Home
ಸುದ್ದಿಜಾಲ

ಶೀಘ್ರದಲ್ಲೇ ಹೊಸ ಕಾಲ್‌ ಇಂಟರ್ಫೇಸ್ ಪರಿಚಯಿಸಲಿದೆ ವಾಟ್ಸಾಪ್‌!

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ತನ್ನ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಹೊಸ ಇನ್‌-ಕಾಲ್‌ ಯುಐ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ವರ್ಷದ ಆರಂಭದಲ್ಲಿಯೇ iOSನಲ್ಲಿ ಹೊಸ ಕಾಲ್‌ UI ಅನ್ನು ಪರಿಚಯಿಸಿದೆ. ಇದೀಗ ಆಂಡ್ರಾಯ್ಡ್‌ನಲ್ಲಿ ಹೊಸ ಕಾಲ್‌ ಇಂಟರ್ಫೇಸ್ ಪರಿಚಯಿಸಲು ಪ್ಲಾನ್‌ ನಡೆದಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಇನ್‌ ಕಾಲ್‌ ಯುಐ ಪರಿಚಯಿಸಲು ಪ್ಲಾನ್‌ ನಡೆಸಿದೆ. ಇದರಿಂದ ವಾಟ್ಸಾಪ್‌ ಕಾಲ್‌ ಸಮಯದಲ್ಲಿ ಸ್ಕ್ರೀನ್‌ ನಡುವೆ ಗ್ರೇ ಸ್ಕ್ವೇರ್‌ ಅಳವಡಿಸುವುದಾಗಿ ವಾಟ್ಸಾಪ್‌ ಹೇಳಿದೆ. ಇದರಿಂದ ನೀವು ಸ್ಪೀಕರ್ ಮೋಡ್‌ಗೆ ಬದಲಾಯಿಸಲು, ವೀಡಿಯೊ ಕರೆಗೆ ಬದಲಾಯಿಸುವ ಬಟನ್‌ಗಳು ಕೆಳಹಂತದಲ್ಲಿ ಲಭ್ಯವಾಗಲಿದೆ. ಹಾಗಾದ್ರೆ ವಾಟ್ಸಾಫ್‌ ಪರಿಚಯಿಸಲು ಸಿದ್ಧತೆ ನಡೆಸಿರುವ ಹೊಸ ಇನ್‌ ಕಾಲ್‌‌ ಯುಐ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಇನ್‌ ಕಾಲ್‌ ಯುಐ ಪರಿಚಯಿಸಲಿದೆ. ಇದರಿಂದ ನೀವು ವಾಟ್ಸಾಪ್‌ ಕಾಲ್‌ ಸಮಯದಲ್ಲಿ ಸ್ಪೀಕರ್‌ ಮೋಡ್‌ಗೆ ಬದಲಾಯಿಸುವ, ವೀಡಿಯೋ ಕಾಲ್‌ಗೆ ಬದಲಾಯಿಸಲು, ನಿಮ್ಮನ್ನು ಮ್ಯೂಟ್ ಮಾಡಲು ಮತ್ತು ಕಾಲ್‌ ಎಂಡ್‌ ಮಾಡಲು ಅನುಮತಿಸುವ UI ಬಟನ್‌ಗಳನ್ನು ಸ್ಕ್ರೀನ್‌ ಕೆಳಗೆ ಇರಿಸಲಾಗುತ್ತದೆ. ಇದಲ್ಲದೆ 1-ಆನ್-1 ಕರೆಗಳ ಸಮಯದಲ್ಲಿ, ಗ್ರೇ ಕಲರ್‌ ಸ್ಕ್ವೇರ್‌ ನಲ್ಲಿ ನೀವು ಮಾತನಾಡುತ್ತಿರುವ ಸಂಪರ್ಕದ ಹೆಸರನ್ನು ತೋರಿಸುತ್ತದೆ. ಜೊತೆಗೆ ಅದರ ಕೆಳಗಿನ ಕರೆ ಅವಧಿಯನ್ನು ಸಹ ನಾವು ನೋಡಬಹುದು. ಈ ಎರಡು ಅಂಶಗಳ ಕೆಳಗೆ ಬಳಕೆದಾರರ ಪ್ರೊಫೈಲ್ ಚಿತ್ರವನ್ನು ತೋರಿಸುವ ಬಿಗ್‌ ಸರ್ಕಲ್‌ ಕಾಣಲಿದೆ.

