ಭಾರತದಲ್ಲಿ ಸೇವೆ ಸ್ಥಗಿತಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಾಟ್ಸ್ಆಪ್!!

|

ಭಾರತ ಸರ್ಕಾರ ಮತ್ತು ಜನಪ್ರಿಯ ಮೆಸೇಂಜಿಂಗ್ ಆಪ್ ನಡುವಿನ ಗುದ್ದಾಟ ಮತ್ತೆ ತಾರಕಕ್ಕೇರಿದೆ. ಸರ್ಕಾರವು ನೂತನ ನಿಯಮಗಳನ್ನು ಜಾರಿಗೊಳಿಸಿಸುವ ಮೂಲಕ ವಾಟ್ಸ್ಆಪ್ ಬಳಸುವ ಗ್ರಾಹಕರ ಸಂದೇಶಗಳ ಮಾಹಿತಿ ಒದಗಿಸಬೇಕೆಂದು ತಿಳಿಸಿರುವುದು ವಾಟ್ಸ್ಆಪ್ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ. ಈ ರೀತಿಯ ನಿಯಮ ಜಾರಿಗೊಳಿಸಿದರೆ ಭಾರತದಲ್ಲಿ ವಾಟ್ಸ್ಆಪ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಪರೋಕ್ಷವಾಗಿ ಎಚ್ಚರಿಕೆಯನ್ನು ಸಹ ನೀಡಿದೆ.

ಮಾಧ್ಯಮ ಕಾರ್ಯಾಗಾರವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ವಾಟ್ಸ್ಆಪ್ ಸಂಸ್ಥೆಯ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ 'ಕಾರ್ಲ್ ವೂಗ್' ಅವರು ಸರ್ಕಾರ ವಿಧಿಸಿರುವ ಮೂಲ ನಿಯಮಗಳಲ್ಲಿ ಸಂದೇಶಗಳ ಮಾಹಿತಿ ಪತ್ತೆ ಹಚ್ಚುವಿಕೆ ಮಹತ್ವ ನೀಡಿರುವುದು ಸದ್ಯ ಚಿಂತೆಗೀಡು ಮಾಡಿರುವ ವಿಚಾರವಾಗಿದೆ ಎಂದಿದ್ದಾರೆ. ಹೀಗೆ ಮಾಡಿದರೆ ವಾಟ್ಸ್ಆಪ್ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದರೊಂದಿಗೆ ಇದು ಹೊಸದೊಂದು ಉತ್ತಪಾದನೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸೇವೆ ಸ್ಥಗಿತಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಾಟ್ಸ್ಆಪ್!

ಸರ್ಕಾರದ ಹೊಸ ನಿರ್ಧಾರದಿಂದ ವಾಟ್ಸ್ಆಪ್ ಗ್ರಾಹಕರು ಬಯಸುವ ಗೌಪ್ಯತೆ ಕಾಪಾಡುವುದು ಅಸಾಧ್ಯ. ಹಾಗಾಗಿ, ಮುಂದೇನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈ ಕುರಿತಾಗಿ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಇದಿ ಸಾಧ್ಯವಾಗದಿದ್ದರೆ ಭಾರತದಲ್ಲಿ ವಾಟ್ಸ್ಆಪ್ ಕಾರ್ಯ ಸ್ಥಗಿತಗೊಳಿಸಲಿರುವ ಬಗ್ಗೆ ಕೂಡ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಹಾಗಾದರೆ, ಭಾರತ ಸರ್ಕಾರ ಮತ್ತು ವಾಟ್ಸ್ಆಪ್ ನಡುವು ಇರುವ ತಿಕ್ಕಾಟ ಏನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಾಟ್ಸ್‌ಆಪ್‌ಗೆ ಸರ್ಕಾರ ಹೇಳಿದ್ದೇನು?

ವಾಟ್ಸ್‌ಆಪ್‌ಗೆ ಸರ್ಕಾರ ಹೇಳಿದ್ದೇನು?

ದೇಶದಲ್ಲಿ ವಾಟ್ಸ್‌ಆಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿತ್ತು. ಅಂತಹ ಸುದ್ದಿಗಳ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‌ಗೆ ಸೂಚನೆ ನೀಡಿ ಅದಕ್ಕಾಗಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಬೇಕು ಎಂದು ಹೇಳಿತ್ತು.

ನಿರಾಕರಿಸಿದ ವಾಟ್ಸ್ಆಪ್!

ನಿರಾಕರಿಸಿದ ವಾಟ್ಸ್ಆಪ್!

ಸರ್ಕಾರದ ಈ ಸೂಚನೆಗೆ ಪ್ರತಿಕ್ರಿಯಿಸಿದ ವಾಟ್ಸ್ಆಪ್, ಕೇಂದ್ರದ ಬೇಡಿಕೆಯನ್ನು ತಿರಸ್ಕರಿಸಿತ್ತು. ತನ್ನ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ, ಅದನ್ನು ಮೀರಲಾಗದು ಎಂದು ಹೇಳಿತ್ತು.

