ವಾಟ್ಸಾಪ್ ಸ್ಟೇಟಸ್‌ನಲ್ಲಿ ಆಗಿರುವ ಈ ಬದಲಾವಣೆಗಳ ಬಗ್ಗೆ ನಿಮಗೆ ತಿಳಿದಿದೆಯಾ?
ವಾಟ್ಸಾಪ್ ಜಾಗತಿಕವಾಗಿ ಅತಿ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ತನ್ನ ಕಾರ್ಯವೈಖರಿ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದಾಗಿ ಇತರೆ ಆಪ್‌ಗಳಿಗಿಂತ ಭಿನ್ನವಾಗಿದೆ. ಸುಲಭ ಬಳಕೆ ಹಾಗೂ ಅನುಕೂಲಕರ ಫೀಚರ್ಸ್‌ನಿಂದಾಗಿ ವಾಟ್ಸಾಪ್ ಎಲ್ಲರ ನೆಚ್ಚಿನ ಮೆಸೇಜಿಂಗ್ ಆ್ಯಪ್ ಆಗಿ ಗುರುತಿಸಿಕೊಂಡಿದೆ. ಇದಕ್ಕೆ ಅನುಗುಣವಾಗಿ ವಾಟ್ಸಾಪ್ ಕೂಡ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ಗುಡ್‌ನ್ಯೂಸ್ ನೀಡಿದೆ.

ಹೌದು, ವಾಟ್ಸಾಪ್ ಸ್ಟೇಟಸ್‌ನಲ್ಲಿ ಹೊಸ ಫೀಚರ್ಸ್‌ಗಳ ಸೇರ್ಪಡೆ ಆಗಿದೆ. ಬಳಕೆದಾರರಿಗೆ ಸ್ಟೇಟಸ್ ರಿಯಾಕ್ಷನ್, ಸ್ಟೇಟಸ್ ಅಪ್ಡೇಟ್ ವಿಭಾಗದಲ್ಲಿ ಹೊಸ ಆಯ್ಕೆಗಳನ್ನು ನೀಡಿದೆ. ಇದರಿಂದ ವಾಟ್ಸಾಫ್ ಸ್ಟೇಟಸ್ ಅಪ್ಡೇಟ್ ಮಾಡುವ ಬಳಕೆದಾರರು ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಹೊಸ ಅಪ್ಡೇಟ್ ಫೀಚರ್ಸ್‌ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಆವೃತ್ತಿಗಳಲ್ಲಿಯೂ ಕೂಡ ಲಭ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹೊಸದಾಗಿ ಸೇರ್ಪಡೆಯಾದ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ವಾಟ್ಸಾಪ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಯಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇದರಲ್ಲಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹೊಸ ಆಯ್ಕೆಗಳನ್ನು ಸೇರಿಸಿದೆ. ಅದರಂತೆ ವಾಟ್ಸಾಪ್ ಸ್ಟೇಟಸ್‌ನಲ್ಲಿ ಖಾಸಗಿ ಪ್ರೇಕ್ಷಕರ ಆಯ್ಕೆ, ವಾಯ್ಸ್ ಸ್ಟೇಟಸ್, ಸ್ಟೇಟಸ್ ರಿಯಾಕ್ಷನ್, ಸ್ಟೇಟಸ್ ಪ್ರೊಫೈಲ್ ರಿಂಗ್ಸ್ ಮತ್ತು ಸ್ಟೇಟಸ್‌ನಲ್ಲಿ ಲಿಂಕ್ ಪ್ರಿವ್ಯೂ ಮಾಡುವ ಆಯ್ಕೆಗಳನ್ನು ನೀಡಿದೆ. ಇನ್ನು ಈ ಹೊಸ ಫೀಚರ್ಸ್‌ಗಳನ್ನು ಇತ್ತೀಚಿಗೆ ಅಪ್ಡೇಟ್ ಮಾಡಿರುವ ವಾಟ್ಸಾಪ್ ಹೊಂದಿರುವ ಬಳಕೆದಾರರು ಬಳಸಬಹುದಾಗಿದೆ.

