ಬಿಗ್ ಶಾಕ್: ಆಕ್ಟೋಬರ್‌ನಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ತನ್ನ ಬಳಕೆದಾರರ ಅನುಭವ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸುವುದಕ್ಕಾಗಿ ಹೊಸ ಸೆಕ್ಯುರಿಟಿ ಸಲ್ಯೂಶನ್‌ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದೆ. ಅದರಂತೆ ಕೆಲವು ಫೋನ್‌ಗಳಲ್ಲಿ ವಾಟ್ಸಾಪ್ ಬಳಕೆಯನ್ನು ಸ್ಟಾಪ್ ಮಾಡಲು ಮುಂದಾಗಿದೆ.
ಹೌದು, ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗಿದೆ. ಗೌಪ್ಯತೆ ಮತ್ತು ಸುರಕ್ಷತೆಯ ಕಾರಣದಿಂದಾಗಿ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಬಳಕೆ ಸ್ಟಾಪ್ ಮಾಡಲು ಮುಂದಾಗಿದೆ. ಈ ಕ್ರಮವು ಇದೇ ಅಕ್ಟೋಬರ್ 24ರಿಂದ ಜಾರಿಗೆ ಬರಲಿದೆ ಎಂದು ವಾಟ್ಸಾಪ್ ಹೇಳಿದೆ. ಹಾಗಾದ್ರೆ ವಾಟ್ಸಾಪ್ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಬಳಕೆಯನ್ನು ಸ್ಟಾಪ್ ಮಾಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುವ ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಬಳಕೆಯನ್ನು ಸ್ಟಾಪ್ ಮಾಡಲು ಮುಂದಾಗಿದೆ. ಅದರಂತೆ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಬೆಂಬಲವನ್ನು ಕೊನೆಗೊಳಿಸುವುದಕ್ಕೆ ಮುಂದಾಗಿದೆ. ಅಲ್ಲದೆ ಈ ಡಿವೈಸ್‌ಗಳನ್ನು ಇತ್ತೀಚಿನ ಯಾವುದೇ ಸೆಕ್ಯುರಿಟಿ ಅಪ್ಡೇಟ್‌ಗಳನ್ನು ಹೊಂದಿಲ್ಲದಿರುವುದರಿಂದ ನಾವು ನಮ್ಮ ಬಳಕೆಯನ್ನು ನಿಲ್ಲಿಸಲಿದ್ದೇವೆ ಎಂದು WhatsApp FAQ ನಲ್ಲಿ ಅಧಿಕೃತ ಟಿಪ್ಪಣಿಯಲ್ಲಿ ಹೇಳಿದೆ.
ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಬಳಕೆ ಸ್ಟಾಪ್ ಆಗಲಿದೆ
ನೆಕ್ಸಸ್ 7 (ಆಂಡ್ರಾಯ್ಡ್ 4.2 ಗೆ ಅಪ್‌ಗ್ರೇಡ್ ಮಾಡಬಹುದು)
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 2
HTC one
ಸೋನಿ ಎಕ್ಸ್‌ಪೀರಿಯಾ Z
ಎಲ್ಜಿ ಆಪ್ಟಿಮಸ್ ಜಿ ಪ್ರೊ
ಸ್ಯಾಮ್‌ಸಂಗ್ ಗ್ಯಾಲಕ್ಸಿ S2
ಸ್ಯಾಮ್‌ಸಂಗ್ ಗ್ಯಾಲಕ್ಸಿ Nexus
HTC ಸೆನ್ಸೇಶನ್
ಮೊಟೊರೊಲಾ ಡ್ರಾಯ್ಡ್ ರೇಜರ್
ಸೋನಿ ಎಕ್ಸ್‌ಪೀರಿಯಾ S2
ಮೊಟೊರೊಲಾ Xoom
ಸ್ಯಾಮ್‌ಸಂಗ್ ಗ್ಯಾಲಕ್ಸಿ Tab 10.1
Asus Eee ಪ್ಯಾಡ್ ಟ್ರಾನ್ಸ್ಫಾರ್ಮರ್
ಏಸರ್ ಐಕೋನಿಯಾ ಟ್ಯಾಬ್ A5003
