Home
ಸುದ್ದಿಜಾಲ

ವಾಟ್ಸಪ್‌ನ ಈ ಫೀಚರ್ಸ್‌ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!

ವಾಟ್ಸಪ್ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಫೇಸ್‌ಬುಕ್ ಒಡೆತನದ ಇನ್‌ಸ್ಟಂಟ್ ಮೆಸೇಜಿಂಗ್‌ ಅಪ್ಲಿಕೇಶನ್. ತನ್ನ ಬಳಕೆದಾರರಿಗಾಗಿ ಅನೇಕ ಫೀಚರ್ಸ್‌ಗಳನ್ನ ಪರಿಚಯಿಸುತ್ತಲ್ಲೇ ಇರುವ ವಾಟ್ಸಪ್‌ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಆದರೆ ಕೆಲವು ಫೀಚರ್ಸ್‌ಗಳು ಇದ್ದರೂ ಸಹ ಬಳಕೆದಾರರಿಗೆ ಸೂಕ್ತ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲ ಅನ್ನೊದನ್ನ ಸಹ ನಾವು ಪರಿಗಣಿಸಬೇಕಾಗುತ್ತದೆ.

ಹೌದು

ಹೌದು, ವಾಟ್ಸಪ್‌ ತನ್ನ ಬಳಕೆದಾರರಿಗೆ ಪರಿಚಯಿಸುವ ಫೀಚರ್ಸ್‌ಗಳಲ್ಲಿ ಕೆಲ ಫಿಚರ್ಸ್‌ಗಳ ಬಗ್ಗೆ ಗ್ರಾಹಕರಿಗೆ ಅನುಕೂಲತೆಯೆ ಆಗುವುದಿಲ್ಲ. ಇನ್ನು ವಾಟ್ಸಪ್‌ನಲ್ಲಿ ನೀವು ಯಾರಿಗಾದರೂ ಮೆಸೇಜ್‌ ಮಾಡಿರುತ್ತೀರಿ. ಅದು ಆ ಕ್ಷಣದಲ್ಲಿ ತಪ್ಪು ಮಾಹಿತಿ ಹೊಂದಿದ್ದರೆ, ಅಥವಾ ಮೆಸೇಜ್‌ ತಪ್ಪಾಗಿದ್ದರೆ ಅದನ್ನು ನಿಮ್ಮ ಮೆಸೆಜ್‌ ಸ್ವೀಕರಿಸಿದಾತ ಓದುವುದಕ್ಕೂ ಮುನ್ನವೇ ನೀವು ಅದನ್ನ ಡಿಲೀಟ್‌ ಮಾಡಬಹುದು. ಇದಕ್ಕಾಗಿ ' ಡಿಲೀಟ್‌ ಫಾರ್‌ ಎವರಿಒನ್‌' (delete for everyone)ಫೀಚರ್ಸ್‌ ಅನ್ನು ವಾಟ್ಸಪ್‌ ನೀಡಿದೆ. ಆದರೆ ಈ ಫೀಚರ್ಸ್ ಹೆಚ್ಚು ಮೆಚ್ಚುಗೆ ಪಡೆದಿದ್ದರೂ, ಕೆಲವು ಲೋಪದೋಷಗಳನ್ನ ಒಳಗೊಂಡಿದೆ. ಅದರಲ್ಲೂ 'ಡಿಲೀಟ್‌ ಫಾರ್‌ ಎವರಿಒನ್' ಫೀಚರ್ಸ್ ಅನ್ನು ಬಳಸುವ ಮೊದಲು ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳಿವೆ ಅವುಗಳನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.

