ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿದೆ ಬಳಕೆದಾರರ ಬಹು ನಿರೀಕ್ಷಿತ ಫೀಚರ್ಸ್!

|

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಈಗಾಗಲೇ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಸಾಕಷ್ಟು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ, ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿಯ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದೆ. ಇನ್ನು ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ತಮ್ಮ ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡಲಿದೆ ಎನ್ನಲಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಶೀಘ್ರದಲ್ಲೇ ಬಳಕೆದಾರರ ಇಮೇಜ್‌ಗಳನ್ನು ಸ್ಟಿಕ್ಕರ್‌ಗಳಾಗಿ ಕನ್ವರ್ಟ್‌ ಮಾಡಬಲ್ಲ ಫೀಚರ್ಸ್‌ ಪರಿಚಯಿಸಲು ಪ್ಲಾನ್‌ ರೂಪಿಸಿದೆ. ಇದರಿಂದ ಬಳಕೆದಾರರು ಇನ್ಮುಂದೆ ತಮ್ಮದೇ ಇಮೇಜ್‌ಗಳನ್ನು ಸ್ಟಿಕ್ಕರ್‌ ರೂಪದಲ್ಲಿ ಸೆಂಡ್‌ ಮಾಡಬಹುದಾಗಿದೆ. ನಿಮ್ಮದೇ ಇಮೇಜ್‌ ಅನ್ನು ಸ್ಟಿಕ್ಕರ್‌ ರೂಪದಲ್ಲಿ ಕಳುಹಿಸಲು ಇನ್ಮುಂದೆ ಯಾವುದೇ ರೀತಿಯ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಅಗತ್ಯವಿಲ್ಲ ಎನ್ನಲಾಗಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಟಿಕ್ಕರ್‌

ವಾಟ್ಸಾಪ್‌ನಲ್ಲಿ ಸ್ಟಿಕ್ಕರ್‌ ಮೆಸೇಜ್‌ ಸೆಂಡ್‌ ಮಾಡುವುದು ಒಂದು ಟ್ರೆಂಡ್‌ ಆಗಿದೆ. ಅದರಲ್ಲೂ ಹಬ್ಬ ಹರಿದಿನ, ವಿಶೇಷ ದಿನಗಳಲ್ಲಿ ಹಲವು ರೀತಿಯ ಸ್ಟಿಕ್ಕರ್‌ಗಳ ಮೂಲಕವೇ ವಿಶ್‌ ಮಾಡೋದು ಸಾಮಾನ್ಯ ಎನಿಸಿದೆ. ಆದರೆ ಇನ್ಮುಂದೆ ನೀವು ನಿಮ್ಮದೇ ಫೋಟೋಗಳನ್ನ ಸ್ಟಿಕ್ಕರ್‌ ರೂಪದಲ್ಲಿ ಸೆಂಡ್‌ ಮಾಡುವ ಅವಕಾಶ ಸಿಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ನಲ್ಲಿ ಹೊಸ ಚಿತ್ರವನ್ನು ಅಪ್‌ಲೋಡ್ ಮಾಡಿದಾಗ ಕ್ಯಾಪ್ಶನ್‌ ಪಟ್ಟಿಯ ಪಕ್ಕದಲ್ಲಿ ಹೊಸ ಸ್ಟಿಕ್ಕರ್ ಐಕಾನ್ ಅನ್ನು ಬಳಕೆದಾರರು ಗಮನಿಸುತ್ತಾರೆ. ನೀವು ಆ ಐಕಾನ್ ಅನ್ನು ಆಯ್ಕೆ ಮಾಡಿದಾಗ, ವಾಟ್ಸಾಪ್ ಚಿತ್ರವನ್ನು ಸ್ಟಿಕ್ಕರ್ ಆಗಿ ಕಳುಹಿಸುತ್ತದೆ ಎಂದು ಹೇಳಲಾಗಿದೆ.

ಫೀಚರ್ಸ್‌

ಇನ್ನು ಈ ಹೊಸ ಫೀಚರ್ಸ್‌ ನಲ್ಲಿ ಬಳಕೆದಾರರು ತಾವು ಕಳುಹಿಸಿದ ಚಿತ್ರವು ಸ್ಟಿಕರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಕೂಡ ಅವಕಾಶ ಇರಲಿದೆ. ಸದ್ಯ ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ವಾಟ್ಸಾಪ್‌ನ ಡೆಸ್ಕ್‌ಟಾಪ್ ಆವೃತ್ತಿಯ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಪ್ರಸ್ತುತ, ಈ ವೈಶಿಷ್ಟ್ಯವು 2.2137.3 ಡೆಸ್ಕ್‌ಟಾಪ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈ ಫೀಚರ್ಸ್‌ ಬಳಕೆಗೆ ಬಂದರೆ ಯಾವುದೇ ಥರ್ಡ್-ಪಾರ್ಟಿ ಆಪ್ ಬಳಸದೆ, ನಿಮ್ಮ ಫೋಟೋಗಳನ್ನು ನೀವೇ ಸ್ಟಿಕ್ಕರ್ ಆಗಿ ಕನ್ವರ್ಟ್‌ ಮಾಡಬಹುದಾಗಿದೆ.

