ಬಳಕೆದಾರರಿಗೆ ಮತ್ತೊಂದು ಆಕರ್ಷಕ ಫೀಚರ್ಸ್ ಪರಿಚಯಿಸಿದ ವಾಟ್ಸಾಪ್!
ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್ ಅಂದ್ರೆ ಅದು ವಾಟ್ಸಾಪ್. ವಾಟ್ಸಾಪ್ ಬಳಕೆದಾರರ ನೆಚ್ಚಿನ ಇನ್ಸಟಂಟ್ ಮೆಸೇಜಿಂಗ್ ಆಪ್ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಹೊಸ ಫೀಚರ್ಸ್‌ಗಳನ್ನ ಪರಿಚಯಿಸಿರೋ ಇದೀಗ ಮತ್ತೊಂದು ಹೊಸ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಸದ್ಯ ವಾಟ್ಸಾಪ್ ಇದೀಗ ಆಡ್ವಾನ್ಸ್ಡ್ ಫೀಚರ್ಸ್ ಅನ್ನು ಆಂಡ್ರಾಯ್ಡ್‌ನಲ್ಲಿ ಬೀಟಾ ಬಳಕೆದಾರರಿಗಾಗಿ ಪರಿಚಯಿಸಿದೆ. ಇನ್ನು ಈ ಫೀಚರ್ಸ್ ಅನ್ನು ಕಳೆದ ಕೆಲವು ತಿಂಗಳುಗಳಿಂದ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲದೆ ಇದನ್ನು ಮೊದಲ ಬಾರಿಗೆ ಐಒಎಸ್ ಬಳಕೆದಾರರಿಗೆ ಪರಿಚಯಿಸಲಾಗಿತ್ತು.

ಹೌದು, ವಾಟ್ಸಾಪ್ ಕೆಲವು ದಿನಗಳ ಹಿಂದೆ ಮಾಹಿತಿ ನೀಡಿರುವಂತೆ ಇದೀಗ ಆಂಡ್ರಾಯ್ಡ್ ಬೀಟಾ ವರ್ಷನ್‌ನಲ್ಲಿ ಆಡ್ವಾನ್ಸ್ಡ್ ಫೀಚರ್ಸ್ ಅನ್ನು ಪರಿಚಯಿಸಿದೆ. ಹೆಸರೇ ಸೂಚಿಸುವಂತೆ, ಈ ಫೀಚರ್ಸ್‌ನಿಂದ ವಾಟ್ಸಾಪ್‌ನಲ್ಲಿ ಫೈಲ್‌ಗಳನ್ನು ಸರ್ಚ್ ಮಾಡುವುದು ಸುಲಭವಾಗಲಿದೆ. ಕೇವಲ ಇಮೇಜ್‌ಗಳ ಆಧಾರದ ಮೇಲೆಯ ಮೇಸೆಜ್‌ಗಳನ್ನು ಹುಡುಕಬಹುದಾಗಿದೆ. ಅಲ್ಲದೆ ವಿವಿಧ ರೀತಿಯ ಮೀಡಿಯಾ ಡಿವಿಷನ್‌ಗಳನ್ನು ಮತ್ತು ವಾಟ್ಸಾಪ್‌ನಲ್ಲಿ ಶೇರ್‌ಮಾಡಲಾದ ಫೈಲ್‌ಗಳನ್ನು ಒಂದೇ ಸಲ ಸರ್ಚ್ ಮಾಡುವುದಕ್ಕೆ ಅವಕಾಶ ಕಲ್ಪಿಸಲಿದೆ. ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ವಾಟ್ಸಾಪ್ ತನ್ನ ಬೀಟಾ ವರ್ಷನ್‌ನಲ್ಲಿ ಪರಿಚಯಿಸಿರುವ ಆಪ್ಡೇಟ್ ಸರ್ಚ್ ಫೀಚರ್ಸ್ ಎಲ್ಲಾ ಬಳಕೆದಾರರಿಗೆ ಸದ್ಯ ಲಭ್ಯವಿಲ್ಲ. ಆದರೆ ವಾಟ್ಸಾಪ್‌ನ ಬೀಟಾ ಪ್ರೋಗ್ರಾಂನಲ್ಲಿರುವ ಆಂಡ್ರಾಯ್ಡ್ ಬಳಕೆದಾರರು ಅದನ್ನು ಬಳಸಲು ಪ್ರಾರಂಭಿಸಬಹುದು. ಬಳಕೆದಾರರ ಈ ಹೊಸ ಫೀಚರ್ಸ್ ಅನ್ನು ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಬಳಸಬಹುದಾಗಿದೆ. ಇನ್ನು ಈ ಫೀಚರ್ಸ್ ಅನ್ನು The default ಆಗಿ ಆನ್ ಮಾಡಲಾಗಿದೆ. ನೀವು ಅಪ್ಲಿಕೇಶನ್‌ನ ಮೇಲಿರುವ ಸರ್ಚ್ ನಲ್ಲಿ ಟೂಲ್ಸ್‌ಗಳನ್ನು ಆಯ್ಕೆಮಾಡಿಕೊಂಡಾಗ ಇದು ಕಾಣಲಿದೆ.