ವಾಟ್ಸಪ್‌ನ ಲೆಟೇಸ್ಟ್‌ ಆಪ್ಡೇಟ್‌

ವಾಟ್ಸಪ್‌ನ ಲೆಟೇಸ್ಟ್‌ ಆಪ್ಡೇಟ್‌

ವಾಟ್ಸಪ್‌ನಲ್ಲಿ ನೀವು ಕಳುಹಿಸಿದ ಸಂದೇಶ ಎರಡೂ ಕಡೆಯೂ ಒಂದೇ ಬಾರಿಗೆ ಡಿಲೀಟ್‌ ಆಗಬೇಕಾದರೆ ನಿಮ್ಮ ಹಾಗೂ ನಿಮ್ಮ ಸಂದೇಶ ಸ್ವೀಕರಿಸಿದ ವಾಟ್ಸಪ್‌ ಬಳಕೆದಾರನ ವಾಟ್ಸಪ್‌ ಆಪ್ಡೇಟ್‌ ಆಗಿರಬೇಕು. ಎವರಿಒನ್‌ ಡಿಲೀಟ್‌ ಮಾಡಿದ ತಕ್ಷಣ ಸಂದೇಶ ಡಿಲೀಟ್‌ ಆಗಬೇಕಾದರೆ ನೀವು ಸಂದೇಶವನ್ನು ಕಳುಹಿಸಿದ ವ್ಯಕ್ತಿಯು ವಾಟ್ಸಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರಬೇಕು. ನಿಮ್ಮಲ್ಲಿ ಒಬ್ಬರು ಹಳೆಯ ಆವೃತ್ತಿಯಲ್ಲಿದ್ದರೆ, ‘ಡಿಲೀಟ್‌ ಫಾರ್‌ ಎವರಿಒನ್‌' ಫೀಚರ್ಸ್ ಕಾರ್ಯನಿರ್ವಹಿಸುವುದಿಲ್ಲ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಬ್ಬರಿಗೂ ಅನ್ವಯಿಸುತ್ತದೆ.

ಐಒಎಸ್ ನಲ್ಲಿ ಡಿಲೀಟ್‌ ಆಗುವುದಿಲ್ಲ

ಐಒಎಸ್ ನಲ್ಲಿ ಡಿಲೀಟ್‌ ಆಗುವುದಿಲ್ಲ

ಇನ್ನು ಆಪಲ್ ಫೋನ್‌ಗಳಲ್ಲಿ ವಾಟ್ಸಪ್ ಬಳಸುವವರಿಗೆ, ಮೆಸೇಜ್‌ನಲ್ಲಿ ಕಳುಹಿಸಿದ ಫೋಟೋಗಳನ್ನ ಚಾಟ್‌ನಿಂದ ಡಿಲೀಟ್‌ ಮಾಡಿದರು ಸಹ ಅದು ಫೋಟೋಗಳ ಫೋಲ್ಡರ್‌ನಲ್ಲಿ ಡಿಲೀಟ್‌ ಆಗಿರುವುದಿಲ್ಲ. ಐಒಎಸ್ ಬಳಕೆದಾರರಿಗೆ ಕಳಹುಸಿದ ಮೆಸೇಜ್‌ ಮಾತ್ರ ಡಿಲೀಟ್‌ ಮಾಡಬಹುದೇ ಹೊರತು ಫೋಟೋಗಳನ್ನ ಅವರ ಅಪ್ಲಿಕೇಶನ್‌ನಿಂದ ಡಿಲೀಟ್‌ ಮಾಡಲು ಆಗೋದಿಲ್ಲ, ಆಪಲ್‌ಫೋನ್‌ನ ಪ್ರೈವೆಸಿ ಪಾಲಿಸಿ ಇದಕ್ಕೆ ಕಾರಣ. ಇದು ಐಫೋನ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.

