Home
ಸುದ್ದಿಜಾಲ

ಬಿಗ್‌ ಶಾಕ್‌ ಕೊಟ್ಟ ವಾಟ್ಸಾಪ್‌! ವಾಟ್ಸಾಪ್‌ನ ಈ ಸೇವೆ ಇನ್ಮುಂದೆ ಉಚಿತವಲ್ಲ ಹಣ ಪಾವತಿಸಬೇಕಂತೆ!

ವಿಶ್ವದಾದ್ಯಂತ ಶತಕೋಟಿಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಚಾಟ್‌ ಬ್ಯಾಕಪ್‌ಗೆ ಸಂಬಂಧಿಸಿದಂತೆ ತನ್ನ ಸೇವಾ ನಿಯಮಗಳನ್ನು ಹೊಸದಾಗಿ ಅಪ್ಡೇಟ್‌ ಮಾಡಿದೆ. ಇದರಿಂದ ಇಲ್ಲಿಯವರೆಗೆ ಉಚಿತವಾಗಿ ಲಭ್ಯವಾಗುತ್ತಿದ್ದ ಬಹುಮುಖ್ಯ ಸೇವೆಯೊಂದಕ್ಕೆ ಶೀಘ್ರದಲ್ಲೇ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಹೌದು, ವಾಟ್ಸಾಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಕಹಿ ಸುದ್ದಿಯನ್ನು ನೀಡಿದೆ. ಇನ್ಮುಂದೆ ಗೂಗಲ್‌ ಡ್ರೈವ್‌ನಲ್ಲಿ ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಉಚಿತವಾಗಿ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಇಲ್ಲಿಯವರಿಗೆ ಅನ್‌ಲಿಮಿಟೆಡ್‌ ಸ್ಟೋರೇಜ್‌ ಅವಕಾಶವನ್ನು ನೀಡಿದ್ದ ವಾಟ್ಸಾಪ್‌ ಇದನ್ನು ಸೀಮಿತ ಮಾಡಲಿದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಈ ನಡೆಯಿಂದ ಏನಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿಗ್‌ ಶಾಕ್‌ ಕೊಟ್ಟ ವಾಟ್ಸಾಪ್‌! ವಾಟ್ಸಾಪ್‌ನ ಈ ಸೇವೆ ಇನ್ಮುಂದೆ ಉಚಿತವಲ್ಲ!

ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರಿಗೆ ವಾಟ್ಸಾಪ್‌ ಸಂದೇಶ, ಕರೆ ಮತ್ತು ಮಾಧ್ಯಮವನ್ನು ಶೇರ್‌ ಮಾಡುವುದಕ್ಕೆ ಡಿಫ್ಯಾಕ್ಟೋ ಪ್ಲಾಟ್‌ಫಾರ್ಮ್ ಆಗಿದೆ. ಇದೇ ಕಾರಣಕ್ಕೆ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಬಳಕೆದಾರರಿಗೆ ಚಾಟ್ ಬ್ಯಾಕಪ್ ಅನ್ನು ಸಹ ನೀಡುತ್ತಿದೆ. ಇದರಿಂದ ವಾಟ್ಸಾಪ್‌ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಕಾನ್ಫಿಗರ್ ಮಾಡಿದ ಚಾಟ್ ಡೇಟಾವನ್ನು ಡೀಫಾಲ್ಟ್ ಆಗಿ ಗೂಗಲ್‌ ಡ್ರೈವ್‌ಗೆ ಬ್ಯಾಕಪ್ ಮಾಡುತ್ತದೆ.

ಇನ್ನು ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಅನ್ನು ಗೂಗಲ್‌ ಸ್ಟೋರೇಜ್‌ನಲ್ಲಿಡುವುದು ಪ್ರಸ್ತುತ ಉಚಿವಾಗಿದೆ. ಅಂದರೆ ವಾಟ್ಸಾಪ್‌ ಬಳಕೆದಾರರು ತಮ್ಮ ಸಂಪೂರ್ಣ ಚಾಟ್ ಹಿಸ್ಟರಿಯನ್ನು ಗೂಗಲ್‌ ಡ್ರೈವ್‌ನಲ್ಲಿ ಬ್ಯಾಕ್‌ಅಪ್‌ ಮಾಡಬಹುದಾಗಿದೆ. ಇದರಿಂದ ನೀವು ಹಳೆಯ ಮೊಬೈಲ್‌ನಿಂದ ಹೊಸ ಮೊಬೈಲ್‌ಗೆ ಬದಲಾದ ಸಮಯದಲ್ಲಿಯೂ ಸಹ ಚಾಟ್‌ ಟ್ರಾನ್ಸ್‌ಫರ್‌ ಮಾಡಿಕೊಳ್ಳಬಹುದು. ಇದು ಹಳೆಯ ಚಾಟ್ ಡೇಟಾಗೆ ಪ್ರವೇಶ ಅಗತ್ಯವಿರುವವರಿಗೆ ತುಂಬಾನೇ ಸಹಾಯಕವಾಗಿದೆ.

ಬಿಗ್‌ ಶಾಕ್‌ ಕೊಟ್ಟ ವಾಟ್ಸಾಪ್‌! ವಾಟ್ಸಾಪ್‌ನ ಈ ಸೇವೆ ಇನ್ಮುಂದೆ ಉಚಿತವಲ್ಲ!

