ಇಯರ್ ಫೋನ್ ಇಲ್ಲದೆಯೂ ಯಾರಿಗೂ ಕೇಳದಂತೆ ವಾಟ್ಸ್ ಆಪ್ ಆಡಿಯೋ ಮೆಸೇಜ್ ಕೇಳಬಹುದು...ಹೇಗೆ ಗೊತ್ತಾ?!

|

ನೀವು ಒಂದು ಮೀಟಿಂಗ್ ನಲ್ಲಿ ಇರುತ್ತೀರಿ ಮತ್ತು ನಿಮ್ಮ ಸ್ನೇಹಿತ ಸಡನ್ ಆಗಿ ಒಂದು ಆಡಿಯೋ ಮೆಸೇಜ್ ನ್ನು ನಿಮ್ಮ ವಾಟ್ಸ್ ಆಪ್ ಗೆ ಕಳುಹಿಸುತ್ತಾನೆ. ನಮ್ಮ ಸ್ಮಾರ್ಟ್ ಫೋನ್ ಗಳು ಆ ಆಡಿಯೋ ಮೆಸೇಜನ್ನು ಟ್ಯಾಪ್ ಮಾಡುವಂತೆ ನಮ್ನನ್ನು ಪ್ರೇರೇಪಿಸುತ್ತೆ ಮತ್ತು ನಾವು ಹಾಗೆ ಮಾಡಿದರೆ ಮೀಟಿಂಗ್ ರೂಮ್ ನಲ್ಲಿರುವ ಎಲ್ಲರ ಕಣ್ಣು ಒಮ್ಮೆಲೆ ನಿಮ್ಮ ಕಡೆ ತಿರುಗುತ್ತೆ.

ಈ 10 ಮಕ್ಕಳು ಅಪಾಯಕಾರಿ ಅಂದ್ರೇ ಅಪಾಯಕಾರಿ... ಯಾಕಂತ ಗೊತ್ತಾ..?!ಈ 10 ಮಕ್ಕಳು ಅಪಾಯಕಾರಿ ಅಂದ್ರೇ ಅಪಾಯಕಾರಿ... ಯಾಕಂತ ಗೊತ್ತಾ..?!

ಇದೊಂದೇ ಸನ್ನಿವೇಶ ಅಲ್ಲ, ನೀವು ಬಸ್ಸಿನಲ್ಲಿ ಹೋಗುತ್ತಿರುತ್ತೀರಿ. ಒಂದು ಆಡಿಯೋ ಮೆಸೇಜ್ ಬರುತ್ತೆ. ಕೂಡಲೇ ಅದನ್ನು ಕೇಳಬೇಕು ಅನ್ನಿಸುತ್ತೆ. ಆದರೆ ಬಸ್ಸಿನಲ್ಲಿ ಇಯರ್ ಫೋನ್ ತೆಗೆದು ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಬದಲ್ಲಿ ಬಸ್ಸಿನಲ್ಲಿರುವ ಯಾರಿಗೂ ನಿಮ್ಮ ಆಡಿಯೋ ಮೆಸೇಜ್ ಕೇಳದಂತೆ, ನೀವು ಮಾತ್ರ ಕೇಳುವಂತೆ ಇಯರ್ ಫೋನ್ ಹಾಕಿಕೊಳ್ಳದೆಯೋ ಕೇಳಿಸಿಕೊಳ್ಳಬಹುದು.

ಇಯರ್ ಫೋನ್ ಇಲ್ಲದೆಯೂ ಯಾರಿಗೂ ಕೇಳದಂತೆ ವಾಟ್ಸ್ ಆಪ್ ಆಡಿಯೋ ಮೆಸೇಜ್ ಕೇಳಬಹುದು..!