ಮೆಸೇಜ್‌ ಡಿಲೀಟ್‌ ಆಗುವ ಮೊದಲೇ ನೋಡಬಹುದು

ಮೆಸೇಜ್‌ ಡಿಲೀಟ್‌ ಆಗುವ ಮೊದಲೇ ನೋಡಬಹುದು

ಇದಲ್ಲದೆ ನೀವು ಕಳುಹಿಸಿದ ಸಂದೇಶವನ್ನು ನೀವು ತಕ್ಷಣ ಅಳಿಸಿದರೂ ಸಹ, ಅದನ್ನು ಸ್ವೀಕರಿಸುವ ವ್ಯಕ್ತಿಯು ನೀವು ಡಿಲೀಟ್‌ ಮಾಡುವ ಮೊದಲು ಅದನ್ನು ನೋಡಿರಬಹುದು. ನೀವು ಸಂದೇಶವನ್ನು ಕಳುಹಿಸಿದ ವ್ಯಕ್ತಿಯು ಈಗಾಗಲೇ ಚಾಟ್ ತೆರೆದಿದ್ದರೆ ಅಥವಾ ನೋಟಿಫಿಕೇಷನ್‌ ಮೂಲಕ ಮೆಸೇಜ್‌ ಅನ್ನು ನೋಡಿದ್ದರೆ, ಆತ ಮೇಸೇಜ್‌ ಅನ್ನು ನೋಡಿಲ್ಲ ಎಂದು ಕಂಡುಬಂದರೂ ಆತ ವೀಕ್ಷಿಸಿರುವ ಸಾಧ್ಯತೆ ಇರುತ್ತದೆ. ನೋಟಿಫಿಕೇಶನ್‌ ನಲ್ಲಿಯೇ ಮೆಸೇಜ್‌ ಓದಿ ನಂತರ ಚಾಟ್‌ ತೆರೆದಾಗ ಮಾತ್ರ ಸಂದೇಶವನ್ನು ಡಿಲೀಟ್‌ ಮಾಡಿರುವುದರ ಬಗ್ಗೆ ಗೊತ್ತಾಗಲಿದೆ.

ಸಕ್ಸಸ್‌ ಆಗಿರುವುದರ ಬಗ್ಗೆ ಮಾಹಿತಿ ಸಿಗೋದಿಲ್ಲ.

ಸಕ್ಸಸ್‌ ಆಗಿರುವುದರ ಬಗ್ಗೆ ಮಾಹಿತಿ ಸಿಗೋದಿಲ್ಲ.

ನೀವು ಕಳುಹಿಸಿದ ಸಂದೇಶವನ್ನು ಡಿಲೀಟ್‌ ಫಾರ್‌ ಎವರಿಒನ್‌ ಮಾಡಿದ್ದರು, ಸಹ ನೀವು ಕಳುಹಿಸಿದ ಸಂದೇಶವನ್ನು ಡಿಲೀಟ್‌ ಮಾಡಲಾಗಿದೆ ಎಂದು ವಾಟ್ಸಪ್ ನಿಮಗೆ ತಿಳಿಸುವುದಿಲ್ಲ. ನೀವು ಕಳುಹಿಸಿದ ಸಂದೇಶವನ್ನು ಅಳಿಸಿದ್ದರೂ ಸಹ, ಸ್ವೀಕರಿಸುವವರು ಅದನ್ನು ಈಗಾಗಲೇ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನ ವಾಟ್ಸಪ್‌ ನೀಡೋದಿಲ್ಲ. ಇದು ಮತ್ತೊಂದು ಲೋಪದೋಷ ಅಂತಾನೇ ಹೇಳಬಹುದು.

ಸಂದೇಶ ಅಳಿಸಲು ಒಂದು ಗಂಟೆ ಅವಕಾಶ

ಸಂದೇಶ ಅಳಿಸಲು ಒಂದು ಗಂಟೆ ಅವಕಾಶ

ಇನ್ನು ನೀವು ಕಳಹಿಸರುವ ಮೆಸೇಜ್‌ ಅನ್ನು ಡಿಲೀಟ್‌ ಫಾರ್‌ ಎವರಿಒನ್‌ ಮಾಡಲು ಮೊದಲೆಲ್ಲಾ 7 ನಿಮಿಷಗಳು ಮಾತ್ರ ಅವಕಾಶ ಇತ್ತು. ಆದರೆ ಇದೀಗ ನೀವು ಕಳಹಿಸಿದ ಸಂದೇಶವನ್ನ ಒಂದು ಗಂಟೆಯ ನಂತರವೂ ಡಿಲೀಟ್‌ ಫಾರ್‌ ಎವರಿಒನ್‌ ಮೂಲಕ ಡಿಲೀಟ್‌ ಮಾಡಲು ಅವಕಾಶವಿದೆ. 7ನಿಮಿಷಗಳಿದ್ದ ಕಾಲವಕಾಶವನ್ನ ಒಂದು ಗಂಟೆಯ ಅವಧಿಯವರೆಗೂ ಹೆಚ್ಚಿಸಲಾಗಿದೆ. ಆದರೆ ಈ ಅವಧಿಯಲ್ಲಿ ಹೆಚ್ಚು ಕಡಿಮೆ ಸಂದೇಶವನ್ನ ನೋಡಿಯೆ ಇರುತ್ತಾರೆ.

Best Mobiles in India

English summary
DID YOU KNOW? If you were trying to delete a message for everyone and for some reason it does not happen, WhatsApp won’t notify you.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+