ವಾಟ್ಸ್ಆಪ್‌ನಲ್ಲಿ ಬರುತ್ತಿದೆ ತಲೆತಿರುಗಿಸುವ ವಿನೂತನ ಫೀಚರ್!

|

ಬಳಕೆದಾರರಿಗೆ ಯಾವಾಗಲೂ ಹೊಸತನ್ನು ಪರಿಚಯಿಸುವಲ್ಲಿ ಜನಪ್ರಿಯ ಮೇಸೆಜಿಂಗ್ ಆಪ್ ವಾಟ್ಸ್ಆಪ್ ಎಂದೂ ಹಿಂದೆಬೀಳುವುದಿಲ್ಲ. ಇದೀಗ ಇಂತಹುದೇ ಹೊಸದೊಂದು ಫೀಚರ್ ಅನ್ನು ವಾಟ್ಸ್ಆಪ್ ಸಂಸ್ಥೆ ಪರಿಚಯಿಸುತ್ತಿದೆ. ತನ್ನ ಬಳಕೆದಾರರಿಗೆ ಹೊಸ ವಿನೂತನ ಫೀಚರ್ವೊಂದನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ವಾಟ್ಸ್ಆಪ್ ತಿಳಿಸಿದ್ದು, ಈ ಫೀಚರ್ ವಾಟ್ಸ್ಆಪ್ ಸಂದೇಶಗಳನ್ನು ಡಿಲೀಟ್ ಮಾಡಬೇಕೆಂಬ ಕಿರಿಕಿರಿಗೆ ಬ್ರೇಕ್ ಹಾಕಲಿದೆ.! ಇದು ಪ್ರಸ್ತುತ ಇರುವ ಡಿಲೀಟ್ ಫೀಚರ್ ಅನ್ನೇ ಸಾಕಷ್ಟು ಬದಲಾಯಿಸುವ ಹೊಸ ಅಪ್‌ಡೇಟ್ ಆಗಿರಲಿದೆ.

ಡಿಲೀಟ್ ಫೀಚರ್

ಪ್ರಸ್ತುತ ಇರುವ ಡಿಲೀಟ್ ಫೀಚರ್ ಸಹಾಯದಿಂದ ನೀವು ಕಳುಹಿಸಿದ ವಾಟ್ಸ್ಆಪ್ ಸಂದೇಶಗಳನ್ನು ಕೆಲ ಸಮಯದ ಒಳಗಾಗಿ ಡಿಲೀಟ್ ಮಾಡಬಹುದು. ಇದೀಗ ಬರಲಿರುವ ಅಪ್‌ಡೇಟ್ ಸಹಾಯದಿಂದ ಸಂದೇಶ ಕಳುಹಿಸುವ ಬಳಕೆದಾರರು ಎಷ್ಟು ಸಮಯ ಮೆಸೇಜ್ ಇರಬೇಕೆಂದು ನಿರ್ಧರಿಸುವ ಆಯ್ಕೆಯೂ ಇರಲಿದೆ. ಅಂದರೆ, ವಾಟ್ಸ್ಆಪ್ ಬಳಕೆದಾರರು 1 ಗಂಟೆ, 1 ದಿನ, 1 ವಾರ, 1 ತಿಂಗಳು ಅಥವಾ 1 ವರ್ಷ ಎಂಬಂತೆ ನಿಗದಿತ ಸಮಯವನ್ನು ಆಯ್ಕೆ ಮಾಡುವ ಮೂಲಕ ಸಂದೇಶಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗುವಂತೆ ಮಾಡಬಹುದಾಗಿದೆ.

