ಬಳಕೆದಾರಿಗೆ ಮತ್ತೊಂದು ಅಚ್ಚರಿಯ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಹೆಚ್ಚನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್‌ ಆಪ್‌ ಆಗಿದೆ. ಕಾಲಕ್ಕೆ ತಕ್ಕಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ವಾಯ್ಸ್ ಕಾಲಿಂಗ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಆಯ್ದ ಬಳಕೆದಾರರಿಗೆ ಮಾತ್ರ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಿಂದ ವಾಯ್ಸ್‌ ಮತ್ತು ವೀಡಿಯೊ ಕರೆಗಳನ್ನು ಮಾಡುವ ಫೀಚರ್ಸ್‌ ಪರಿಚಯಿಸಿತ್ತು. ಇದೀಗ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ವಾಯ್ಸ್‌ ಕಾಲ್‌ ಮಾಡುವ ಫೀಚರ್ಸ್‌ ಅನ್ನು ಸೇರಿಸಲಾಗಿದೆ ಎಂದು ವಾಟ್ಸಾಪ್‌ ದೃಡಪಡಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಬಹು ದಿನಗಳಿಂದ ಕೇಳಿ ಬರುತ್ತಿದ್ದ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ವಾಯ್ಸ್ ಕಾಲಿಂಗ್ ಫೀಚರ್ಸ್‌ ಅನ್ನು ಪರಿಚಯಿಸಿದೆ. ದೊಡ್ಡ ಪರದೆಯಲ್ಲಿ ವಾಯ್ಸ್‌ ಕಾಲ್‌ಗಳಿಗೆ ಉತ್ತರಿಸುವುದರಿಂದ ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುವುದು ಸುಲಭವಾಗುತ್ತದೆ ಎಂದು ವಾಟ್ಸಾಪ್‌ ಹೇಳಿದೆ. ಇದು ಇಮೇಜ್‌ ಮತ್ತು ಲ್ಯಾಂಡ್‌ಸ್ಕೇಪ್‌ ಮಾದರಿಯಲ್ಲೂ ಕಾರ್ಯನಿರ್ವಹಿಸಲಿದೆ ಎಂದು ವಾಟ್ಸಾಪ್‌ ದೃಡಪಡಿಸಿದೆ. ಇನ್ನುಳಿದಂತೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ ಸುಲಭವಾದ ಕಾರ್ಯಾಚರಣೆಯನ್ನು ಖಚಿತಪಡಿಸಿದೆ. ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಮರುಗಾತ್ರಗೊಳಿಸಬಹುದಾದ ಪರದೆಯ ಮೇಲೆ ಸ್ವತಂತ್ರ ವಿಂಡೋದಲ್ಲಿ ಡೆಸ್ಕ್‌ಟಾಪ್‌ಗಾಗಿ ವಾಟ್ಸಾಪ್ ಕಾಣಿಸುತ್ತದೆ. ತೆರೆದ ವಿಂಡೋಗಳು ಅಥವಾ ಬ್ರೌಸರ್ ಟ್ಯಾಬ್‌ಗಳ ಮಧ್ಯೆ ಬಳಕೆದಾರರು ತಮ್ಮ ವೀಡಿಯೊ ಚಾಟ್‌ಗಳನ್ನು ಕಳೆದುಕೊಳ್ಳದಂತೆ ಇದು ಯಾವಾಗಲೂ ಮೇಲ್ಭಾಗದಲ್ಲಿ ಕಾಣಿಸುತ್ತದೆ. ಇನ್ನು ತನ್ನ ಅಪ್ಲಿಕೇಶನ್‌ನಲ್ಲಿನ ಎಲ್ಲಾ ವಾಯ್ಸ್‌ ಮತ್ತು ವೀಡಿಯೊ ಕರೆಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಾಟ್ಸಾಪ್‌

ಇದಲ್ಲದೆ ಮೊಬೈಲ್ ಡಿವೈಸ್‌ನಿಂದ ಅಥವಾ ಡೆಸ್ಕ್‌ಟಾಪ್ ಪಿಸಿಯಿಂದ ಕರೆ ಮಾಡಿದರೂ ಸುರಕ್ಷತೆ ಮತ್ತು ಗೌಪ್ಯತೆ ವೈಶಿಷ್ಟ್ಯಗಳು ಒಂದೇ ಆಗಿರುತ್ತವೆ ಎಂದು ವಾಟ್ಸಾಪ್‌ ತಿಳಿಸಿದೆ. ವಿಂಡೋಸ್ ಮತ್ತು ಮ್ಯಾಕ್ ಡಿವೈಸ್‌ಗಳಲ್ಲಿ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಿಂದ ಬಳಕೆದಾರರು ಒಂದರಿಂದ ಒಂದಕ್ಕೆ ಕರೆಗಳನ್ನು ಮಾತ್ರ ಮಾಡಬಹುದಾಗಿದೆ. ಭವಿಷ್ಯದಲ್ಲಿ ಗ್ರೂಪ್‌ ವಾಯ್ಸ್‌ ಮತ್ತು ವೀಡಿಯೊ ಕಾಲ್‌ ಫೀಚರ್ಸ್‌ಗಳನ್ನು ಸಹ ಪರಿಚಯಿಸುವ ಮಾತುಗಳನ್ನ ವಾಟ್ಸಾಪ್‌ ಹೇಳಿದೆ.

ವಾಟ್ಸಾಪ್

ಇನ್ನು ಜನವರಿಯಲ್ಲಿ, ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್‌ಗಾಗಿ ಮತ್ತೊಂದು ಹೊಸ ಭದ್ರತಾ ಫೀಚರ್ಸ್‌ ಅನ್ನು ಸಹ ಪರಿಚಯಿಸಿತ್ತು. ಡಿವೈಸ್‌ಗಳನ್ನು ಲಿಂಕ್ ಮಾಡುವಾಗ ಮುಖ ಮತ್ತು ಫಿಂಗರ್ಪ್ರಿಂಟ್ ಅನ್ಲಾಕ್ ಫೀಚರ್ಸ್‌ ಒದಗಿಸಿದೆ. ಇದರಿಂದ ನಿಮ್ಮ ಕಂಪ್ಯೂಟರ್‌ಗೆ ನಿಮ್ಮ ವಾಟ್ಸಾಪ್ ಖಾತೆಯನ್ನು ಲಿಂಕ್ ಮಾಡಲು ನೀವು ಬಯಸಿದಾಗ ಇದು ಹೆಚ್ಚುವರಿ ರಕ್ಷಣೆಯ ಪದರವನ್ನು ಸೇರಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗಳನ್ನು ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಮೂಲಕ ತಮ್ಮ ಕಂಪ್ಯೂಟರ್‌ಗೆ ಲಿಂಕ್ ಮಾಡಬಹುದಾಗಿದೆ.

Best Mobiles in India

Read more about:
English summary
WhatsApp voice calling has been added as a new feature on its desktop app for Windows and Mac.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X