ಬಳಕೆದಾರರಿಗೆ ಹೊಸ ಸೇವಾ ನಿಯಮದ ಬಗ್ಗೆ ನೋಟಿಫಿಕೇಶನ್ ಕಳುಹಿಸಿದ ವಾಟ್ಸಾಪ್!
ಫೇಸ್‌ಬುಕ್ ಒಡೆತನದ ವಾಟ್ಸಾಪ್ ತನ್ನ ಬಳಕೆದಾರರಿಗೆ ಅದರ ಸೇವಾ ನಿಯಮಗಳಲ್ಲಿನ ಬದಲಾವಣೆ ಮತ್ತು ಅದರ ಗೌಪ್ಯತೆ ನೀತಿಯ ಬಗ್ಗೆ ತಿಳಿಸಲು ಅಪ್ಲಿಕೇಶನ್‌ನಲ್ಲಿನ ನೋಟಿಫಿಕೇಶನ್‌ಗಳನ್ನು ಕಳುಹಿಸಲು ಪ್ರಾರಂಭಿಸಿದೆ. ''ವಾಟ್ಸಾಪ್ ತನ್ನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುತ್ತಿದೆ" ಎಂದು ವಾಟ್ಸಾಪ್ ತನ್ನ ನೋಟಿಫಿಕೇಶನ್‌ನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಕಳುಹಿಸುತ್ತಿದೆ. ಇನ್ನು ಕಂಪನಿಯು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ, ತಮ್ಮ ವಾಟ್ಸಾಪ್ ಚಾಟ್‌ಗಳನ್ನು ಸಂಗ್ರಹಿಸಲು ಮತ್ತು ನಿರ್ವಹಿಸಲು ಫೇಸ್‌ಬುಕ್ ಹೋಸ್ಟ್ ಮಾಡಿದ ಸೇವೆಗಳನ್ನು ಹೇಗೆ ಬಳಸಿಕೊಳ್ಳಬಹುದು ಅನ್ನೊದನ್ನ ಈ ಸೇವಾ ನಿಯಮಗಳಲ್ಲಿ ತಿಳಿಸಿದೆ.

ಹೌದು, ವಾಟ್ಸಾಪ್ ತನ್ನ ಹೊಸ ಸೇವಾ ನಿಯಮ ಹಾಗೂ ಗೌಪ್ಯತೆಯ ನಿಯಮದ ಬಗ್ಗೆ ಬಳಕೆದಾರರರಿಗೆ ನೋಟಿಫಿಕೇಶನ್ ಅನ್ನು ಕಳುಹಿಸಿದೆ. ಮಂಗಳವಾರ ಸಂಜೆಯಿಂದಲೇ ಈ ಪ್ರಕ್ರಿಯೆ ಶುರುವಾಗಿದ್ದು, ಈ ನೋಟಿಫಿಕೇಶನ್‌ನಲ್ಲಿ ಗ್ರಾಹಕರಿಗೆ ಯಾವ ರೀತಿಯ ಗೌಪ್ಯತೆ ನೀತಿ ಹಾಗೂ ಸೇವಾ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಫೇಸ್‌ಬುಕ್‌ನೊಂದಿಗೆ ವಾಟ್ಸಾಪ್ ಹೇಗೆ ಪಾಲುದಾರಿಕೆ ಹೊಂದಿದೆ, ಮುಂತಾದ ಪ್ರಮುಖ ನವೀಕರಣಗಳನ್ನು ಸಹ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನುಳಿದಂತೆ ಈ ನೋಟಿಫಿಕೇಶನ್ ವಿಶೇಷತೆ ಏನು ಅನ್ನೊಅನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೆಬ್ರವರಿ 8, 2021 ರಿಂದ ವಾಟ್ಸಾಪ್ ತನ್ನ ಹೊಸ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಜಾರಿಗೆ ಬರಲಿದೆ. ಫೆಬ್ರವರಿ 8 ರ ನಂತರ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಗಳನ್ನು ಬಳಸುವುದನ್ನು ಮುಂದುವರಿಸಲು ಈ ನಿಯಮಗಳು ಮತ್ತು ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕು. ಇಲ್ಲದೆ ಹೋದಲ್ಲಿ ವಾಟ್ಸಾಪ್ ಖಾತೆ ನಿಷ್ಕ್ರಿಯಗೊಳ್ಳಲಿದೆ. ಇದೇ ಕಾರಣಕ್ಕೆ ವಾಟ್ಸಾಪ್ ತನ್ನ ಹೊಸ ಸೇವಾ ನಿಯಮಗಳಲ್ಲಿ ಏನೆಲ್ಲಾ ಬದಲಾಲಿದೆ ಎಂಬ ಮಾಹಿತಿಯನ್ನು ಬಳಕೆದಾರರ ಜೊತೆಗೆ ಹಂಚಿಕೊಳ್ಳಲು ಶುರುಮಾಡಿದೆ.

