2019ರಿಂದ ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಬರ್ತಿದೆ ಜಾಹೀರಾತು..!

By GizBot Bureau
|

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಟ್ಸ್ ಆಪ್ ಬೃಹತ್ ಬಳಕೆದಾರರನ್ನು ಹೊಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಕಂಪೆನಿ ಇಂತಹ ದೊಡ್ಡ ಬಳಕೆದಾರರ ಮೂಲದಿಂದ ಹಣ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಚಿಂತನೆಯನ್ನು ನಡೆಸುತ್ತಿದೆ. ಕಂಪೆನಿಯ ಒಟ್ಟಾರೆ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ವಾಟ್ಸ್ ಆಪ್ ಗೆ ಸೇರಿಸಲು ಚಿಂತನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.

 2019ರಿಂದ ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಬರ್ತಿದೆ ಜಾಹೀರಾತು..!

ವಾಟ್ಸ್ ಆಪ್ ತನ್ನ ಬ್ಯುಸಿನೆಸ್ ನ್ನು ಅಭಿವೃದ್ಧಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ , ಜಾಹಿರಾತುಗಳನ್ನು ಪಡೆಯಲು ನಿರ್ಧಾರ ಮಾಡಿದ್ದು ಅದನ್ನು ತನ್ನ ಬಳಕೆದಾರರಿಗೆ ಯಾವುದಾದರೊಂದು ವೈಶಿಷ್ಟ್ಯತೆಯಲ್ಲಿ ಸೇರಿಸಿ ಸಂಪಾದನೆ ಮಾಡುವ ಆಲೋಚನೆಯನ್ನು ಮಾಡಿದೆ. ಈ ನಿರ್ಧಾರವು ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನ ಕೋ ಫೌಂಡರ್ ಆಗಿರುವ ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ನಡುವಿನ ಜಿದ್ದಾಜಿದ್ದಿಗೂ ಕಾರಣವಾಗಿತ್ತು ಮತ್ತು ದಶಕದ ಹಿಂದಿನ ರಾಜೀನಾಮೆ ನಿರ್ಧಾರದ ಹಿಂದಿನ ಮುಸುಕಿನ ಗುದ್ದಾಟವೂ ಆಗಿತ್ತು.

ಕೆಲವು ವರದಿಗಳ ಅನುಸಾರ ಮುಂದಿನ ವರ್ಷದಿಂದ ವಾಟ್ಸ್ ಆಪ್ ನ ಸ್ಟೇಟಸ್ ವೈಶಿಷ್ಟ್ಯತೆಯಲ್ಲಿ ಜಾಹೀರಾತುಗಳು ಬರಲಿವೆಯಂತೆ. ಇದು ಫೇಸ್ ಬುಕ್ ನ ಇಮೇಜ್ ಶೇರಿಂಗ್ ಫ್ಲ್ಯಾಟ್ ಫಾರ್ಮ್ ಇನ್ಸ್ಟಾಗ್ರಾಂನಂತೆಯೇ ಕೆಲಸ ಮಾಡುತ್ತದೆ. ಸದ್ಯ ಇನ್ಸ್ಟಾಗ್ರಾಂ ತನ್ನ ಸ್ಟೊರೀಸ್ ವಿಭಾಗದಲ್ಲಿ ಜಾಹಿರಾತುಗಳನ್ನು ಪ್ರಕಟಿಸುತ್ತದೆ ಮತ್ತು ಆ ಮೂಲಕ ಇನ್ಸ್ಟಾಗ್ರಾಂಗೆ ಆದಾಯದ ಮೂಲವಾಗಿದೆ. ವರದಿಯ ಪ್ರಕಾರ ಇನ್ಸ್ಟಾಗ್ರಾಂನ ಸ್ಟೋರೀಸ್ ನ್ನು 400 ಮಿಲಿಯನ್ ಬಳಕೆದಾರರಷ್ಟೇ ಬಳಸುತ್ತಿದ್ದಾರೆ ಆದರೆ ಸದ್ಯ ವಾಟ್ಸ್ ಆಪ್ ನ ಸ್ಟೇಟಸ್ ವಿಭಾಗವನ್ನು ಸುಮಾರು 450 ಮಿಲಿಯನ್ ಬಳಕೆದಾರರು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮತ್ತಷ್ಟು ವರದಿಗಳು ಹೇಳುವಂತೆ ವಾಟ್ಸ್ ಆಪ್ ನ ಜಾಹೀರಾತುಗಳು ಫೇಸ್ ಬುಕ್ ನ ಜಾಹೀರಾತುಗಳಿಂದ ಬೆಂಬಲಿತವಾಗಿರುತ್ತವೆಯಂತೆ. ಹೆಚ್ಚಾಗಿ ಇದು ಇನ್ಸ್ಟಾಗ್ರಾಂ ನ ಸ್ಟೋರೀಸ್ ನಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳಂತೆಯೇ ಇರುವ ಸಾಧ್ಯತೆಗಳಿವೆ. ಇನ್ಸ್ಟಾಗ್ರಾಂನಲ್ಲಿರುವಂತೆಯೇ ಆದರೂ ಕೂಡ ಬಳಕೆದಾರರಿಗೆ ಉತ್ತಮ ಅನುಭವ ಬರುವಂತೆ ಜಾಹೀರಾತುಗಳನ್ನು ನೀಡಲು ಏನು ಮಾಡಬಹುದು ಎಂಬ ಬಗ್ಗೆ ವಾಟ್ಸ್ ಆಪ್ ಸದ್ಯ ಚಿಂತನೆಯನ್ನು ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಇನ್ಸ್ಟಾಗ್ರಾಂ ಜೊತೆ ಚರ್ಚೆ ನಡೆಯುತ್ತಿದೆ ಎಂದೂ ತಿಳಿದುಬಂದಿದೆ.