ವಾಟ್ಸಾಪ್

ಇದಲ್ಲದೆ, ಕಳೆದ ತಿಂಗಳು ವಾಟ್ಸಾಪ್ ಡೆಸ್ಕ್‌ಟಾಪ್‌ಗಾಗಿ ಬೀಟಾ ಪ್ರೋಗ್ರಾಂ ಅನ್ನು ಪ್ರಾರಂಭಿಸಿತು, ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸಲು ಅವಕಾಶ ಮಾಡಿಕೊಟ್ಟಿತು. ಬೀಟಾ ಆವೃತ್ತಿಯನ್ನು ವಿಂಡೋಸ್ ಮತ್ತು ಮ್ಯಾಕೋಸ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಇನ್ನು ಇತ್ತೀಚಿಗೆ ವಾಟ್ಸಾಪ್‌ ಹೊಸದಾಗಿ ಚಾಟ್‌ ಬ್ಯಾಕಪ್‌ಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ ಅನ್ನು ಪರಿಚಯಿಸಿದೆ. ಇದು ಯಾವುದೇ ಮೂರನೇ ವ್ಯಕ್ತಿ ಚಾಟ್‌ ಬ್ಯಾಕಪ್‌ ಅನ್ನು ನೋಡುವುದಕ್ಕೆ ಸಾಧ್ಯವಿಲ್ಲದಂತೆ ಮಾಡಲಿದೆ. ಇಲ್ಲಿಯವರೆಗೆ, ಚಾಟ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ, ಇದೇ ಕಾರಣಕ್ಕೆ ಚಾಟ್‌ ಬ್ಯಾಕಪ್‌ ಬೇರೆಯವರ ಕೈಗೆ ಸಿಗುವುದು ಸುಲಭವಾಗಿತ್ತು. ಇದೀಗ ಚಾಟ್‌ ಬ್ಯಾಕಪ್‌ ಕೂಡ ಎನ್‌ಕ್ರಿಪ್ಶನ್‌ ಸೇರಿಸಿರುವುದರಿಂದ ಚಾಟ್‌ಬ್ಯಾಕಪ್‌ ಕೂಡ ಸೆಕ್ಯುರ್‌ ಆಗಿರಲಿದೆ.

ಎನ್‌ಕ್ರಿಪ್ಶನ್

ಇನ್ನು ಈ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಮುಂಬರುವ ವಾರಗಳಲ್ಲಿ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಆಯ್ಕೆಯ ಫೀಚರ್ಸ್‌ ಆಗಿ ಲಾಂಚ್‌ ಮಾಡಲಾಗುತ್ತದೆ. ಇದನ್ನು ಯಾವುದೇ ರೀತಿಯ ಪೂರ್ವನಿಯೋಜಿತವಾಗಿ ಆನ್ ಮಾಡಿರುವುದಿಲ್ಲ ಬದಲಿಗೆ ಬಳಕೆದಾರರು ತಮಗೆ ಇಚ್ಛಯಿದ್ದರೆ ಮಾತ್ರ ಆಯ್ಕೆ ಮಾಡಬಹುದಾಗಿದೆ. ಇನ್ನು ವಾಟ್ಸಾಪ್ ಬಳಕೆದಾರರು ಚಾಟ್‌ಬ್ಯಾಕಪ್‌ಗೆ ಎನ್‌ಕ್ರಿಪ್ಶನ್‌ ಮಾಡುವುದಕ್ಕೆ ಪಾಸ್‌ವರ್ಡ್ ಕ್ರಿಯೆಟ್‌ ಮಾಡಬೇಕಾಗುತ್ತದೆ. ಒಂದು ವೇಳೆ ಬಳಕೆದಾರರು ಪಾಸ್‌ವರ್ಡ್ ಅನ್ನು ಮರೆತಿದ್ದರೆ, ಖಾತೆಯನ್ನು ಮತ್ತೆ ಪಡೆಯುವುದಕ್ಕೆ ವಾಟ್ಸಾಪ್‌ ಸಹಾಯ ಮಾಡುವುದಿಲ್ಲ ಅನ್ನುವುದನ್ನು ಕೂಡ ಗಮನಿಸಬೇಕಾಗುತ್ತದೆ.

Most Read Articles
Best Mobiles in India

English summary
Whatsapp is working on adding new features to the desktop version.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X