ವಾಟ್ಸ್‌ಆಪ್ ನಿರಾಕರಿಸಿದ್ದು ಏಕೆ?

ವಾಟ್ಸ್‌ಆಪ್ ನಿರಾಕರಿಸಿದ್ದು ಏಕೆ?

ಜನರು ತಮ್ಮ ತಮ್ಮ ಸೂಕ್ಮ ಸಂಭಾಷಣೆಗಳನ್ನು ನಡೆಸಲು ವಾಟ್ಸ್ಆಪ್ ಅನ್ನು ಅವಲಂಬಿಸಿದ್ದಾರೆ. ಅದಲ್ಲದೆ, ಸಂದೇಶಗಳ ಮೂಲ ಪತ್ತೆ ಹಚ್ಚುವಿಕೆ ದುರ್ಬಳಕೆ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸಂದೇಶಗಳ ಮೂಲವನ್ನು ಪತ್ತೆಹಚ್ಚುವುದರಿಂದ ವಾಟ್ಸ್ಆಪ್ ಬಳಕೆದಾರರ ಖಾಸಾಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದು ವಾಟ್ಸ್ಆಪ್ ತಿಳಿಸಿದೆ.

ಕೇಂದ್ರ ಸರ್ಕಾರ ಗರಂ?

ಕೇಂದ್ರ ಸರ್ಕಾರ ಗರಂ?

ದೇಶದಲ್ಲಿನ ನಡೆದಿರುವ ಹಲವು ಗಲಭೆ ಪ್ರಕರಣಗಳಲ್ಲಿ ವಾಟ್ಸ್‌ಆಪ್ ಮೂಲಕ ಹರಡಲಾದ ಸಂದೇಶವೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿದೆ. ಹೀಗಾಗಿ ಅದನ್ನು ಪತ್ತೆಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಲೇಬೇಕು. ಇಲ್ಲದಿದ್ದರೆ ವಾಟ್ಸ್ಆಪ್ ನಿಷೇಧಕ್ಕೆ ಚಿಂತಿಸಲಾಗುವುದು ಎಂದು ಸರ್ಕಾರ ಮತ್ತೊಮ್ಮೆ ಎಚ್ಚರಿಸಿದೆ ಎಂದು ಹೇಳಲಾಗಿದೆ.

ಬ್ಯಾನ್ ಆಗಲಿದೆಯಾ ವಾಟ್ಸ್ಆಪ್?

ಬ್ಯಾನ್ ಆಗಲಿದೆಯಾ ವಾಟ್ಸ್ಆಪ್?

ಸರ್ಕಾರ ಮತ್ತು ವಾಟ್ಸ್ಆಪ್ ಸಂಸ್ಥೆಗಳ ನಡುವೆ ನಡೆಯುತ್ತಿರುವ ಜಟಾಪಟಿಯ ಮುಂದಿನ ಹಂತವನ್ನು ಹೇಳಲು ಸಾಧ್ಯವಾಗುತ್ತಿಲ್ಲ. ವಾಟ್ಸ್‌ಆಪ್ ಸಂಸ್ಥೆ ಹೇಳುತ್ತಿರುವ ವಾದ ಸರಿಯಾಗಿದ್ದರೂ ಸಹ, ಸರ್ಕಾರಕ್ಕೆ ಬೇರೆ ದಾರಿ ಕಾಣಿಸುತ್ತಿಲ್ಲ. ಒಂದು ವೇಳೆ ವಾಟ್ಸ್‌ಆಪ್ ಅನ್ನು ಬ್ಯಾನ್ ಮಾಡುವುದು ಸರ್ಕಾರದ ಮೂರ್ಖ ನಿರ್ಧಾರಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ವಾಟ್ಸ್ಆಪ್ ಮುಂದಿನ ನಡೆಯೇನು?

ವಾಟ್ಸ್ಆಪ್ ಮುಂದಿನ ನಡೆಯೇನು?

ಈ ಮೊದಲು ಕೇಂದ್ರ ಸರ್ಕಾರ ನೀಡಿರುವ ಸಲಹೆ ಮತ್ತು ಎಚ್ಚರಿಕೆಗಳನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಕ್ರಿಸ್ ಡೇನಿಯಲ್ ಒಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ಸಂಸ್ಥೆ ಹೀಗೆ ಹೇಳಿರುವುದು ಕತೊಹಲವನ್ನು ಮೂಡಿಸಿದೆ.

ರಾಜಿಮಾಡಿಕೊಳ್ಳಬೇಕಿದೆ ವಾಟ್ಸ್‌ಆಪ್!

ರಾಜಿಮಾಡಿಕೊಳ್ಳಬೇಕಿದೆ ವಾಟ್ಸ್‌ಆಪ್!

ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹರಿಯದಂತೆ ತಡೆಯಲು ತಾಂತ್ರಿಕ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ದೇಶದ ಹಿತಕ್ಕಾಗಿ ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕಲು ತಾಂತ್ರಿಕ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ.

Best Mobiles in India

English summary
ome of the proposed government regulations for social media companies operating in India are threatening the very existence of WhatsApp in its current form, according to a top company executive.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X