ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ಸಿದ್ದತೆ!

|

ವಿಶ್ವದ ಜನಪ್ರಿಯ ಇನ್ಸ್‌ಟೆಂಟ್‌ ಮೆಸೇಜಿಂಗ್‌ ಆಪ್‌ ಎನಿಸಿಕೊಂಡಿರುವ ವಾಟ್ಸಾಪ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿದೆ. ತನ್ನ ಹೊಸ ಮಾದರಿಯ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಆಪ್‌ ಗುರುತಿಸಿಕೊಂಡಿದೆ. ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಪರಿಚಯಿಸಲು ಸಿದ್ದತೆ ನಡೆಸುತ್ತಿದ್ದು, ಬೀಟಾ ಅಪ್‌ಡೇಟ್‌ನಲ್ಲಿ ಪರಿಚಯಿಸಲು ಮುಂದಾಗಿದೆ.

ವಾಟ್ಸಾಪ್‌

ಹೌದು, ಜನಪ್ರಿಯ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ತನ್ನ ಬಳಕೆದಾರರಿಗಾಗಿ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಚಾಟ್‌ ಮಾಡಲು ಅವಕಾಶ ಕಲ್ಫಿಸುವ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್ನು ಈ ಹೊಸ ಫೀಚರ್ಸ್‌ಗಳು ಮಲ್ಟಿ ಡಿವೈಸ್‌ ಲಾಗಿನ್, ಕ್ಲಿಯರ್‌ ಚಾಟ್ಸ್‌, ಮತ್ತು ಚಾಟ್ ಇನ್ ಸರ್ಚ್‌ಗಳಿಗಾಗಿ ಸುಧಾರಿತ ಹುಡುಕಾಟ ಕಾರ್ಯವನ್ನು ಒಳಗೊಂಡಿವೆ. ಅಷ್ಟಕ್ಕೂ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ಸದ್ಯ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಮಲ್ಟಿ ಡಿವೈಸ್‌ ಲಾಗಿನ್‌ ಫೀಚರ್ಸ್‌ ಅನ್ನು ಪರಿಚಯಿಸಲು ಮುಂದಾಗಿದೆ. ಇದು ಬಹಳಷ್ಟು ಬಳಕೆದಾರರಿಗೆ ಅನುಕೂಲವಾಗಲಿದ್ದು, ಏಕಕಾಲದಲ್ಲಿ ಹಲವು ಕಾರ್ಯಗಳನ್ನ ಮಾಡಲು ಇದರಿಂದ ಸಾಧ್ಯವಾಗಲಿದೆ. ಈಗಾಗಲೇ ಅನೇಕ ಪ್ಲಾಟ್‌ಫಾರ್ಮ್‌ಗಳು ಅಥವಾ ಡಿವೈಸ್‌ಗಳಲ್ಲಿ ಚಾಟ್ ಸೇವೆಯನ್ನು ಬಳಸಲು ಸಾಧ್ಯವಾಗುವುದರಿಂದ ಸಮಯವನ್ನು ಉಳಿಸಬಹುದು ಅನ್ನೊದು ವಾಟ್ಸಾಪ್‌ನ ಉದ್ದೇಶವಾಗಿದೆ ಎನ್ನಲಾಗಿದೆ. ಅಂದರೆ ಪ್ರಸ್ತುತ, ನೀವು ಒಂದೇ ಸಮಯದಲ್ಲಿ ಕೇವಲ ಒಂದು ಮೊಬೈಲ್ ಡಿವೈಸ್‌ ಮತ್ತು ಪಿಸಿ ವೆಬ್ ಬ್ರೌಸರ್‌ನಿಂದ ಮಾತ್ರ ವಾಟ್ಸಾಪ್‌ ಲಾಗ್ ಇನ್ ಆಗಬಹುದು. ಇವುಗಳ ನಡುವೆ ನೀವು ವಿನಿಮಯ ಮಾಡಿಕೊಳ್ಳಬಹುದು ಆದರೆ ನೀವು ಒಂದೇ ಸಮಯದಲ್ಲಿ ಒಂದನ್ನು ಮಾತ್ರ ಲಾಗ್-ಇನ್ ಮಾಡಬಹುದು. ಆದರೆ ಇನ್ಮುಂದೆ ಎರಡು ಡಿವೈಸ್‌ಗಳಲ್ಲೂ ಏಕಕಾಲದಲ್ಲಿ ಚಾಟ್‌ ಮಾಡಬಹುದಾಗಿದೆ ಎಂದು ಹೇಳಲಾಗ್ತಿದೆ.

