Subscribe to Gizbot

ವಾಟ್ಸ್‌ಆಪ್ ಕುರಿತ ಆಚ್ವರಿ ಮಾಹಿತಿ ಬಿಚ್ಚಿಟ್ಟ ಫೇಸ್‌ಬುಕ್ CEO..!

Written By:

ಫೇಸ್‌ಬುಕ್ ಒಡೆತನಕ್ಕೆ ಸೇರಿರುವ ವಾಟ್ಸ್‌ಆಪ್ ಜಾಗತಿಕವಾಗಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಹೆಚ್ಚಿನ ಮಂದಿ ವಾಟ್ಸ್‌ಆಪ್ ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಬಳಕೆದಾರರ ಕುರಿತು ಫೇಸ್‌ಬುಕ್ CEO ಮಾರ್ಕ್ ಜುಕರ್ ಬರ್ಗ್ ಆಚ್ಚರಿಯ ಮಾಹಿತಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿಯೇ ಅತೀ ಹೆಚ್ಚಿನ ಮಂದಿ ಈ ಮೇಸೆಂಜಿಂಗ್ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಾಟ್ಸ್‌ಆಪ್ ಕುರಿತ ಆಚ್ವರಿ ಮಾಹಿತಿ ಬಿಚ್ಚಿಟ್ಟ ಫೇಸ್‌ಬುಕ್ CEO..!

ದಿನದಿಂದ ದಿನಕ್ಕೆ ವಾಟ್ಸ್‌ಆಪ್ ಬಳಕೆದಾರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸದ್ಯ ಸುಮಾರು 1.5 ಬಿಲಿಯನ್ ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದು, ಅದರಲ್ಲಿಯೂ ಪ್ರತಿ ದಿನ ಸುಮಾರು 60 ಬಿಲಿಯನ್ ಮೇಸೆಜ್‌ಗಳು ವಿಲೆವಾರಿಯಾಗುತ್ತಿದೆ ಎನ್ನಲಾಗಿದೆ. 2017ರ ಕೊನೆಯ ಭಾಗದಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆ:

ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆ:

ಈ ಹಿಂದೆ ವಾಟ್ಸ್‌ಆಪ್ ಅನ್ನು 2014ರಲ್ಲಿ ಫೇಸ್‌ಬುಕ್ ಖರೀದಿ ಮಾಡಿದ ಸಂದರ್ಭದಲ್ಲಿ 450 ಮಿಲಿಯನ್ ಮಂದಿ ಬಳಕೆದಾರರನ್ನು ಹೊಂದಿತ್ತು. ಆದರೆ ಇಂದು ತಿಂಗಳಿಗೆ ವಾಟ್ಸ್‌ಆಪ್ ಬಳಕೆ ಮಾಡುವವರ ಸಂಖ್ಯೆಯೂ 1.3 ಬಿಲಿಯನ್ ಸಂಖ್ಯೆಯನ್ನು ತಲುಪಿದ್ದು, ಅಲ್ಲದೇ 1 ಮಿಲಿಯನ್ ಮಂದಿ ಆಕ್ಟೀವ್ ಬಳಕೆದಾರರಿದ್ದಾರೆ.

ಸ್ಟೋರಿಸ್ ನಲ್ಲಿ ಇನ್‌ಸ್ಟಾಗ್ರಮ್ ಮೊದಲು:

ಸ್ಟೋರಿಸ್ ನಲ್ಲಿ ಇನ್‌ಸ್ಟಾಗ್ರಮ್ ಮೊದಲು:

ಸ್ಟೋರಿಸ್ ಆಪ್‌ ಲೋಡ್ ಮಾಡುವುದರಲ್ಲಿ ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಮ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದಾದ ನಂತರದ ಸ್ಥಾನದಲ್ಲಿ ವಾಟ್ಸ್‌ಆಪ್ ಕಾಣಿಸಿಕೊಂಡಿದ್ದು, ಇದಾದ ಮೇಲೆ ಸ್ನಾಪ್‌ ಚಾಟ್ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಸ್ಟೋರಿಸ್ ಅನ್ನು ಮೊದಲು ಪರಿಚಯಿಸಿದ್ದು ಸ್ನಾಪ್‌ಚಾಟ್.

ವಾಟ್ಸ್‌ಆಪ್ ಬಿಸ್ನೆಸ್‌ಗೆ ಹೆಚ್ಚಿನ ಬೇಡಿಕೆ:

ವಾಟ್ಸ್‌ಆಪ್ ಬಿಸ್ನೆಸ್‌ಗೆ ಹೆಚ್ಚಿನ ಬೇಡಿಕೆ:

ಇದಲ್ಲದೇ ಮೊನ್ನೆ ಮಾರುಕಟ್ಟೆಗೆ ಬಿಡುಗಡೆಯಾದಂತಹ ವಾಟ್ಸ್‌ಆಪ್ ಬಿಸ್ನೆಸ್ ಆಪ್‌ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯೂ ನಿರ್ಮಾಣವಾಗಿದ್ದು, ಈಗಾಗಲೇ ದೆತ್ಯ ಕಂಪನಿಗಳು ಈ ಆಪ್ ಬಳಕೆಗೆ ಮುಂದಾಗಿದೆ ಎನ್ನಲಾಗಿದೆ. ಶೀಘ್ರವೇ ಇದು ಸಹ ಹೆಚ್ಚಿನ ಖ್ಯಾತಿಯನ್ನು ತನ್ನದಾಗಿಸಿಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp Users are Exchanging Nearly 60 Billion Messages. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot