ಬಳಕೆದಾರರಿಗೆ ಮತ್ತೊಂದು ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಜನಪ್ರಿಯ ಮೆಸೇಜಿಂಗ್‌ ಆಗಿ ಗುರುತಿಸಿಕೊಂಡಿರುವ ವಾಟ್ಸಾಪ್‌ ಬಳಕೆದಾರರ ಸ್ನೇಹಿ ಆಗಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹಂತಹಂತವಾಗಿ ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ಜಾಗತಿಕವಾಗಿ ಅಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಸ್ಟಿಕ್ಕರ್‌ ಸರ್ಚ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಪ್ಲಾಟ್‌ಫಾರ್ಮ್‌

ಹೌದು, ಜನಪ್ರಿಯ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸಾಪ್‌ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ‘ಸ್ಟಿಕ್ಕರ್ ಸರ್ಚ್' ಫೀಚರ್ಸ್‌ ಅನ್ನು ಪರಿಚಯಿಸಿದೆ. ಅಂದರೆ ಬಳಕೆದಾರರು ಈಗ ಅಪ್ಲಿಕೇಶನ್‌ನಲ್ಲಿ ಕಸ್ಟಮೈಸ್ ಮಾಡಿದ ಸ್ಟಿಕ್ಕರ್‌ಗಳನ್ನು ಹುಡುಕಲು ಸಾಧ್ಯವಾಗುತ್ತದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಪ್‌

ವಾಟ್ಸಪ್‌ ಸ್ಟಿಕ್ಕರ್‌ ಸರ್ಚ್‌ ಫೀಚರ್ಸ್‌ ಪರಿಚಯಿಸಿದೆ. ಅಷ್ಟೇ ಅಲ್ಲ ಈ ಹೊಸ ಫೀಚರ್ಸ್‌ ಮೂಲಕ ನೀವು ಏನೆಲ್ಲಾ ಪಡೆದುಕೊಳ್ಳಬಹುದು ಅನ್ನೊದನ್ನ ವಿವರಿಸಿದೆ. ಅದರಲ್ಲೂ "ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಬೇಕೇ? ಅದಕ್ಕಾಗಿ ಸ್ಟಿಕ್ಕರ್ ಇದೆ. ನನಗೆ ಇದು ತಿಳಿದಿದೆ ಎಂದು ಹೇಳಬೇಕೇ? ಅದಕ್ಕೂ ಸ್ಟಿಕ್ಕರ್ ಇದೆ " ಎಂದು ವಾಟ್ಸಾಪ್ ತನ್ನ ಟ್ವೀಟ್‌ ಮೂಲಕ ತಿಳಿಸಿದೆ. ಅಂದರೆ ಬಳಕೆದಾರರು ತಾವು ಯಾವುದನ್ನು ಹೇಳಬೇಕು ಅದನ್ನು ಸ್ಟಿಕ್ಕರ್‌ ಮೂಲಕ ಸಹ ಹೇಳಬಹುದು.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಈ ಹಿಂದೆ ಬಳಕೆದಾರರಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಎಮೋಜಿಗಳು ಮತ್ತು ಜಿಐಎಫ್‌ಗಳನ್ನು ಹುಡುಕಲು ಮಾತ್ರ ಅವಕಾಶ ಮಾಡಿಕೊಟ್ಟಿತು. ಆದರೆ ಸ್ಟಿಕ್ಕರ್ ಸರ್ಚ್ ಫೀಚರ್ಸ್‌ ಮೂಲಕ ಕಸ್ಟಮ್ ಸ್ಟಿಕ್ಕರ್‌ಗಳ ಸಹಾಯದಿಂದ ಬಳಕೆದಾರರು ತಾವು ಹೇಳಲು ಬಯಸುವದನ್ನು ನಿಖರವಾಗಿ ಕಳುಹಿಸುವುದು ಸುಲಭವಾಗುತ್ತದೆ. ನಿಮ್ಮ ಭಾವನೆಗಳನ್ನ ಅಕ್ಷರ ರೂಪಕ್ಕಿಂತ ಸ್ಟಿಕ್ಕರ್‌ ರೂಪದಲ್ಲಿ ವ್ಯಕ್ತಪಡಿಸಬಹುದಾಗಿದೆ. ಭಾವನೆಗಳಿಗೆ ಸ್ಟಿಕ್ಕರ್‌ ರೂಪ ನೀಡಬಹುದು. ನಿಮ್ಮ ಭಾವನೆಯ ಸ್ಟಿಕ್ಕರ್‌ಗಳನ್ನು ನೀವು ಸರ್ಚ್‌ ಮಾಡಬಹುದು.

ವಾಟ್ಸಾಪ್‌

ಇದಲ್ಲದೆ ಈ ತಿಂಗಳ ಆರಂಭದಲ್ಲಿ ವಾಟ್ಸಾಪ್‌ ತನ್ನ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿತ್ತು. ಈ ಅಪ್ಡೇಟ್‌ ಮೂಲಕ ಬಳಕೆದಾರರು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳಿಂದ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಎಲ್ಲಾ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ವರ್ಲ್ಡ್ ವೈಡ್ ಆಮದು ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಅದರಲ್ಲೂ ಭಾರತ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ಸೇರಿದಂತೆ ಮೂರು ದೇಶಗಳ ಬಳಕೆದಾರರಿಗಾಗಿ ಸ್ಟಿಕ್ಕರ್ ಕ್ರಿಯೆಟರ್‌ ಅನ್ನು ಸಹ ಕಂಪನಿಯು ಹೊರತಂದಿದೆ. ಬಾಹ್ಯ ಫೀಚರ್ಸ್‌ಗಳನ್ನು ಬಳಸಿಕೊಂಡು ಸ್ಟಿಕ್ಕರ್‌ಗಳನ್ನು ರಚಿಸಲು ಈ ಫೀಚರ್ಸ್‌ ಬಳಕೆದಾರರನ್ನು ಅನುಮತಿಸುತ್ತದೆ.

ಅಪ್ಲಿಕೇಶನ್

ಇದಕ್ಕಾಗಿ ಬಳಕೆದಾರರು ತಮ್ಮ ಕ್ಯಾಮೆರಾ ರೋಲ್‌ನಿಂದ ವೀಡಿಯೊ ಅಥವಾ ಜಿಐಎಫ್ ಅನ್ನು ಆರಿಸುವ ಮೂಲಕ ಸ್ಟಿಕ್ಕರ್ ಪ್ಯಾಕ್ ರಚಿಸಲು ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು. ನಂತರ, ಅಪ್ಲಿಕೇಶನ್ ಅದನ್ನು ಸ್ವಯಂಚಾಲಿತವಾಗಿ .webp ಫೈಲ್‌ಗೆ ಪರಿವರ್ತಿಸುತ್ತದೆ, ಅದನ್ನು ಅಪ್ಲಿಕೇಶನ್‌ಗೆ ಆಮದು ಮಾಡಿಕೊಳ್ಳಬಹುದು. ಈ ರೀತಿಯಾಗಿ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಕಸ್ಟಮ್ ಸ್ಟಿಕ್ಕರ್‌ಗಳನ್ನು ಶೇರ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
WhatsApp rolled out a sticker search feature on iOS and Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X