೊಂಡಿದ್ದಾರೆ. ಈ ಮೂಲಕ ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ಪಾರ್ಟ್ ಟೈಂ ಜಾಬ್ ಆಫರ್ ಸ್ಕ್ಯಾಮ್ ದೇಶವ್ಯಾಪ್ತಿ ನಡೆಯುತ್ತಿದೆ ಅನ್ನೊದು ಕನ್ಫರ್ಮ್ ಆಗಿದೆ. ಹಾಗಾದ್ರೆ ನೋಯ್ಡಾದ ಮಹಿಳೆ ವಾಟ್ಸಾಪ್ ಪಾರ್ಟ್ ಟೈಂ ಜಾಬ್ ಆಫರ್‌ಗೆ ಮಾರುಹೋಗಿದ್ದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೋಯ್ಡಾದಲ್ಲಿರುವ ಮಹಿಳೆಗೆ ವಾಟ್ಸಾಪ್‌ನಲ್ಲಿ ಪಾರ್ಟ್ ಟೈಂ ಜಾಬ್ ಆಫರ್ ಹೆಸರಿನ ಸಂದೇಶ ಬಂದಿದೆ. ಸಂದೇಶವನ್ನು ಕ್ಲಿಕ್ ಮಾಡಿದ ಮಹಿಳೆಗೆ ನೀವು ಹಣ ಸಂಪಾದಿಸಲು ಯೂಟ್ಯೂಬ್ ವೀಡಿಯೊಗಳನ್ನು ಲೈಕ್ ಮಾಡುವಂತೆ ಹೇಳಲಾಗಿದೆ. ಇದಕ್ಕಾಗಿ ನಿಮಗೆ ಇಂತಿಷ್ಟು ಹಣ ನಿಡಲಾಗುತ್ತದೆ ಎಂದು ಆಮಿಷ ಒಡ್ಡಲಾಗಿದೆ. ಇದನ್ನು ಒಪ್ಪಿದ ಮಹಿಳೆಯನ್ನು ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಲಾಗಿದೆ. ಟೆಲಿಗ್ರಾಮ್ ಗ್ರೂಪ್‌ನಲ್ಲಿ ಮಹಿಳೆಗೆ ಕೆಲವು ಟಾಸ್ಕ್‌ಗಳನ್ನು ನೀಡಲಾಗಿದೆ.
ಇನ್ನು ಮಹಿಳೆಯ ವಿಶ್ವಾಸವನ್ನು ಗಳಿಸುವುದಕ್ಕಾಗಿ ಪ್ರಾರಂಭದಲ್ಲಿ ಹಣವನ್ನು ಸಹ ನೀಡಿದ್ದಾರೆ. ಆದರೆ ನಂತರ ಆಕೆಗೆ ಹೆಚ್ಚಿನ ಆದಾಯದ ಭರವಸೆ ನಿಡಿ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಸುಮಾರು 4.3 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಇದಾದ ನಂತರ ಮಹಿಳೆಗೆ ಯಾವುದೇ ಹಣ ಸಂದಾಯವಾಗಿಲ್ಲ. ಇದಕ್ಕಾಗಿ ಆಕೆ ಟೆಲಿಗ್ರಾಮ್ ಗ್ರೂಪ್‌ಗೆ ಸೇರ್ಪಡೆ ಮಾಡಿದ ಸಂಖ್ಯೆಗೆ ಕರೆ ಮಾಡಿದ್ದಾಳೆ. ಆದರೆ ಆ ನಂಬರ್ ಸ್ವಿಚ್ಡ್ ಆಫ್ ಆಗಿದೆ. ಆಗ ಮಹಿಳೆಗೆ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಮಹಿಳೆ ಸೈಬರ್ ವಂಚನೆ ವಿರುದ್ಧ ಸೆಕ್ಟರ್ 58 ನೋಯ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಈ ಪ್ರಕರಣ ತನಿಖೆಯ ಹಂತದಲ್ಲಿದೆ, ಇನ್ನು ಇದೇ ಮಾದರಿಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಆದರಿಂದ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬರುವ ಪಾರ್ಟ್ ಟೈಂ ಜಾಬ್ ಆಫರ್‌ಗಳ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಂಡು ಮುಂದುವರೆಯುವುದು ಸೂಕ್ತವಾಗಿದೆ.
