'ವಾಟ್ಸ್ಆಪ್ ಬ್ಯುಸಿನೆಸ್’ ಅಕೌಂಟ್ ತೆರೆಯುವ ಮುನ್ನ ಎಚ್ಚರ!
ವಾಟ್ಸ್ಆಪ್ ಮೂಲಕ ವಾಣಿಜ್ಯ ವಹಿವಾಟು ನಡೆಸುವ ಜನರು ತಮ್ಮ ಗ್ರಾಹಕರೊಂದಿಗೆ ವ್ಯವಹರಿಸಲು 'ವಾಟ್ಸ್ಆಪ್ ಬ್ಯುಸಿನೆಸ್' ವ್ಯವಸ್ಥೆಯನ್ನು ಕಲ್ಪಿಸಿದ್ದ ಸಂಸ್ಥೆ ಈಗ ಕೆಲವೊಂದು ಬದಲಾವಣೆಗಳನ್ನು ತಂದಿದೆ. ವಾಟ್ಸ್‌ಆಪ್‌ನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಅಕೌಂಟ್ ತೆರೆಯಲು ಇಚ್ಚಿಸುವವರು ಇನ್ಮುಂದೆ ಕೆಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದೆ.
ನೀವು ವಾಟ್ಸ್ಆಪ್ ಫಾರ್ ಬ್ಯುಸಿನೆಸ್ ಸೇವೆಯನ್ನು ಬಳಸುವವರಾದರೆ, ಇನ್ಮುಂದೆ ಕೆಲವು ವಿಷಯಗಳನ್ನು ಗಮನದಲ್ಲಿಡಬೇಕಾಗುತ್ತದೆ. ಬ್ಯುಸಿನೆಸ್ ಅಕೌಂಟ್ ಹೆಸರಿನಲ್ಲಿ ಸ್ಪೇಸ್ ಕೂಡಾ ಒಂದಕ್ಷರಕ್ಕಿಂತ ಹೆಚ್ಚು ನೀಡುವಂತಿಲ್ಲ. ಅನಗತ್ಯ ಚಿಹ್ನೆಗಳು, ಇಮೋಜಿಗಳು, ಸಂಕೇತ ಅಥವಾ ವಿಶೇಷಾಕ್ಷರಗಳನ್ನು ಬಳಸುವಂತಿಲ್ಲ ಎಂಬ ಹಲವು ನಿಯಮಗಳು ಈಗ ಜಾರಿಗೆ ಬಂದಿವೆ.

ಮೊದಲನೆಯದಾಗಿ, ನಿಮ್ಮ ಬ್ಯುಸಿನೆಸ್ ಅಕೌಂಟ್ 'ಅಫಿಶಿಯಲ್' [ಅಧಿಕೃತ] ವೆಂದು ನಮೂದಾಗಿದ್ದರೆ, ಬಳಿಕ ಖಾತೆಯ ಹೆಸರನ್ನು ಬದಲಾಯಿಸಿದ್ದಲ್ಲಿ ನೀವು 'ಅಧಿಕೃತ' ಮಾನ್ಯತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿದುಬಂದಿದೆ. ಇದರಿಂದ ನೀವು ಬ್ಯುಸಿನೆಸ್ ಅಕೌಂಟ್ ತೆರೆಯುವಾಗಲೇ ನಿಖರ ಹೆಸರಿನಲ್ಲಿ ಬ್ಯುಸಿನೆಸ್ ಖಾತೆ ತೆರಬೇಕು ಎಂದು ಸಂಸ್ಥೆ ತಿಳಿಸಿದೆ.
ಇನ್ನು ವಾಟ್ಸ್ಆಪ್ ಬ್ಯುಸಿನೆಸ್ ಅಕೌಂಟ್‌ಗಳ ಹೆಸರಿನ ಸ್ಪೆಲ್ಲಿಂಗ್ ಹಾಗೂ ವ್ಯಾಕರಣದ ಬಗ್ಗೆ ವಾಟ್ಸ್ಆಪ್ ತುಸು ಗಂಭೀರವಾಗಿದೆ. ಬ್ಯುಸಿನೆಸ್ ಅಕೌಂಟ್ ಹೆಸರಿನ ಮೊದಲ ಅಕ್ಷರ ಮಾತ್ರ ಕ್ಯಾಪಿಟಲ್ ಲೆಟರ್ ಆಗಿರಬೇಕು, ವ್ಯಕ್ತಿಯ ಹೆಸರನ್ನೇ ಬ್ಯುಸಿನೆಸ್ ಅಕೌಂಟ್ ಹೆಸರನ್ನಾಗಿ ಬಳಸುವಂತಿಲ್ಲ. ಪೂರ್ತಿ ಹೆಸರು ಕ್ಯಾಪಿಟಲ್ ಲೆಟರ್ ಬಳಸಿ ಬರೆಯುವಂತಿಲ್ಲ ಎಂದು ಹೇಳಿದೆ.

ಬ್ಯುಸಿನೆಸ್ ಅಕೌಂಟ್ ತೆರೆಯುವಾಗ ವ್ಯಕ್ತಿಯ ಹೆಸರನ್ನೇ ಬ್ಯುಸಿನೆಸ್ ಅಕೌಂಟ್ ಹೆಸರನ್ನಾಗಿ ಬಳಸುವಂತಿಲ್ಲ ಎಂಬ ನಿಯಮಲ್ಲದೆ, ಅನಗತ್ಯ ವಿರಾಮಚಿಹ್ನೆ, ಎಮೊಜಿಗಳು, ಚಿಹ್ನೆಗಳ ವಿಶೇಷ ಅಕ್ಷರಗಳನ್ನು ಬಳಸುವಂತಿಲ್ಲ. ವಾಣಿಜ್ಯ ಸಂಸ್ಥೆಯ ಹೆಸರು ಮೂರು ಅಕ್ಷರಗಳಿಗಿಂತ ಕಡಿಮೆಯಾಗಿರುವಂತಿಲ್ಲ. ಒಂದಕ್ಕಿಂತ ಹೆಚ್ಚು ಸ್ಪೇಸ್ ಬಿಡುವಂತಿಲ್ಲ ಎಂಬ ಹಲವು ನಿಯಮಗಳಿವೆ.


Click it and Unblock the Notifications








