Home
ಸುದ್ದಿಜಾಲ

ವಾಟ್ಸಾಪ್‌ನಿಂದ ಬಂತು ಗುಡ್‌ನ್ಯೂಸ್‌! ಈ ನಿರ್ಧಾರ ನಿಜಕ್ಕೂ ಅಚ್ಚರಿಯೇ ಸರಿ!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್‌ ಆವೃತ್ತಿ ಬಳಕೆದಾರರಿಗೆ ಗುಡ್‌ನ್ಯೂಸ್‌ ನೀಡಿದೆ. ಈಗಾಗಲೇ ಮೊಬೈಲ್‌ ಆವೃತ್ತಿಯಲ್ಲಿ ಸಾಕಷ್ಟು ಗಮನಸೆಳೆದಿರುವ ಫೀಚರ್ಸ್‌ ಅನ್ನು ಇದೀಗ ಡೆಸ್ಕ್‌ಟಾಪ್‌ ಹಾಗೂ ವೆಬ್‌ ಆವೃತ್ತಿಯಲ್ಲಿ ಪರಿಚಯಿಸಲಾಗಿದೆ. ಈ ಹಿಂದೆ ಸುರಕ್ಷತೆ ದೃಷ್ಟಿಯಿಂದ ಡೆಸ್ಕ್‌ಟಾಪ್‌ ಆವೃತ್ತಿಯಿಂದ ಹಿಂತೆಗೆದುಕೊಂಡಿದ್ದ ಈ ಫೀಚರ್ಸ್‌ ಇದೀಗ ಮತ್ತೆ ಕಾಣಿಸಿಕೊಂಡಿದೆ.

ಹೌದು, ವಾಟ್ಸಾಪ್‌ ವಿವ್ಒನ್ಸ್‌ ಫೀಚರ್ಸ್‌ ಇದೀಗ ವೆಬ್‌ ಹಾಗೂ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿಯು ಲಭ್ಯವಾಗಲಿದೆ. ಪ್ರಸ್ತುತ ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಭದ್ರತಾ ದೃಷ್ಟಿಯಿಂದ ಈ ಫೀಚರ್ಸ್‌ ಅನ್ನು ಡೆಸ್ಕ್‌ಟಾಪ್‌ ಆವೃತ್ತಿಯಿಂದ ವಾಪಾಸ್‌ ಪಡೆದಿದ್ದ ವಾಟ್ಸಾಪ್‌ ಇದೀಗ ತನ್ನ ನಿರ್ಧಾರ ಬದಲಾಯಿಸಿದೆ. ಹಾಗಾದ್ರೆ ವಾಟ್ಸಾಪ್‌ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ವಿವ್‌ಒನ್ಸ್‌ ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಿಂದ ಬಂತು ಗುಡ್‌ನ್ಯೂಸ್‌! ಈ ನಿರ್ಧಾರ ನಿಜಕ್ಕೂ ಅಚ್ಚರಿಯೇ ಸರಿ!

ವಾಟ್ಸಾಪ್‌ ವಿವ್‌ಒನ್ಸ್‌ ಫೀಚರ್ಸ್‌ ಇದೀಗ ವೆಬ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಲಭ್ಯವಾಗಲಿದೆ. ಇದನ್ನು ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಪರಿಚಯಿಸಲಾಗಿದೆ. ಇದರಿಂದ "ಒಮ್ಮೆ ವೀಕ್ಷಿಸಿ" (ವ್ಯೂಒನ್ಸ್‌)ಆಯ್ಕೆಯನ್ನು ಸೆಟ್‌ ಮಾಡುವ ಬಟನ್‌ ವಾಟ್ಸಾಪ್‌ ವೆಬ್‌ ಹಾಗೂ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಸಿಗಲಿದೆ. ಇದನ್ನುವಿಂಡೋಸ್ ಪ್ಲಾಟ್‌ಫಾರ್ಮ್‌ಗಾಗಿ ವಾಟ್ಸಾಪ್‌ ನಲ್ಲಿನ ಡ್ರಾಯಿಂಗ್ ಎಡಿಟರ್‌ನಲ್ಲಿರುವ ಟೈಟಲ್‌ ಬಾರ್‌ನಲ್ಲಿ ಕಾಣಬಹುದು.

