ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿ ಜಾರಿ ದಿನಾಂಕ ಮೇ 15ಕ್ಕೆ ಮುಂದೂಡಿಕೆ!

|

ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಪರಿಚಯಿಸುವುದು ಇನ್ನಷ್ಟು ದಿನ ತಡವಾಗಲಿದೆ ಎಂದು ಘೋಷಿಸಿದೆ. ಈಗಾಗಲೇ ಹೊಸ ಸೇವಾ ನಿಯಮದ ಬಗ್ಗೆ ಬಳಕೆದಾರರಿಂದ ಬಾರಿ ವಿರೋದ ಎದುರಿಸುತ್ತಿರುವ ವಾಟ್ಸಾಪ್, ಇನ್ನಷ್ಟು ದಿನಗಳ ಕಾಲ ಹೊಸ ಸೇವಾ ನಿಯಮ ಪರಿಚಯಿಸುವುದನ್ನು ಮುಂದೂಡಿದೆ. ಸದ್ಯ ಪಾಲಿಸಿಯನ್ನು ಸ್ವೀಕರಿಸುವ ಗಡುವನ್ನು ಫೆಬ್ರವರಿ 8 ರಿಂದ ಮೇ 15 ರವರೆಗೆ ವಿಸ್ತರಿಸಲಾಗಿದೆ. ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಬಳಕೆದಾರರು ತಪ್ಪು ಮಾಹಿತಿಯನ್ನು ಹೊಂದಿದ್ದು, ಅದರ ಬಗ್ಗೆ ಅರಿವು ಮೂಡಿಸಿದ ನಂತರ ಹೊಸ ನಿಯಮ ಪರಿಚಯಿಸಲಾಗುವುದು ಎಂದು ವಾಟ್ಸಾಪ್‌ ಹೇಳಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ "ಹೊಸ ಸೇವಾ ನಿಯಮದ ಅಪ್ಡೇಟ್‌ ಫೇಸ್‌ಬುಕ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳುವುದಿಲ್ಲ. ಇದಕ್ಕಾಗಿ ನಮ್ಮ ಸಾಮರ್ಥ್ಯವನ್ನು ನಾವು ವಿಸ್ತರಿಸುವುದಿಲ್ಲ" ಎಂದು ಹೈಲೈಟ್ ಮಾಡಿದೆ. ಇದೇ ಕಾರಣಕ್ಕೆ ಜನರಿಗೆ ಸೇವಾ ನಿಯಮದ ಬಗ್ಗೆ ತಿಳುವಳಿಕೆ ನೀಡಬೇಕಿದೆ. ಆದರಿಂದ ಮೇ 15 ರಂದು ತನ್ನ ಹೊಸ ವ್ಯವಹಾರ ಆಯ್ಕೆಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ. ಇದಕ್ಕೂ ಮೊದಲು ತನ್ನ ಕಾರ್ಯತಂತ್ರವನ್ನು ಬದಲಾಯಿಸುವುದಲ್ಲದೆ, ತನ್ನ ನೀತಿಯನ್ನು ಪರಿಶೀಲಿಸಲು ಜನರ ಬಳಿಗೆ ಹೋಗುತ್ತೇವೆ ಎಂದು ಹೇಳಿದೆ. ಹಾಗಾದ್ರೆ ವಾಟ್ಸಾಪ್‌ ಸೇವಾ ನಿಯಮ ವಿಳಂಬಕ್ಕೆ ಕಾರಣವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸ ಸೇವಾ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಲೇಬೇಕು ಎಂದ ನಂತರ ಸಾಕಷ್ಟು ವಿರೋದ ವ್ಯಕ್ತವಾಗಿದೆ. ಅಲ್ಲದೆ ವಾಟ್ಸಾಪ್‌ನ ಡೇಟಾವನ್ನು ಫೇಸ್‌ಬುಕ್‌ ಜೊತೆಎ ಹಂಚಿಕೊಲ್ಳಲಿದೆ ಎಂಬ ಮಾಹಿತಿ ಬಳಕೆದಾರರು ವಾಟ್ಸಾಪ್‌ ಅನ್ನು ತೊರೆಯುವುದಕ್ಕೆ ಕಾರಣವಾಗಿದೆ. ಇದೆಲ್ಲವನ್ನು ಮನಗಂಡಿರುವ ವಾಟ್ಸಾಪ್‌ ತನ್ನ ಸೇವಾ ನಿಯಮದ ಗಡುವನ್ನು ಮೇ 15ಕ್ಕೆ ವಿಸ್ತಾರ ಮಾಡಿದೆ. ಅಲ್ಲದೆ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಕಂಪನಿಯು ತನ್ನ ಬಳಕೆದಾರರ ಖಾಸಗಿ ಸಂದೇಶಗಳನ್ನು ನೋಡಲು ಅಥವಾ ಅವರ ಕರೆಗಳನ್ನು ಕೇಳಲು ಸಾಧ್ಯವಿಲ್ಲ ಎಂದು ಹೇಳಿದೆ. ಪ್ರತಿಯೊಬ್ಬರೂ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ಇಡುವುದಿಲ್ಲ. ಸಂದೇಶಗಳು ಮತ್ತು ಕರೆಗಳ ಜೊತೆಗೆ ಪ್ಲೇಸ್‌ ಡೇಟಾವು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಆಗಿದೆ ಎಂದು ಹೇಳಿದೆ.