ಸ್ಯಾಮ್‌ಸಂಗ್ ಗ್ಯಾಲಕ್ಸಿ S
HTC ಡಿಸೈರ್ HD
LG Optimus 2X
ಸೋನಿ ಎರಿಕ್ಷನ್ ಎಕ್ಸ್‌ಪಿರೀಯಾ Arc3
ಈ ಮೇಲ್ಕಂಡ ಲಿಸ್ಟ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇನ್ನು ಹೆಚ್ಚಿನ ಹಳೆಯ ಫೋನ್‌ಗಳಲ್ಲಿ ವಾಟ್ಸಾಪ್ ಸ್ಟಾಪ್ ಆಗಲಿದೆ. ಒಂದು ವೇಳೆ ನೀವು ಈ ಸ್ಮಾರ್ಟ್‌ಫೋನ್‌ಗಳನ್ನು ಬಳಕೆ ಮಾಡುತ್ತಿದ್ದರೆ ಕೂಡಲೇ ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗುವುದು ಸೂಕ್ತವಾಗಿದೆ. ಏಕೆಂದರೆ ವಾಟ್ಸಾಪ್ ಮಾತ್ರವಲ್ಲದೆ ಇತರ ಹಲವು ಆ್ಯಪ್‌ಗಳು ಕೂಡ ಹಳೆಯ ಆಪರೇಟಿಂಗ್ ಸಿಸ್ಟಂ ಬಳಕೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ತಮ್ಮ ಬೆಂಬಲವನ್ನು ಸ್ಟಾಪ್ ಮಾಡಲು ಮುಂದಾಗಿವೆ.
ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಯಾವ ಆಂಡ್ರಾಯ್ಡ್ ವರ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಅನ್ನೊದು ನಿಮಗೆ ತಿಳಿಯದಿದ್ದರೆ ನಿಮ್ಮ ಮೊಬೈಲ್ ಸೆಟ್ಟಿಂಗ್ಸ್‌ನಲ್ಲಿ ಚೆಕ್ ಮಾಡಿಕೊಳ್ಳುವುದು ಉತ್ತಮವಾಗಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್ಸ್ > ಆಬೌಟ್ ಫೋನ್ > ಸಾಫ್ಟ್‌ವೇರ್ ಮಾಹಿತಿಗೆ ಹೋಗಿ ಇದರಲ್ಲಿ ನಿಮ್ಮ ಮೊಬೈಲ್‌ನ ಆಂಡ್ರಾಯ್ಡ್ ಆವೃತ್ತಿಯನ್ನು ತಿಳಿಯುವುದಕ್ಕೆ ನಿಮಗೆ ಸಾದ್ಯವಾಗಲಿದೆ.
ಅಕ್ಟೋಬರ್ 24 ರ ನಂತರ ಏನಾಗುತ್ತದೆ?
ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟ್ಸಾಪ್ ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಮುಂಚಿತವಾಗಿ ಮಾಹಿತಿಯನ್ನು ತಿಳಿಸುತ್ತದೆ. ನೀವು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಟ್ ಆಗಿ ಎಂದು ಹಲವು ಬಾರಿ ನೆನಪಿಸಲಿದೆ. ಒಂದು ವೇಳೆ ನೀವು ನಿಮ್ಮ ಫೋನ್ ಅನ್ನು ಅಪ್‌ಗ್ರೇಡ್ ಮಾಡದೇ ಹೋದರೆ ನಿಮ್ಮ ಹಳೆಯ ಮೊಬೈಲ್‌ನಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ಸ್ಟಾಪ್ ಮಾಡಲಿದೆ. ಇದರಿಂದ ನಿಮ್ಮ ವಾಟ್ಸಾಪ್ ಖಾತೆಗೆ ಯಾವುದೇ ಸಂದೇಶಗಳನ್ನು ಸ್ವೀಕರಿಸುವ ಮತ್ತು ಸಂದೇಶಗಳನ್ನು ಕಳುಹಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.


Click it and Unblock the Notifications








