WhatsApp‌ ಬಳಸುವ ಪ್ರತಿಯೊಬ್ಬರು ಈ ಸುದ್ದಿಯನ್ನು ಓದಲೇಬೇಕು?

|

ಫೇಸ್‌ಬುಕ್‌ ಒಡೆತನದ ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸಪ್‌ ಹೊಸ ಗೌಪ್ಯತೆ ನೀಡಿ ಶೀಘ್ರದಲ್ಲಿ ಪರಿಚಯಿಸಲಿದೆ. ಈ ಹಿಂದೆ ಹೇಳಿದಂತೆ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳದೇ ಹೋದರೆ ನಿಮ್ಮ ವಾಟ್ಸಾಪ್‌ ಅಕೌಂಟ್‌ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಹಿಂದೆ ಪಡೆದಿದೆ. ಆದರೆ ವಾಟ್ಸಾಪ್‌ನ ಹೊಸ ಸೇವಾ ನಿಯಮದ ವಿರುದ್ಧ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದೆಲ್ಲವನ್ನು ಗಮನಿಸಿರುವ ವಾಟ್ಸಾಪ್‌ ಹೊಸ ಹಾದಿಯನ್ನು ಹಿಡಿದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಗೌಪ್ಯತೆ ನೀತಿ ಒಪ್ಪಿಕೊಳ್ಳಲೇಬೇಕೆಂಬ ನಿಯಮವಿಲ್ಲ ಎಂದು ಇತ್ತೀಚಿಗೆ ಹೇಳಿದೆ. ಆದರೂ ಇದು ಗ್ರಾಹಕರ ಕಣ್ಣರೆಸುವ ತಂತ್ರವಾಗಿದೆ. ಏಕೆಂದರೆ ಪಿಟಿಐ ವರದಿಯು ಭಾರತದ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ನಿರ್ಣಾಯಕ ಮಾಹಿತಿಯನ್ನು ಬಹಿರಂಗಪಡಿಸಿದೆ. ಮೇ 15, 2021 ರ ಗಡುವನ್ನು ಸ್ವೀಕರಿಸುವ ಹೊಸ ಗೌಪ್ಯತೆ ನೀತಿಯನ್ನು ವಾಟ್ಸಾಪ್ "ಸ್ಕ್ಯ್ರಾಪ್ ಮಾಡಿದೆ" ಎಂದು ಹೇಳಿದೆ. ಅಂದರೆ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳದೆ ಹೋದರೆ ನಿಧನಾವಾಗಿ ನಿಮ್ಮ ವಾಟ್ಸಾಪ್‌ ಅಕೌಂಟ್‌ ನಿಷ್ಪ್ರಯೋಜಕವಾಗಲಿದೆ. ಹಾಗಾದ್ರೆ ವಾಟ್ಸಾಪ್‌ ಅನುಸರಿಸುತ್ತಿರುವ ಜಾಣ ನಡೆ ಏನು ಅನ್ನೊದನ್ನ ‌ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸ ಸೇವಾ ನಿಯಮ ಭಾರಿ ವಿರೋದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಹೆಚ್ಚಿನ ಜನರು ಇತರೆ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ಗಳಾದ ಸಿಗ್ನಲ್‌ ಹಾಗೂ ಟೆಲಿಗ್ರಾಮ್‌ ಕಡಗೆ ವಲಸೆ ಹೋಗಿದ್ದರೂ. ಈ ಸಮಯದಲ್ಲಿ ವಾಟ್ಸಾಪ್‌ ಜನರಿಗೆ ತನ್ನ ಗೌಪ್ಯತೆ ನೀತಿಯ ಬಗ್ಗೆ ಮನವರಿಕೆ ಮಾಡಿಕೊಡುವುದಕ್ಕೆ ಮುಂದಾಗಿತ್ತು. ಅಲ್ಲೆ ಕೊನೆಗೆ ಈ ಹೊಸ ಸೇವಾ ನಿಯಮವ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದೆನಿಲ್ಲ. ಒಪ್ಪಿಕೊಂಡರ ಒಪ್ಪಿಕೊಳ್ಳಬಹುದು ಇಲ್ಲದೆ ಹೋದರೂ ಯಾವುದೇ ತೊಂದರೆ ಇಲ್ಲ ಎಂದಿತ್ತು. ಆದರೆ ಅಂತಿಮವಾಗಿ, ನೀವು ಹೊಸ ಸೇವೆಗಳ ನಿಯಮಗಳನ್ನು ಸ್ವೀಕರಿಸುವ ಅಗತ್ಯವಿದೆ. ಏಕೆಂದರೆ ನೀವು ಹೊಸ ನಿಯಮ ಸ್ವೀಕರಸಿದೆ ಹೋದರೆ ವಾಟ್ಸಾಪ್‌ನಲ್ಲಿ ಹೆಚ್ಚಿನ ಕಾರ್ಯಗಳನ್ನು ಕಳೆದುಕೊಳ್ಳುವ ಆಯ್ಕೆ ಮಾಡಬೇಕಾಗುತ್ತದೆ.