ಇನ್ನು ಈ ಫೀಚರ್ಸ್ ಅನ್ನು ಆಯ್ಕೆ ಮಾಡಿದಾಗ ಫೋಟೋಗಳು, ವೀಡಿಯೊಗಳು, ಲಿಂಕ್‌ಗಳು, GIFಗಳು, ಆಡಿಯೋ ಮತ್ತು ಡಾಕ್ಯುಮೆಂಟ್‌ಗಳು ಸೇರಿದಂತೆ ವಿವಿಧ ಆಯ್ಕೆಗಳೊಂದಿಗೆ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ. ನಿರ್ದಿಷ್ಟ ಐಟಂ ಅನ್ನು ಹುಡುಕಲು ನೀವು ಯಾವುದೇ ಆಯ್ಕೆಗಳನ್ನು ಟ್ಯಾಪ್ ಮಾಡಬಹುದು ಅಥವಾ ನೀವು ಸರ್ಚ್ ಬಾಕ್ಸ್‌ನಲ್ಲಿ ಟೈಪ್ ಮಾಡಬಹುದು. ಈಗ ನೀವು ಸರ್ಚ್ ಬಾಕ್ಸ್‌ನಲ್ಲಿ ಟೈಪ್ ಮಾಡಿದಾಗ, ಸರ್ಚ್ ರಿಸ್ಲಟ್ ಚಾಟ್‌ಗಳ ಜೊತೆಗೆ ಸಂಬಂಧಿತ ಫೋಟೋಗಳು, ವೀಡಿಯೊಗಳು ಲಭ್ಯವಾಗಲಿವೆ.

ಇದಲ್ಲದೆ ನೀವು ಯಾವುದೇ ಆಯ್ಕೆಗಳನ್ನು ಆರಿಸುವುದರಿಂದ ಆ ನಿರ್ದಿಷ್ಟ ಫೈಲ್ ಮೂಲಕ ನೀವು ಶೇರ್‌ಮಾಡಿದ ಎಲ್ಲ ಮಾಹಿತಿಯನ್ನು ವಾಟ್ಸಾಪ್‌ನಲ್ಲಿ ತೋರಿಸುತ್ತದೆ. ನೀವು ಫೋಟೋಗಳನ್ನು ಆರಿಸಿದರೆ, ನೀವು ಕಳುಹಿಸಿದ ಮತ್ತು ಸ್ವೀಕರಿಸಿದ ಎಲ್ಲಾ ಫೋಟೋಗಳನ್ನು ನೀವು WhatsApp ನಲ್ಲಿ ಕಾಣಬಹುದಾಗಿರುತ್ತದೆ. ಅಲ್ಲದೆ ಈ ಸರ್ಚ್ ಬಾಕ್ಸ್‌ನಲ್ಲಿ ನೀವು ಟೈಪ್ ಮಾಡಬಹುದು. ಫೋಟೋಗಳು, ವೀಡಿಯೊಗಳು ಅಥವಾ GIF ಗಳೊಂದಿಗೆ ಚಾಟ್‌ಗಳನ್ನು ತೋರಿಸುವ ಗ್ರಿಡ್ ವ್ಯೂವ್‌ಗೆ ಬದಲಾಯಿಸುವ ಆಯ್ಕೆಯೂ ಇದೆ.

ಸದ್ಯ ವಾಟ್ಸಾಪ್‌ನಲ್ಲಿನ ಈ ಹೊಸ ಸರ್ಚ್ ಫೀಚರ್ಸ್ ಬಹಳ ಸಹಾಯಕವಾಗಿದೆ, ವಿಶೇಷವಾಗಿ ನೀವು ಅಪ್ಲಿಕೇಶನ್‌ನಲ್ಲಿ ಸಾಕಷ್ಟು ಡೇಟಾವನ್ನು ಸಂಗ್ರಹಿಸುವವರಾಗಿದ್ದರೆ ಇದು ಉತ್ತಮ ಆಯ್ಕೆಯಾಗಿರಲಿದೆ. ಇನ್ನು ಇದೀಗ ಇದು ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಲಭ್ಯವಿಲ್ಲ ಆದರೂ ಬೀಟಾ ವರ್ಷನ್‌ನಲ್ಲಿ ಲಭ್ಯವಿರುವುದರಿಂದ ಇದು ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ.


Click it and Unblock the Notifications








