Subscribe to Gizbot

ವಾಟ್ಸಾಪ್ ಖಾತೆ ಟ್ರ್ಯಾಕ್ ಮಾಡುವ ಟೂಲ್ ಇದೋ ಇಲ್ಲಿ!!!

Written By:

ಜಗತ್ತಿನಲ್ಲೇ ಹೆಚ್ಚು ಬಳಕೆಯಾಗುವ ಸಂದೇಶ ಅಪ್ಲಿಕೇಶನ್ ಆಗಿ ವಾಟ್ಸಾಪ್ ಹೊರಹೊಮ್ಮಿದೆ. ಆದರೆ ನಿಮ್ಮ ಖಾಸಗಿ ಸೆಟ್ಟಿಂಗ್ ಅನ್ನು ಆಕ್ರಮಿಸಲು ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ ಎಂಬುದು ನಿಮಗೆ ಗೊತ್ತೇ?

ವಾಟ್ಸಾಪ್ ಖಾತೆ ಟ್ರ್ಯಾಕ್ ಮಾಡುವ ಟೂಲ್ ಇದೋ ಇಲ್ಲಿ!!!

ಯಾವುದೇ ವಾಟ್ಸಾಪ್ ಬಳಕೆದಾರರನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಈ ಅಪ್ಲಿಕೇಶನ್ ಗೌಪ್ಯತಾ ನೀತಿಯನ್ನು ಇದು ಮುರಿಯುವಂತಿದೆ. ಡಚ್ ವಿಶ್ವವಿದ್ಯಾನಿಲಯದ ಒಬ್ಬ ವಿದ್ಯಾರ್ಥಿ ವಾಟ್ಸಾಪಿ ಎಂಬ ಟೂಲ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಸತ್ಯವನ್ನು ಬಹಿರಂಗಪಡಿಸಿದ್ದು ವೆಬ್ ಸರ್ವರ್ ಅನ್ನು ಹೊಂದಿಸುವ ಮೂಲಕ, ಬಳಕೆದಾರರು ಆನ್‌ಲೈನ್/ಆಫ್‌ಲೈನ್ ಹೇಳಿಕೆಗಳನ್ನು, ಪ್ರೊಫೈಲ್ ಚಿತ್ರಗಳನ್ನು, ಪ್ರೈವಸಿ ಸೆಟ್ಟಿಂಗ್‌ಗಳನ್ನು ಹಾಗೂ ಬಳಕೆದಾರರ ಸ್ಟೇಟಸ್ ಸಂದೇಶಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.

ವಾಟ್ಸಾಪ್ ಖಾತೆ ಟ್ರ್ಯಾಕ್ ಮಾಡುವ ಟೂಲ್ ಇದೋ ಇಲ್ಲಿ!!!

ಈ ಟೂಲ್ ಅನ್ನು ಚಾಲನೆ ಮಾಡಲು ನಿಮಗೆ ಎರಡನೇ ವಾಟ್ಸಾಪ್ ಖಾತೆಯ ಅಗತ್ಯವಿದೆ, ರೂಟ್ ಮಾಡಿದ ಆಂಡ್ರಾಯ್ಡ್ ಫೋನ್ ಅಥವಾ ಜೇಲ್ ಬ್ರೋಕನ್ ಐಫೋನ್ ಅಥವಾ ಪಿಎಚ್‌ಪಿ ಕೋಡ್ ಜ್ಞಾನ, ವೆಬ್ ಸರ್ವರ್ ಬೇಕಾಗುತ್ತದೆ.

ಸರ್ವರ್ ಅನ್ನು ಹೊಂದಿಸದೇ ಅವರಿಗೆ ದಾಖಲೆ ಬೇಕು ಎಂದಾದಲ್ಲಿ ತಮ್ಮ ಫೋನ್ ಸಂಖ್ಯೆಗಳನ್ನು ಬಳಕೆದಾರರು ಕಳುಹಿಸಬಹುದೆಂದು ವಾಟ್ಸಾಪಿ ಡೆವಲಪರ್ ತಿಳಿಸಿದ್ದಾರೆ.

ವಾಟ್ಸಾಪ್ ಖಾತೆ ಟ್ರ್ಯಾಕ್ ಮಾಡುವ ಟೂಲ್ ಇದೋ ಇಲ್ಲಿ!!!

ಇತ್ತೀಚೆಗೆ, ವಾಟ್ಸಾಪ್ ಚಿತ್ರಗಳಲ್ಲಿ ಕೆಲವೊಂದು ಭದ್ರತಾ ದೋಷಗಳನ್ನು ಸಂಶೋಧಕರು ಕಂಡುಹುಡುಕಿದ್ದು ಬಳಕೆದಾರರು ತಮ್ಮ ಪ್ರೊಫೈಲ್ ಚಿತ್ರವನ್ನು ಸ್ನೇಹಿತರು ಮಾತ್ರ ನೋಡಬಹುದು ಎಂದು ಸೆಟ್ ಮಾಡಿದ್ದರೂ ಪ್ರತಿಯೊಬ್ಬರೂ ನೋಡಬಹುದಾಗಿದೆ.

English summary
This article tells about WhatsApp security flaw allows anyone to track users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot