Home
ಸುದ್ದಿಜಾಲ

ಭದ್ರತಾ ಫೀಚರ್ಸ್‌ನಲ್ಲಿ ಅಪ್‌ಡೇಟ್‌ ತರಲು ವಾಟ್ಸಾಪ್‌ನಿಂದ ಸಿದ್ಧತೆ!

ಜಾಗತಿಕವಾಗಿ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ವೈಯಕ್ತಿಕ ಮಾಹಿತಿ ಸುರಕ್ಷತೆಗಾಗಿಯು ಸೆಕ್ಯುರಿಟಿ ಫೀಚರ್ಸ್‌ಗಳನ್ನು ಅಳವಡಿಸಿದೆ. ಈಗಾಗಲೇ ಹಲವು ಮಾದರಿಯ ಫೀಚರ್ಸ್‌ ಪರಿಚಯಿಸಿರುವ ವಾಟ್ಸಾಪ್ ಇದೀಗ ಹೊಸ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಈ ಹೊಸ ಫೀಚರ್ಸ್‌ ಮೂಲಕ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ಗೆ ಪ್ರಮುಖ ಭದ್ರತಾ ನವೀಕರಣವನ್ನು ತರಲು ಪ್ಲ್ಯಾನ್‌ ರೂಪಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಲು ಸಿದ್ದತೆ ನಡೆಸಿದೆ. ಸದ್ಯ ವಾಟ್ಸಾಪ್ ತನ್ನ ಆಂಡ್ರಾಯ್ಡ್ ಬೀಟಾ ಅಪ್ಲಿಕೇಶನ್‌ಗೆ ಆವೃತ್ತಿ 2.20.205.6 ಅನ್ನು ಹೊರತಂದಿದೆ. ಈ ಹೊಸ ಆವೃತ್ತಿಯು ಖಾತೆಗಳ ಸೆಟ್ಟಿಂಗ್‌ಗಳಲ್ಲಿನ ಭದ್ರತಾ ವಿಭಾಗಕ್ಕೆ ನವೀಕರಣಗಳನ್ನು ತರಲಿದೆ. ಇದು ಎರಡು ಬಳಕೆದಾರರ ನಡುವಿನ ಪಠ್ಯ ಮತ್ತು ಕರೆಗಳೆರಡರ ಸಂಭಾಷಣೆಗಳನ್ನು ಒಳಗೊಂಡಿರುವ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಕೆದಾರರು ಮತ್ತು ವಿವಿಧ ವ್ಯವಹಾರಗಳ ನಡುವೆ ನಡೆಯುತ್ತಿರುವ ಸಂಭಾಷಣೆಗಳನ್ನು ಸಹ ಒಳಗೊಂಡಿದೆ ಎಂದು ವಾಟ್ಸಾಪ್‌ ಹೇಳಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಸದ್ಯದಲ್ಲೇ ಬಳಕೆದಾರರಿಗೆ ಭದ್ರತೆಗೆ ಸಂಬಂಧಿಸಿದ ಫೀಚರ್ಸ್‌ ಅನ್ನು ಪರಿಚಯಿಸಲಿದೆ. ಇದು "ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳಲ್ಲಿನ ಸಂದೇಶಗಳು ಮತ್ತು ಕರೆಗಳು ನಿಮ್ಮ ಮತ್ತು ನೀವು ಆಯ್ಕೆ ಮಾಡಿದ ಜನರು ಅಥವಾ ವ್ಯವಹಾರಗಳ ನಡುವೆ ಇರುತ್ತವೆ, ಆದ್ದರಿಂದ ವಾಟ್ಸಾಪ್ ಸಹ ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ" ಎಂದು ಅಪ್ಲಿಕೇಶನ್‌ನ ನವೀಕರಿಸಿದ ಭದ್ರತಾ ವಿಭಾಗದಲ್ಲಿನ ಪಠ್ಯದಲ್ಲಿ ವರದಿಯಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಕಂಪನಿಯು ಬಳಕೆದಾರರಿಗೆ ಸುರಕ್ಷತಾ ಅಧಿಸೂಚನೆಗಳನ್ನು ನೀಡುವ ಟಾಗಲ್ ಬಟನ್‌ಗೆ ಬದಲಾವಣೆಗಳನ್ನು ಮಾಡುತ್ತಿದೆ.

