ವಾಟ್ಸಾಪ್‌ನಿಂದ ಹೊಸ ಫೀಚರ್ಸ್‌ಗಳ ಹೋಸ್ಟ್ ಬಿಡುಗಡೆ!

|

ಜನಪ್ರಿಯ ಇನ್ಸ್‌ಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್ ತನ್ನ ಹಲವಾರು ಅನುಕೂಲಕರ ಫಿಚರ್ಸ್‌ ಗಳನ್ನ ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಬಹುನಿರೀಕ್ಷಿತ ಆನಿಮೇಟೆಡ್ ಸ್ಟಿಕ್ಕರ್‌ಗಳು, ಕ್ಯೂಆರ್ ಕೋಡ್‌ಗಳು, ವೆಬ್ ಮತ್ತು ಡೆಸ್ಕ್‌ಟಾಪ್‌ಗಾಗಿ ಡಾರ್ಕ್ ಮೋಡ್, ಸುಧಾರಿತ ವೀಡಿಯೊ ಕರೆಗಳು ಮತ್ತು ಸ್ಟೇಟಸ್ ಫಿಚರ್ಸ್‌ ಅನ್ನು ಪರಿಚಯಿಸಲಿದೆ ಎಂದು ಕಂಪನಿ ಹೇಳಿದೆ.

ವಾಟ್ಸಾಪ್‌

ಹೌದು, ಫೇಸ್‌ಬುಕ್‌ ಒಡೆತನದ ಜನಪ್ರಿಯ ಮೆಸೇಂಜಿಗ್‌ ಆಪ್‌ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳ ಹೋಸ್ಟ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ವಾಟ್ಸಾಪ್‌ ಕಂಪನಿಯು ಕ್ಯೂಆರ್ ಕೋಡ್‌ಗಳ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ, ಅಲ್ಲದೆ ಆನಿಮೇಟೆಡ್ ಸ್ಟಿಕ್ಕರ್‌ಗಳ ಫೀಚರ್ಸ್‌ ಅನ್ನು ಪರಿಚಯಿಸಲು ಸಹ ಸಿದ್ದತೆ ನಡೆಸಿದೆ. ಇದರ ನಡುವೆ ಇದೀಗ ತನ್ನ ಬಹು ನಿರೀಕ್ಷಿತ ಮಲ್ಟಿ ಡಿವೈಸ್‌ ಬೆಂಬಲಿಸುವ ಮೆಸೇಜಿಂಗ್ ಅಪ್ಲಿಕೇಶನ್ ಪರಿಚಯಿಸಲು ಪ್ಲ್ಯಾನ್‌ ರೂಪಿಸಿಕೊಂಡಿದೆ ಎನ್ನಲಾಗಿದೆ. ಸ್ಯ ವಾಟ್ಸಾಪ್‌ ಪರಿಚಯಿಸಲಿರುವ ಹೊಸ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನಿಡ್ತೀವಿ ಓದಿರಿ.

QR ಕೋಡ್‌ ಫೀಚರ್ಸ್‌

QR ಕೋಡ್‌ ಫೀಚರ್ಸ್‌

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಪರಿಚಯಿಸಲಿರುವ ಫೀಚರ್ಸ್‌ಗಳಲ್ಲಿ QR ಕೋಡ್ ಫೀಚರ್ಸ್‌ ಕೂಡ ಒಂದಾಗಿದೆ. ಇನ್ನು ಈ ಫೀಚರ್ಸ್‌ ನಿಮ್ಮ ವಾಟ್ಸಾಪ್‌ಗೆ ಮತ್ತೊಬ್ಬ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಸೇರಿಸಲು ನೀವು ಅವರ ಸಂಖ್ಯೆಯನ್ನು ಸ್ಕ್ಯಾನ್ ಮಾಡಿ ಉಳಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ ನಿಮ್ಮ ಸಂಪರ್ಕಗಳಿಗೆ ಸೇರಿಸಲು ನೀವು ಇನ್ನೊಬ್ಬರ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕು ಅ ಸಂಪರ್ಕ ಸಂಖ್ಯೆ ವಾಟ್ಸಾಪ್‌ನಲ್ಲಿ ಸೇವ್‌ ಆಗಲಿದೆ. ಇದರಿಂದ ನೀವು ಸಂಖ್ಯೆಗಳನ್ನು ಟೈಪ್ ಮಾಡಬೇಕಾಗಿಲ್ಲ.

