Home
ಸುದ್ದಿಜಾಲ

ಇಂತಹ ನಡೆಗಳಿಂದಲೇ ಅಲ್ಲವೇ ವಾಟ್ಸಾಪ್‌ ಎಲ್ಲರಿಗೂ ಇಷ್ಟವಾಗೋದು! ಈಗ ಹೊಸತು ಏನು?

ಪ್ರಸ್ತುತ ದಿನಗಳಲ್ಲಿ ವಾಟ್ಸಾಪ್‌ ಅತ್ಯಂತ ಜನಪ್ರಿಯ ಮತ್ತು ಅವಶ್ಯಕ ಅಪ್ಲಿಕೇಶನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಶ್ವದಾದ್ಯಂತ ಹೆಚ್ಚಿನ ಜನರು ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ವಾಟ್ಸಾಪ್‌ ಅನ್ನು ಬಳಸುತ್ತಾರೆ. ಇನ್ನು ವಾಟ್ಸಾಪ್‌ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುತ್ತಾ ಬಂದಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಅವಶ್ಯಕ ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಇದರಿಂದ ಬಳಕೆದಾರರು ಇನ್ನಷ್ಟು ಖುಷ್‌ ಆಗೋದು ಗ್ಯಾರಂಟಿ ಎನ್ನಲಾಗಿದೆ.

ಇಂತಹ ನಡೆಗಳಿಂದಲೇ ಅಲ್ಲವೇ ವಾಟ್ಸಾಪ್‌ ಎಲ್ಲರಿಗೂ ಇಷ್ಟವಾಗೋದು! ಈಗ ಹೊಸತು ಏನು?

ಹೌದು, ವಾಟ್ಸಾಪ್‌ ಶೀಘ್ರದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಒಂದೇ ಬಾರಿಗೆ 100ಫೋಟೋಗಳನ್ನು ಶೇರ್‌ ಮಾಡುವ ಅವಕಾಶ ನೀಡಲಿದೆ. ಇದರಿಂದ ನಿಮ್ಮ ಪ್ರೀತಿ ಪಾತ್ರರಿಗೆ, ಆತ್ಮೀಯರಿಗೆ ಏಕಕಾಲದಲ್ಲಿ ಹಲವು ಫೋಟೋಗಳನ್ನು ಸೆಂಡ್‌ ಮಡಲು ಸಾಧ್ಯವಾಗಲಿದ. ಪ್ರತಿ ಭಾರಿಯೂ ಫೋಟೋಗಳನ್ನು ಆಯ್ಕೆ ಮಾಡಿ ಸೆಂಡ್‌ ಮಾಡುವುದು ತಪ್ಪಲಿದೆ. ಹಾಗಾದ್ರೆ ಬಳಕೆದಾರರು ಇಷ್ಟು ದಿನ ಕಾಯ್ತಿದ್ದ ಈ ಫೀಚರ್ಸ್‌ನಿಂದ ಏನೆಲ್ಲಾ ಲಾಭವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೊಸ ಫೀಚರ್ಸ್‌ನಿಂದ ಏನೆಲ್ಲಾ ಲಾಭ!

ವಾಟ್ಸಾಪ್‌ ತನ್ನ iOS-ಆವೃತ್ತಿಯಲ್ಲಿ ಹೊಸ ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಇದರಿಂದ ಒಂದು ಭಾರಿಗೆ 100 ಫೋಟೋಗಳನ್ನು ಶೇರ್‌ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಒಂದು ಭಾರಿಗೆ 30 ಫೋಟೋಗಳನ್ನು ಶೇರ್‌ ಮಾಡಲು ಅವಕಾಶವಿದೆ. ಇದರಿಂದ ನೀವು 30ಕ್ಕಿಂತ ಹೆಚ್ಚಿನ ಫೋಟೋ ಶೇರ್‌ ಮಾಡಬೇಕಾದರೆ ಎರಡೆರಡು ಭಾರಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಟ್ಸಾಪ್‌ನ ಈ ಹೊಸ ಆಯ್ಕೆಯು ಸಹಾಯ ಮಾಡಲಿದೆ ಎಂದು ವಾಬೇಟಾಇನ್ಫೋ ವರದಿ ಮಾಡಿದೆ.

ಇಂತಹ ನಡೆಗಳಿಂದಲೇ ಅಲ್ಲವೇ ವಾಟ್ಸಾಪ್‌ ಎಲ್ಲರಿಗೂ ಇಷ್ಟವಾಗೋದು! ಈಗ ಹೊಸತು ಏನು?

ಸದ್ಯ ವಾಟ್ಸಾಪ್‌ ಈ ಫೀಚರ್ಸ್‌ ಅನ್ನು iOS ಬೀಟಾ ಅಪ್ಲಿಕೇಶನ್‌ ಅನ್ನು ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಈ ಹೊಸ ಫೀಚರ್ಸ್‌ ಅನ್ನು ಬೀಟಾ ಬಳಕೆದಾರರು ಬಳಸಬಹುದಾಗಿದ್ದು, ಮೀಡಿಯಾ ಪಿಕರ್‌ನಲ್ಲಿ 100 ಫೋಟೋಗಳನ್ನು ಆಯ್ಕೆ ಮಾಡಬಹುದಾಗಿದೆ. ಇದರಿಂದ ನೂರಾರು ಚಿತ್ರಗಳು, ಈವೆಂಟ್ ಅಥವಾ ಪ್ರವಾಸದ ಚಿತ್ರಗಳನ್ನು ಸೆಂಡ್‌ ಮಾಡಲು ಉಪಯುಕ್ತ ಎನಿಸಲಿದೆ. ಅಂದರೆ ಇಡೀ ಆಲ್ಬಮ್‌ ಅನ್ನು ಒಂದೇ ಬಾರಿಗೆ ಶೇರ್‌ ಮಾಡಲು ಅವಕಾಶ ಸಿಗಲಿದೆ. ಐಒಎಸ್ ಬೀಟಾ ಆವೃತ್ತಿಯನ್ನು ಹೊಂದಿರುವವರು ಈ ಆಯ್ಕೆಯನ್ನು ಇದೀಗ ಪ್ರಯತ್ನಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಇದು ಐಒಎಸ್‌ನ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಲಭ್ಯವಾಗುವುದಿಲ್ಲವೆ?

