ವಾಟ್ಸ್‌ಆಪ್ ವೆಬ್‌ನಲ್ಲಿ ಜಿಪ್ ಇಮೇಜ್ ಶೇರ್ ಬಟನ್
ಇತ್ತೀಚೆಗೆ ವಾಟ್ಸ್ ಆಪ್ ಪ್ರತಿದಿನ ಹೊಸದೊಂದು ಅಪ್ ಡೇಟ್ ನೊಂದಿಗೆ ಹೊರಬರುತ್ತಿದೆ. ಇತ್ತೀಚೆಗಷ್ಟೇ ವಾಟ್ಸ್ ಆಪ್ ಫಾರ್ವಡ್ ಮೆಸೇಜ್ ಗಳಿಗೆ ಫಾರ್ವಡ್ ಲೇಬಲ್ ನ್ನು ಅಂಟಿಸಿದೆ. ಈ ವೈಶಿಷ್ಟ್ಯತೆಯ ಮೂಲಕ ಮೆಸೇಜ್ ಕಳಿಸಿದವರು ಆ ಮೆಸೇಜ್ ನ್ನು ಸ್ವತಃ ಸೃಷ್ಟಿಸಿ ಕಳಿಸಿದ್ದಾರೋ ಅಥವಾ ಫಾರ್ವಡ್ ಮಾಡಿದ್ದಾರೋ ಎಂಬುದು ತಿಳಿಯುತ್ತದೆ. ಇದೇ ರೀತಿ ವಾಟ್ಸ್ ಆಪ್ ಐಓಎಸ್ ಮತ್ತು ಆಂಡ್ರಾಯ್ಡ್ ಫ್ಲಾಟ್ ಫಾರ್ಮ್ ಗೆ ಹಲವಾರು ವಿಶೇಷ ಸವಲತ್ತುಗಳನ್ನು ತಂದಿದೆ. ಈಗ ಸದ್ಯ ವಾಟ್ಸ್ ಆಪ್ ತನ್ನ ಡೆಸ್ಕ್ ಟಾಪ್ ಬಳಕೆದಾರರಿಗೆ ಹೆಚ್ಚು ವೈಶಿಷ್ಟ್ಯತೆಗಳನ್ನು ನೀಡಲು ಬಯಸುತ್ತಿದೆ.

ವಾಬೇಟಾಇನ್ಫೋ ಮಾಹಿತಿಯ ಪ್ರಕಾರ ವಾಟ್ಸ್ ಆಪ್ ಸದ್ಯ ವಾಟ್ಸ್ ಆಪ್ ವೆಬ್ ಅಪ್ ಡೇಟ್ ಗೆ ಶ್ರಮಿಸುತ್ತಿದೆ. ಚಾಟ್ ಆಪ್ ನಲ್ಲಿ ಕೆಲವು ಜಾಗಗಳ ಅವಕಾಶಕ್ಕಾಗಿ ಜಿಐಎಫ್ ಶೇರಿಂಗ್ ಬಟನ್ ನಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆ ಇದೆ. ವಾಬೆಟಾಇನ್ಫೋ ಹೇಳುವಂತೆ ವಾಟ್ಸ್ ಆಪ್ ಕೆಲವು ಕ್ವಿಕ್ ಜಿಐಎಫ್ ಕೆಟಗರಿಯನ್ನು ಮುಂದಿನ ದಿನಗಳಲ್ಲಿ ಸೇರಿಸುವ ಸಾಧ್ಯತೆ ಇದೆ. ಹೊಸ ಜಿಐಎಫ್ ಬಟನ್ ಬಂದ ನಂತರ, ವಾಟ್ಸ್ ಆಪ್ ಸ್ಟಿಕ್ಕರ್ ಬಟನ್ ನ್ನು ಅಭಿವೃದ್ಧಿಗೊಳಿಸಲಿದ್ದು ಅದು ವಾಟ್ಸ್ ಆಪ್ ಸ್ಟಿಕ್ಕರ್ ಸ್ಟೋರ್ ನ್ನು ತೆರೆಯಲು ಅನುವು ಮಾಡಿಕೊಡಲಿದೆ.
