ವಾಟ್ಸಾಪ್ ಸೇರಿದ ಎಡಿಟ್ ಮೆಸೇಜ್ ಫೀಚರ್ಸ್! ತಪ್ಪು ಸಂದೇಶವನ್ನು ಎಡಿಟ್ ಮಾಡಲು ಅವಕಾಶ!
ಸಾಕಷ್ಟು ಕುತೂಹಲ ಕೆರಳಿಸಿದ್ದ ವಾಟ್ಸಾಪ್ ಎಡಿಟ್ ಫೀಚರ್ಸ್ ಇದೀಗ ರೂಲ್‌ಔಟ್ ಆಗಿದೆ. ಇದರಿಂದ ವಾಟ್ಸಾಪ್ ಬಳಕೆದಾರರು ತಾವು ಸೆಂಡ್ ಮಾಡಿದ ಟೆಕ್ಸ್ಟ್ ಮೆಸೇಜ್ ಅನ್ನು ಎಡಿಟ್ ಮಾಡುವುದಕ್ಕೆ ಅವಕಾಶ ಸಿಗಲಿದೆ. ವಾಟ್ಸಾಪ್‌ನ ಈ ಹೊಸ ಫೀಚರ್ಸ್ ಬಳಕೆದಾರರಿಗೆ ತಾವು ಎದುರಿಸುವ ಮುಜುಗರವನ್ನು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆ.
ಹೌದು, ವಾಟ್ಸಾಪ್ ತನ್ನ ಬಳಕೆದಾರರಿಗೆ ಎಡಿಟ್ ಮೆಸೇಜ್ ಬಟನ್ ಫೀಚರ್ಸ್ ಅನ್ನು ಪರಿಚಯಿಸಿದೆ. ಇಂದಿನಿಂದ ಎಲ್ಲಾ ಬಳಕೆದಾರರಿಗೂ ಈ ಫೀಚರ್ಸ್ ಲಭ್ಯವಾಗಲಿದೆ. ಇದರಿಂದ ನೀವು ಸಂದೇಶವನ್ನು ಕಳುಹಿಸಿದ 15 ನಿಮಿಷಗಳ ಒಳಗೆ ಮೆಸೇಜ್ ಅನ್ನು ಎಡಿಟ್ ಮಾಡಲು ಸಾದ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಎಡಿಟ್ ಫೀಚರ್ಸ್ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ವಾಟ್ಸಾಪ್ ಎಡಿಟ್ ಮೆಸೇಜ್ ಫೀಚರ್ಸ್?
ನೀವು ವಾಟ್ಸಾಪ್‌ನಲ್ಲಿ ತಪ್ಪಾದ ಸಂದೇಶ ಕಳುಹಿಸಿ ಡಿಲೀಟ್ ಮಾಡಲು ಮುಂದಾಗಿದ್ದೀರಾ, ಅಯ್ಯೋ ಬೈ ಮಿಸ್ಟೆಕ್ ಆಗೋಯ್ತು ಅಂತಾ ಪರಿತಪಿಸುತ್ತಿದ್ದೀರಾ, ಇನ್ಮುಂದೆ ನೀವು ತಪ್ಪಾದ ಸಂದೇಶ ಕಳುಹಿಸಿದ ನಂತರ ಯೋಚಿಸಬೇಕಾದ ಅಗತ್ಯವಿಲ್ಲ. ಯಾಕಂದ್ರೆ ವಾಟ್ಸಾಪ್ ಸೇರಿರುವ ಎಡಿಟ್ ಬಟನ್ ಫೀಚರ್ಸ್ ನೀವು ಸಂದೇಶ ಕಳುಹಿಸಿದ 15 ನಿಮಿಷಗಳ ಒಳಗೆ ಸಂದೇಶವನ್ನು ಎಡಿಟ್ ಮಾಡಲು ಅವಕಾಶ ನೀಡಲಿದೆ. ಆದರಿಂದ ನೀವು ತಪ್ಪಾದ ಸಂದೇಶ ಕಳುಹಿಸಿದ ನಂತರ ಆ ಸಂದೇಶವನ್ನು ಮತ್ತೊಮ್ಮೆ ಎಡಿಟ್ ಮಾಡಿ ರಿ ಸೆಂಡ್ ಮಾಡಬಹುದು.
ಪ್ರಸ್ತುತ ಈ ಫೀಚರ್ಸ್ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೂ ಲಭ್ಯವಿದೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ, ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಈ ಸಂದೇಶವನ್ನು ಪೊಸ್ಟ್ ಮಾಡುವ ಮೂಲಕ ಎಡಿಟ್ ಫೀಚರ್ಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೀವು ಕಳುಹಿಸಿದ ಸಂದೇಶವನ್ನು ಪೂರ್ತಿ ಡಿಲೀಟ್ ಮಾಡದೆ ನಿಮ್ಮ ಮಿಸ್ಟೆಕ್ ಅನ್ನು ಸರಿಪಡಿಸಲು ಅವಕಾಶ ನೀಡಲಿದೆ. ಆದರೆ ನಿಮ್ಮ ಮೆಸೇಜ್ ಅನ್ನು ಎಡಿಟ್ ಮಾಡುವುದಕ್ಕೆ ಸಿಗುವ ಅವಕಾಶ ಸಂದೇಶ ಕಳುಹಿಸಿದ 15 ನಿಮಿಷಗಳ ಒಳಗೆ ಮಾತ್ರ ಮಾನ್ಯವಾಗಿರುತ್ತದೆ.

