ನಕಲಿ ಸುದ್ದಿಗಳನ್ನು ತಡೆಗಟ್ಟಲು ವಾಟ್ಸಾಪ್‌ನಿಂದ ಹೊಸ ಜಾಗೃತಿ ಅಭಿಯಾನ!

|

ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಸೊಶೀಯಲ್‌ ಮೆಸೇಜಿಂಗ್‌‌ ಆಪ್‌ ಅಂದ್ರೆ ಅದು ವಾಟ್ಸಾಪ್‌. ಸದ್ಯ ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನ ಹೊಂದಿದ್ದು, ಬಳಕೆದಾರರಿಗೆ ಆಕರ್ಷಕ ಫೀಚರ್ಸ್‌ಗಳನ್ನ ಕಾಲಕಾಲಕ್ಕೆ ಪರಿಚಯಿಸೋ ಮೂಲಕ ತನ್ನ ಜನಪ್ರಿಯತೆಯನ್ನ ಇನ್ನಷ್ಟು ಹೆಚ್ಚಿಸಿಕೊಂಡಿದೆ. ಇನ್ನು ಈಗಾಗಲೇ ತನ್ನ ಇನ್ಸಟಂಟ್‌ ಮೆಸೇಜಿಂಗ್‌ ಸೇವೆಯಿಂದ ಪ್ರಖ್ಯಾತಿಯಾಗಿರುವ ವಾಟ್ಸಾಪ್‌ನಲ್ಲಿ ಸುದ್ದಿಗಳು ಬೇಗನೇ ರವಾನೆ ಆಗುತ್ತವೆ. ಇನ್ನು ಹೇಳಿಕೇಳಿ ಇದು ಕೊರೋನಾ ವೈರಸ್‌ ಸಮಯ, ಇಂತಹ ಸಮಯದಲ್ಲಿ ಸತ್ಯ ಸುದ್ದಿಗಳ ಜೊತೆಗೆ ಸುಳ್ಳುಸುದ್ದಿಗಳ ಹಾವಳಿ ಕೂಡ ಜಾಸ್ತಿ ಆಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸಾಪ್‌ ಹೊಸ ಮಾದರಿಯ ಪ್ರಚಾರಕ್ಕೆ ಮುಂದಾಗಿದೆ.

ಇನ್ಸಟಂಟ್‌ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್

ಹೌದು, ಇನ್ಸಟಂಟ್‌ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್ ವಾಟ್ಸಾಪ್ ಹೊಸ ಮಾದರಿಯ ಪ್ರಚಾರಕ್ಕೆ ಮುಂದಾಗಿದೆ. ಎಷ್ಟೇ ಕಠಿಣ ನಿಯಮಗಳನ್ನ ತಂದರೂ ಕೂಡ ವಾಟ್ಸಾಪ್‌ನಲ್ಲಿ ಸುಳ್ಳು ಸುದ್ದಿಗಳನ್ನ ಹರಡುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ವಾಟ್ಸಾಪ್‌ ಇದೀಗ "ನೀವು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಪರಿಶೀಲಿಸಿ" ಎಂಬ ಶಿಕ್ಷಣ ಅಭಿಯಾನವನ್ನು ಪ್ರಾರಂಭಿಸಿದೆ, ಸದ್ಯ COVID-19 ಸೊಂಕಿನ ವಿರುದ್ದ ಜಗತ್ತೇ ಹೋರಾಡುತ್ತಿರುವಾಗ ಇಲ್ಲಸಲ್ಲದ ತಪ್ಪು ಮಾಹಿತಿಯ ಹರಡುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ವಾಟ್ಸಾಪ್‌ ಮಾಡಿದೆ.

ವಾಟ್ಸಾಪ್‌

ಸದ್ಯ ವಾಟ್ಸಾಪ್‌ನಲ್ಲಿ ತಪ್ಪು ಮಾಹಿತಿ ನೀಡುವವರ ವಿರುದ್ದ ಕಠಿಣ ಕ್ರಮಗಳನ್ನ ತೆಗೆದುಕೊಳ್ಳುತ್ತಿದೆ ಆದರೂ ಇದು ಯಾವುದೇ ರೀತಿಯಲ್ಲೂ ಪ್ರಭಾವ ಬೀರಿಲ್ಲ. ಅಲ್ಲದೆ ಕೊರೋನಾ ವೈರಸ್‌ನಂತಹ ಸಾಂಕ್ರಾಮಿಕ ಸೊಂಕಿನ ವಿಚಾರದಲ್ಲಿ ಹಲವು ತಪ್ಪು ಮಾಹಿತಿಗಳು ಜನರನ್ನ ದಿಕ್ಕು ತಪ್ಪಿಸುತ್ತಿವೆ. ಯಾವುದೇ ರೀತಿಯ ಸತ್ಯಾಸತ್ಯತೆಯನ್ನ ಪರಿಶೀಲಿಸಿದೆ ಒಬ್ಬರಿಂದ ಒಬ್ಬರಿಗೆ ಮಾಹಿತಿ ಶೇರ್‌ ಆಗುತ್ತಲೇ ಇದೆ. ಇದನ್ನ ಗಂಭೀರವಾಗಿ ಮನಗಂಡಿರುವ ವಾಟ್ಸಾಪ್‌ ಈ ಮಾದರಿಯ ಸುದ್ದಿ ತಡೆಗಟ್ಟಲು ಬಳಕೆದಾರರಲ್ಲಿ ಜಾಗೃತಿ ಕೆಲಸಕ್ಕೆ ಮುಂದಾಗಿದೆ.