ಸ್ಟೇಟಸ್ ಅನ್ನು ಯಾರೆಲ್ಲಾ ನೋಡಬಹುದು?
ವಾಟ್ಸಾಪ್ ಪರಿಚಯಿಸಿರುವ ಹೊಸ ಆಯ್ಕೆಗಳಲ್ಲಿ ನಿಮ್ಮ ಸ್ಟೇಟಸ್ ಅನ್ನು ಯಾರೆಲ್ಲಾ ನೋಡಬಹುದು ಎಂದು ಆಯ್ಕೆ ಮಾಡುವ ಆಯ್ಕೆ ನೀಡಲಾಗಿದೆ. ಇದರ ವಿಶೇಷತೆ ಏನೆಂದರೆ ಪ್ರತಿ ಸ್ಟೇಟಸ್‌ಗೀ ಕೂಡ ನೀವು ಪ್ರೈವೆಸಿ ಸ್ಟೆಟ್ಟಿಂಗ್ಸ್ ಅನ್ನು ಅಪ್ಡೇಟ್ ಮಾಡಬಹುದು. ಅಲ್ಲದೆ ಪರ್ಸನಲ್ ಸ್ಟೇಟಸ್ ಅನ್ನು ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಕಾಣುವಂಯೆ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ.
ವಾಯ್ಸ್ ಸ್ಟೇಟಸ್ ಅಪ್‌ಲೋಡ್‌ಗೆ ಅವಕಾಶ!
ಇದಲ್ಲದೆ ವಾಟ್ಸಾಪ್ ಇದೇ ಮೊದಲ ಬಾರಿಗೆ ಬಳಕೆದಾರರಿಗೆ ಸ್ಟೇಟಸ್‌ನಲ್ಲಿ ವಾಯ್ಸ್ ನೋಟ್ ಅನ್ನು ಪೋಸ್ಟ್ ಮಾಡಲು ಅವಕಾಶ ನೀಡಿದೆ. ಅಂದರೆ ವಾಯ್ಸ್ ಸ್ಟೇಟಸ್ ಪೋಸ್ಟ್ ಮಾಡಲು ವಾಟ್ಸಾಪ್‌ನಲ್ಲಿ ಅವಕಾಶ ಲಭ್ಯವಿದೆ. ಅದರಂತೆ ವಾಟ್ಸಾಪ್‌ನಲ್ಲಿ ನೀವು 30 ಸೆಕೆಂಡುಗಳವರೆಗೆ ವಾಯ್ಸ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಬಹುದಾಗಿದೆ. ಅಲ್ಲದೆ ಬಳಕೆದಾರರು ವಾಯ್ಸ್ ಸ್ಟೇಟಸ್ ಅನ್ನು ಕೆಲವು ಆಯ್ದ ಕಂಟ್ಯಾಕ್ಟ್‌ಗಳೊಂದಿಗೆ ಮಾತ್ರ ಶೇರ್ ಮಾಡುವ ಅವಕಾಶವನ್ನು ನೀಡಲಾಗಿದೆ.
ವಾಟ್ಸಾಪ್ ಸ್ಟೇಟಸ್ ರಿಯಾಕ್ಷನ್‌ನಲ್ಲಿ ಹೊಸ ಆಯ್ಕೆಗಳು!
ವಾಟ್ಸಾಪ್ ಸ್ಟೇಟಸ್‌ಗೆ ರಿಯಾಕ್ಷನ್ ನೀಡು ಆಯ್ಕೆಯಲ್ಲಿ ಹೊಸ ವಿಧಾನಗಳನ್ನು ಪರಿಚಯಿಸಲಾಗಿದೆ. ಅದರಂತೆ ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಸ್ಟೇಟಸ್‌ಗೆ ರಿಯಾಕ್ಷನ್ ನೀಡುವಾಗ ಎಮೋಜಿಗಳ ಮೂಲಕ ಪ್ರತಿಕ್ರಿಯೆ ನೀಡಬಹುದು. ಇದರಲ್ಲಿ ಎಂಟು ಎಮೋಜಿಗಳನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇಲ್ಲವೇ ಟೆಕ್ಸ್ಟ್ ಮೆಸೇಜ್, ವಾಯ್ಸ್ ಮೆಸೇಜ್, ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ವಾಟ್ಸಾಪ್ ಸ್ಟೇಟಸ್‌ಗೆ ರಿಪ್ಲೇ ಮಾಡಬಹುದಾಗಿದೆ.

ಸ್ಟೇಟಸ್ ಪ್ರೊಫೈಲ್ ರಿಂಗ್ಸ್
ವಾಟ್ಸಾಪ್ ಬಳಕೆದಾರರು ತಮ್ಮ ಸ್ನೇಹಿತರು ವಾಟ್ಸಾಪ್ ಸ್ಟೇಟಸ್ ಅಪ್ಡೇಟ್ ಮಾಡಿದ್ದಾರ ಇಲ್ಲವಾ ಅನ್ನೊದನ್ನ ಇನ್ಮುಂದೆ ಸುಲಭವಾಗಿ ಗುರುತಿಸಬಹುದು. ಇದಕ್ಕಾಗಿ ವಾಟ್ಸಾಪ್ ಬಳಕೆದಾರರು ಸ್ಟೇಟಸ್ ಲಿಂಕ್ ಅನ್ನು ಪೋಸ್ಟ್ ಮಾಡಿದಾಗ ಅಪ್ಲಿಕೇಶನ್ ಲಿಂಕ್‌ನ ಪ್ರಿವ್ಯೂ ಅನ್ನು ಡಿಸ್‌ಪ್ಲೇ ಮಾಡಲಿದೆ. ಇದು ಸ್ಟೇಟಸ್ ರಿಂಗ್‌ನಲ್ಲಿ ಕಾಣಲಿದೆ. ಇದರ ಮೂಲಕ ಬಳಕೆದಾರರು ತಮ್ಮ ಸ್ನೇಹಿತರು ಸ್ಟೇಟಸ್ ಅಪ್ಡೇಟ್ ಮಾಡಿರುವ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ವಾಟ್ಸಾಪ್ ತನ್ನ ಸ್ಟೇಟಸ್ ಅಪ್ಡೇಟ್ ಆಯ್ಕೆಯಲ್ಲಿ ಪರಿಚಯಿಸಿರುವ ಈ ಎಲ್ಲಾ ಫೀಚರ್ಸ್‌ಗಳು ಎಲ್ಲರಿಗೂ ಕೂಡ ಲಭ್ಯವಿದೆ. ಇದಕ್ಕಾಗಿ ನೀವು ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಅಪ್ಡೇಟ್ ಮಾಡುವುದು ಅತಿ ಅಗತ್ಯವಾಗಿದೆ.


Click it and Unblock the Notifications








