ನಿಮ್ಮ ಊಹೆಗೂ ನಿಲುಕದ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ಸಿದ್ದತೆ!

|

ವಿಶ್ವದ ಟಾಪ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ಈಗಾಗಲೇ ಬಳಕೆದಾರರ ನೆಚ್ಚಿನ ಸ್ನೇಹಿ ಆಗಿದೆ. ಕಾಲಕಾಲಕ್ಕೆ ತಕ್ಕಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿದೆ. ಇನ್ನು ಸದ್ಯದಲ್ಲಿಯೇ ಮಲ್ಟಿಡಿವೈಸ್‌ ಲಾಗಿನ್‌ ಫಿಚರ್ಸ್‌ ಪರಿಚಯಿಸಲಿದೆ ಎಂದು ಕಳೆದ ಲೇಖನದಲ್ಲಿ ತಿಳಿಸಿದ್ದೇವು. ಸದ್ಯ ಇದೀಗ ಮಲ್ಟಿ ಡಿವೈಸ್‌ ಲಾಗಿನ್‌ ಜೊತೆಗೆ ಬಳಕೆದಾರರು ಹೊಂದಿರುವ ವೀಡಿಯೊಗಳು, ಚಿತ್ರಗಳು, ಲಿಂಕ್‌ಗಳು ಮತ್ತು ಇತರ ಫೈಲ್‌ಗಳನ್ನು ಆಧರಿಸಿ ಸಂದೇಶಗಳನ್ನು ಹುಡುಕಲು ಅನುವು ಮಾಡಿಕೊಡುವ ಆಡ್ವಾನ್ಸ್‌ ಸರ್ಚ್‌ ಫೀಚರ್ಸ್‌ ಆಯ್ಕೆಯನ್ನು ಪರಿಚಯಿಸಲು ವಾಟ್ಸಾಪ್ ಸಹ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗ್ತಿದೆ.

ವಾಟ್ಸಾಪ್‌

ಹೌದು, ಜನಪ್ರಿಯ ಮೆಸೇಜಿಂಗ್‌ ಆಪ್‌ ಆಗಿರುವ ವಾಟ್ಸಾಪ್‌. ತನ್ನ ಬಳಕೆದಾರರು ಹೊಂದಿರುವ ವೀಡಿಯೊಗಳು, ಇಮೇಜ್‌ಗಳು, ಲಿಂಕ್‌ಗಳು ಮತ್ತು ಇತರ ಫೈಲ್‌ಗಳನ್ನು ಆಧರಿಸಿ ಮೇಸೆಜ್‌ಗಳನ್ನು ಸರ್ಚ್‌ ಮಾಡಲು ಅವಕಾಸ ನೀಡುವ ಆಡ್ವಾನ್ಸ್‌ ಸರ್ಚ್‌ ಫೀಚರ್ಸ್‌ ಆಯ್ಕೆಯನ್ನು ಪರಿಚಯಿಸಲಿದೆ ಎಂದು ಹೇಳಲಾಗ್ತಿದೆ. ಇನ್ನು ವಾಟ್ಸಾಪ್‌ಗೆ ಹೊಸ ಫೀಚರ್ಸ್‌ಗಳ ಗುಂಪನ್ನು ಪರಿಚಯಿಸುವ ಕೆಲಸದಲ್ಲಿ ಫೇಸ್‌ಬುಕ್‌ ಕಾರ್ಯನಿರ್ವಹಿಸುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಕಳೆದ ಎರಡು ವಾರಗಳ ಹಿಂದೆಯಷ್ಟೇ ಕಂಪನಿಯು ವಾಟ್ಸಾಪ್‌ನಲ್ಲಿ ಕ್ಯೂಆರ್ ಕೋಡ್‌ಗಳು ಮತ್ತು ಆನಿಮೇಟೆಡ್ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ. ಹಾಗಾದ್ರೆ ಈ ಆಡ್ವಾನ್ಸ್‌ ಸರ್ಚ್‌ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಜನಪ್ರಿಯ ಫೀಚರ್ಸ್‌ಗಳಿಂದಲೇ ಹೆಸರುವಾಸಿ. ಪ್ರತಿ ಭಾರಿಯು ಬಳಕೆದಾರರ ಕೆಲಸ ಕಾರ್ಯವನ್ನ ಇನ್ನಷ್ಟು ಸಲಭಗೊಳಿಸುತ್ತಿರುವ ವಾಟ್ಸಾಪ್‌ ಇದೀಗ ನಿಮ್ಮ ಫೋಟೋ, ವೀಡಿಯೋಗಳ ಆದಾರದ ಮೇಲೆ ಮೆಸೇಜ್‌ಗಳನ್ನು ಸರ್ಚ್‌ ಮಾಡುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಸದ್ಯ ಇದರ ಬಗ್ಗೆ ವರದಿ ಆಗಿದ್ದು, ಇದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ನೀವು ಹಳೆಯ ಸಂದೇಶಗಳನ್ನ ಹುಡುಕುತ್ತಾ ಕೂರುವ ಬದಲು, ನಿಮಲ್ಲಿ ಉಳಿದುಕೊಂಡಿರುವ ಫೋಟೋದ ಆದಾರದ ಮೇಲೆ ಮೆಸೇಜ್‌ಗಳನ್ನ ಹುಡುಕುವುದು ಇನ್ನಷ್ಟು ಉತ್ತಮವಾಗಲಿದೆ.

