Home
ಸುದ್ದಿಜಾಲ

ಐಒಎಸ್‌ ಡಿವೈಸ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ಪ್ಲಾನ್‌!

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ವಿಶ್ವದಲ್ಲೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವಾಯ್ಸ್‌ ಕಾಲ್‌ ಇಂಟರ್‌ಫೇಸ್‌ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಇದು ಕೆಲವು ಆಯ್ದ ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಎಂದು ಹೇಳಲಾಗ್ತಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ iOS ಡಿವೈಸ್‌ನಲ್ಲಿ ಹೊಸ ವಾಯ್ಸ್‌ ಕಾಲ್‌ ಇಂಟರ್ಫೇಸ್ ಅನ್ನು ಟೆಸ್ಟ್‌ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ಫೀಚರ್ಸ್‌ ಇದೀಗ 22.5.0.70 ಅಪ್‌ಡೇಟ್‌ನ ಬೀಟಾ ವರ್ಷನ್‌ನಲ್ಲಿ ಲಭ್ಯವಿದೆ ಎನ್ನಲಾಗಿದೆ. ಇದು ವಾಟ್ಸಾಪ್‌ ಎಕೋ ಸಿಸ್ಟಂನಲ್ಲಿನ ಕೆಲವು ಬೀಟಾ ಪರೀಕ್ಷಕರಿಗೆ ನವೀಕರಿಸಿದ ಇಂಟರ್ಫೇಸ್ ಅನ್ನು ತರಲಿದೆ. ಇದು ಗ್ರೂಪ್‌ಕಾಲ್‌ನಲ್ಲಿದ್ದಾಗ ವಾಟ್ಸಾಪ್‌ ಸದಸ್ಯರನ್ನು ವಿವಿಧ ಮೂಲೆಗಳಲ್ಲಿ ಕಾರ್ಡ್‌ಗಳಾಗಿ ಪ್ರತ್ಯೇಕಿಸುತ್ತದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಐಒಎಸ್‌ ಡಿವೈಸ್‌ನಲ್ಲಿ ಹೊಸ ವಾಯ್ಸ್‌ ಇಂಟರ್ಫೆಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಹೊಸ ಫೀಚರ್ಸ್‌ ಗ್ರೂಪ್‌ಕಾಲ್‌ನಲ್ಲಿ ಹೊಸ ಅನುಭವವನ್ನು ತರಲಿದೆ. ಇದು ಪ್ರತಿ ಸ್ಪೀಕರ್‌ಗೆ ರಿಯಲ್‌-ಟೈಂ, ಕಲರ್-ಕೋಡೆಡ್ ಆಡಿಯೊ ತರಂಗರೂಪಗಳನ್ನು ನಿಯೋಜಿಸುತ್ತದೆ. ಜೊತೆಗೆ ಡಿಸ್ಕಾರ್ಡ್‌ನಂತೆಯೇ, ಇಂಡಿಕೇಟರ್‌ ಈಗ ಬಳಕೆದಾರರು ಮಾತನಾಡುವುದನ್ನು ನಿಲ್ಲಿಸಿದಾಗ ಸಕ್ರಿಯ ಸ್ಪೀಕರ್‌ಗಳು ಮತ್ತು ಫ್ಲಾಟ್‌ಲೈನ್‌ನ ಕುರಿತು ತಿಳಿಸುತ್ತದೆ. ಅಲ್ಲದೆ ವಾಯ್ಸ್‌ ಕಾಲ್‌ಗಳಿಗಾಗಿ ಬ್ಯಾಕ್‌ಗ್ರೌಂಡ್‌ ವಾಲ್‌ಪೇಪರ್ ಫಿಚರ್ಸ್‌ ಕೂಡ ಲಭ್ಯವಾಗಲಿದೆ.