2015 ರಲ್ಲಿ ವಾಟ್ಸ್ ಆಪ್ ವೆಬ್ ಬಿಡುಗಡೆಗೊಂಡಿದೆ. ಈ ವೈಶಿಷ್ಟ್ಯವು ನೀವು ಪರದೆಯ ಮೇಲ್ಬಾಗದ ಬಲ ಬದಿಯಲ್ಲಿನ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿದಾಗ ಸಿಗುತ್ತದೆ. ನೀವು ನಿಮ್ಮ ವಾಟ್ಸ್ ಆಪ್ ನ್ನು ಡೆಸ್ಕ್ ಟಾಪ್ ಇಲ್ಲವೇ ಲ್ಯಾಪ್ ಟಾಪ್ ಗೆ ಪೇರ್ ಮಾಡಬೇಕು ಅಂತಾದರೆ, ಸರಳವಾಗಿ ವಾಟ್ಸ್ ಆಪ್ ವೆಬ್ ನ್ನು ಟ್ಯಾಪ್ ಮಾಡಿ > ಡೆಸ್ಕ್ ಟಾಪ್ ಗೆ ಸೇರಿಸಲು + ಬಟನ್ ನ್ನು ಟ್ಯಾಪ್ ಮಾಡಿ > ಕ್ಯೂಆರ್ ಕೋಡನ್ನ ಸ್ಕ್ಯಾನ್ ಮಾಡಿ ಸೆಟ್ ಮಾಡಿ. ಈಗ ನೀವು ನಿಮ್ಮ ವಾಟ್ಸ್ ಆಪ್ ಮೆಸೇಜ್ ಗಳನ್ನು ಡೆಸ್ಕ್ ಟಾಪ್ ಇಲ್ಲವೇ ಲ್ಯಾಪ್ ಟಾಪ್ ನಲ್ಲೂ ಪಡೆಯಬಹುದು.
ಸದ್ಯ ಆಂಡ್ರಾಯ್ಡ್ ನ ಬೆಟಾ ಬಳಕೆದಾರರಿಗೆ ಲಭ್ಯವಿರುವ ಅನುಮಾನಾಸ್ಪದ ಲಿಂಕ್ ಗಳ ಗುರುತಿಸುವಿಕೆ ವೈಶಿಷ್ಟ್ಯವು ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ನಲ್ಲೂ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಾಟ್ಸ್ ಆಪ್ ಈ ನಿರ್ಧಾರವನ್ನು ಕೈಗೊಂಡಿದೆ. ಈ ವೈಶಿಷ್ಟ್ಯವು ಲಿಂಕ್ ನ್ನು ತೆರೆಯುವ ಮುನ್ನವೇ ಬಳಕೆದಾರರಿಗೆ ತೆರೆಯದಂತೆ ಸೂಚನೆ ನೀಡುತ್ತದೆ.
ಅಷ್ಟೇ ಅಲ್ಲ ಒಂದು ವೇಳೆ ಲಿಂಕ್ ತೆರೆದು ನೀವು ಏನಾದರೂ ಹುಡುಕಾಟ ನಡೆಸಿದರೆ ಪುನಃ ಮತ್ತೆ ಅಪಾಯದ ಮುನ್ಸೂಚನೆಯ ಸಂದೇಶವನ್ನು ಬಳಕೆದಾರರಿಗೆ ಒದಗಿಸುತ್ತದೆ. ಇದು ಅನುಮಾನಾಸ್ಪದ ಲಿಂಕ್ ಅಥವಾ ಪದವು ಕೆಂಪು ವರ್ಣದಲ್ಲಿರುತ್ತದೆ ಮತ್ತು ನಿಮಗೆ ಎರಡು ಆಯ್ಕೆಗಳಿರುತ್ತದೆ. ಒಂದು ಅದನ್ನು ತೆರೆಯುವುದು ಅಥವಾ ಹಿಂತಿರುಗಿ ಬರುವುದು. ಸದ್ಯ ಇದು ಆಂಡ್ರ್ಯಾಯ್ಡ್ ನಲ್ಲಿ ಮಾತ್ರ ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಐಓಎಸ್ ನಲ್ಲೂ ಈ ವೈಶಿಷ್ಟ್ಯ ಸೇರಿಕೊಳ್ಳುವ ನಿರೀಕ್ಷೆ ಇದೆ.
ಒಟ್ಟಾರೆ ವಾಟ್ಸ್ ಆಪ್ ತನ್ನ ಎಲ್ಲಾ ಬಳಕೆದಾರರಿಗೆ ಅನುಕೂಲಕರವಾಗಿರುವ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಹಲವು ಅಪ್ ಡೇಟ್ ಗಳನ್ನು ಮಾಡುತ್ತಿದೆ ಎನ್ನುವುದಂತೂ ಸತ್ಯ.


Click it and Unblock the Notifications



