Home
ಸುದ್ದಿಜಾಲ

WhatsApp Update: ಸಿಹಿ ಸುದ್ದಿ.. ವಾಟ್ಸಪ್ ಸ್ಟೇಟಸ್‌ಗೆ ಸಂಬಂಧಿಸಿ ಮಹತ್ವದ ಅಪ್ಡೇಟ್‌!

ವಾಟ್ಸಪ್ (WhatsApp) ಬಳಕೆದಾರರಿಗೆ ಮತ್ತೊಂದು ಖುಷಿ ಸುದ್ದಿ! ಹೌದು, ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸಪ್ ಆಗಾಗ್ಗೆ ತನ್ನ ಬಳಕೆದಾರರಿಗೆ ಹೊಸ ಹೊಸ ಅಪ್ಡೇಟೆಡ್ ಫೀಚರ್‌ಗಳನ್ನು ಪರಿಸಯಿಸುತ್ತಲೇ ಬಂದಿದೆ. ಇದೀಗ, ಬಳಕೆದಾರರಿಗಾಗಿ ಮೆಟಾ ಕಂಪನಿಯು ವಾಟ್ಸಪ್ ಸ್ಟೇಟಸ್‌ನಲ್ಲಿ (WhatsApp Status) ವಿಶೇಷ ಬದಲಾವಣೆ ತರಲು ಮುಂದಾಗಿದೆ. ಇದರ ಭಾಗವಾಗಿ ಸ್ಟೇಟಸ್ ಅಪ್ಡೇಟ್‌ಗಾಗಿ ಹೊಸ ಲೇಔಟ್ ಅನ್ನು ಪರೀಕ್ಷಿಸುತ್ತಿದೆ. ಈ ಮೂಲಕ ಬಳಕೆದಾರರು ಬೇರೊಂದು ಮೆಸೇಜಿಂಗ್ ಕಡೆ ಹೋಗುವುದನ್ನು ತಡೆಯಲು ಮುಂದಾಗಿದೆ. ಏನಿದು ಹೊಸ ಅಪ್ಡೇಟ್‌? ಇದು ಯಾರಿಗೆಲ್ಲಾ ಲಭ್ಯ? ಎಂಬುವುದನ್ನು ತಿಳಿಯೋಣ ಬನ್ನಿ.

ಹೌದು, ಮೆಟಾ ಕಂಪೆನಿಯು ತನ್ನ ತ್ವರಿತ ಮೆಸೇಜ್ ಪ್ಲಾಟ್ ಫಾರ್ಮ್‌ಗಾಗಿ ವಾಟ್ಸಪ್‌ನಲ್ಲಿ ಮತ್ತೊಂದು ಹೊಸ ವಿನ್ಯಾಸವನ್ನು ಪರೀಕ್ಷಿಸುತ್ತಿದೆ. ಪರೀಕ್ಷಿಸದ ಹೊಸ ವಿನ್ಯಾಸವು ಸ್ಟೇಟಸ್ (WhatsApp Status) ಅಪ್ಡೇಟ್ ಪುಟಕ್ಕೆ ಬದಲಾವಣೆಗಳನ್ನು ತರುತ್ತದೆ. ಹೊಸ ವಿನ್ಯಾಸವು ಬಳಕೆದಾರರಿಗೆ ಪ್ರತಿಮೆಗಳನ್ನು ತೆರೆಯದೆ ಪೂರ್ವವೀಕ್ಷಣೆ ಮಾಡಲು ಅನುಮತಿಸುತ್ತದೆ. ಇದು ಭವಿಷ್ಯದಲ್ಲಿ ಐಒಎಸ್ (iOS) ಮತ್ತು ಆಂಡ್ರಾಯ್ಡ್ (Android) ಬಳಕೆದಾರರಿಗೆ ಹೊರತರುವ ನಿರೀಕ್ಷೆಯಿದೆ.

