TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಆಂಡ್ರಾಯ್ಡ್ ಮತ್ತು iOSಗಳಲ್ಲಿ ವಾಟ್ಸ್ಆಪ್ ಶೀಘ್ರವೇ ಸ್ಥಗಿತ: ಇಲ್ಲಿದೇ ಸಂಪೂರ್ಣ ಮಾಹಿತಿ..!
ಜಾಗತೀಕವಾಗಿ ಭಾರೀ ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೇಸೆಜಿಂಗ್ ತಾಣ ಎನ್ನುವ ಖ್ಯಾತಿಗೆ ಪಾತ್ರವಾಗಿ ವಾಟ್ಸ್ಆಪ್ ಶೀಘ್ರವೇ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಈ ಹಿನ್ನಲೆ ವಾಟ್ಸ್ ಆಪ್ ಬಳಕೆದಾರರನ್ನು ಎಚ್ಚರಿಸು ಪ್ರಯತ್ನವು ಇದಾಗಿದ್ದು, ನಿಮ್ಮ ಸ್ಮಾರ್ಟ್ ಫೋನ್ ಸಹ ಈ ಕೆಳಗಿನ ಫೋನ್ ಗಳ ಪಟ್ಟಿಯಲ್ಲಿ ಇದ್ದರೆ ನೀವು ಸಹ ವಾಟ್ಸ್ ಆಪ್ ಬಳಕೆಯಿಂದ ವಂಚಿತರಾಗುವಿರಿ.
ಇತ್ತೀಚೆಗೆ ಅಳಿದ ಜಗತ್ತಿನ 10 ದೊಡ್ಡ ತಂತ್ರಜ್ಞಾನಗಳು ಯಾವುವು ಗೊತ್ತಾ..!
ಈಗಾಗಲೇ ವಾಟ್ಸ್ಆಪ್ ಹಲವು ಮಾದರಿಯಲ್ಲಿ ಬದಲಾವಣೆಯನ್ನು ಹೊಂದಿದ್ದು, ಹೊಸ ಹೊಸ ಆಯ್ಕೆಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕೇಲವು ಸ್ಮಾರ್ಟ್ ಫೋನ್ ಗಳು ವಾಟ್ಸ್ಆಪ್ ಆಯ್ಕೆಯನ್ನು ಸಪೋರ್ಟ್ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಕೇಲವು ಸ್ಮಾರ್ಟ್ ಫೋನ್ ಗಳಿಗೆ ತನ್ನ ಸೇವೆಯನ್ನು ನಿಲ್ಲಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಗಮನಿಸಲೇ ಬೇಕಾದ ಮಾಹಿತಿಯೂ ಮುಂದಿದೆ.
ನೋಕಿಯಾ ಸ್ಮಾರ್ಟ್ ಫೋನ್
ನೋಕಿಯಾ S40 OS ಮತ್ತು ನೋಕಿಯಾ ಆಶಾ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿತ್ತಿರುವವರಿಗೆ ತೊಂದರೆಯಾಗಲಿದೆ. ಕಾರಣ ಈ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ಆಪ್ ಸ್ಥಗಿತಗೊಳ್ಳಲಿದೆ. ಇದಾದ ಮೇಲೆ ಸಿಂಬಿಯನ್ S60 OSನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್ ಫೋನ್ ಗಳು ವಾಟ್ಸ್ಆಪ್ ಸೇವೆಯಿಂದ ವಂಚಿತವಾಗಲಿದೆ.
ಆಂಡ್ರಾಯ್ಡ್ ಫೋನ್ ಗಳು
ಇದಲ್ಲದೇ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಲವು ಸ್ಮಾರ್ಟ್ ಫೋನ್ ಗಳು ಸಹ ವಾಟ್ಸ್ಆಪ್ ಸೇವೆಯಿಂದ ವಂಚಿತವಾಗಲಿದೆ. ಆಂಡ್ರಾಯ್ಡ್ 2.1 ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ ಆಪ್ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಇದಲ್ಲದೇ ಆಂಡ್ರಾಯ್ಡ್ 2.2 ಮತ್ತು 2.3 ಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳು ವಾಟ್ಸ್ಆಪ್ ನಿಂದ ವಂಚಿತವಾಗಲಿದೆ.
ಐಫೋನ್ ಗಳು
ಇದಲ್ಲದೇ ಕೇಲವು ಐಫೋನ್ ಗಳು ಸಹ ವಾಟ್ಸ್ಆಪ್ ಸೇವೆಯಿಂದ ವಂಚಿತವಾಗಲಿದೆ. iOS 6 ಗಿಂತಲೂ ಕಡಿಮೆ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಫೋನ್ ಗಳಿಗೆ ವಾಟ್ಸ್ ಆಪ್ ಸಫೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ. ಶೀಘ್ರವೇ ಸೇವೆಯು ಸ್ಥಗಿತವಾಗಲಿದೆ.
ವಿಂಡೋಸ್ ಫೋನ್ ಗಳು
ಇದಲ್ಲದೇ ವಿಂಡೋಸ್ 7.0ದಲ್ಲಿ ಕಾರ್ಯನಿರ್ವಹಿಸುತ್ತಿರುವ ಫೋನ್ ಗಳು ಸಹ ಇನ್ನು ಮುಂದೆ ವಾಟ್ಸ್ ಆಪ್ ಸಪೋರ್ಟ್ ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವವರು ಬೇರೆ ಫೋನ್ ಗಳನ್ನು ಕೊಳ್ಳುವುದು ಉತ್ತಮ.
ವಾಟ್ಸ್ಆಪ್ ಬಳಸುವುದು ಹೇಗೆ
ಈಮೇಲಿನ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವವರು ಹೊಸ ಸ್ಮಾರ್ಟ್ ಫೋನ್ ಗಳನ್ನು ಕೊಳ್ಳುವುದು ಉತ್ತಮ ಎನ್ನಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ ಆಪ್ ಅನ್ನು ಆಪ್ಡೇಟ್ ಮಾಡದೆ ಇದ್ದರೆ ಹಳೇಯ ವಾಟ್ಸ್ ಆಪ್ ಅನ್ನೇ ಉಪಯೋಗಿಸವಷ್ಟು ದಿನ ಬಳಕೆ ಮಾಡಿಕೊಳ್ಳಬಹುದಾಗಿದೆ.