ವಾಟ್ಸಾಪ್‌ ಈ ಹೊಸ ಫೀಚರ್ಸ್‌ ಆಯ್ಕೆಯನ್ನು ಆಂಡ್ರಾಯ್ಡ್‌ನಲ್ಲಿ ಪರಿಚಯಿಸುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ವಾಟ್ಸಾಪ್‌ ಶೀಘ್ರದಲ್ಲೇ ಆಂಡ್ರಾಯ್ಡ್‌ ಬಳಕೆದಾರರಿಗೂ ಕೂಡ ಈ ಫೀಚರ್ಸ್‌ ಅನ್ನು ಪರಿಚಯಿಸುವ ಸಾಧ್ಯತೆಯಿದೆ.

ಇದಲ್ಲದೆ ವಾಟ್ಸಾಪ್‌ ತನ್ನ ಡ್ರಾಯಿಂಗ್‌ ಟೂಲ್‌ನಲ್ಲಿ ಹೊಸ ಟೆಕ್ಸ್ಟ್ ಎಡಿಟರ್‌ ಅನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಟೆಕ್ಸ್ಟ್‌ ಎಡಿಟರ್‌ ಟೂಲ್ಸ್‌ ಜೊತೆಗೆ ಡ್ರಾಯಿಂಗ್‌ ಟೂಲ್‌ನಲ್ಲಿ ಹೊಸದಾಗಿ ಮೂರು ಆಯ್ಕೆಗಳು ಕೂಡ ಲಭ್ಯವಾಗಲಿವೆ. ಇವುಗಳ ಮೂಲಕ ನೀವು ಕೀಬೋರ್ಡ್‌ ಮೇಲಿನ ಫಾಂಟ್‌ ಆಯ್ಕೆಗಳಲ್ಲಿ ವಿವಿಧ ಫಾಂಟ್‌ ಆಯ್ಕೆಗಳನ್ನು ಬದಲಾಯಿಸಬಹುದಾಗಿದೆ. ಇದಲ್ಲದೆ ಟೆಕ್ಸ್ಟ್‌ ಲೈನ್‌ ಅನ್ನು ಕೂಡ ಎಡ ಬಲ ಮಧ್ಯದಲ್ಲಿ ಬದಲಾಯಿಸಬಹುದಾಗಿದೆ. ಜೊತೆಗೆ ಟೆಕ್ಸ್ಟ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಕಲರ್‌ ಅನ್ನು ಬದಲಾಯಿಸುವುದಕ್ಕೆ ಕೂಡ ಅವಕಾಶ ಲಭ್ಯವಾಗಲಿದೆ.

ಇಂತಹ ನಡೆಗಳಿಂದಲೇ ಅಲ್ಲವೇ ವಾಟ್ಸಾಪ್‌ ಎಲ್ಲರಿಗೂ ಇಷ್ಟವಾಗೋದು! ಈಗ ಹೊಸತು ಏನು?

ಇದರೊಂದಿಗೆ ವಾಟ್ಸಾಪ್‌ ತನ್ನ ಐಒಎಸ್‌ ಆವೃತ್ತಿಯಲ್ಲಿ ಗ್ರೂಪ್‌ ಮೆಸೇಜ್‌ ರಿಯಾಕ್ಷನ್‌ ಆಯ್ಕೆಯನ್ನು ನೀಡಲು ಮುಂದಾಗಿದೆ. ಅದರಂತೆ ಐಒಎಸ್‌ ಬಳಕೆದಾರರು ಅನೌನ್ಸ್‌ಮೆಂಟ್‌ ಗ್ರೂಪ್‌ ಸಂದೇಶಗಳಿಗೆ ರಿಯಾಕ್ಷನ್‌ ನೀಡುವ ಅವಕಾಶ ಸಿಗಲಿದೆ. ಈ ಅವಕಾಶವನ್ನು ಬಳಸಿಕೊಂಡು ಬಳಕೆದಾರರು ಅನೌನ್ಸ್‌ಮೆಂಟ್‌ ಗ್ರೂಪ್‌ಗಳಲ್ಲಿ ಸಂದೇಶಗಳಿಗೆ ರಿಯಾಕ್ಷನ್‌ ನೀಡಬಹುದಾಗಿದೆ. ಪ್ರಸ್ತುತ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಐಒಎಸ್‌ ಬಳಕೆದಾರರಿಗೂ ಲಭ್ಯವಾಗುವ ನಿರೀಕ್ಷೆಯಿದೆ.

Best Mobiles in India

English summary
WhatsApp working on a new feature that will allow users to share up to 100 media within the chats on the company’s iOS-based app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+