ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಬಳಕೆದಾರರ ಹಿತ ಕಾಪಾಡುವ ಫೀಚರ್ಸ್‌!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ವಾಟ್ಸಾಪ್‌ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಕಾಲಕಾಲಕ್ಕೆ ಅನುಗುಣವಾಗಿ ಹೊಸ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಲೇ ಬಂದಿದೆ. ಸದ್ಯ ಇದೀಗ ತನ್ನ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ವಾಟ್ಸಾಪ್ ಹೊಸ ಕಸ್ಟಮ್ ಗೌಪ್ಯತೆ ಸೆಟ್ಟಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದು ವಾಟ್ಸಾಪ್‌ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ಕಸ್ಟಮ್‌ ಪ್ರೈವೆಸಿ ಸೆಟ್ಟಿಂಗ್‌ ಫೀಚರ್ಸ್‌ ಪರಿಚಯಿಸಲು ಸಿದ್ಧತೆ ನಡೆಸಿದೆ. ಇದು ಪ್ರೈವೆಸಿ ಸೆಟ್ಟಿಂಗ್‌ಗಳಲ್ಲಿ ಹೊಸ "ಮೈ ಕಾಂಟ್ಯಾಕ್ಟ್ಸ್ ಎಕ್ಸೆಪ್ಟ" ಆಯ್ಕೆಯನ್ನು ಹೊಸದಾಗಿ ಸೇರಿಸಲು ಪ್ಲಾನ್‌ ರೂಪಿಸಿದೆ ಎನ್ನಲಾಗಿದೆ. ಇದು ನಿರ್ದಿಷ್ಟ ಸಂಪರ್ಕಗಳಿಗೆ ಮಾತ್ರ ಬಳಕೆದಾರರ ಲಾಸ್ಟ್‌ ಸೀನ್‌ ಕಾಣುವಂತೆ ಮಾಡುವುದಕ್ಕೆ ಅನುಮತಿಸುತ್ತದೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಸೇವೆಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಕಸ್ಟಮ್‌ ಪ್ರೈವೆಸಿ ಸೆಟ್ಟಿಂಗ್ಸ್‌ನಲ್ಲಿ ಮೈ ಕಾಂಟ್ಯಾಕ್ಟ್ಸ್ ಎಕ್ಸೆಪ್ಟ ಸೇರಿಸಲಿದೆ. ಈಗಾಗಲೇ ಈ ಫೀಚರ್ಸ್‌ ಅನ್ನು ಐಒಎಸ್ ಬಳಕೆದಾರರಿಗಾಗಿ ಪರೀಕ್ಷಿಸಲು ಆರಂಭಿಸಿದೆ. ಆದರಿಂದ ಈ ಫೀಚರ್ಸ್‌ ಅನ್ನು ಐಒಎಸ್ ಮತ್ತು ಆಂಡ್ರಾಯ್ಡ್ ಎರಡಕ್ಕೂ ಒಂದೇ ಸಮಯದಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಇತ್ತಿಚಿನ ದಿನಗಳಲ್ಲಿ ನಿರ್ದಿಷ್ಟ ಸಂಪರ್ಕಗಳಿಗೆ ಮಾತ್ರ ಲಾಸ್ಟಿ ಸೀನ್‌ ನೋಡುವುದನ್ನು ಹೈಡ್‌ ಮಾಡುವ ಫೀಚರ್ಸ್‌ ಬಹಳ ಅಗತ್ಯವಾಗಿದೆ. ಏಕೆಂದರೆ ಕೆಲವು ಸಂದರ್ಭದಲ್ಲಿ ನಿಮ್ಮ ಲಾಸ್ಸ್‌ಸೀನ್‌ ತೋರಿಸಲು ನೀವು ಬಯಸದಿರಬಹುದು. ಅಂತಹ ಸಂದರ್ಭದಲ್ಲಿ ಇದು ನಿಮಗೆ ಉಪಯುಕ್ತವಾಗಲಿದೆ.

ಪ್ರೊಫೈಲ್

ಇನ್ನು ಈ ಹೊಸ ಕಸ್ಟಮ್ ಆಯ್ಕೆಯು "ಲಾಸ್ಟ್ ಸೀನ್" "ಪ್ರೊಫೈಲ್ ಫೋಟೋ" ಮತ್ತು "ಬಗ್ಗೆ" ಮುಂತಾದ ವರ್ಗಗಳಿಗೆ ಮಾತ್ರ ಲಭ್ಯವಿರುತ್ತದೆ ಎಂದು ವರದಿಯಾಗಿದೆ. ಪ್ರಸ್ತುತ, ವಾಟ್ಸಾಪ್‌ ಈ ವರ್ಗಗಳ ಅಡಿಯಲ್ಲಿ "ಎಲ್ಲರೂ," "ನನ್ನ ಸಂಪರ್ಕಗಳು" ಮತ್ತು "ಯಾರೂ ಇಲ್ಲ" ಎಂಬ ಮೂರು ಆಯ್ಕೆಗಳನ್ನು ಮಾತ್ರ ನೀಡುತ್ತಿದೆ. ಇದಕ್ಕೆ ಶೀಘ್ರದಲ್ಲೇ ಮೈ ಕಾಂಟ್ಯಾಕ್ಟ್ಸ್ ಎಕ್ಸೆಪ್ಟ ಆಯ್ಕೆಯನ್ನು ಸೇರಿಸಲಿದೆ. ಈ ಗೌಪ್ಯತೆ ಆಯ್ಕೆಗಳ ಮೂಲಕ, ನಿಮ್ಮ ಲಾಸ್ಟ್‌ ಸೀನ್‌ ಅಥವಾ ಪ್ರೊಫೈಲ್ ಚಿತ್ರ ಅಥವಾ ವಾಟ್ಸಾಪ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರು ನೋಡಬಹುದು ಅನ್ನೊದನ್ನ ನೀವು ಕಂಟ್ರೋಲ್‌ ಮಾಡಬಹುದಾಗಿದೆ.