ಇನ್ನು ಈ ರೀತಿಯ ವಂಚನೆ ಪ್ರಕರಣಗಳು ಭಾರತ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಇದರ ವಿರುದ್ದ ಎಚ್ಚರಿಕೆ ವಹಿಸಲು ದೇಶವಾಸಿಗಳಿಗೆ ಸೂಚಿಸಿದೆ. ಅಷ್ಟೇ ಅಲ್ಲ ವಾಟ್ಸಾಪ್ ಸ್ಕ್ಯಾಮ್ ತಡೆಗಟ್ಟುವ ನಿಟ್ಟಿನಲ್ಲಿ ಮೋಸದ ಚಟುವಟಿಕೆಗಳಲ್ಲಿ ತೊಡಗಿರುವ ಅಕೌಂಟ್‌ಗಳನ್ನು ಬ್ಯಾನ್ ಮಾಡಲು ವಾಟ್ಸಾಪ್‌ಗೆ ಆದೇಶಿಸಿದೆ. ಇನ್ನು ಬಳಕೆರದಾರರು ಅಪರಿಚಿತ ಅಂತರರಾಷ್ಟ್ರೀಯ ಅಥವಾ ದೇಶೀಯ ಫೋನ್ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿದರೆ ವರದಿ ಮಾಡುವಂತೆ ವಾಟ್ಸಾಪ್ ಹೇಳಿಕೊಂಡಿದೆ.

ಇತ್ತೀಚಿಗೆ ಮುಂಬೈನಲ್ಲಿ ವ್ಯಕ್ತಿಯೊಬ್ಬ ಫಾರ್ಟ್ ಟೈಂ ಜಾಬ್‌ಗಾಗಿ ಸರ್ಚ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಫೇಸ್‌ಬುಕ್‌ನಲ್ಲಿ ಅಮೆಜಾನ್‌ನಲ್ಲಿ ಉದ್ಯೋಗವಿದೆ ಎಂಬ ಜಾಹಿರಾತು ನೋಡಿ ಕ್ಲಿಕ್ ಮಾಡಿದ್ದಾರೆ. ಆದರೆ ಮುಂದೆ ನಡೆದಿತ್ತು ಮಾತ್ರ ಬರೀ ಮೋಸ. ಮುಂಬೈನಲ್ಲಿ ಅಂಧೇರಿ ಮೂಲದ ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ 33 ವರ್ಷದ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಅಮೆಜಾನ್‌ನಲ್ಲಿ ಉದ್ಯೋಗವೆಂಬ ಜಾಹಿರಾತನ್ನು ಕ್ಲಿಕ್ ಮಾಡಿದ್ದಾನೆ.
ಹೀಗೆ ಹಂತಹಂತವಾಗಿ ಸಂತ್ರಸ್ತನ ವಿಶ್ವಾಸಗಳಿಸಿದ ವಂಚಕಿ ಕೆಲವೇ ದಿನಗಳಲ್ಲಿ 2.4 ಲಕ್ಷ ಖರ್ಚು ಮಾಡಿ ಒಟ್ಟು 5.13 ಲಕ್ಷ ಗಳಿಸಿ ಎಂಬ ಸಂದೇಶ ಕಳುಹಿಸಿದ್ದಾಳೆ. ಇದನ್ನು ನಂಬಿದ ಸಂತ್ರಸ್ತ ತನ್ನ ಇ-ವಾಲೆಟ್‌ಗೆ 2.4ಲಕ್ಷ ರೂ ಜಮಾ ಮಾಡಿದ್ದಾನೆ. ಆಗ ಆತನ ಇವಾಲೆಟ್ ಖಾತೆಯಲ್ಲಿ 5.13ಲಕ್ಷ ರೂ ಜಮಾ ಆಗಿದೆ ಎಂಬ ಸಂದೇಶ ಬಂದಿದೆ. ಕೂಡಲೇ ಸಂತ್ರಸ್ತ ಅದನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಪ್ರಯತ್ನಿಸಿದ್ದಾನೆ. ಆದರೆ ಇ-ವಾಲೆಟ್‌ನಿಂದ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿಲ್ಲ.


Click it and Unblock the Notifications