ಇಂಟರ್ಫೇಸ್

ಇದಲ್ಲದೆ ಇದೇ ರೀತಿಯ ಇಂಟರ್ಫೇಸ್ ಅನ್ನು ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಪರಿಚಯಿಸಲಿದೆ. ಇದರಿಂದ ನೀವು ವಾಟ್ಸಾಪ್‌ ಕಾಲ್‌ ಸಮಯದಲ್ಲಿ ಸ್ಪೀಕರ್‌ ಮೋಡ್‌ಗೆ ಬದಲಾಯಿಸುವ, ವೀಡಿಯೋ ಕಾಲ್‌ಗೆ ಬದಲಾಯಿಸಲು, ನಿಮ್ಮನ್ನು ಮ್ಯೂಟ್ ಮಾಡಲು ಮತ್ತು ಕಾಲ್‌ ಎಂಡ್‌ ಮಾಡಲು ಅನುಮತಿಸುವ UI ಬಟನ್‌ಗಳನ್ನು ಸ್ಕ್ರೀನ್‌ ಕೆಳಗೆ ಇರಿಸಲಾಗುತ್ತದೆ. ಇದಲ್ಲದೆ 1-ಆನ್-1 ಕರೆಗಳ ಸಮಯದಲ್ಲಿ, ಗ್ರೇ ಕಲರ್‌ ಸ್ಕ್ವೇರ್‌ ನಲ್ಲಿ ನೀವು ಮಾತನಾಡುತ್ತಿರುವ ಸಂಪರ್ಕದ ಹೆಸರನ್ನು ತೋರಿಸುತ್ತದೆ. ಜೊತೆಗೆ ಅದರ ಕೆಳಗಿನ ಕರೆ ಅವಧಿಯನ್ನು ಸಹ ನಾವು ನೋಡಬಹುದು. ಈ ಎರಡು ಅಂಶಗಳ ಕೆಳಗೆ ಬಳಕೆದಾರರ ಪ್ರೊಫೈಲ್ ಚಿತ್ರವನ್ನು ತೋರಿಸುವ ಬಿಗ್‌ ಸರ್ಕಲ್‌ ಕಾಣಲಿದೆ.

ವಾಟ್ಸಾಪ್‌ನಲ್ಲಿ

ಇನ್ನು ವಾಟ್ಸಾಪ್‌ನಲ್ಲಿ ಗ್ರೇ ಕಾರ್ಡ್‌ನ ಕೆಳಗಿನ ಬಲಭಾಗದಲ್ಲಿ ಸಣ್ಣ ಮ್ಯೂಟ್ ಬಟನ್ ಅನ್ನು ಸಹ ನೋಡಬಹುದು. ಕೆಳಗಿನ ಸಾಲಿನಲ್ಲಿರುವ ಮ್ಯೂಟ್ ಬಟನ್‌ ಮೂಲಕ ನಿಮ್ಮ ಕಾಲ್‌ ಅನ್ನು ಎಂಡ್‌ ಮಾಡದೇ ಕಾಲ್‌ ಮ್ಯೂಟ್ ಮಾಡಲು ಇದನ್ನು ಬಳಸಬಹುದು. ಗ್ರೇ ಕಾರ್ಡ್‌ನ ಬ್ಯಾಕ್‌ಗ್ರೌಂಡ್‌ ಇಮೇಜ್‌ ನಲ್ಲಿ ಡೀಫಾಲ್ಟ್ ವಾಟ್ಸಾಪ್‌ ಚಾಟ್ ಬ್ಯಾಕ್‌ಗ್ರೌಂಡ್‌ ಕಂಡುಬರುತ್ತದೆ. ಇದಕ್ಕಾಗಿ ಬಳಕೆದಾರರು ತಮ್ಮ ಸ್ವಂತ ಚಾಟ್ ಬ್ಯಾಕ್‌ಗ್ರೌಂಡ್‌ ಗಳನ್ನು ಕಾಲ್‌ ಸ್ಕ್ರೀನ್‌ ಬ್ಯಾಕ್‌ಗ್ರೌಂಡ್‌ಗೆ ಸೇರಿಸಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ಅಲ್ಲದೆ ನೊಟಿಫಿಕೇಶನ್‌ ಜೊತೆಗೆ ಗ್ರೂಪ್‌ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ಇನ್ನು ವಾಟಯ್ಸ್‌ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ. ವಾಯ್ಸ್‌ ನೋಟ್‌ ತೆಗೆದುಕೊಳ್ಳುವಾಗ ಯಾರಾದರೂ ಅಡ್ಡಿಪಡಿಸಿದಾಗ ವಿರಾಮ ತೆಗೆದುಕೊಳ್ಳಬೇಕಾದಾಗ ಈ ಫೀಚರ್ಸ್‌ ಉಪಯುಕ್ತವಾಗಿರುತ್ತದೆ.

Best Mobiles in India

English summary
WhatsApp testing a new voice calling interface on iOS devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+