Home
ಸುದ್ದಿಜಾಲ

WhatsApp: ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಉಪಯೋಗ ಕೇಳಿದ್ರೆ ಶಾಕ್‌ ಆಗ್ತೀರಾ!

ವಾಟ್ಸಾಪ್‌ ಬಳಕೆದಾರರು ಈ ಸುದ್ದಿ ಕೇಳಿದ್ರೆ ಥ್ರಿಲ್ ಆಗೋದು ಪಕ್ಕಾ. ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದೊಂದು ಫೀಚರ್ಸ್‌ ಸೇರ್ಪಡೆಗೆ ಮುಂದಾಗಿದೆ. ಇದು ನಿಮ್ಮ ಅನುಭವವನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಈ ಹೊಸ ಫೀಚರ್ಸ್‌ ವೀಡಿಯೊ ಕರೆ ಸಮಯದಲ್ಲಿಯೂ ಮ್ಯೂಸಿಕ್‌ ಶೇರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಹೌದು, ವಾಟ್ಸಾಪ್‌ನಲ್ಲಿ ವೀಡಿಯೊ ಕರೆಗಳ ಮೂಲಕ ಇನ್ಮುಂದೆ ಮ್ಯೂಸಿಕ್‌ ಆಡಿಯೋ ಕೂಡ ಶೇರ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದರಿಂದ ಬಳಕೆದಾರರು ವೀಡಿಯೊ ಕರೆಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ. ಇದು ಒಬ್ಬರಿಗೊಬ್ಬರು ಸಂಭಾಷಣೆಗಳು ಮತ್ತು ಗುಂಪು ಸಂವಹನ ಎರಡರಲ್ಲಿ ಇನ್ನಷ್ಟು ತಲ್ಲೀನಗೊಳಿಸುವ ಅಂಶವನ್ನು ತರಲಿದೆ. ಹಾಗಾದ್ರೆ ವಾಟ್ಸಾಪ್‌ ಪರಿಚಯಿಸಲು ಉದ್ದೇಶಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

WhatsApp: ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಉಪಯೋಗ ಕೇಳಿದ್ರೆ ಶಾಕ್‌ ಆಗ್ತೀರಾ!

ವಾಟ್ಸಾಪ್‌ನ ಹೊಸ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ವಾಬೇಟಾ ಇನ್ಫೋ ಪ್ರಕಾರ ಹೊಸ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದೆ ಎನ್ನಲಾಗಿದೆ. ಇದರಿಂದ ವಾಟ್ಸಾಪ್‌ ವೀಡಿಯೊ ಕರೆಯಲ್ಲಿ ಇರುವಾಗಲೇ ನೀವು ಮ್ಯೂಸಿಕ್‌ ಆಡಿಯೋವನ್ನು ಶೇರ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಈ ಫೀಚರ್ಸ್‌ ಪ್ರಸ್ತುತ ಬೀಟಾ ಬಳಕೆದಾರರಿಗೆ ಲಭ್ಯವಿದೆ. ಅದರಂತೆ ವೀಡಿಯೊ ಕರೆಯಲ್ಲಿ ಭಾಗವಹಿಸುವವರು ತಮ್ಮ ಪರದೆಯನ್ನು ಹಂಚಿಕೊಂಡಾಗ, ತಮ್ಮ ಡಿವೈಸ್‌ನಲ್ಲಿ ಪ್ಲೇ ಮಾಡುವ ಆಡಿಯೊವನ್ನು ಕರೆಯಲ್ಲಿರುವ ಇತರರಿಗೆ ಶೇರ್‌ ಮಾಡಬಹುದಾಗಿದೆ.

ಇನ್ನು ಈ ಫೀಚರ್ಸ್‌ ಒನ್-ಆನ್-ಒನ್ ಕರೆಗಳಿಗೆ ಸೀಮಿತವಾಗಿಲ್ಲ, ಇದನ್ನು ಗ್ರೂಪ್‌ ವೀಡಿಯೊ ಕರೆಗಳಿಗೂ ಸಹ ವಿಸ್ತರಿಸಬಹುದಾಗಿದೆ. ಅಂದರೆ ಬಳಕೆದಾರರು ಖಾಸಗಿ ಮತ್ತು ವೃತ್ತಿಪರ ಸಂಭಾಷಣೆಗಳಲ್ಲಿ ಸಿಂಕ್ರೊನೈಸ್ ಮಾಡಿದ ಆಡಿಯೊ ಅನುಭವವನ್ನು ಆನಂದಿಸಬಹುದು. ಇದಲ್ಲದೆ, ಈ ಫೀಚರ್ಸ್‌ ಕರೆಯಲ್ಲಿ ಭಾಗವಹಿಸುವವರು ಒಟ್ಟಿಗೆ ವೀಡಿಯೊಗಳನ್ನು ವೀಕ್ಷಿಸಲು ಅನುಮತಿಸುತ್ತದೆ. ವೀಡಿಯೊ ಕರೆಗಳ ಸಮಯದಲ್ಲಿ ಹಂಚಿಕೊಂಡ ಆಡಿಯೊವನ್ನು ಪ್ರಯೋಗಿಸುವ ಮೂಲಕ, ಬಳಕೆದಾರರು ತಮ್ಮ ವೀಡಿಯೊ ಪ್ಲೇಬ್ಯಾಕ್ ಅನುಭವಗಳನ್ನು ಸಿಂಕ್ರೊನೈಸ್ ಮಾಡಬಹುದಾಗಿದೆ.