ನಿಮ್ಮ ಪರ್ಸನಲ್ ವಿಚಾರ ಮೀಟಿಂಗ್ ರೂಮ್ ನಲ್ಲಿ ಅಥವಾ ಬಸ್ಸಿನಲ್ಲಿ ಹೀಗೆ ಎಲ್ಲರಿಗೂ ಕೇಳಿಸುವಂತಾಗುವುದು ಯಾರಿಗೆ ತಾನೆ ಇಷ್ಟ ಇದೆ ಹೇಳಿ? ಯಾರಿಗೂ ಇಲ್ಲ. ಆದರೆ ಹೆಚ್ಚಿನವರಿಗೆ ತಿಳಿದಿಲ್ಲ ವಾಟ್ಸ್ ಆಪ್ ನಲ್ಲಿ ಹೀಗೆ ಆಗದಂತೆ ತಡೆಯುವ ಒಂದು ಅವಕಾಶವಿದೆ. ಇದಕ್ಕಾಗಿ ನೀವು ನಿಮ್ಮ ವಾಟ್ಸ್ ಆಪ್ ನ್ನು ಅಪ್ ಡೇಟ್ ಮಾಡಬೇಕಾಗಿಲ್ಲ ಮತ್ತು ಈ ವೈಶಿಷ್ಟ್ಯತೆಗೆ ಯಾವುದೇ ಹೆಸರೂ ಇಲ್ಲ.

ಈ ವಾಟ್ಸ್ ಆಪ್ ಟ್ರಿಕ್ ಕೇವಲ ಆಡಿಯೋ ಫೈಲ್ ಗಳಿಗೆ ಮಾತ್ರ ವರ್ಕ್ ಆಗುತ್ತೆ ಯಾವುದೇ ವೀಡಿಯೋ ಫೈಲ್ ಗಳಿಗೆ ವರ್ಕ್ ಆಗುವುದಿಲ್ಲ. ನೀವು ಮುಂದಿನ ಬಾರಿ ಇಂತಹ ಸಂದರ್ಬವನ್ನು ಎದುರಿಸಿದಾಗ , ಇಯರ್ ಫೋನ್ ಎಲ್ಲಿದೆ ಎಂದು ತಡಕಾಡಿ ಹುಡುಕಾಡುವ ಬದಲು, ಜಸ್ಟ್ ಆಡಿಯೋ ಫೈಲ್ ನ್ನು ಕ್ಲಿಕ್ ಮಾಡಿ ಕೂಡಲೇ ನಿಮ್ಮ ಯಾವುದಾದರೂ ಒಂದು ಕಿವಿಯಲ್ಲಿ ಇಟ್ಟುಕೊಳ್ಳಿ. ನೀವು ಫೋನ್ ನ್ನು ಎತ್ತಿಕೊಂಡು ಫೈಲ್ ನ್ನು ಓಪನ್ ಮಾಡಿ ಕ್ಲಿಕ್ ಮಾಡಿ ಕಿವಿಯಲ್ಲಿ ಇಟ್ಟುಕೊಂಡ ಮರುಕ್ಷಣವೇ ಆಡಿಯೋ ಫೈಲ್ ಸ್ಮಾರ್ಟ್ ಫೋನಿನ ಇಯರ್ ಪೀಸ್ ನಲ್ಲಿ ಪ್ಲೇ ಆಗುತ್ತೆ, ಸ್ಪೀಕರ್ ನಲ್ಲಿ ಪ್ಲೇ ಆಗುವುದಿಲ್ಲ.

ಇಯರ್ ಫೋನ್ ಇಲ್ಲದೆಯೂ ಯಾರಿಗೂ ಕೇಳದಂತೆ ವಾಟ್ಸ್ ಆಪ್ ಆಡಿಯೋ ಮೆಸೇಜ್ ಕೇಳಬಹುದು..!


ಇದರರ್ಥ ಇಷ್ಟೇ.. ನೀವು ವಾಟ್ಸ್ ಆಪ್ ಆಡಿಯೋ ಫೈಲನ್ನು ವಾಕಿಟಾಕಿಯಂತೆ ಬಳಕೆ ಮಾಡಬಹುದು. ಸಣ್ಣ ಸಣ್ಣ ವಾಯ್ಸ್ ಮೇಸೇಜ್ ಗಳನ್ನು ಕಳಿಸುವ ಮೂಲಕ, ನೀವು ಯಾರಿಗೆ ಸಂದೇಶ ಕಳುಹಿಸಬೇಕೋ ಅವರಿಗೆ ಮೆಸೇಜ್ ಟೈಪ್ ಮಾಡುತ್ತಾ ಕುಳಿತುಕೊಳ್ಳುವ ಅಗತ್ಯವಿರುವುದಿಲ್ಲ. ಯಾವುದೇ ಪ್ರೈವೆಸಿ ಸೆಟ್ಟಿಂಗ್ ಗಳಿಗೆ ಒಳಪಡದೇ, ನೀವು ನಿಮ್ಮ ಇಯರ್ ಫೋನ್ ಇಲ್ಲದೆಯೂ ಕೂಡ ವಾಯ್ಸ್ ಮೆಸೇಜ್ ಗಳನ್ನು ಯಾರಿಗೂ ಕೇಳಿಸದಂತೆ ನೀವು ಮಾತ್ರ ಕೇಳಿಸಿಕೊಳ್ಳಲು ಸಾದ್ಯವಿದೆ. ಈ ವೈಶಿಷ್ಟ್ಯವು ಹಲವು ದಿನಗಳಿಂದ ವಾಟ್ಸ್ಟ್ ಆಪ್ ನಲ್ಲಿದ್ದರೂ ಕೂಡ ಹೆಚ್ಚಿನ ಬಳಕೆ ದಾರರಿಗೆ ಇದರ ಬಗ್ಗೆ ತಿಳಿದಿಲ್ಲ,