ಫೀಚರ್ಸ್‌

ಈ ಫೀಚರ್ಸ್‌ ನೀವು ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿರುವುದನ್ನು ಹೈಡ್‌ ಮಾಡುವುದಕ್ಕೆ ಅವಕಾಸ ನೀಡಲಿದೆ. ವಾಟ್ಸಾಪ್ ಬಳಕೆದಾರರಿಗೆ ಬ್ಲೂ ಟಿಕ್‌ಗಳನ್ನು ಮರೆಮಾಡಲು ಮತ್ತು ಚಾಟ್‌ಗಳಲ್ಲಿ ಲಾಸ್ಟ್‌ ಸೀನ್‌ ನೋಡಲು ಮಾತ್ರ ಅನುಮತಿಸುತ್ತದೆ. ಈ ಫೀಚರ್ಸ್‌ ಲಭ್ಯವಾದ ನಂತರ ಅಪ್ಲಿಕೇಶನ್‌ನ ನವೀಕರಿಸಿದ ಆವೃತ್ತಿಯನ್ನು ಬಳಸಬೇಕಾಗಿಲ್ಲ, ಏಕೆಂದರೆ ಸರ್ವರ್ ಸ್ವಯಂಚಾಲಿತವಾಗಿ ನಿಮಗಾಗಿ ಈ ಸೆಟ್ಟಿಂಗ್ ಅನ್ನು ನಿರ್ವಹಿಸುತ್ತದೆ.

ವಾಟ್ಸಾಪ್

ಇದಲ್ಲದೆ ವಾಟ್ಸಾಪ್ ಈಗ ಬಳಕೆದಾರರು ತಮ್ಮ ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಫೀಚರ್ಸ್‌ ಅನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ಸಹ ಹೇಳಲಾಗಿದೆ. ಇದನ್ನು ವಾಟ್ಸಾಪ್‌ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ವಾಟ್ಸಾಪ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಹೊಸ ಫೀಚರ್ಸ್‌ ನಲ್ಲಿ ಬಳಕೆದಾರರು ತಾವು ಕಳುಹಿಸಿದ ಚಿತ್ರವು ಸ್ಟಿಕರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕೂಡ ಅವಕಾಶ ಇರಲಿದೆ.

ಫೀಚರ್ಸ್‌

ಸದ್ಯ ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ವಾಟ್ಸಾಪ್‌ನ ಡೆಸ್ಕ್‌ಟಾಪ್ ಆವೃತ್ತಿಯ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಪ್ರಸ್ತುತ, ಈ ವೈಶಿಷ್ಟ್ಯವು 2.2137.3 ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈ ಫೀಚರ್ಸ್‌ ಬಳಕೆಗೆ ಬಂದರೆ ಯಾವುದೇ ಥರ್ಡ್-ಪಾರ್ಟಿ ಆಪ್ ಬಳಸದೆ, ನಿಮ್ಮ ಫೋಟೋಗಳನ್ನು ನೀವೇ ಸ್ಟಿಕ್ಕರ್ ಆಗಿ ಕನ್ವರ್ಟ್‌ ಮಾಡಬಹುದಾಗಿದೆ.

ವಾಟ್ಸಾಪ್‌

ಇನ್ನು ಇತ್ತೀಚಿಗೆ ವಾಟ್ಸಾಪ್‌ ಹೊಸದಾಗಿ ಚಾಟ್‌ ಬ್ಯಾಕಪ್‌ಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಪರಿಚಯಿಸಿದೆ. ಇದು ಯಾವುದೇ ಮೂರನೇ ವ್ಯಕ್ತಿ ಚಾಟ್‌ ಬ್ಯಾಕಪ್‌ ಅನ್ನು ನೋಡುವುದಕ್ಕೆ ಸಾಧ್ಯವಿಲ್ಲದಂತೆ ಮಾಡಲಿದೆ. ಇಲ್ಲಿಯವರೆಗೆ, ಚಾಟ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ, ಇದೇ ಕಾರಣಕ್ಕೆ ಚಾಟ್‌ ಬ್ಯಾಕಪ್‌ ಬೇರೆಯವರ ಕೈಗೆ ಸಿಗುವುದು ಸುಲಭವಾಗಿತ್ತು. ಇದೀಗ ಚಾಟ್‌ ಬ್ಯಾಕಪ್‌ ಕೂಡ ಎನ್‌ಕ್ರಿಪ್ಶನ್‌ ಸೇರಿಸಿರುವುದರಿಂದ ಚಾಟ್‌ಬ್ಯಾಕಪ್‌ ಕೂಡ ಸೆಕ್ಯುರ್‌ ಆಗಿರಲಿದೆ.

Best Mobiles in India

English summary
WhatsApp is working on a new custom privacy setting for Android beta users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X