ಆಂಡ್ರಾಯ್ಡ್ ಬಿಡುಗಡೆಗೊಳಿಸಲಿದೆ ವಾಯ್ಸ್ ಕಾಲಿಂಗ್ ಫೀಚರ್

Written By:

ಆಯ್ಕೆಮಾಡಿದ ಬಳಕೆದಾರರೊಂದಿಗೆ ಹೊಸ ಫೀಚರ್ ಅನ್ನು ಪರಿಶೀಲಿಸಿದ ನಂತರ, ಮೊಬೈಲ್ ಮೆಸೇಜಿಂಗ್ ಸೇವೆ ವಾಟ್ಸಾಪ್ ಹೆಚ್ಚು ನಿರೀಕ್ಷಿತ ಇಂಟರ್ನೆಟ್ ಕರೆಮಾಡುವಿಕೆ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ಒದಗಿಸುತ್ತಿದೆ.

ಆಂಡ್ರಾಯ್ಡ್ ಬಿಡುಗಡೆಗೊಳಿಸಲಿದೆ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್‌ನಲ್ಲಿ ವಾಯ್ಸ್ ಕಾಲಿಂಗ್ ವೈಶಿಷ್ಟ್ಯವನ್ನು ಬಳಕೆದಾರರು ಪಡೆದುಕೊಂಡಿದ್ದು ತಮ್ಮ ಸ್ನೇಹಿತರಿಗೆ ಕರೆಮಾಡುವುದರ ಮೂಲಕ ಈ ಸೇವೆಯನ್ನು ತಮ್ಮ ಫೋನ್‌ನಲ್ಲಿ ಸಕ್ರಿಯಗೊಳಿಸಿಕೊಂಡಿದ್ದಾರೆ. ಇನ್ನು ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಆನ್ ಮಾಡಿಕೊಂಡಿರುವ ಬಳಕೆದಾರರು ಇನ್ನೊಬ್ಬ ಸ್ನೇಹಿತರಿಗೂ ಈ ಸೌಲಭ್ಯವನ್ನು ಒದಗಿಸಬಹುದಾಗಿದೆ. ಆದರೆ ಈ ಆಮಂತ್ರಣ ಎಲ್ಲಾ ಬಳಕೆದಾರರಿಗೆ ಕಾರ್ಯನಿರ್ವಹಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಆಂಡ್ರಾಯ್ಡ್ ಬಿಡುಗಡೆಗೊಳಿಸಲಿದೆ ವಾಯ್ಸ್ ಕಾಲಿಂಗ್ ಫೀಚರ್

ವಾಟ್ಸಾಪ್ ಕರೆಯನ್ನು ಸ್ವೀಕರಿಸಿದ ನಂತರ ಆಂಡ್ರಾಯ್ಡ್ ಫೋನ್‌ನಲ್ಲಿ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಆನ್ ಮಾಡಲು ಸಾಧ್ಯವಾಯಿತು. ಅಪ್ಲಿಕೇಶನ್‌ನ ಹೊಸ ಆವೃತ್ತಿಯಿಂದಾಗಿ ಇತರ ಆಂಡ್ರಾಯ್ಡ್ ಮತ್ತು ಬ್ಲ್ಯಾಕ್‌ಬೆರ್ರಿ ಬಳಕೆದಾರರಿಗೂ ಕರೆ ಮಾಡಲು ನಮಗೆ ಸಾಧ್ಯವಾಗಿದೆ ಆದರೆ ಈ ವೈಶಿಷ್ಟ್ಯ ಎಲ್ಲಾ ಬಳಕೆದಾರರಿಗೆ ಸಕ್ರಿಯಗೊಂಡಿಲ್ಲ. ವಾಟ್ಸಾಪ್ ಬಳಕೆದಾರರ ಸಂಖ್ಯೆಯನ್ನು ಸೀಮಿತಗೊಳಿಸಿರುವುದು ಇದಕ್ಕೆ ಕಾರಣವಾಗಿರಬಹುದೋ ಎಂಬುದು ತಿಳಿದು ಬಂದಿಲ್ಲ ಎಂಬುದು ಬಳಕೆದಾರರ ಮಾತಾಗಿದೆ.

ಆಂಡ್ರಾಯ್ಡ್ ಬಿಡುಗಡೆಗೊಳಿಸಲಿದೆ ವಾಯ್ಸ್ ಕಾಲಿಂಗ್ ಫೀಚರ್

ಈ ಫೀಚರ್ ಐಫೋನ್‌ನಲ್ಲಿ ಲಭ್ಯವಿಲ್ಲ ಆದರೆ ವಾಟ್ಸಾಪ್‌ನ ಇತ್ತೀಚಿನ ಐಓಎಸ್ ಅಪ್‌ಡೇಟ್ ಚಾಟ್ ವಿಂಡೋದ ಒಳಗೆಯೇ ಕಾಲಿಂಗ್ ಬಟನ್ ಅನ್ನು ಪ್ರಾಯೋಜಿಸಿದೆ. ಆದರೆ ಈ ಫೀಚರ್ ವಿಂಡೋಸ್ ಫೋನ್ ಹೆಡ್‌ಸೆಟ್‌ಗಳಿಗೆ ಕಾರ್ಯನಿರ್ವಹಿಸುವುದಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot