TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ವಾಟ್ಸ್ ಆಪ್ ಡಿಜಿಟಲ್ ಪೇಮೆಂಟ್ ಮಾರ್ಕೆಟ್ ಗೂ ಲಗ್ಗೆ ಇಟ್ಟಿರುವ ವಿಷಯ ಎಲ್ಲರಿಗೂ ತಿಳಿದಿರುವ ಮಾಹಿತಿಯೇ ಆಗಿದೆ. ಈ ಸುದ್ದಿಯನ್ನು ನಾವೇ ನಿಮಗೆ ತಿಳಿಸಿದ್ದೆವೆ, ಇನ್ನು ಮುಂದೆ ಬೇರೆಯವರಿಗೆ ಹಣ ಸಂದಾಯ ಮಾಡಲು ವಾಟ್ಸ್ ಆಪ್ ನ್ನೇ ಬಳಕೆ ಮಾಡಬಹುದು ಎಂದು ಕೂಡ ಹೇಳಿದ್ದೆವೆ. ಆದರೆ ಇದು ಬಿಡುಗಡೆಗೊಂಡು ಹಲವು ದಿನಗಳೇ ಕಳೆದಿದ್ದರೂ ಎಲ್ಲಾ ಬಳಕೆದಾರರು ಇದರ ಸೌಲಭ್ಯವನ್ನು ಇನ್ನೂ ಪಡೆದಿರಲಿಲ್ಲ.
ನೀವು ಹ್ಯಾಕರ್ಸ್ ಆಗ್ಬೇಕಾ... ಆಗಿದ್ರೇ ಈ ಚಿತ್ರಗಳನ್ನು ನೋಡಿ..!
ಫೇಸ್ ಬುಕ್ ನ ಮೂರನೇ ಪಾರ್ಟಿ ಡಾಟಾ ಶೇರಿಂಗ್ ಪಾಲಿಸಿಯ ಅನ್ವಯದಲ್ಲಿ ಕೆಲವು ಕಾನೂನಾತ್ಮಕ ತೊಡಕುಗಳಿದ್ದವು. ಈಗ ಕೆಲವು ತಿಂಗಳುಗಳ ಪರೀಕ್ಷೆಯ ನಂತರ, ಈ ಸಮಸ್ಯೆ ಪರಿಹಾರವಾದಂತೆ ಕಾಣುತ್ತಿದೆ. ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಬಳಸುತ್ತಿರುವ ಎಲ್ಲ ಬಳಕೆದಾರರಿಗೂ ಈ ಸೌಲಭ್ಯ ಸಿಗುವ ಸಾಧ್ಯತೆ ಇದೆ. ಆದರೆ ಇದರ ಬಗ್ಗೆ ವಾಟ್ಸ್ ಆಪ್ ನಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಆದರೆ ಎಂಟ್ರ್ಯಾಕರ್ ವರದಿಯಂತೆ ವಾಟ್ಸ್ ಆಪ್ ಪೇಮೆಂಟ್ ಆಪ್ ಕೆಲವೇ ದಿನದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.
ಎಲ್ಲರಿಗೂ ಒಮ್ಮೆಲೆ ಈ ಪೇಮೆಂಟ್ ವೈಶಿಷ್ಟ್ಯ ಲಭ್ಯವಾಗುವುದಿಲ್ಲ, ಬದಲಾಗಿ ಯಾರಿಗೆ ಲಭ್ಯವಾಗುತ್ತೋ ಅವರು ಮತ್ತೊಬ್ಬರನ್ನು ಆಹ್ವಾನಿಸಬಹುದಾಗಿರುತ್ತದೆ. ಇದು ತುಂಬಾ ಸರಳವಾಗಿದೆ ಮತ್ತು ಚಾಟ್ ವಿಂಡೋ ದಲ್ಲಿರುವ ಪೇಮೆಂಟ್ ಆಯ್ಕೆಯನ್ನು ಜಸ್ಟ್ ಒತ್ತಿದರೆ ಆಯ್ತು. ಈ ರೀತಿ ಮಾಡುವುದರಿಂದ ಬಳಕೆದಾರು ಯಾವುದಾದರೂ ಬ್ಯಾಂಕ್ ಗೆ ಲಿಂಕ್ ಆಗಿದ್ದಾರೋ ಅಥವಾ ಇಲ್ಲವೋ ಎಂಬುದು ತಿಳಿಯುತ್ತದೆ. ಮತ್ತು ಇನ್ನೊಂದು ದಿಕ್ಕಿನಲ್ಲಿರುವ ಬಳಕೆದಾರರಿಗೆ ಒಂದು ವೇಳೆ ಅವರ ಬಳಿ ಪೇಮೆಂಟ್ ಆಪ್ ಇಲ್ಲದೇ ಇದ್ದೆ ಆಮಂತ್ರಣ ತಲುಪುತ್ತದೆ.