ಹೊಸ ಸೇವಾ ನಿಯಮ ವಿಳಂಬಕ್ಕೆ ಕಾರಣಗಳೇನು?

ಹೊಸ ಸೇವಾ ನಿಯಮ ವಿಳಂಬಕ್ಕೆ ಕಾರಣಗಳೇನು?

1. ಗೌಪ್ಯತೆ ನೀತಿ ಬದಲಾವಣೆಯ ಘೋಷಣೆಯ ನಂತರ, ವಿವಿಧ ವಾಟ್ಸಾಪ್ ಬಳಕೆದಾರರು ಸಿಗ್ನಲ್ ಮತ್ತು ಟೆಲಿಗ್ರಾಮ್ನಂತಹ ಪರ್ಯಾಯ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಕಂಪನಿಯು ತಮ್ಮ ಗೌಪ್ಯತೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಬಳಕೆದಾರರಿಗೆ ಮನವರಿಕೆ ಮಾಡುವಲ್ಲಿ ಫೇಸ್‌ಬುಕ್ ದೊಡ್ಡ ಸವಾಲನ್ನು ಎದುರಿಸುತ್ತಿದೆ.

ಗೌಪ್ಯತೆ

2. ನೀವು ಹೊಸ ಗೌಪ್ಯತೆ ನೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ಅದನ್ನು 2016 ರಲ್ಲಿ ರೂಪಿಸಿದ ಹಳೆಯದಕ್ಕೆ ಹೋಲಿಸಿದರೆ, ಹೆಚ್ಚಿನ ನೀತಿ ನಿಯಮಗಳು ಒಂದೇ ರೀತಿ ಇರುತ್ತವೆ ಎಂದು ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆ ವಾಟ್ಸಾಪ್‌ಗೆ ಎದುರಾಗಿದೆ.

ಫೇಸ್‌ಬುಕ್

3. ಈ ಹೊಸ ನೀತಿಯೊಂದಿಗೆ, ಫೇಸ್‌ಬುಕ್ ಕೇವಲ ಒಂದು ಸ್ಥಳದಲ್ಲಿ ಕೆಲವು ವಾಟ್ಸಾಪ್‌ನ ವ್ಯವಹಾರ ಡೇಟಾವನ್ನು ಕೇಂದ್ರೀಕರಿಸಲು ಬಯಸುತ್ತದೆ ಮತ್ತು ವಾಟ್ಸಾಪ್ ಅನ್ನು ತನ್ನ ನಿಯಂತ್ರಣಕ್ಕೆ ತರಲು ಬಯಸುತ್ತದೆ.

ವಾಟ್ಸಾಪ್

4. ವಾಟ್ಸಾಪ್ ಈ ವಿಳಂಬ ಮತ್ತು ಪೂರ್ಣ-ಪುಟದ ವೃತ್ತಪತ್ರಿಕೆ ಜಾಹೀರಾತುಗಳನ್ನು ಹೊರಹಾಕುವಂತಹ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೂಲಕ ತನ್ನ ಬಳಕೆದಾರರ ಗೌಪ್ಯತೆಯನ್ನು ಗೌರವಿಸುತ್ತದೆ ಎಂದು ತಿಳಿಸುತ್ತಿದೆ.

Most Read Articles
Best Mobiles in India

English summary
WhatsApp has announced a delay in its privacy policy update. Users now have until May 15 to accept the new policy and not have their account deleted.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X