ಆನಿಮೇಟೆಡ್ ಸ್ಟಿಕ್ಕರ್‌ಗಳು

ಆನಿಮೇಟೆಡ್ ಸ್ಟಿಕ್ಕರ್‌ಗಳು

ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಫೀಚರ್ಸ್‌ಗಳಿಗೆ ಹೆಚ್ಚಿನ ಮಹತ್ವ ನೀಡಲಿದೆ. ಇತ್ತೀಚಿನ ದಿನಗಳ್ಲಲಿ ಮೆಸೇಜಿಂಗ್‌ನಲ್ಲಿ ಟೆಕ್ಸ್ಟ್‌ಗಿಂತ ಹೆಚ್ಚಿನ ಜನರು ಸ್ಟಿಕ್ಕರ್‌ಗಳನ್ನೇ ಬಳಸುತ್ತಾರೆ. ಇದೇ ಕಾರಣಕ್ಕೆ ಇದೀಗ ವಾಟ್ಸಾಪ್‌ ತನ್ನ ಅನಿಮೇಟೆಡ್ ಸ್ಟಿಕ್ಕರ್‌ಗಳ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಇದು ನಿಮ್ಮ ಚಾಟಿಂಗ್ ಅನುಭವವನ್ನು ಇನ್ನಷ್ಟು ಉತ್ತಮ ಪಡಿಸುತ್ತದೆ. ಜೊತೆಗೆ ಬಳಕೆದಾರರು ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಸಹ ಪಡೆಯುತ್ತಾರೆ. ಅಲ್ಲದೆ ಆನಿಮೇಟೆಡ್ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ ಅದನ್ನು ವೀಕ್ಷಿಸಬಹುದು, ಸೇವ್‌ ಮಾಡಬಹುದು ಮತ್ತು ಫಾರ್ವರ್ಡ್ ಮಾಡಬಹುದಾಗಿದೆ

ವೆಬ್‌ ಡಾರ್ಕ್ ಮೋಡ್

ವೆಬ್‌ ಡಾರ್ಕ್ ಮೋಡ್

ಇನ್ನು ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ಡಾರ್ಕ್ ಮೋಡ್ ಅನ್ನು ಬಹಳ ಹಿಂದೆಯೇ ಬಿಡುಗಡೆ ಮಾಡಿತು ಆದರೆ ಬಹುನಿರೀಕ್ಷಿತ ವೆಬ್‌ನಲ್ಲಿ ಡಾರ್ಕ್‌ ಮೋಡ್‌ ಅನ್ನು ಪರಿಚಯಿಸಲು ಸಿದ್ದತೆ ನಡೆದಿದೆ. ಅಂತಿಮವಾಗಿ ಮೆಸೇಜಿಂಗ್ ಅಪ್ಲಿಕೇಶನ್‌ನ ವೆಬ್ ಆವೃತ್ತಿಗೆ ಬಂದಿದೆ. ನಿಮ್ಮ ದೊಡ್ಡ ಸ್ಕ್ರೀನ್‌ನಲ್ಲಿ ವೆಬ್‌ಸೈಟ್‌ ಅನ್ನು ಡಾರ್ಕ್ ಮೋಡ್‌ನಲ್ಲಿ ನೋಡಬಹುದಾಗಿದೆ.

ಗ್ರೂಪ್‌ ವೀಡಿಯೋ ಕಾಲ್‌

ಗ್ರೂಪ್‌ ವೀಡಿಯೋ ಕಾಲ್‌

ವಾಟ್ಸಾಪ್ ತನ್ನ ಗ್ರೂಪ್‌ ವೀಡಿಯೊ ಕಾಲ್‌ ಮಿತಿಯನ್ನು ನಾಲ್ಕರಿಂದ ಎಂಟಕ್ಕೆ ವಿಸ್ತರಿಸಿದೆ. ಅಲ್ಲದೆ ಇದು ಇದೀಗ ಕೆಲವು ವಿಶೇಷ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಭಾಗವಹಿಸುವವರ ವೀಡಿಯೊವನ್ನು ಪೂರ್ಣ ಪರದೆಗೆ ಗರಿಷ್ಠಗೊಳಿಸಲು ಒತ್ತುವ ಮೂಲಕ ಮತ್ತು ಹಿಡಿದಿಟ್ಟುಕೊಳ್ಳುವ ಮೂಲಕ ನಿಮ್ಮ ಯಾವುದೇ ಸಂಪರ್ಕಗಳ ಮೇಲೆ ಈಗ ನೀವು ಗಮನ ಹರಿಸಬಹುದು. 8 ಅಥವಾ ಅದಕ್ಕಿಂತ ಕಡಿಮೆ ಜನರನ್ನು ಒಳಗೊಂಡಿರುವ ಗುಂಪು ಚಾಟ್‌ಗಳಿಗೆ ವೀಡಿಯೊ ಐಕಾನ್ ಅನ್ನು ಸಹ ಸೇರಿಸಲಾಗಿದೆ, ಆದ್ದರಿಂದ ಈಗ ನೀವು ಗುಂಪು ಕರೆಯನ್ನು ಪ್ರಾರಂಭಿಸಲು ವೀಡಿಯೊ ಐಕಾನ್ ಅನ್ನು ಟ್ಯಾಪ್ ಮಾಡಬಹುದು.

KaiOS

KaiOS

ವಾಟ್ಸಾಪ್‌ನಲ್ಲಿ ನಿಮ್ಮ ಸ್ನೇಹಿತರು ಈಗಾಗಲೇ ಶೇರ್‌ ಮಾಡಿರುವ ವಾಟ್ಸಾಪ್‌ ಸ್ಟೇಟಸ್‌ ಅನ್ನು KaiOS ಮೂಲಕ ಕಣ್ಮರೆಯಾದ ನಂತರವೂ ನೋಡಬಹುದಾಗಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ವೈಶಿಷ್ಟ್ಯಗಳಿಗೆ ಈ ವೈಶಿಷ್ಟ್ಯವು ಈಗಾಗಲೇ ಲಭ್ಯವಾಗಲಿದೆ.

Best Mobiles in India

English summary
WhatsApp on Wednesday announced that the Facebook-owned messaging app will finally be getting the Animated Stickers, QR codes, Dark mode for web and others.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X