ವಾಟ್ಸಾಪ್ ಎಡಿಟ್ ಮೆಸೇಜ್ ಫೀಚರ್ಸ್ ಬಳಕೆ ಹೇಗೆ?
ಇನ್ನು ಈ ಫೀಚರ್ಸ್ ಅನ್ನು ನೀವು ಬಳಸಬೇಕಾದರೆ ನೀವು ಎಡಿಟ್ ಮಾಡಬೇಕಾದ ಸಂದೇಶದ ಮೇಲೆ ಲಾಂಗ್ ಪ್ರೆಸ್ ಮಾಡಬೇಕಾಗುತ್ತದೆ. ನಂತರ ನಿಮಗೆ ಸಂದೇಶವನ್ನು ಎಡಿಟ್ ಮಾಡುವ ಆಯ್ಕೆ ಲಭ್ಯವಾಗಲಿದೆ. ಇನ್ನು ನೀವು ಎಡಿಟ್ ಮಾಡಿದ ಸಂದೇಶದ ಜೊತೆಗೆ ಸಮಯ ಸ್ಟ್ಯಾಂಪ್ ಹಾಗೂ ಎಡಿಟ್ ಟ್ಯಾಗ್ ಅನ್ನು ನೀಡಲಾಗಿರುತ್ತದೆ. ಇದರಿಂದ ನಿಮ್ಮ ಸಂದೇಶವನ್ನು ಸ್ವಿಕರಿಸುವವರಿಗೆ ಈ ಸಂದೇಶವನ್ನು ಎಡಿಟ್ ಮಾಡಲಾಗಿದೆ ಅನ್ನೊದು ತಿಳಿಯಲಿದೆ. ಆದರೆ ನೀವು ಎಡಿಟ್ ಮಾಡಿದ ಹಿಸ್ಟರಿಯನ್ನು ತಿಳಿಯಲು ಅವರಿಗೆ ಸಾದ್ಯವಾಗುವುದಿಲ್ಲ.
ಸದ್ಯ ಮೆಟಾ ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ಫೀಚರ್ಸ್ ಬಗ್ಗೆ ಮಾಹಿತಿಯನ್ನು ನೀಡಿದೆ. ಅದರಂತೆ ಈ ಫೀಚರ್ಸ್ ಅನ್ನು ನಿಮ್ಮ ತಪ್ಪು ಸಂದೇಶಗಳನ್ನು ಎಡಿಟ್ ಮಾಡಲು ಬಳಸಬಹುದು. ಅಲ್ಲದೆ ನೀವು ಎಡಿಟ್ ಮಾಡಿದ ಸಂದೇಶಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಮೂಲಕ ರಕ್ಷಿಸಲಾಗುವುದು ಎಂದು ಹೇಳಿದೆ.
ಇನ್ನು ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ಲಾಕ್ ಫೀಚರ್ಸ್ ಅನ್ನು ಕೂಡ ಸೇರ್ಪಡೆ ಮಾಡಿದೆ. ಇದರಿಂದ ಬಳಕೆದಾರರು ತಮಗೆ ಬೇಕಾದ ಚಾಟ್‌ಗಳನ್ನು ಲಾಕ್ ಮಾಡಬಹುದು. ಈ ರೀತಿ ಲಾಕ್ ಮಾಡಿದ ಚಾಟ್ ಅನ್ನು ಬೇರೆಯವರು ವಾಟ್ಸಾಪ್‌ನಲ್ಲಿ ಪ್ರವೇಶಿಸಲು ಸಾದ್ಯವಾಗುವುದಿಲ್ಲ. ಜೊತೆಗೆ ನೀವು ಲಾಕ್ ಮಾಡಿದ ಚಾಟ್ ಅನ್ನು ಪ್ರವೇಶಿಸಬೇಕಾದರೆ ಪಾಸ್‌ವರ್ಡ್ ಇಲ್ಲವೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮೂಲಕ ಮಾತ್ರವೇ ಪ್ರವೇಶಿಸಲು ಸಾದ್ಯವಾಗಲಿದೆ.

ವಾಟ್ಸಾಪ್‌ನಲ್ಲಿ ಚಾಟ್ ಲಾಕ್ ಸಕ್ರಿಯಗೊಳಿಸಲು ಈ ಕ್ರಮ ಅನುಸರಿಸಿ:
ಹಂತ 1: ನಿಮ್ಮ ವಾಟ್ಸಾಪ್ ಕಾಂಟ್ಯಾಕ್ಟ್ ಪ್ರೊಫೈಲ್ ವಿಭಾಗಕ್ಕೆ ಹೋಗಿ.
ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್ ಲಾಕ್ ಅನ್ನು ಟ್ಯಾಪ್ ಮಾಡಿ.
ಹಂತ 3: 'ಫಿಂಗರ್‌ಪ್ರಿಂಟ್‌ನೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಿ' ಆಯ್ಕೆಯನ್ನು ಸಕ್ರಿಯಗೊಳಿಸಿ.


Click it and Unblock the Notifications