ಫೀಚರ್

ಈ ಫೀಚರ್ ವೈಯಕ್ತಿಕವಾಗಿಯೂ ಹಾಗೂ ಗ್ರೂಪ್ ಚಾಟ್‌ನಲ್ಲಿ ಲಭ್ಯವಿರಲಿದೆ. ಆರಂಭದಲ್ಲಿ ಗ್ರೂಪ್ ಚಾಟ್ ಗಳಿಗೆ ಮಾತ್ರ ಲಭ್ಯವಿರಲಿರುವ ಈ ಆಯ್ಕೆಯನ್ನು ಗ್ರೂಪ್ ನ ಆಡ್ಮಿನ್ ಮಾತ್ರ ಸಕ್ರಿಯಗೊಳಿಸಬಹುದು ಎಂದು ಹೇಳಲಾಗಿದೆ. ಈ ಫೀಚರ್ ಅನ್ನು ಸಕ್ರಿಯಗೊಳಿಸಿದ ನಂತರ, ಸಂಪರ್ಕ ಮಾಹಿತಿ (ಕಂಟ್ಯಾಕ್ಟ್ ಇನ್ಫೋ) ಅಥವಾ ಗ್ರೂಪ್ ಸೆಟ್ಟಿಂಗ್ ಅಲ್ಲಿ ಫೀಚರ್ ಅನ್ನು ಟಾಗಲ್ ಆನ್ ಮಾಡಬಹುದು ಎಂದು ತಿಳಿದುಬಂದಿದೆ. ಆದರೆ, ಈ ಫೀಚರ್ ವೈಯಕ್ತಿಕವಾಗಿ ಬಳಕೆಗೆ ಬರುವುದು ಯಾವಾಗ ಎಂಬುದರ ಮಾಹಿತಿ ಮಾತ್ರ ಈವರೆಗೂ ಸಿಕ್ಕಿಲ್ಲ.

ವಿನೂತನ ಫೀಚರ್

ಇನ್ನು ನೀವು ಈಗಲೇ ಈ ವಿನೂತನ ಫೀಚರ್ ಅನ್ನು ಬಳಸುವಂತಹ ಆಯ್ಕೆ ಕೂಡ ಇದೆ.! ಆಂಡ್ರಾಯ್ಡ್ ಬೀಟಾ ವರ್ಷನ್‌ನಲ್ಲಿ ಈ ಫೀಚರ್ ಅನ್ನು ಈಗಾಗಲೇ ಪರಿಚಯಿಸಲಾಗಿದ್ದು, ಡೀಸ್ಅಫಿಯರ್ ಮೇಸೆಜ್ ಎಂಬ ಹೆಸರಿನಲ್ಲಿ ಆಂಡ್ರಾಯ್ಡ್ 2.19.348ರ ಬೇಟಾ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಹಾಗಾಗಿ, ಗೂಗಲ್ ಪ್ಲೇಬೀಟಾ ಫ್ರೋ ಗ್ರಾಂಗೆ ಬಳಕೆದಾರರು ಮಾತ್ರ ಹೊಸ ಆವೃತ್ತಿಯನ್ನು ಡೌನ್ ಲೋಡ್ ಮಾಡಬಹುದಾಗಿದ್ದು, ಎಪಿಕೆ ಮಿರರ್ ಪ್ಲಾಟ್‌ಫಾರ್ಮ್ ಅಲ್ಲಿ ಲಭ್ಯವಿರುವ ಎಪಿಕೆ ಆಪ್‌ ಯಿಂದ ಕೂಡ ಆಪ್‌ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ವಾಟ್ಸ್ಆಪ್

ಇತ್ತೀಚಿಗೆ ವಾಟ್ಸ್ಆಪ್ ಮೇಲೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಕಳೆದ ತಿಂಗಳು 20 ಭಾರತೀಯ ವಾಟ್ಸ್ಆಪ್ ಬಳಕೆದಾರರ ಮಾಹಿತಿ ಕದಿಯುವಲ್ಲಿ ಹ್ಯಾಕರ್ಸ್ ಯಶಸ್ಸು ಸಾಧಿಸಿದ್ದಾರೆ. ಆದರೆ, ಬಳಕೆದಾರರ ಯಾವೆಲ್ಲಾ ಮಾಹಿತಿಗಳನ್ನು ಕದ್ದಿರಬಹುದು ಅಥವಾ ಹಾನಿಯಾಗಿರಬಹುದು ಎನ್ನುವುದನ್ನು ನಿರ್ಧರಿಸುವುದು ಅಥವಾ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ ಎಂದು ವಾಟ್ಸ್ಆಪ್ ತಿಳಿಸಿದೆ. ಈ ಮೂಲಕ ನಮ್ಮದು ಎಂಡ್‌-ಟು-ಎಂಡ್ ಎನ್ ಕ್ರಿಪ್ಟೆಡ್ ವ್ಯವಸ್ಥೆ, ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ಕೊಟ್ಟಿದ್ದೇವೆ ಎಂದೆಲ್ಲಾ ಬೀಗುತ್ತಿದ್ದ ವಾಟ್ಸ್ಆಪ್ ಬೆತ್ತಲಾಗಿದೆ.

Most Read Articles
Best Mobiles in India

English summary
In the WhatsApp beta for Android 2.19.282 update, we presented a new feature called ‘Disappearing Messages’ that will automatically delete messages after a certain time. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X