ಆದರೆ ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ಗೆ ಸಂಬಂಧಿಸಿದಂತೆ ಹೊಸ ಸೇವಾ ನಿಯಮಗಳನ್ನು ಅಪ್ಡೇಟ್‌ ಮಾಡಿದೆ. ಅದರಂತೆ ಇನ್ಮುಂದೆ ವಾಟ್ಸಾಪ್‌ ಚಾಟ್‌ಬ್ಯಾಕಪ್‌ ಸಂಪೂರ್ಣ ಉಚಿತಾವಗಿರುವುದಿಲ್ಲ. ಗೂಗಲ್‌ ಡ್ರೈವ್‌ನಲ್ಲಿ ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಮಾಡಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಹೊಸ ನಿಯಮವು ಈಗಾಗಲೇ ವಾಟ್ಸಾಪ್‌ ಬಿಟಾ ಬಳಕೆದಾರರಿಗೆ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ವಾಟ್ಸಾಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಗೂಗಲ್‌ ಡ್ರೈವ್‌ ಕೂಡ 15 GB ಉಚಿತ ಕ್ಲೌಡ್‌ ಸ್ಟೋರೇಜ್‌ ಅನ್ನು ನೀಡುತ್ತಿದೆ. ಈ ಸ್ಟೋರೇಜ್‌ ಅನ್ನು ಜಿ ಮೇಲ್‌, ಗೂಗಲ್‌ ಫೋಟೋಸ್‌, ಇತರೆ ಫೈಲ್‌ಗಳನ್ನು ಸ್ಟೋರ್‌ ಮಾಡಲು ಬಳಕೆದಾರರು ಬಳಸುತ್ತಿದ್ದಾರೆ. ಇದೆಲ್ಲವನ್ನು ಮೀರಿ ಇನ್ನಷ್ಟು ಸ್ಟೋರೇಜ್‌ ಉಳಿದಿದ್ದರೆ ನೀವು ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಅನ್ನು ಉಚಿತವಾಗಿಯೇ ಉಳಿಸಬಹುದು. ಒಂದು ವೇಳೆ ನಿಮ್ಮ ಗೂಗಲ್‌ ಡ್ರೈವ್‌ ಸ್ಟೋರೇಜ್‌ 15 GB ಮೀರಿದರೆ ನೀವು ಗೂಗಲ್‌ ಒನ್‌ ನಂತಹ ಚಂದಾದಾರಿಕೆ ಖರೀದಿಸುವುದು ಅನಿವಾರ್ಯವಾಗಲಿದೆ.

ಬಿಗ್‌ ಶಾಕ್‌ ಕೊಟ್ಟ ವಾಟ್ಸಾಪ್‌! ವಾಟ್ಸಾಪ್‌ನ ಈ ಸೇವೆ ಇನ್ಮುಂದೆ ಉಚಿತವಲ್ಲ!

ಇದರಿಂದ ನೀವು 15 GB ಕೋಟಾದೊಳಗೆ ಗೂಗಲ್‌ ಡ್ರೈವ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಹೊಂದಿದ್ದರೆ ವಾಟ್ಸಾಪ್‌ ಚಾಟ್‌ಗಳನ್ನು ಉಚಿತವಾಗಿಯೇ ಬ್ಯಾಕಪ್‌ ಮಾಡಬಹುದು. ಇದಲ್ಲದೆ, ವಾಟ್ಸಾಪ್‌ ಬಳಕೆದಾರರು ಮೀಡಿಯಾ ಫೈಲ್‌ಗಳಿಲ್ಲದೆ ಕೇವಲ ಪಠ್ಯ ಸಂದೇಶಗಳನ್ನು ಮಾತ್ರ ಬ್ಯಾಕಪ್ ಮಾಡಲು ಅನುಮತಿಸುತ್ತದೆ. ಇದರಿಂದ ಗೂಗಲ್‌ ಡ್ರೈವ್‌ನಲ್ಲಿ ಯಾವುದೇ ಶುಲ್ಕವಿಲ್ಲದೆ ಚಾಟ್‌ಬ್ಯಾಕಪ್‌ ಅನ್ನು ಮಾಡಬಹುದು. ಒಂದು ವೇಳೆ ವಾಟ್ಸಾಪ್‌ನ ಎಲ್ಲಾ ಚಾಟ್‌ಗಳು ಕೂಡ ಬ್ಯಾಕಪ್‌ ಬೇಕಾದರೆ ಗೂಗಲ್‌ ಒನ್‌ ಚಂದಾದಾರಿಕೆ ಪಾವತಿಸದೆ ಬೇರೆ ದಾರಿಯಿಲ್ಲ ಎನ್ನಲಾಗಿದೆ.

ಇನ್ನು ಗೂಗಲ್‌ ಒನ್‌ ಚಂದಾದಾರಿಕೆಯು 2TB ಡೇಟಾಗೆ ತಿಂಗಳಿಗೆ 650 ರೂ.ಗಳಿಂದ ಪ್ರಾರಂಭವಾಗುತ್ತದೆ. 20TB ಸ್ಟೋರೇಜ್‌ ಆಯ್ಕೆಗೆ ಮಾಸಿಕ 6,500 ರೂ ಬೆಲೆಯನ್ನು ಹೊಂದಿದೆ. ಆದರಿಂದ ನಿಮಗೆ ಯಾವುದು ಸೂಕ್ತವೋ ಆ ಚಂದಾದಾರಿಕೆಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
Whatsapp Shocking News: WhatsApp backups on Android will soon cost you money
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+