ಇತ್ತೀಚೆಗೆ ಆಡಿಯೋ ಫೈಲ್ಸ್ ಗಳ ಮೂಲಕ ಬಳಕೆದಾರರು ಇನ್ನಷ್ಟು ಸುಲಭವಾಗಿ ಇನ್ನೊಬ್ಬರ ಜೊತೆ ಮಾತನಾಡಲು ವಾಟ್ಸ್ ಆಪ್ ಅವಕಾಶ ಮಾಡಿಕೊಟ್ಟಿದೆ. ಈಗ ನೀವು ಯಾವುದೇ ಮೆಸೇಜ್ ನ್ನು ರೆಕಾರ್ಡ್ ಮಾಡಬೇಕಾದರೆ MIC ಬಟನನ್ನು ರೆಕಾರ್ಡಿಂಗ್ ಮುಗಿಯುವವರೆಗೂ ಹೋಲ್ಡ್ ಮಾಡಿಯೇ ಇರಬೇಕಾದ ಅಗತ್ಯವಿಲ್ಲ. ಜಸ್ಟ್ ರೆಕಾರ್ಡಿಂಗ್ ಬಟನ್ ನ್ನು ಟ್ಯಾಪ್ ಮಾಡಿದರೆ ಸಾಕು ಮತ್ತು ಮೇಲ್ಮುಖವಾಗಿ ಡ್ರಾಗ್ ಮಾಡಿದರೆ ಆಯ್ತು.

How to send WhatsApp Payments invitation to others - GIZBOT KANNADA

ಇಯರ್ ಫೋನ್ ಇಲ್ಲದೆಯೂ ಯಾರಿಗೂ ಕೇಳದಂತೆ ವಾಟ್ಸ್ ಆಪ್ ಆಡಿಯೋ ಮೆಸೇಜ್ ಕೇಳಬಹುದು..!

ಲಾಕ್ ಐಕಾನ್ ಒಂದನ್ನು ನೀವು ಸ್ಕ್ರೀನ್ ನಲ್ಲಿ ಕಾಣಬಹುದು ಮತ್ತು ರೆಕಾರ್ಡಿಂಗ್ ಆರಂಭವಾಗಿರುತ್ತದೆ. ನಿಮ್ಮ ರೆಕಾರ್ಡಿಂಗ್ ಮುಗಿದ ಕೂಡಲೇ ನೀವು ಆ ಸೆಂಡ್ ಬಟನ್ ನ್ನು ಫುಶ್ ಮಾಡಿದರೆ ಸಾಕು, ವಾಯ್ಸ್ ಮೆಸೇಜ್ ಡೆಲಿವರ್ ಆಗುತ್ತೆ. ನಿಜಕ್ಕೂ ವಾಟ್ಸ್ ಆಪ್ ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರಲು ಕಾರಣ ಇದೇ ಆಗಿದೆ. ಬಳಕೆದಾರನ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ವೈಶಿಷ್ಟ್ಯತೆಗಳನ್ನು ವಾಟ್ಸ್ ಆಪ್ ಒಳಗೊಂಡಿದೆ..ಅದು ಬಳಕೆದಾರ ಸ್ನೇಹಿಯೂ ಆಗಿದೆ.

Best Mobiles in India

English summary
WhatsApp trick: How to listen to audio messages secretly without earphones. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X