ಸದ್ಯ ವಾಟ್ಸಾಪ್ ಕಂಪನಿಯು ಮಾಡಿದ ಹಲವು ಬದಲಾವಣೆಗಳಲ್ಲಿ ಮಾಹಿತಿ ಸಂಗ್ರಹಿಸುವ ವಿಚಾರದಲ್ಲಿ ಹೆಚ್ಚು ಬದಲಾವಣೆ ಮಾಡುವ ಸಾದ್ಯತೆ ಇದೆ. ಬಳಕೆದಾರರು ಸಂದೇಶದೊಳಗೆ ಮೀಡಿಯಾವನ್ನು ಫಾರ್ವರ್ಡ್ ಮಾಡಿದಾಗ, ಹೆಚ್ಚುವರಿ ಫಾವರ್ಡ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡಲು ನಾವು ಆ ಮಾಧ್ಯಮವನ್ನು ತಾತ್ಕಾಲಿಕವಾಗಿ ನಮ್ಮ ಸರ್ವರ್‌ಗಳಲ್ಲಿ ಎನ್‌ಕ್ರಿಪ್ಟ್ ಮಾಡಿದ ರೂಪದಲ್ಲಿ ಸಂಗ್ರಹಿಸುತ್ತೇವೆ" ಎಂದು ವಾಟ್ಸಾಪ್ ಬರೆದಿದೆ. ಇದಕ್ಕಾಗಿ ಕಂಪನಿಯು ಬಳಕೆದಾರರ ಸಂಪರ್ಕಗಳ ಬಗ್ಗೆ ವಿವರಗಳನ್ನು ನವೀಕರಿಸಿದೆ. "ನಿಮ್ಮ ಯಾವುದೇ ಸಂಪರ್ಕಗಳು ಇನ್ನೂ ನಮ್ಮ ಸೇವೆಗಳನ್ನು ಬಳಸದಿದ್ದರೆ, ಆ ಸಂಪರ್ಕಗಳನ್ನು ನಮ್ಮಿಂದ ಗುರುತಿಸಲಾಗುವುದಿಲ್ಲ ಎಂದು ಖಚಿತಪಡಿಸುವ ರೀತಿಯಲ್ಲಿ ನಾವು ಈ ಮಾಹಿತಿಯನ್ನು ನಿಮಗಾಗಿ ನಿರ್ವಹಿಸುತ್ತೇವೆ" ಎಂದು ವಾಟ್ಸಾಪ್ ಹೇಳಿದೆ.

ಇದಲ್ಲದೆ ವಾಟ್ಸಾಪ್ ತನ್ನ ‘ವಹಿವಾಟುಗಳು ಮತ್ತು ಪಾವತಿಗಳ ಡೇಟಾ' ಕುರಿತು ಪ್ರತ್ಯೇಕ ವಿಭಾಗವನ್ನು ಕೂಡ ಸೇರಿಸಿದೆ. ನೀವು ನಮ್ಮ ಪಾವತಿ ಸೇವೆಗಳನ್ನು ಬಳಸುತ್ತಿದ್ದರೆ ಅಥವಾ ಖರೀದಿ ಅಥವಾ ಇತರ ಹಣಕಾಸು ವಹಿವಾಟುಗಳಿಗಾಗಿ ಉದ್ದೇಶಿಸಿರುವ ನಮ್ಮ ಸೇವೆಗಳನ್ನು ಬಳಸಿದರೆ, ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿ ಸೇರಿದಂತೆ ನಿಮ್ಮ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿಯು ವಹಿವಾಟನ್ನು ಪೂರ್ಣಗೊಳಿಸಲು ಅಗತ್ಯವಾದ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ದೇಶ ಅಥವಾ ಪ್ರದೇಶದಲ್ಲಿ ಲಭ್ಯವಿರುವ ನಮ್ಮ ಪಾವತಿ ಸೇವೆಗಳನ್ನು ನೀವು ಬಳಸಿದರೆ, ನಮ್ಮ ಗೌಪ್ಯತೆ ಅಭ್ಯಾಸಗಳನ್ನು ಅನ್ವಯವಾಗುವ ಪಾವತಿ ಗೌಪ್ಯತೆ ನೀತಿಯಲ್ಲಿ ವಿವರಿಸಲಾಗಿದೆ, "ಎಂದು ಸ್ಪಷ್ಟ ಪಡಿಸಿದೆ.

ಇದರ ಜೊತೆಗೆ, ವಾಟ್ಸಾಪ್ ‘ಸಾಧನ ಮತ್ತು ಸಂಪರ್ಕ ಮಾಹಿತಿ' ಮತ್ತು ‘ಸ್ಥಳ ಮಾಹಿತಿ' ಅನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ಸಹ ವಿವರಿಸಿದೆ. "ನೀವು ನಮ್ಮ ಸೇವೆಗಳನ್ನು ಸ್ಥಾಪಿಸುವಾಗ, ಪ್ರವೇಶಿಸುವಾಗ ಅಥವಾ ಬಳಸುವಾಗ ನಾವು ಸಾಧನ ಮತ್ತು ಸಂಪರ್ಕ-ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಮ್ ಮಾಹಿತಿ, ಬ್ಯಾಟರಿ ಮಟ್ಟ, ಸಿಗ್ನಲ್ ಸಾಮರ್ಥ್ಯ, ಅಪ್ಲಿಕೇಶನ್ ಆವೃತ್ತಿ, ಬ್ರೌಸರ್ ಮಾಹಿತಿ, ಮೊಬೈಲ್ ನೆಟ್‌ವರ್ಕ್, ಸಂಪರ್ಕ ಮಾಹಿತಿ (ಫೋನ್ ಸಂಖ್ಯೆ, ಮೊಬೈಲ್ ಆಪರೇಟರ್ ಅಥವಾ ಐಎಸ್‌ಪಿ ಸೇರಿದಂತೆ), ಭಾಷೆ ಮತ್ತು ಸಮಯ ವಲಯ, ಐಪಿ ವಿಳಾಸ, ಸಾಧನ ಕಾರ್ಯಾಚರಣೆಗಳು ಮಾಹಿತಿ ಮತ್ತು ಗುರುತಿಸುವಿಕೆಗಳು " ಸಂಗ್ರಹಿಸುತ್ತೇವೆ ಎಂದು ವಾಟ್ಸಾಪ್ ಮಾಹಿತಿ ಹಂಚಿಕೊಂಡಿದೆ.


Click it and Unblock the Notifications