WhatsApp: ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಉಪಯೋಗ ಕೇಳಿದ್ರೆ ಶಾಕ್‌ ಆಗ್ತೀರಾ!

ಇದರ ಜೊತೆಗೆ ವಾಟ್ಸಾಪ್ ಮತ್ತೊಂದು ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ಕಂಟ್ಯಾಕ್ಟ್‌ ವಿವರಗಳನ್ನು ಹಂಚಿಕೊಳ್ಳದೆಯೇ ಬಳಕೆದಾರರು ಶೀಘ್ರದಲ್ಲೇ ಪರಸ್ಪರ ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ವೆಬ್‌ನಲ್ಲಿ WhatsApp ಬಳಕೆದಾರರು ತಮ್ಮ ಪ್ರೊಫೈಲ್‌ಗಳನ್ನು ವೈಯಕ್ತೀಕರಿಸಲು ಬಳಕೆದಾರ ಹೆಸರನ್ನು ಕ್ರಿಯೆಟ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದು ಸ್ನೇಹಿತರು, ಕುಟುಂಬ ಮತ್ತು ಸಂಪರ್ಕಗಳೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಸರಳಗೊಳಿಸುತ್ತದೆ.

ಬ್ಯುಸಿನೆಸ್‌ ಅಕೌಂಟ್‌ ತಮ್ಮ ಚಾನಲ್‌ಗಳಲ್ಲಿ ಪರಿಶೀಲನೆ ಬ್ಯಾಡ್ಜ್ ಅನ್ನು ಪ್ರದರ್ಶಿಸುವುದಕ್ಕೆ ಅವಕಾಶ ನೀಡಲು ವಾಟ್ಸಾಪ್‌ ಸಿದ್ಧತೆ ನಡೆಸಿದೆ. ಈ ಮೂಲಕ ಚಾನಲ್‌ಗಳ ಪರಿಶೀಲನೆ ಗುರುತುಗಳನ್ನು ಪ್ರದರ್ಶಿಸುವ ವಿಧಾನವನ್ನು ಬದಲಾಯಿಸುತ್ತಿದೆ. ಈಗಾಗಲೇ Instagram ಮತ್ತು Facebook ನಲ್ಲಿ ಬಳಸುತ್ತಿರುವ ಬ್ಲೂ ಟಿಕ್‌ ಚೆಕ್ ಗುರುತುಗಳ ರೀತಿಯಲ್ಲಿಯೇ ಇರಲಿದೆ. ಸದ್ಯ ಈ ಹೊಸ "ವೆರಿಫೈಡ್‌ ಚಾನಲ್" ಫೀಚರ್ಸ್‌ ಅನ್ನು Android 2.24.1.18 ಅಪ್‌ಡೇಟ್‌ಗಾಗಿ WhatsApp ಬೀಟಾದಲ್ಲಿ ಗುರುತಿಸಲಾಗಿದೆ.

WhatsApp: ವಾಟ್ಸಾಪ್‌ ಸೇರಲಿರುವ ಈ ಫೀಚರ್ಸ್‌ ಉಪಯೋಗ ಕೇಳಿದ್ರೆ ಶಾಕ್‌ ಆಗ್ತೀರಾ!

ಇತರ ವೈಶಿಷ್ಟ್ಯಗಳಿಗಿಂತ ಭಿನ್ನವಾಗಿ ಈ ನಿರ್ದಿಷ್ಟ ಫೀಚರ್ಸ್‌ ಇನ್ನೂ ಅಭಿವೃದ್ಧಿಯಲ್ಲಿದೆ. ಆದರಿಂದ ಇದನ್ನು ಸ್ಥಿರ ಚಾನಲ್‌ನಲ್ಲಿ ಎಲ್ಲಾ ಬಳಕೆದಾರರಿಗೆ ಹೊರತರುವ ಮೊದಲು, ಬೀಟಾ ಪರೀಕ್ಷಕರಿಗೆ ಹೊರತರುವ ನಿರೀಕ್ಷೆಯಿದೆ. ಪ್ರಸ್ತುತ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಸ್ಕ್ರೀನ್‌ಶಾಟ್‌ ಪ್ರಕಾರ ಹೊಸ ಪರಿಶೀಲಿಸಿದ ಚಾನಲ್ ವೈಶಿಷ್ಟ್ಯಕ್ಕಾಗಿ ಉದ್ದೇಶಿತ ಇಂಟರ್ಫೇಸ್ ಅನ್ನು ತೋರಿಸಲಾಗಿದೆ. ಅದರಂತೆ ಈ ವೈಶಿಷ್ಟ್ಯವು WhatsApp ವ್ಯಾಪಾರ ಬಳಕೆದಾರರನ್ನು ಗುರಿಯಾಗಿರಿಸಿಕೊಂಡಂತೆ ಕಾಣಿಸಿದೆ.

Best Mobiles in India

English summary
WhatsApp platform will let users share music playing on their device during video calls: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+