ಅಷ್ಟೇ ಅಲ್ಲ ವಾಟ್ಸ್ ಆಪ್ ಇನ್ನು ಮುಂದೆ ದೊಡ್ಡ ದೊಡ್ಡ ಸಂಸ್ಥೆಗಳಿಗ ತಮ್ಮ ಜಾಹೀರಾತುಗಳನ್ನು ವಾಟ್ಸ್ ಆಪ್ ಮೂಲಕ ಕಳುಹಿಸುವುದಕ್ಕೆ ಚಾರ್ಜ್ ಮಾಡಲಿದೆಯಂತೆ. ಬಳಕೆದಾರರೊಂದಿಗೆ ಸಂಪರ್ಕ ಹೊಂದಲು ಕೆಲವು ಸಂಸ್ಥೆಗಳು ಈಗಾಗಲೇ ವಾಟ್ಸ್ ಆಪ್ ಬಳಕೆಯನ್ನು ಪ್ರಾರಂಭಿಸಿವೆ. ಉದಾಹರಣೆಗೆ ಊಬರ್, ಫ್ಲಿಪ್ ಕಾರ್ಟ್ ಇತ್ಯಾದಿ. ಊಬರ್ ಸೇರಿದಂತೆ ಹಲವು ಕಂಪೆನಿಗಳು ವಾಟ್ಸ್ ಆಪ್ ಮೂಲಕ ತಮ್ಮ ಗ್ರಾಹಕರ ಜೊತೆ ಸಂಪರ್ಕ ಸಾಧಿಸುತ್ತಿರುವುದರಿಂದಾಗಿ ವಾಟ್ಸ್ ಆಪ್ ಊಬರ್ ನಂತಹ ಸಂಸ್ಥೆಗಳಿಗೆ ಚಾರ್ಜ್ ಮಾಡಲು ಪ್ರಾರಂಭಿಸಿದೆಯಂತೆ.

ಈಗಾಗಲೇ ಸುಮಾರು 100 ಕಂಪೆನಿಗಳಿಗೆ ಈ ರೀತಿ ಚಾರ್ಜ್ ಮಾಡಲು ಪ್ರಾರಂಭ ಮಾಡಿ ಆಗಿದೆಯಂತೆ. ಮುಂದಿನ ದಿನಗಳಲ್ಲಿ ಇದೇ ರೀತಿ ಹಲವು ಕಂಪೆನಿಗಳಿಗೆ ವಾಟ್ಸ್ ಆಪ್ ಚಾರ್ಜ್ ಮಾಡುತ್ತದೆ ಎಂದು ವಾಟ್ಸ್ ಆಪ್ ತಿಳಿಸಿದೆ. ಇದು ಯಾವ ರೀತಿ ಬಳಕೆದಾರರಿಗೆ ತೊಂದರೆ ನೀಡಬಹುದು ಅಥವಾ ಕಿರಿಕಿರಿ ನೀಡಬಹುದು ಎಂಬ ಬಗ್ಗೆ ಸರಿಯಾದ ಕಲ್ಪನೆ ಇಲ್ಲ. ಆದಾಯದ ಮೂಲವಾಗಿ ವಾಟ್ಸ್ ಆಪ್ ಗೆ ಇದು ಲಾಭವಾದರೂ ಗ್ರಾಹಕರ ಮಟ್ಟಿಗೆ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ.

ಯಾಕೆಂದರೆ ವಾಟ್ಸ್ ಆಪ್ ನಲ್ಲೂ ಜಾಹೀರಾತುಗಳು ಪ್ರಾರಂಭವಾದರೆ ಅದು ವಾಟ್ಸ್ ಆಪ್ ಬಳಕೆ ಮಾಡುವವರಿಗೆ ಕಿರಿಕಿರಿಯಾಗಬಹುದು. ಆ ನಿಟ್ಟಿನಲ್ಲಿ ಒಂದು ವೇಳೆ ವಾಟ್ಸ್ ಆಪ್ ಜಾಹೀರಾತು ಬಿಡುಗಡೆ ಮಾಡುತ್ತದೆಯಾದರೆ ಆಡ್ ಬ್ಲಾಕ್ ಮಾಡಲೂ ಕೂಡ ಅವಕಾಶ ನೀಡುವುದು ಗ್ರಾಹಕರ ಹಿತದೃಷ್ಟಿಯಿಂದ ಒಳ್ಳೆಯದು. ಇಲ್ಲದೇ ಇದ್ದರೆ ಬಳಕೆದಾರರಿಗೆ ವಾಟ್ಸ್ ಆಪ್ ಗೆ ಛೀಮಾರಿ ಸಿಕ್ಕರೂ ಸಿಗಬಹುದು..! ಯಾವುದಕ್ಕೂ ಕಾದುನೋಡೋಣ.

Best Mobiles in India

English summary
WhatsApp to show ads in Status from next year. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X