ಮ್ಯೂಟ್

ಇದಲ್ಲದೆ ಗ್ರೇ ಕಾರ್ಡ್‌ನ ಕೆಳಗಿನ ಬಲಭಾಗದಲ್ಲಿ ಸಣ್ಣ ಮ್ಯೂಟ್ ಬಟನ್ ಅನ್ನು ಸಹ ನೋಡಬಹುದು. ಕೆಳಗಿನ ಸಾಲಿನಲ್ಲಿರುವ ಮ್ಯೂಟ್ ಬಟನ್‌ ಮೂಲಕ ನಿಮ್ಮ ಕಾಲ್‌ ಅನ್ನು ಎಂಡ್‌ ಮಾಡದೇ ಕಾಲ್‌ ಮ್ಯೂಟ್ ಮಾಡಲು ಇದನ್ನು ಬಳಸಬಹುದು. ಗ್ರೇ ಕಾರ್ಡ್‌ನ ಬ್ಯಾಕ್‌ಗ್ರೌಂಡ್‌ ಇಮೇಜ್‌ ನಲ್ಲಿ ಡೀಫಾಲ್ಟ್ ವಾಟ್ಸಾಪ್‌ ಚಾಟ್ ಬ್ಯಾಕ್‌ಗ್ರೌಂಡ್‌ ಕಂಡುಬರುತ್ತದೆ. ಇದಕ್ಕಾಗಿ ಬಳಕೆದಾರರು ತಮ್ಮ ಸ್ವಂತ ಚಾಟ್ ಬ್ಯಾಕ್‌ಗ್ರೌಂಡ್‌ ಗಳನ್ನು ಕಾಲ್‌ ಸ್ಕ್ರೀನ್‌ ಬ್ಯಾಕ್‌ಗ್ರೌಂಡ್‌ಗೆ ಸೇರಿಸಲು ಸಾಧ್ಯವಾಗಲಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಗ್ರೂಪ್‌ ಚಾಟ್‌ಗಳಲ್ಲಿಯೂ ಕೂಡ ಇಂಟರ್ಫೇಸ್ ಬದಲಾಗುತ್ತದೆ. ಇದರಿಂದ ಇನ್ನಷ್ಟು ವಾಟ್ಸಾಪ್‌ ಗ್ರೂಪ್‌ ಚಾಟ್‌ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ. ಮೊಸಾಯಿಕ್ ತರಹದ UI ಬದಲಿಗೆ, ಗ್ರೇ ಕಾರ್ಡ್‌ಗಳನ್ನು ಕಾಣಬಹುದು. ಕರೆಯಲ್ಲಿನ ಪ್ರತಿ ಸಂಪರ್ಕಕ್ಕೆ ಒಂದರಂತೆ ಗ್ರೇ ಕಾರ್ಡ್‌ ಕಾಣಲಿದೆ. ಪ್ರೊಫೈಲ್ ಇಮೇಜ್‌ ಮತ್ತು ಆಡಿಯೋ ವೇವ್‌ಫಾರ್ಮ್ ಕೆಳಭಾಗದಲ್ಲಿರುವಾಗ ಈ ಕಾರ್ಡ್‌ಗಳು ಮೇಲ್ಭಾಗದಲ್ಲಿ ಸಂಪರ್ಕಗಳ ಹೆಸರನ್ನು ಹೊಂದಿರುತ್ತವೆ ಎಂದು ವರದಿಯಾಗಿದೆ.

ವಾಟ್ಸಾಪ್‌

ಸದ್ಯ ವಾಟ್ಸಾಪ್‌ನ ಹೊಸ UI ಅನ್ನು ಆಯ್ದ ಬಳಕೆದಾರರಿಂದ ಮಾತ್ರ ಗುರುತಿಸಲಾಗಿದೆ. ಆಂಡ್ರಾಯ್ಡ್‌ಗಾಗಿ ಪರಿಚಯಿಸಲಿರುವ ವಾಟ್ಸಾಪ್‌ನ ಹೊಸ ಯುಐ ಬೀಟಾ ಪ್ರೋಗ್ರಾಂನಲ್ಲಿದೆ. ಆದರೆ ಇದು ಬೀಟಾ ವರ್ಷನ್‌ನಲ್ಲಿರುವ ಎಲ್ಲರಿಗೂ ಲಬ್ಯವಾಗಿಲ್ಲ. ಅಂದರೆ 2.22.54 ಆವೃತ್ತಿಯಲ್ಲಿರುವವರು ಮಾತ್ರ ಹೊಂದಿದ್ದಾಋಎ. ಸದ್ಯ ಪರೀಕ್ಷಾ ಹಂತದಲ್ಲಿರುವ ಈ ಫೀಚರ್ಸ್‌ ಶೀಘ್ರದಲ್ಲೇ ಅಪ್ಲಿಕೇಶನ್‌ನ ಸ್ಥಿರ ಆವೃತ್ತಿಗೆ ಬರಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಇತ್ತೀಚಿಗೆ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ಅಲ್ಲದೆ ನೊಟಿಫಿಕೇಶನ್‌ ಜೊತೆಗೆ ಗ್ರೂಪ್‌ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ಇನ್ನು ವಾಟಯ್ಸ್‌ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ. ವಾಯ್ಸ್‌ ನೋಟ್‌ ತೆಗೆದುಕೊಳ್ಳುವಾಗ ಯಾರಾದರೂ ಅಡ್ಡಿಪಡಿಸಿದಾಗ ವಿರಾಮ ತೆಗೆದುಕೊಳ್ಳಬೇಕಾದಾಗ ಈ ಫೀಚರ್ಸ್‌ ಉಪಯುಕ್ತವಾಗಿರುತ್ತದೆ.

Best Mobiles in India

English summary
WhatsApp seems to be closer to rolling out its new in-call UI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+