ಶೀಘ್ರದಲ್ಲೇ ನಾಲ್ಕು ಡಿವೈಸ್‌ ಲಾಗಿನ್ ಬೆಂಬಲಿಸುವ ವಾಟ್ಸಾಪ್ ಫೀಚರ್ಸ್‌ ಬಿಡುಗಡೆ!

|

ವಿಶ್ವದ ಜನಪ್ರಿಯ ಮೆಸೇಜಿಂಗ್ ಆಪ್‌ಗಳಲ್ಲಿ ಒಂದಾಗಿರುವ ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಆಪ್‌ ಆಗಿದೆ. ಬಳಕೆದಾರರಿಗೆ ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಸದ್ಯ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಒಂದೇ ಅನೇಕ ಡಿವೈಸ್‌ಗಳಿಗೆ ಬೆಂಬಲ ನೀಡುವ ಫೀಚರ್ಸ್‌ ಪರಿಚಯಿಸುವತ್ತ ಹೆಜ್ಜೆ ಹಾಕಿದೆ. ಅಲ್ಲದೆ ವಾಟ್ಸಾಪ್‌ ಮೆಸೇಜಿಂಗ್ ಅಪ್ಲಿಕೇಶನ್ ವಿಭಿನ್ನ ಫೈಲ್ ಪ್ರಕಾರಗಳೊಂದಿಗೆ ಸುಧಾರಿತ ಸರ್ಚ್‌ ಫೀಚರ್ಸ್‌ ಅನ್ನು ಪರಿಚಯಿಸುವತ್ತ ಪ್ಲ್ಯಾನ್‌ ರೂಪಿಸಿಕೊಂಡಿದೆ. ಇನ್ನು ಈ ಎರಡು ಫೀಚರ್ಸ್‌ಗಳು ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಬೀಟಾ ಅಪ್‌ಡೇಟ್ ನಲ್ಲಿ ಬಿಡುಗಡೆಯಾಗಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ಈಗ ಹಲವು ತಿಂಗಳುಗಳಿಂದ ಅನೇಕ ಡಿವೈಸ್‌ಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಫೀಚರ್ಸ್‌ ಪರಿಚಯಿಸಲು ಪ್ಲ್ಯಾನ್‌ ರೂಪಸಿಕೊಂಡಿರುವುದು ನಿಮಗೆಲ್ಲಾ ತಿಳಿದೆ ಇದೆ. ಈ ಫೀಚರ್ಸ್‌ ಒಂದೇ ಸಮಯದಲ್ಲಿ ವಿವಿಧ ಸಾಧನಗಳಲ್ಲಿ ಒಂದೇ ವಾಟ್ಸಾಪ್ ಖಾತೆಯನ್ನು ಬಳಸಲು ಬಳಕೆದಾರರಿಗೆ ಅವಕಾಶ ನೀಡಿದೆ. ಪ್ರಸ್ತುತ, ವಾಟ್ಸಾಪ್ ಅನ್ನು ಒಂದು ಸಾಧನದಲ್ಲಿ ಮಾತ್ರ ಬಳಸಬಹುದು. ಅಲ್ಲದೆ ವಾಟ್ಸಾಪ್‌ ವೆಬ್‌ ಮೂಲಕ ಮತ್ತೊಂದು ಡಿವೈಸ್‌ನಲ್ಲಿ ಕಾರ್ಯನಿರ್ವಹಿಸಬಹುದು. ಆದರೆ ಇತ್ತೀಚಿನ ಬೀಟಾ ಅಪ್‌ಡೇಟ್‌ನಲ್ಲಿ ವಾಟ್ಸಾಪ್‌ ‘ಲಿಂಕ್ಡ್ ಡಿವೈಸಸ್' ಫೀಚರ್ಸ್‌ ಅನ್ನು ಪರಿಚಯಿಸಲಾಗಿದೆ. ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ಪ್ರಸ್ತುತ ಏಕಕಾಲದಲ್ಲಿ ಒಂದೇ ನಂಬರ್‌ನ ವಾಟ್ಸಾಪ್‌ ನಾಲ್ಕು ಡಿವೈಸ್‌ಗಳಿಗೆ ಬೆಂಬಲಿಸುವ ಫೀಚರ್ಸ್‌ ಅನ್ನು ಪರಿಕ್ಷೀಸುತ್ತಿದೆ. ಲಭ್ಯ ಮಾಹಿತಿಯ ಪ್ರಕಾರ ಈ ಫೀಚರ್ಸ್‌ ಅನ್ನು ಪರಿಚಯಿಸದ ನಂತರ ನಿಮ್ಮ ವಾಟ್ಸಾಪ್‌ ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಲಿಂಕ್ ಮಾಡಲಾದ ಡಿವೈಸ್‌ಗಳ ಮಾಹಿತಿ ಲಭ್ಯವಿರುತ್ತವೆ. ಇಲ್ಲಿ, ಬಳಕೆದಾರರು ತಮ್ಮ ವಾಟ್ಸಾಪ್ ಖಾತೆ ಯಾವ ಯಾವ ಡಿವೈಸ್‌ಗಳಲ್ಲಿ ಸಕ್ರಿಯವಾಗಿದೆ ಎಂಬುದನ್ನು ನೋಡಲು ಸಾಧ್ಯವಾಗುತ್ತದೆ. ಬಳಕೆದಾರರು ಇಲ್ಲಿಂದಲೇ ಹೊಸ ಡಿವೈಸ್‌ಗಳಿಗೆ ವಾಟ್ಸಾಪ್‌ ಅನ್ನು ಲಿಂಕ್ ಮಾಡಬಹುದು.