ಗೌಪ್ಯತೆ

ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸದ ಖಾತೆಗಳನ್ನು ವಾಟ್ಸಾಪ್‌ ಡಿಲೀಟ್‌ ಮಾಡುವುದಿಲ್ಲ ನಿಜ. ಆದರೆ ಅದನ್ನು ಸಾಧ್ಯವಾದಷ್ಟು ನಿಷ್ಪ್ರಯೋಜಕವಾಗಿಸುತ್ತದೆ ಅನ್ನೊದು ಕನ್‌ಫರ್ಮ್‌ ಆಗಿದೆ. ಬಳಕೆದಾರರು ಹೊಸ ಸೇವಾ ನಿಯಮವನ್ನು ಒಪ್ಪಿಕೊಳ್ಲುವುದರ ಬಗ್ಗೆ ನಿರಂತರ ನೋಟಿಫಿಕೇಶನ್‌ ಆಲರ್ಟ್‌ ಬರಲಿದೆ. ನಂತರ ನೀವು ಒಪ್ಪದೆ ಹೋದಾಗ ವಾಟ್ಸಾಪ್ ಅಪ್ಲಿಕೇಶನ್ ಸೀಮಿತ ಕ್ರಿಯಾತ್ಮಕ ಮೋಡ್‌ಗೆ ಬದಲಾಗುತ್ತದೆ ಎಂದು ವಾಟ್ಸಾಪ್‌ ಕಂಪನಿ ಖಚಿತಪಡಿಸಿದೆ. ಸೀಮಿತ ಕ್ರಿಯಾತ್ಮಕ ಮೋಡ್‌ನಲ್ಲಿ, ಬಳಕೆದಾರರು ತಮ್ಮ ಚಾಟ್ ಪಟ್ಟಿಯನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅವರು ಚಾಟ್ ಸ್ವೀಕರಿಸಿದರೆ, ಅವರು ತಮ್ಮ ನೋಟಿಫಿಕೇಶನ್‌ಗಳ ಮೂಲಕ ಅದನ್ನು ತೆರೆಯಲು ಸಾಧ್ಯವಾಗುತ್ತದೆ. ಈ ಮೋಡ್‌ನಲ್ಲಿ, ಒಳಬರುವ ಆಡಿಯೊ ಮತ್ತು ವೀಡಿಯೊ ಕರೆಗಳಿಗೆ ಬಳಕೆದಾರರು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.

ವೀಡಿಯೋ

ಕೆಲವು ವಾರಗಳ ನಂತರ, ಈ ಬಳಕೆದಾರರು ವಾಟ್ಸಾಪ್‌ನಲ್ಲಿ ಬರುವ ಎಲ್ಲಾ ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತಾರೆ. ಇದರರ್ಥ ಸ್ಪಷ್ಟವಾಗಿ, ಹೊಸ ನಿಯಮಗಳು ಮತ್ತು ಸೇವೆಗಳನ್ನು ಸ್ವೀಕರಿಸದಿದ್ದರೆ ವಾಟ್ಸಾಪ್‌ನಲ್ಲಿನ ಹೆಚ್ಚಿನ ಪ್ರಮುಖ ಕಾರ್ಯಚಟುವಟಿಕೆಗಳಿಗೆ ಅವಕಾಸವನ್ನು ಕಳೆದುಕೊಳ್ಳುತ್ತಾರೆ. ಅಂದರೆ ವೀಡಿಯೋ ಕರೆ ವಾಯ್ಸ್‌ ಕಾಲ್‌ ಕೊನೆಗೆ ಚಾಟ್‌ ಮೆಸೇಜ್‌ ಮಾಡುವುದಕ್ಕೂ ಕೂಡ ಉಪಯೋಗಕ್ಕೆ ಬರುವುದಿಲ್ಲ, ವಾಟ್ಸಾಪ್ ನೀತಿಯಂತೆ ನಿಷ್ಪ್ರಯೋಜಕವಾಗುತ್ತದೆ. ಆದ್ದರಿಂದ, ವಾಟ್ಸಾಪ್ ಬಳಕೆದಾರರು ಅಂತಿಮವಾಗಿ ಹೊಂದಿರುವ ಏಕೈಕ ಆಯ್ಕೆ, ವಾಟ್ಸಾಪ್‌ನ ನಿಯಮಗಳನ್ನು ಒಪ್ಪಿಕೊಳ್ಳುವುದು ಅಥವಾ ಸಿಗ್ನಲ್ ಅಥವಾ ಟೆಲಿಗ್ರಾಮ್ನಂತಹ ಪರ್ಯಾಯ ಅಪ್ಲಿಕೇಶನ್‌ಗೆ ಬದಲಾಗುವುದು.

Best Mobiles in India

English summary
WhatsApp Privacy Policy Latest Update, May 8, 2021: WhatsApp reveals what will happen to your account if you don't accept new terms.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X