WhatsApp: ಸಿಹಿ ಸುದ್ದಿ.. ವಾಟ್ಸಪ್ ಸ್ಟೇಟಸ್‌ಗೆ ಸಂಬಂಧಿಸಿ ಮಹತ್ವದ ಅಪ್ಡೇಟ್‌!

ಫೀಚರ್ ಟ್ರ್ಯಾಕರ್ WABetaInfo ಪ್ರಕಾರ ಆಂಡ್ರಾಯ್ಡ್ 2.24.12.20 ಗಾಗಿ ವಾಟ್ಸಪ್ ಬೀಟಾದೊಂದಿಗೆ WhatsApp Status ಅಪ್ಡೇಟ್ ಜೊತೆಗೆ ಹೊಸ ವಿನ್ಯಾಸವನ್ನು ರೂಪಿಸಲಾಗುತ್ತಿದೆ. ಕೆಲವು ಬೀಟಾ ಪರೀಕ್ಷಕರು ಈ ಬದಲಾವಣೆಗೆ ಈ ಹಿಂದೆ ಪ್ರವೇಶವನ್ನು ಹೊಂದಿದ್ದರು. ಆದರೆ, ಈಗ ಇದನ್ನು ಇತ್ತೀಚಿನ ಅಪ್ಡೇಟ್‌ನೊಂದಿಗೆ ಹೆಚ್ಚಿನ ಬಳಕೆದಾರರಿಗೆ ತಲುಪಿಸಲಾಗಿದೆ.

ಸ್ಟೇಟಸ್ ಅಪ್ಡೇಟ್‌ಗಾಗಿ ಹೊಸ ಲೇಔಟ್

WhatsApp Status ಅಪ್ಡೇಟ್ ಕುರಿತಂತೆ ಫೀಚರ್ ಟ್ರ್ಯಾಕರ್ WABetaInfo ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಹಿಂದಿನ ಸಣ್ಣ ವೃತ್ತಾಕಾರದ ವಿಂಡೋವನ್ನು ಬದಲಿಸಿ ಸ್ಟೇಟಸ್ ಅಪ್ಡೇಟ್‌ಗಳಿಗಾಗಿ ಹೊಸ ದೊಡ್ಡ ಥಂಬ್ ನೇಲ್ ಪರಿಚಯಿಸಲಾಗಿದೆ. ಈ ಥಂಬ್ ನೇಲ್‌ನಿಂದ ಸ್ಟೇಟಸ್ ಅಪ್ಡೇಟ್ ಅನ್ನು ತೆರೆಯದೆಯೇ ಬಳಕೆದಾರರು ಈಗ ಪೂರ್ವವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಥಂಬ್ ನೇಲ್ ಅನ್ನು ಇನ್ನೂ ಸರ್ಚ್ ಪಟ್ಟಿಯ ಕೆಳಗೆ ಸ್ಕ್ರೀನ್ ಮೇಲ್ಭಾಗದಲ್ಲಿ ಇರಿಸಲಾಗಿದೆ ಎಂದು ಫೀಚರ್ ಟ್ರ್ಯಾಕರ್ ಹೇಳಿದೆ.

ಆಂಡ್ರಾಯ್ಡ್ ಬೀಟಾ ನವೀಕರಣಕ್ಕಾಗಿ ಇತ್ತೀಚಿನ ವಾಟ್ಸಪ್‌ನಲ್ಲಿ (WhatsApp), ವಾಟ್ಸಪ್ ಚಾನೆಲ್ ಶಿಫಾರಸು ಫಲಕಕ್ಕಾಗಿ ಹೊಸ ವಿನ್ಯಾಸವನ್ನು ಪರಿಚಯಿಸಲಾಗಿದೆ. ಸ್ಟೇಟಸ್ ಅಪ್ಡೇಟ್ ಪೇಜ್‌ ಈಗ ಕೊನೆಯಲ್ಲಿ 'ಚಾನಲ್‌ಗಳನ್ನು ಸರ್ಚ್‌ ಮಾಡಿ' ಎಂಬ ಆಯ್ಕೆಯನ್ನು ಒಳಗೊಂಡಿದೆ. ಇದು ಬಳಕೆದಾರರಿಗಾಗಿ ಶಿಫಾರಸು ಮಾಡಲಾದ ಚಾನಲ್‌ಗಳನ್ನು ಒಳಗೊಂಡಿದೆ. (WhatsApp Status) ಅಪ್ಡೇಟ್‌ನೊಂದಿಗೆ ಈ ಪ್ಯಾನಲ್ ಸಮತಲ ದೃಷ್ಟಿಕೋನವನ್ನು ಹೊಂದಲು ಮಾರ್ಪಡಿಸಲಾಗಿದೆ.

