ಡೆಸ್ಕ್‌ಟಾಪ್ ಆವೃತ್ತಿಯಲ್ಲೂ ವೀಡಿಯೋ ಕಾಲ್ ಬೆಂಬಲಿಸಲು ವಾಟ್ಸಾಪ್ ಸಿದ್ದತೆ!
ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಆಪ್ ವಾಟ್ಸಾಪ್. ಬಳಕೆದಾರರಿಗೆ ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಿಂದ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಮಾಡಲು ಶೀಘ್ರದಲ್ಲೇ ಅವಕಾಶವನ್ನು ನೀಡಲಿದೆ. ಇನ್ನು ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳನ್ನು ಸಹ ಹೊಂದಿದೆ. ಆದರೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ಕೆಲವು ಪ್ರಮುಖ ಫೀಚರ್ಸ್‌ಗಳು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಲಭ್ಯವಿಲ್ಲ. ಇವುಗಳಲ್ಲಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನ ಪರಿಚಯಿಸುವತ್ತ ವಾಟ್ಸಾಪ್ ಸಿದ್ದತೆ ನಡೆಸಿದೆ.

ಹೌದು, ವಾಟ್ಸಾಪ್ ತನ್ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ವಾಯ್ಸ್ ಮತ್ತು ವೀಡಿಯೋ ಕಾಲ್ ಬೆಂಬಲಿಸುವ ಫೀಚರ್ಸ್ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಈಗಾಗಲೇ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಲಭ್ಯವಿರುವ ಈ ಫೀಚರ್ಸ್ ಶೀಘ್ರದಲ್ಲೇ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಸದ್ಯ ವಾಟ್ಸಾಪ್ ವಾಯ್ಸ್ ಮತ್ತು ವೀಡಿಯೊ ಕಾಲ್‌ಗಾಗಿ ಎರಡು ಹೊಸ ಗುಂಡಿಗಳನ್ನು ಡೆಸ್ಕ್‌ಟಾಪ್‌ನಲ್ಲಿ ನೀಡುವ ಸಾದ್ಯತೆ ಇದೆ ಎಂದು ವರದಿಯಾಗಿದೆ. ಈ ಎರಡೂ ಐಕಾನ್‌ಗಳು "ಬೀಟಾ" ಟ್ಯಾಗ್ ಅನ್ನು ಹೊಂದಿದ್ದು, ಈ ಫೀಚರ್ಸ್ ಅನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಸ್ತುತ ವಾಟ್ಸಾಪ್‌ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ವಾಯ್ಸ್ ಮತ್ತು ವೀಡಿಯೊ ಕಾಲ್ ಬೆಂಬಲ ಇನ್ನೂ ಸ್ಥಿರ ಆವೃತ್ತಿಯಲ್ಲಿ ಲಭ್ಯವಿಲ್ಲ. ಆದರೆ ವಾಟ್ಸಾಪ್ ಇದನ್ನು ಶೀಘ್ರದಲ್ಲೇ ಪರಿಚಯಿಸಬಹುದು ಎನ್ನಲಾಗಿದೆ. ಸದ್ಯ ವಾಟ್ಸಾಪ್ WABetaInfo ಧ್ವನಿ ಮತ್ತು ವೀಡಿಯೊ ಕರೆ ಆಯ್ಕೆಗಳ ಸ್ಕ್ರೀನ್‌ಶಾಟ್‌ಗಳನ್ನು ವಾಟ್ಸಾಪ್ ವೆಬ್‌ನಲ್ಲಿ ಹಂಚಿಕೊಂಡಿದೆ. ಲಭ್ಯ ಮಾಹಿತಿ ಪ್ರಕಾರ ವಾಟ್ಸಪ್ ವೆಬ್‌ನಲ್ಲಿ ಸಂಪರ್ಕದ ಹೆಸರಿನ ಪಕ್ಕದಲ್ಲಿಯೇ ವೀಡಿಯೊ ಮತ್ತು ಧ್ವನಿ ಕರೆ ಗುಂಡಿಗಳು ಇರಲಿವೆ ಎಂದು ಹೇಳಲಾಗ್ತಿದೆ.

ಇನ್ನು ನೀವು ವಾಟ್ಸಾಪ್ ವೆಬ್‌ನಲ್ಲಿ ಕರೆ ಮಾಡಿದಾಗ, ಕರೆಯನ್ನು ಕೊನೆಗೊಳಿಸಲು, ವೀಡಿಯೊ/ಆಡಿಯೊಗೆ ಬದಲಾಯಿಸಲು ಮತ್ತು ಕರೆಯನ್ನು ಮ್ಯೂಟ್ ಮಾಡಲು ಬಳಕೆದಾರರ ಹೆಸರು, ಪ್ರೊಫೈಲ್ ಚಿತ್ರ ಮತ್ತು ಬಟನ್‌ಗಳೊಂದಿಗೆ ಸಣ್ಣ ವಿಂಡೋ ಪಾಪ್ ಅಪ್ ಆಗಲಿದೆ ಎಂದು ಹೇಳಲಾಗಿದೆ. ಇದಲ್ಲದೆ ವಾಟ್ಸಾಪ್ ವೆಬ್‌ನಲ್ಲಿ ಪರಿಚಯಿಸಲಾಗುವ ಹೊಸ ಫೀಚರ್ಸ್‌ನಲ್ಲಿ ಗ್ರೂಪ್ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಸಹ ಬೆಂಬಲಿಸಲಾಗುತ್ತದೆ. ವಾಟ್ಸಾಪ್ ವೆಬ್‌ನಲ್ಲಿ ವಾಯ್ಸ್ ಮತ್ತು ವಿಡಿಯೋ ಕರೆಗಳಿಗೆ ಬೆಂಬಲ ಮುಂದಿನ ವಾರಗಳಲ್ಲಿ ವಾಟ್ಸಾಪ್‌ನ ಬೀಟಾ ಬಳಕೆದಾರರಿಗೆ ಲಭ್ಯವಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಸದ್ಯ ವಾಟ್ಸಾಪ್ ತನ್ನ ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ವಾಯ್ಸ್ ಮತ್ತು ವಿಡಿಯೋ ಕಾಲ್ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಆದರೆ ಇದು ಸ್ಥಿರ ಆವೃತ್ತಿಯಲ್ಲಿ ವಾಟ್ಸಾಪ್ ಅದನ್ನು ಯಾವಾಗ ಪರಿಚಯಿಸುತ್ತದೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ವಾಟ್ಸಾಪ್ ವೆಬ್ ಮತ್ತು ಅದರ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ಪ್ರಮುಖ ನವೀಕರಣವಾಗಿರಲಿದೆ. ಈ ಫೀಚರ್ಸ್ ಮೂಲಕ ಮೀಟಿಂಗ್ ಅನ್ನು ನಿಗದಿಪಡಿಸುವ ಬದಲು ಇನ್ಸಟಂಟ್ ಗ್ರೂಪ್ ಕಾಲ್‌ಗಳಿಗಾಗಿ ಜನರು ವಾಟ್ಸಾಪ್ ಅನ್ನು ಬಳಸುವುದನ್ನು ಇನ್ನಷ್ಟು ಸುಲಭಗೊಳಿಸಲಿದೆ ಎಂದು ಹೇಳಲಾಗಿದೆ.


Click it and Unblock the Notifications