ವಾಟ್ಸ್ ಆಪ್ ಪೇಮೆಂಟ್ ವೈಶಿಷ್ಟ್ಯ..
ವಾಟ್ಸ್ ಆಪ್ ಪೇಮೆಂಟ್ ವೈಶಿಷ್ಟ್ಯವು ತುಂಬಾ ಸರಳ ಮತ್ತು ಪ್ರತಿಯೊಬ್ಬರೂ ಬಳಕೆ ಮಾಡುವಂತಿದೆ. ಕೆಲವೇ ಕೆಲವು ಸುಲಭದ ಹಂತಗಳನ್ನು ಇದು ಬಯಸುತ್ತೆ ಮತ್ತು ಹಣವನ್ನು ಬೇರೆ ಫ್ಲ್ಯಾಟ್ ಫಾರ್ಮ್ ನಲ್ಲಿರುವ ಇತರೆ ಬಳಕೆದಾರರಿಗೆ ಸುಲಭದಲ್ಲಿ ಕಳುಹಿಸಬಹುದಾಗಿದೆ. ವಾಟ್ಸ್ ಆಪ್ ನಲ್ಲಿ ರಿಜಿಸ್ಟರ್ ಆಗಿರುವ ಫೋನ್ ನಂಬರ್ ಗೆ ನಿಮ್ಮ ಬ್ಯಾಂಕ್ ಅಕೌಂಟನ್ನು ಲಿಂಕ್ ಮಾಡಿ, ಓಟಿಪಿ ಮುಖಾಂತರ ನೀವದನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ.
ಅಷ್ಟು ಮಾಡಿದರೆ ಆಯ್ತು. ನಿಮ್ಮ ಚಾಟ್ ವಿಂಡೋ ಬಳಸಿ ನೀವು ಇತರರಿಗೆ ಹಣವನ್ನು ಕಳುಹಿಸಲೂ ಬಹುದು, ಇತರರಿಂದ ಪಡೆಯಲೂ ಬಹುದು. BHIM ಮತ್ತು ಗೂಗಲ್ ತೇಝ್ ಆಪ್ ಗಳು 50,000 ರುಪಾಯಿ ವರೆಗಿನ ಟ್ರಾನ್ಸ್ಯಾಕ್ಷನ್ ಮಾಡಲು ಒಮ್ಮೆಲೆ ಅವಕಾಶ ನೀಡುತ್ತದೆ. ಸದ್ಯ ಅಷ್ಟನ್ನು ವಾಟ್ಸ್ ಆಪ್ ನ್ನೂ ನಿರೀಕ್ಷಿಸಬಹುದು. ಮತ್ತು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ವಾಟ್ಸ್ ಆಪ್ ಟ್ರ್ಯಾನ್ಸ್ಯಾಕ್ಷನ್ ಗೆ ಅವಕಾಶವಿರಬಹುದು.
ಪೇಮೆಂಟ್ ಆಪ್ ನ ಜೊತೆಗೆ ವಾಟ್ಸ್ ಆಪ್ ನಲ್ಲಿ ಇನ್ನೂ ಎರಡು ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. QR ಕೋಡ್ ಸ್ಕ್ಯಾನಿಂಗ್ ಮತ್ತು ಸೆಂಡ್ ಮನಿ ಡೈರೆಕ್ಟ್ಲಿ ಟು upi ಐಡಿ.. ಒಟ್ಟಾರೆ ಹಣ ಸಂದಾಯಕ್ಕಾಗಿ ಇನ್ನು ಮುಂದೆ ಕಾಗದದ ದುಡ್ಡು ಹಿಡಿದು ಓಡಾಡೋ ಅಗತ್ಯವಿಲ್ಲ. ಚಿಲ್ಲರೆಗಾಗಿ ಪರಿತಪಿಸಬೇಕಾಗಿಲ್ಲ. ವಾಟ್ಸ್ ಆಪ್ ಮುಖಾಂತರವೇ ಟ್ರಾನ್ಸ್ಯಾಕ್ಷನ್ ಮಾಡಬಹುದು.