ವಾಟ್ಸಾಪ್‌ನಲ್

ಇನ್ನು ವಾಟ್ಸಾಪ್‌ನಲ್ಲಿ ವ್ಯಾಪಾರ ಸಂಭಾಷಣೆಗಳನ್ನು ಒಳಗೊಂಡಂತೆ ಎಲ್ಲಾ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳನ್ನು ಸೇರಿಸಲು ಕಂಪನಿಯು ಈ ಹೊಸ ಫೀಚರ್ಸ್‌ ಅನ್ನು ಆಪ್ಡೇಟ್‌ ಮಾದರಿಯಲ್ಲಿ ಬದಲಾಯಿಸುತ್ತಿದೆ. ಸದ್ಯ ಇದೀಗ ಲಭ್ಯವಿರುವ ಆಯ್ಕೆಯಂತಲ್ಲದೆ, ಭವಿಷ್ಯದ ನವೀಕರಣದಲ್ಲಿ ವಾಟ್ಸಾಪ್ ವ್ಯವಹಾರಗಳಿಗೆ ತಮ್ಮ ಚಾಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಸಂಗ್ರಹಿಸಲು ಮತ್ತು ನಿರ್ವಹಿಸಲು ಅನುಮತಿಸುತ್ತದೆ ಎಂದು ಬ್ಲಾಗ್ ಸೈಟ್ ನಲ್ಲಿ ವರದಿಯಾಗಿದೆ. ಸಂದೇಶಗಳು ಮತ್ತು ಕರೆಗಳನ್ನು ಫೇಸ್‌ಬುಕ್‌ಗೆ ತಲುಪಿಸುವಾಗ ಮತ್ತು ತಲುಪಿಸುವಾಗ ಅವುಗಳನ್ನು ಸುರಕ್ಷಿತಗೊಳಿಸಲಾಗುತ್ತದೆ ಎಂದು ವಾಟ್ಸಾಪ್ ಹೇಳಿದೆ.

ಎಂಡ್-ಟು-ಎಂಡ್ ಎನ್‌ಕ್ರಿಪ್ಟ್

ಆದರೆ ಭದ್ರತಾ ಸಂಕೇತಗಳನ್ನು ಬಳಸಿಕೊಂಡು ಚಾಟ್ ನಿಜವಾಗಿಯೂ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆಯೇ ಎಂದು ಪರಿಶೀಲಿಸಲು ಬಳಕೆದಾರರಿಗೆ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ, ಸಂದೇಶಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ವ್ಯಾಪಾರ ಬಳಕೆದಾರರು ವಾಟ್ಸಾಪ್ ಬದಲಿಗೆ ಫೇಸ್‌ಬುಕ್ ಬಳಸುತ್ತಿರುವಾಗ, ಬದಲಾವಣೆಯ ಬಗ್ಗೆ ತಿಳಿಸುವ ಬಳಕೆದಾರರಿಗೆ ವಾಟ್ಸಾಪ್ ಈ ಹೊಸ ಫೀಚರ್ಸ್‌ ಪರಿಚಯಿಸಲು ಸಿದ್ದತೆ ನಡೆಸಿದೆ. ಸದ್ಯ ವಾಟ್ಸಾಪ್‌ ತನ್ನ ಬಳಕೆದಾರರ ಖಾತೆಗಳ ಹಿತದೃಷ್ಟಿಯಿಂದ ಇನ್ನಷ್ಟು ಹೊಸ ಆಫ್ಡೇಟ್‌ ಫೀಚರ್ಸ್‌ ಅನ್ನು ಪರಿಚಯಿಸಲಿದೆ.

Best Mobiles in India

English summary
The update essentially informs users that the end-to-end encryption, which covers conversations, both text and calls, between two users, also covers the conversations happening between users and various businesses.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+