Whatsapp: ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳದ ಬಳಕೆದಾರರೇ ಈ ಸ್ಟೋರಿ ಓದಿ!
ಫೇಸ್‌ಬುಕ್ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್ ಪರಿಚಯಿಸಿ ನೆಚ್ಚಿನ ಅಪ್ಲಿಕೇಶನ್ ಎನಿಸಿಕೊಂಡಿದೆ. ಸದ್ಯ ವಾಟ್ಸಾಪ್ ಹೊಸ ಗೌಪ್ಯತೆ ನೀತಿಯನ್ನು ಪರಿಚಯಿಸಿದ್ದು, ಇದನ್ನು ಸ್ವೀಕರಿಸಲು ಇಂದು ಕೊನೆಯ ದಿನವಾಗಿದೆ. ಹೊಸ ಸೇವಾ ನಿಯಮವನ್ನು ಸ್ವೀಕರಿಸದೆ ಹೋದರೆನಿಮ್ಮ ವಾಟ್ಸಾಪ್ ಅಕೌಂಟ್ ಡಿಲೀಟ್ ಆಗಲಿದೆ ಎಂದು ಮೊದಲು ಹೇಳಿತ್ತು. ಆದರೆ ಭಾರಿ ವಿವಾದದ ನಂತರ ಈ ವಿಚಾರವಾಗಿ ವಾಟ್ಸಾಪ್ ಹಿಂದೆ ಸರಿದಿತ್ತು.

ಹೌದು, ವಾಟ್ಸಾಪ್ ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸಲು ಇಂದು ಕೊನೆಯ ದಿನವಾಗಿದೆ. ಗೌಪ್ಯತೆ ನೀತಿ ಸ್ವೀಕರಿಸದೆ ಹೋದರೆ ನಿಮ್ಮ ವಾಟ್ಸಾಪ್ ಅಕೌಂಟ್ ಡಿಲೀಟ್ ಆಗುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ. ಆದರೂ ವಾಟ್ಸಾಪ್ ಹೊಸ ಗೌಪ್ಯತೆ ನೀತಿ ಸ್ವೀಕರಿಸದ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಸ್ಟಾಪ್ ಮಾಡಲಿದೆ. ಕೆಲವು ಬಹುಮುಖ್ಯ ಪೀಚರ್ಸ್‌ಗಳನ್ನು ಸ್ಟಾಪ್ ಮಾಡುವ ಮೂಲಕ ಬಳಕೆದಾರರು ಅನಿವಾರ್ಯವಾಗಿ ಸೇವಾ ನಿಯಮ ಒಪ್ಪಿಕೊಳ್ಳುವಂತೆ ಮಾಡಲು ಮುಂದಾಗಿದೆ. ಹಾಗಾದ್ರೆ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳದೆ ಹೋದರೆ ನಿಮ್ಮ ವಾಟ್ಸಾಪ್ ಖಾತೆ ಏನಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಗೌಪ್ಯತೆ ನೀತಿಯನ್ನು ಅಂಗೀಕರಿಸದಿದ್ದರೆ ನಿಮ್ಮ ವಾಟ್ಸಾಪ್ ಖಾತೆ ಏನಾಗಲಿದೆ?
ವಾಟ್ಸಾಪ್ ಬಳಕೆದಾರರು ಇಂದು ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸದಿದ್ದರೆ. ಕೆಲವು ದಿನಗಳ ತನಕ ಅವರ ವಾಟ್ಸಾಪ್ ಖಾತೆಯಲ್ಲಿ ಏನು ಬದಲಾಗುವುದಿಲ್ಲ. ಆದರೆ ಕೆಲವು ವಾರಗಳ ನಂತರ ಗೌಪ್ಯತೆ ನೀತಿಯನ್ನು ಸ್ವೀಕರಿಸದಿದ್ದರೆ, ಅವರು ತಮ್ಮ ಚಾಟ್ ಪಟ್ಟಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ವಾಟ್ಸಾಪ್‌ಗೆ ಒಳಬರುವ ಫೋನ್ ಮತ್ತು ವೀಡಿಯೊ ಕರೆಗಳಿಗೆ ಉತ್ತರಿಸಲು ಸಾಧ್ಯವಾಗವುದಿಲ್ಲ ಎನ್ನಲಾಗಿದೆ. ವಾಟ್ಸಾಪ್ ಕಳುಹಿಸುವ ನೋಟಿಫಿಕೇಶನ್‌ಗಳನ್ನು ಸಕ್ರಿಯಗೊಳಿಸಿದ್ದರೆ, ಸಂದೇಶವನ್ನು ಓದಲು ಅಥವಾ ಪ್ರತ್ಯುತ್ತರಿಸಲು ಅಥವಾ ಮಿಸ್ಡ್ ಕಾಲ್ ಅಥವಾ ವೀಡಿಯೊ ಕರೆಯನ್ನು ಮತ್ತೆ ಮಾಡಲು ಸಾಧ್ಯವಾಗುವುದಿಲ್ಲ.

ಇದಲ್ಲದೆ ಇನ್ನೂ ಕೆಲವು ವಾರಗಳು, ಕಳೆದ ನಂತರವೂ ನೀವು ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸದೆ ಹೋದರೆ, ಬಳಕೆದಾರರು ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದನ್ನು ವಾಟ್ಸಾಪ್ ನಿಲ್ಲಿಸುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಚಾಟ್ ಹಿಸ್ಟರಿಯನ್ನು ಆಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿ ರಫ್ತು ಮಾಡುವುದಕ್ಕೆ ಅವಕಾಶವಿದೆ. ಆದರೆ ಅನೇಕ ಫೀಚರ್ಸ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಮತ್ತೆ ಆ ಫೀಚರ್ಸ್‌ಗಳನ್ನು ಬಳಸಲು ಬಯಸಿದರೆ, ಬಳಕೆದಾರರು ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ವಾಟ್ಸಾಪ್ ಹೇಳಿದೆ.

ಹೀಗಾಗಿ, ನೀವು ಇನ್ನೂ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ಸ್ವೀಕರಿಸಲು ಇಂದು ಕೊನೆಯ ದಿನವಾಗಿದೆ. ನೀವು ಪ್ರತಿದಿನ ವಾಟ್ಸಾಪ್ ಅನ್ನೇ ಬಳಸಲು ಬಯಸಿದರೆ ಹೊಸ ನೀತಿಯನ್ನು ಒಪ್ಪಿಕೊಳ್ಳಲೇ ಬೇಕು. ಇಲ್ಲವೇ ನೀವು ವಾಟ್ಸಾಪ್‌ನಲ್ಲಿ ಅನೇಕ ಸೌಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ವಾಟ್ಸಾಪ್ ಸೇವಾ ನಿಯಮ ಒಪ್ಪಕೊಳ್ಳಬೇಕು. ಇಲ್ಲವೇ ನಿಮ್ಮ ವಾಟ್ಸಾಪ್ ಖಾತೆಯನ್ನು ಡಿಲೀಟ್ ಮಾಡಿ ಇತರೆ ಮೆಸೇಜಿಂಗ್ ಅಪ್ಲಿಕೇಶನ್ ಕಡೆಗೆ ಗಮನ ಹರಿಸಬೇಕು.


Click it and Unblock the Notifications








