ವಾಟ್ಸ್ಆಪ್‌ನಲ್ಲೇ ವಿಡಿಯೋ ರಚಿಸಲು ಬರುತ್ತಿದೆ ಹೊಸ ಫೀಚರ್!

|

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆಪ್ ಮತ್ತೊಂದು ವಿನೂತನ ವೈಶಿಷ್ಟ್ಯವೊಂದನ್ನು ತರಲು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಇನ್‌ಸ್ಟಾಗ್ರಾಮ್‌ನಂತೆಯೇ ಬಳಕೆದಾರರಿಗೆ ವೀಡಿಯೊ ಲೂಪ್‌ಗಳನ್ನು ರಚಿಸಲು ಅನುವು ಮಾಡಿಕೊವಂತಹ ಬೂಮರಂಗ್ ಆಯ್ಕೆಯನ್ನು ವಾಟ್ಸ್ಆಪ್ ತರಲಿದೆ. ಪ್ರಸ್ತುತ ಐಒಎಸ್ ಬೀಟಾ ಬಳಕೆದಾರರಿಗೆ ಹೊಸ ಫೀಚರ್ ಲಭ್ಯವಾಗಿದ್ದು, ಪರಿಶೀಲನಾ ಹಂತದಲ್ಲಿರುವ ಈ ಪೀಚರ್ ಆಂಡ್ರಾಯ್ಡ್ ಬಳಕೆದಾರರಿಗೂ ಶೀಘ್ರವೆ ಲಭ್ಯವಾಗಲಿದೆ .

ವಾಟ್ಸ್ಆಪ್‌ನಲ್ಲೇ ವಿಡಿಯೋ ರಚಿಸಲು ಬರುತ್ತಿದೆ ಹೊಸ ಫೀಚರ್!

ಹೌದು, ಬೂಮರಾಂಗ್ ವೈಶಿಷ್ಟ್ಯವು ಈಗ ಅದರ ಅಭಿವೃದ್ಧಿ ಹಂತದಲ್ಲಿದ್ದು, ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊ ಲೂಪಿಂಗ್ ವೈಶಿಷ್ಟ್ಯವು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು WABetaInfo ವರದಿಯಲ್ಲಿ ತಿಳಿಸಲಾಗಿದೆ. ಬೂಮರಂಗ್ ಮೂಲಕ ಏಳು ಸೆಕೆಂಡ್‌ವರೆಗಿನ ವಿಡಿಯೋ ರಚಿಸಲು ಇದರಿಂದ ಸಾಧ್ಯವಾಗುತ್ತದೆ. ರಚಿಸಲಾದ ವೀಡಿಯೊ ಲೂಪ್‌ಗಳನ್ನು ವಾಟ್ಸ್ಆಪ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು ಅಥವಾ ಸ್ಟೇಟಸ್ ಆಗಿ ಇರಿಸಬಹುದು ಎಂದು ವರದಿ ಹೇಳಿದೆ.

WABetaInfoನ ವರದಿಯಲ್ಲಿ, ವಾಟ್ಸಾಪ್ಗಾಗಿ ಬೂಮರಾಂಗ್ ವೈಶಿಷ್ಟ್ಯವು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ. ಬೀಟಾ ಪ್ರೋಗ್ರಾಂನಲ್ಲಿರುವ ವಾಟ್ಸಾಪ್ ಬಳಕೆದಾರರು ವೀಡಿಯೊ ಪ್ಯಾನೆಲ್ ಮೂಲಕ ಬೂಮರಾಂಗ್ ವೈಶಿಷ್ಟ್ಯವನ್ನು ಸ್ವೀಕರಿಸುತ್ತಾರೆ. ಇದು ಈಗಿನಂತೆ ವೀಡಿಯೊಗಳನ್ನು ಜಿಐಎಫ್ ಫೈಲ್‌ಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಪಡೆಯುತ್ತದೆ. ಇದು ಬಳಕೆದಾರರಿಗೆ ಹಲವಾರು ಲೂಪಿಂಗ್ ವೀಡಿಯೊಗಳನ್ನು ರಚಿಸಲು ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದೆ.

ವಾಟ್ಸ್ಆಪ್‌ನಲ್ಲೇ ವಿಡಿಯೋ ರಚಿಸಲು ಬರುತ್ತಿದೆ ಹೊಸ ಫೀಚರ್!

ಈ ಬೂಮರಾಂಗ್ ವೈಶಿಷ್ಟ್ಯವನ್ನು ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನೊಂದಿಗೆ ಪ್ರಾರಂಭಿಸಲಾಯಿತು. ಇದು ಬಳಕೆದಾರರಿಗೆ ಹಲವಾರು ಲೂಪಿಂಗ್ ವೀಡಿಯೊಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟಿತು. ಬೂಮರಾಂಗ್ ಅಪ್ಲಿಕೇಶನ್ ಅನ್ನು ಟ್ವಿಟ್ಟರ್ನಿಂದ ವ್ಯಾಪಕವಾಗಿ ಜನಪ್ರಿಯವಾದ ವೈನ್ಗೆ ಪ್ರತಿಸ್ಪರ್ಧಿಯಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಆರು ಸೆಕೆಂಡುಗಳ ವೀಡಿಯೊ ಲೂಪ್ಗಳ ವೈಶಿಷ್ಟ್ಯವನ್ನು ಸಹ ಒದಗಿಸುತ್ತಿತ್ತು ಎಂದು ಮಾಧ್ಯಮ ವರದಿಗಳು ಹೇಳಿದೆ.

43 ಇಂಚಿನ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಪರಿಚಯಿಸಲಿದೆ ಒನ್‌ಪ್ಲಸ್!43 ಇಂಚಿನ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಪರಿಚಯಿಸಲಿದೆ ಒನ್‌ಪ್ಲಸ್!

ಇನ್ನು ಇತ್ತೀಚಿಷ್ಟೇ ಅತ್ಯಧಿಕ ಬಾರಿ ಫಾರ್ವಡ್ ಮಾಡಲಾದ ಮೆಸೇಜ್ ಎಂಬ ಸೂಚನೆ ನೀಡುವ ಅಯ್ಕೆಯನ್ನು ವಾಟ್ಸ್ಆಪ್ ಪರಿಚಯಿಸಿದೆ. ವಾಟ್ಸ್ಆಪ್‌ನಲ್ಲಿ ಫಾರ್ವರ್ಡ್ ಮಾಡಿದ ಸಂದೇಶದ ಲೇಬಲ್‌ಗೆ ನವೀಕರಣವನ್ನು ನೀಡುತ್ತದೆ. ಯಾವುದೋ ಒಂದು ಮೆಸೇಜ್ ಐದು ಬಾರಿ ಫಾರ್ವರ್ಡ್​​ ಆಗಿದ್ದರೆ, ಅಂತಹ ಮೆಸೇಜ್ ಮೇಲೆ 'ಫಾರ್ವರ್ಡ್ ಮಾಡಲಾದ' ​ ಎಂಬ ಸಂದೆಶವಿರುತ್ತದೆ. ಅಷ್ಟೇ ಅಲ್ಲದೇ. ಇಷ್ಟಾದರೂ ನೀವು ಆ ಮೆಸೇಜ್ ಅನ್ನು ಪಡೆಯುವ ಮುನ್ನ ನೋಟಿಸ್ ಒಂದು ಬರಲಿದೆ.

Best Mobiles in India

English summary
WhatsApp to soon get Instagram's boomerang feature; will let users create loop videos. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X