ಸಂದೇಶ

ಅಲ್ಲದೆ ತಪ್ಪಾದ ಮಾಹಿತಿ ನೀಡುವ ಬಳಕೆದಾರರು ಸಂದೇಶಗಳನ್ನು ರವಾನಿಸುವ ಮೊದಲು ಸತ್ಯಗಳನ್ನು ಎರಡು ಬಾರಿ ಪರಿಶೀಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬ ಸರಳ ಸೂಚನೆಯನ್ನ ಈ ಅಭಿಯಾನವು ಮಾಡಲಿದೆ ಎಂದು ವಾಟ್ಸಾಪ್ ಹೇಳಿದೆ. ಇನ್ನು ನಿರ್ಣಾಯಕ ಆಪ್ಡೇಟ್‌ಗಳನ್ನ ಸ್ವೀಕರಿಸಲು ಅಥವಾ ವೆಬ್‌ನಲ್ಲಿ ಹುಡುಕಲು ಮೈಗೊವ್ ಸಹಾಯವಾಣಿಗೆ ತಲುಪುವಂತಹ ಯಾವುದೇ ಹಲವು ವಿಧಾನಗಳ ಮೂಲಕ ಬಳಕೆದಾರರು ತಾವು ಸ್ವೀಕರಿಸುವ ಸಂದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಹಕಾರಿಯಾಗುವಂತೆ ಮಾಡಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಕೈ ಗೊಂಡಿರುವ ಈ ಅಭಿಯಾನವು ನಮ್ಮ ಸಾಮೂಹಿಕ ಜವಾಬ್ದಾರಿ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಯಾವಾಗಲೂ ಪರಿಶೀಲಿಸುವ ಅಗತ್ಯವನ್ನು ತಿಳಿಸಲು ಸಹಾಯ ಮಾಡುತ್ತದೆ" ಎಂದು ವಾಟ್ಸಾಪ್‌ನ ಸಾರ್ವಜನಿಕ ನೀತಿಯ ಭಾರತದ ಮುಖ್ಯಸ್ಥ ಶಿವನಾಥ್ ತುಕ್ರಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ವಾಟ್ಸಾಪ್ ಕಳೆದ ತಿಂಗಳು ಮೈಗೊವ್ ಸಹಾಯವಾಣಿ (+919013151515) ಅನ್ನು ಸಹ ಘೋಷಣೆ ಮಾಡಿತ್ತು. ಈ ಮೈಗೊವ್ ಸಹಾಯವಾಣಿ ಮೊಣಕೈಯಲ್ಲಿ ಕೆಮ್ಮುವುದು, ಮನೆಯಲ್ಲೇ ಇರುವುದು, ಕೈ ತೊಳೆಯುವುದು, ನಿಮ್ಮ ಮುಖವನ್ನು ಮುಟ್ಟುವುದನ್ನು ತಪ್ಪಿಸುವುದು ಮತ್ತು ಸಾಮಾಜಿಕ ದೂರವನ್ನು ಉಳಿಸಿಕೊಳ್ಳುವುದು ಮುಂತಾದ COVID-19 ಹರಡುವುದನ್ನು ತಡೆಯಲು ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಾಟ್ಸಾಪ್ ಅಭಿಯಾನವು ತಿಳಿಸುತ್ತದೆ.

ವಾಟ್ಸಾಪ್

ಇದಲ್ಲದೆ COVID-19 ಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ನಿಗ್ರಹಿಸುವ ಪ್ರಯತ್ನದಲ್ಲಿ, ಭಾರತದಲ್ಲಿ 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, ಕಳೆದ ತಿಂಗಳು ಒಂದು ಸಮಯದಲ್ಲಿ 1 ಚಾಟ್‌ಗೆ ಆಗಾಗ್ಗೆ ಫಾರ್ವರ್ಡ್ ಮಾಡುವ ಸಂದೇಶಗಳನ್ನು ಮಿತಿಗೊಳಿಸುವುದಾಗಿ ಹೇಳಿತ್ತು. ಆದಾಗ್ಯೂ, ಕಳುಹಿಸಲಾದ 90 ಪ್ರತಿಶತ ಸಂದೇಶಗಳು ಎರಡು ಜನರ ನಡುವೆ ಇವೆ ಎಂದು ತ್ವರಿತ ಸಂದೇಶ ವೇದಿಕೆ ಹೇಳಿದೆ ಮತ್ತು COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಾದ್ಯಂತ ಧ್ವನಿ ಮತ್ತು ವಿಡಿಯೋ ಕರೆಗಳ ಪ್ರಮಾಣದಲ್ಲಿ ಇದು ಗಮನಾರ್ಹ ಹೆಚ್ಚಳವನ್ನು ಕಂಡಿದೆ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ಈ ಮೂಲಕ ಸುಳ್ಳು ಸಿದ್ದಿಗಳನ್ನ ತಡೆಗಟ್ಟಲು ವಾಟ್ಸಾಪ್‌ ಜಾಗೃತಿಯ ಮೊರೆ ಹೋಗಿದೆ.

Best Mobiles in India

English summary
WhatsApp is expanding its efforts to reduce spread of misinformation on its platform amid COVID-19 pandemic.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X