ವಾಟ್ಸಾಪ್‌

ಸದ್ಯ ವಾಟ್ಸಾಪ್‌ ಕಂಪನಿಯು ಅಪ್ಲಿಕೇಶನ್‌ನ ಇತ್ತೀಚಿನ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ, ಹೊಸ ಲಿಂಕ್ಡ್ ಡಿವೈಸಸ್ ಫೀಚರ್ಸ್‌ನ್ನು ಪರಿಚಯಿಸಿದೆ, ಇದು ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗಳಿಗೆ ಲಿಂಕ್ ಮಾಡಲಾದ ಎಲ್ಲಾ ಡಿವೈಸ್‌ಗಳ ಜೊತೆಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದು ಹೊಸ ಡಿವೈಸ್‌ಗಳನ್ನು ಸೇರಿಸುವ ಸಾಮರ್ಥ್ಯವನ್ನು ಮಾತ್ರವಲ್ಲದೆ ಅಸ್ತಿತ್ವದಲ್ಲಿರುವ ಡಿವೈಸ್‌ಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಸಹ ಒಳಗೊಂಡಿದೆ.ಇದರ ಜೊತೆಗೆ, ಬಳಕೆದಾರರು ಹೊಂದಿರುವ ವೀಡಿಯೊಗಳು, ಚಿತ್ರಗಳು, ಲಿಂಕ್‌ಗಳು ಮತ್ತು ಇತರ ಫೈಲ್‌ಗಳನ್ನು ಆಧರಿಸಿ ಸಂದೇಶಗಳನ್ನು ಹುಡುಕಲು ಅನುವು ಮಾಡಿಕೊಡುವ ಸುಧಾರಿತ ಸರ್ಚ್‌ ಫೀಚರ್ಸ್‌ ಕೂಡ ಲಭ್ಯವಾಗಲಿದೆ.

ವಾಟ್ಸಾಪ್‌

ಇನ್ನು ಈ ಫೀಚರ್ಸ್‌ ವಾಟ್ಸಾಪ್‌ನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.20.117 ನಲ್ಲಿ ಲಭ್ಯವಿದೆ. ಇದರ ಹೊರತಾಗಿ, ವಾಟ್ಸಾಪ್ ಭಾರತದಲ್ಲಿ ತನ್ನ ಪಾವತಿ ಜಾಲವನ್ನು ಬಲಪಡಿಸುವ ಕೆಲಸವನ್ನೂ ಮಾಡುತ್ತಿದೆ. ಕಂಪನಿಯು ಈಗಾಗಲೇ ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ, ಇದೀಗ ಗ್ರಾಮೀಣ ಮತ್ತು ಕಡಿಮೆ ಆದಾಯದ ವಿಭಾಗಗಳಿಂದ ಈ ಸೇವೆಯನ್ನು ಪಡೆಯಲು ಹೆಚ್ಚಿನ ಬ್ಯಾಂಕುಗಳೊಂದಿಗೆ ಪಾಲುದಾರಿಕೆ ಮಾಡಲು ಯೋಜಿಸುತ್ತಿದೆ. ಈ ಮೂಲಕ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಎಲ್ಲಾ ರಂಗಗಳ ಮೂಲಕವೂ ಸಹಾಯ ಮಾಡಲು ಮುಂದಾಗಿದೆ.

Best Mobiles in India

English summary
Apart from multi-device support, WhatsApp is also working on introducing an advanced search option that would enable users to search for messages based on the videos, images, links and other files that they contain.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X