ಫೀಚರ್ಸ್

ಇನ್ನು ಈ ಹೊಸ ಫೀಚರ್ಸ್ ಲಭ್ಯವಾದರೆ ಏಕಕಾಲದಲ್ಲಿ ನೀವು ನಾಲ್ಕು ಡಿವೈಸ್‌ಗಳಲ್ಲಿ ವಾಟ್ಸಾಪ್‌ ಉಪಯೋಗಿಸಲು ಸುಲಭವಾಗಲಿದೆ. ಇದರಿಂದ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಲಿದೆ. ಇದಲ್ಲದೆ ಇಂಟರ್ಫೇಸ್ ಅಪ್ಲಿಕೇಶನ್‌ನಲ್ಲಿನ ವಾಟ್ಸಾಪ್ ವೆಬ್ ಡಿವೈಸ್‌ ಅನ್ನು ಈ ಫೀಚರ್ಸ್‌ ಹೋಲುತ್ತದೆ. ಅಲ್ಲದೆ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಫೀಚರ್ಸ್‌ ಅಂದರೆ ಅದು ‘advanced search'. ಹೆಸರೇ ಸೂಚಿಸುವಂತೆ, ಈ ಫೀಚರ್ಸ್‌ ವಾಟ್ಸಾಪ್‌ನಲ್ಲಿನ ಸರ್ಚಿಂಗ್‌ ಡಿವೈಸ್‌ ಅನ್ನು ಸುದಾರಣೆ ಮಾಡಲಿದೆ.

ವಾಟ್ಸಾಪ್‌

ಪ್ರಸ್ತುತ ವಾಟ್ಸಾಪ್‌ ಬಳಕೆದಾರರು ಸರ್ಚ್‌ ಬಾರ್‌ನಲ್ಲಿ ಟ್ಯಾಪ್ ಮಾಡಿದಾಗ, ಆಯ್ಕೆ ಮಾಡಲು ವಿಭಿನ್ನ ವರ್ಗಗಳಿವೆ. ಇವುಗಳಲ್ಲಿ ಫೋಟೋಗಳು, ವೀಡಿಯೊಗಳು, ಲಿಂಕ್‌ಗಳು, ಜಿಐಎಫ್‌ಗಳು, ಆಡಿಯೋ ಮತ್ತು ಡಾಕ್ಯುಮೆಂಟ್‌ಗಳು ಸೇರಿವೆ. ಅಲ್ಲದೆ ನೀವು ಸಾಕಷ್ಟು ಡೇಟಾವನ್ನು ಹೊಂದಿದ್ದರೆ ವಾಟ್ಸಾಪ್ನಲ್ಲಿ ಇನ್ನು ವಿಭಿನ್ನ ವಿಷಯಗಳನ್ನು ಹುಡುಕಲು ಇದು ಸುಲಭಗೊಳಿಸುತ್ತದೆ. ಸದ್ಯ ಈ ಎರಡುಫೀಚರ್ಸ್‌ಗಳು ಪ್ರಸ್ತುತ ಅಭಿವೃದ್ಧಿಯಲ್ಲಿವೆ. ವಾಟ್ಸಾಪ್ ಶೀಘ್ರದಲ್ಲೇ ಈ ಫೀಚರ್ಸ್‌ಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.

Best Mobiles in India

English summary
WhatsApp's multiple devices support gains new features in the latest beta update for Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X