ಇಂಟರ್‌ಫೇಸ್‌ನಲ್ಲಿ ಹೊಸ ಬದಲಾವಣೆ

ಮೆಟಾ ಕಂಪೆನಿಯು ವಾಟ್ಸಪ್ ಇಂಟರ್‌ಫೇಸ್‌ನಲ್ಲಿ (WhatsApp new feature) ಹೊಸ ಬದಲಾವಣೆ ಮಾಡಿದೆ. ಈ ಹೊಸ ಅಪ್ಡೇಟ್‌ ಪ್ರಸ್ತುತ Androidನ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಇನ್ಮುಂದೆ ಹೊಸ ಇಂಟರ್‌ಫೇಸ್‌ನಲ್ಲಿ ವಾಟ್ಸಪ್‌ ಕಾರ್ಯನಿರ್ವಹಿಸುತ್ತದೆ. ಮತ್ತೆ ಕರೆ ಮಾಡುವ ಇಂಟರ್‌ಫೇಸ್‌ನಲ್ಲಿ ಈ ಫೀಚರ್‌ ಲಭ್ಯವಿದೆ. ಈ ಹಿಂದೆ ಕಾಲ್ ಮಾಡುವಾಗ ಬ್ಯಾಕ್ ಬಟನ್ ಬದಲಿಗೆ ಮಿನಿಮೈಜ್ ಬಟನ್ ಅನ್ನು ತರಲಾಗಿತ್ತು. WABetainfo ಕಾಲ್ ಬಾರ್‌ನ ಅಪ್ಡೇಟ್‌ ಮಾಡಿರುವ ಇಂಟರ್ಫೇಸ್ ತೋರಿಸುವ ಸ್ಕ್ರೀನ್‌ಶಾಟ್ ಹಂಚಿಕೊಂಡಿದೆ.

ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಹೊಸ ಅಪ್ಡೇಟ್‌

WhatsApp ಇಂಟರ್‌ಫೇಸ್‌ ವಿಭಾಗದಲ್ಲಿ ವಾಟ್ಸಪ್‌ ಹೊಸ ಪ್ರಯೋಜನೆ ಕಲ್ಪಿಸಿಕೊಡಲು ಮುಂದಾಗಿದೆ. ವಾಟ್ಸಪ್‌ ಇತ್ತೀಚೆಗೆ ಮಾಡಿದ ಅಪ್ಡೇಟ್‌ನಲ್ಲಿ, ಕಾಲ್ ಇಂಟರ್‌ಫೇಸ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು. ಇದೀಗ, ಕೆಳಗಿನ ಕಾಲಿಂಗ್ ಬಾರ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. WhatsApp ಕಾಲಿಂಗ್ ಬಾರ್‌ನ ಕೆಳಗಿನ ಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಪ್ರೊಫೈಲ್ ಫೋಟೋ ಮೊದಲಿಗಿಂತ ದೊಡ್ಡದಾಗಿ ಕಾಣಿಸುತ್ತದೆ. ಈ ಅಪ್ಡೇಟ್‌ ಕೆಲವು ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್ ಬೀಟಾ 2.24.12.14 ಆವೃತ್ತಿಯಲ್ಲಿ ಈ ಅಪ್ಡೇಟ್‌ ಪಡೆಯಬಹುದು.

Best Mobiles in India

English summary
WhatsApp is testing yet another new layout for its instant messaging platform. The under-testing new layout brings changes to the status update page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+