ವಾಟ್ಸಾಪ್

ವಾಟ್ಸಾಪ್ ಒಂದು ಸಮಯದಲ್ಲಿ ನಾಲ್ಕು ಡಿವೈಸ್‌ಗಳೊಂದಿಗೆ ಚಾಟ್‌ ಮಾಡಲು ಅವಕಾಶ ನಿಡುವುದಕ್ಕೆ ಪರೀಕ್ಷೆ ನಡೆಸುತ್ತಿದೆ ಎಂದು WABetaInfo ಗಮನಸೆಳೆದಿದೆ, ಆದಾಗ್ಯೂ, ಈ ಬೆಂಬಲವು ವಾಟ್ಸಾಪ್ ಬೀಟಾವರ್ಷನ್‌ಗಳಲ್ಲಿ ಲಬ್ಯವಾಗುವ ಸಾಧ್ಯತೆ ಇದ್ದು, ಸದ್ಯಕ್ಕೆ ಇನ್ನು ಯಾವುದೇ ವರ್ಷನ್‌ಗಳಲ್ಲಿ ಲಭ್ಯವಾಗಿಲ್ಲ. ಇದಲ್ಲದೆ ನಾಲ್ಕು ಡಿವೈಸ್‌ಗಳು ಅಂದರೆ ಈಗಾಗಲೇ ಟೆಲಿಗ್ರಾಮ್‌ ನೀಡಿರುವ ಅವಕಾಶದಂತೆ ಈ ಮಾದರಿಯ ಅವಕಾಶ ಇರುವುದಿಲ್ಲ. ಬದಲಿಗೆ ಇದರಲ್ಲಿ ಇನ್‌ಕಮಿಂಗ್‌ ಫೀಚರ್ಸ್‌ ಚಾಟ್ ಹುಡುಕಾಟಗಳಲ್ಲಿ ಸುಧಾರಣೆಯನ್ನು ಮಾಡಲಾಗಿರುತ್ತದೆ ಎನ್ನಲಾಗಿದೆ.

ವಾಟ್ಸಾಪ್

ಸದ್ಯ ಲಭ್ಯವಾಗಿರುವ WABetaInfo ನ ಸ್ಕ್ರೀನ್‌ಶಾಟ್‌ಗಳು ಸುಧಾರಿತ ಚಾಟ್ ಹುಡುಕಾಟಗಳ ಐಒಎಸ್ ಆವೃತ್ತಿಯನ್ನು ತೋರಿಸುತ್ತವೆ, ಆದರೆ ಇದು ಶೀಘ್ರದಲ್ಲೇ ಆಂಡ್ರಾಯ್ಡ್ ಬೀಟಾಗೆ ಬರುವ ನಿರೀಕ್ಷೆಯಿದೆ. ಮತ್ತು ಇದು ಮಾತ್ರವಲ್ಲ, ವೆಬ್‌ನಲ್ಲಿ ಸಂದೇಶಗಳನ್ನು ಹುಡುಕಲು ನಿಮಗೆ ಅವಕಾಶ ನೀಡುವಲ್ಲಿ ವಾಟ್ಸಾಪ್ ಸಹ ಕಾರ್ಯನಿರ್ವಹಿಸುತ್ತಿದೆ. ನೀವು ಪ್ರಸ್ತುತ ಇದನ್ನು ಮೊಬೈಲ್‌ನಲ್ಲಿ ಮಾತ್ರ ಮಾಡಬಹುದು. ಹೊಸ ಮಾದರಿಯ ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಹೊಸ ಟಾಗಲ್ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ ಅದು ವೆಬ್ ಬ್ರೌಸರ್‌ನಲ್ಲಿ ಸಂದೇಶಗಳು ಮತ್ತು ಮಾಧ್ಯಮವನ್ನು ಹುಡುಕಲು ನಿಮಗೆ ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
WhatsApp has started testing a host of things including multiple device logins, clear chats and more improved search functions.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X