ಸದ್ಯ ಈ ಫೀಚರ್ಸ್‌ ಕೆಲವು ಅರ್ಹ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಡೆಸ್ಕ್‌ಟಾಪ್ ಮತ್ತು ವೆಬ್ ಅಪ್ಲಿಕೇಶನ್‌ ಬಳಕೆದಾರರಿಗೆ ಪರಿಚಯಿಸಲಾಗುತ್ತದೆ. ಇನ್ನು ವ್ಯೂ ಒನ್ಸ್ ಫೀಚರ್ಸ್‌ ವಿಂಡೋಸ್ ಮತ್ತು ಮ್ಯಾಕೋಸ್ ಬಿಲ್ಡ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೇ ನೋಡಿದರೆ ಈ ಫೀಚರ್ಸ್‌ ಅನ್ನು ವಾಟ್ಸಾಪ್‌ ಈ ಹಿಂದೆಯೆ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಪರಿಚಯಿಸಿತ್ತು, ಆದರೆ ಸಾರ್ವಜನಿಕ ಸಲಹೆಗಳು ಮತ್ತು ಬೇಡಿಕೆಗಳ ಮೇರೆಗೆ ಇದನ್ನು ಹಿಂಪಡೆದುಕೊಂಡಿತ್ತು.

ವಾಟ್ಸಾಪ್‌ನಿಂದ ಬಂತು ಗುಡ್‌ನ್ಯೂಸ್‌! ಈ ನಿರ್ಧಾರ ನಿಜಕ್ಕೂ ಅಚ್ಚರಿಯೇ ಸರಿ!

ಸದ್ಯ ಬಳಕೆದಾರರ ಕೋರಿಕೆಯ ಮೇರೆಗೆ ಈ ಫೀಚರ್ಸ್‌ ಅನ್ನು ಮತ್ತೆ ಡೆಸ್ಕ್‌ಟಾಪ್‌ ಆವೃತ್ತಿಯಲ್ಲಿ ಪರಿಚಯಿಸಿದೆ. ಈ ಫೀಚರ್ಸ್‌ ಅನ್ನು ಸೆಟ್‌ ಮಾಡಿದರೆ ವಾಟ್ಸಾಪ್‌ನಲ್ಲಿ ಯಾವುದೇ ಸ್ಟೋರೇಜ್‌ ಸಮಸ್ಯೆ ಉಂಟಾಗುವುದಿಲ್ಲ. ಮಿಡಿಯಾ ಫೈಲ್‌ ಅನ್ನು ಒಮ್ಮೆ ವೀಕ್ಷಿಸಿದ ನಂತರ ತನ್ನಷ್ಟಕ್ಕೆ ತಾನೇ ಮೀಡಿಯಾಫೈಲ್‌ ಮಾಯಾವಾಗಲಿದೆ. ಇದೇ ಕಾರಣಕ್ಕೆ ವ್ಯೂ ಒನ್ಸ್‌ ಫೀಚರ್ಸ್‌ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಇನ್ನು ಇತ್ತೀಚಿಗೆ ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ಗೆ ಸಂಬಂಧಿಸಿದಂತೆ ಹೊಸ ಸೇವಾ ನಿಯಮಗಳನ್ನು ಅಪ್ಡೇಟ್‌ ಮಾಡಿದೆ. ಅದರಂತೆ ಇನ್ಮುಂದೆ ವಾಟ್ಸಾಪ್‌ ಚಾಟ್‌ಬ್ಯಾಕಪ್‌ ಸಂಪೂರ್ಣ ಉಚಿತಾವಗಿರುವುದಿಲ್ಲ. ಗೂಗಲ್‌ ಡ್ರೈವ್‌ನಲ್ಲಿ ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಮಾಡಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಹೊಸ ನಿಯಮವು ಈಗಾಗಲೇ ವಾಟ್ಸಾಪ್‌ ಬಿಟಾ ಬಳಕೆದಾರರಿಗೆ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ವಾಟ್ಸಾಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌ನಿಂದ ಬಂತು ಗುಡ್‌ನ್ಯೂಸ್‌! ಈ ನಿರ್ಧಾರ ನಿಜಕ್ಕೂ ಅಚ್ಚರಿಯೇ ಸರಿ!

ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಗೂಗಲ್‌ ಡ್ರೈವ್‌ ಕೂಡ 15 GB ಉಚಿತ ಕ್ಲೌಡ್‌ ಸ್ಟೋರೇಜ್‌ ಅನ್ನು ನೀಡುತ್ತಿದೆ. ಈ ಸ್ಟೋರೇಜ್‌ ಅನ್ನು ಜಿ ಮೇಲ್‌, ಗೂಗಲ್‌ ಫೋಟೋಸ್‌, ಇತರೆ ಫೈಲ್‌ಗಳನ್ನು ಸ್ಟೋರ್‌ ಮಾಡಲು ಬಳಕೆದಾರರು ಬಳಸುತ್ತಿದ್ದಾರೆ. ಇದೆಲ್ಲವನ್ನು ಮೀರಿ ಇನ್ನಷ್ಟು ಸ್ಟೋರೇಜ್‌ ಉಳಿದಿದ್ದರೆ ನೀವು ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಅನ್ನು ಉಚಿತವಾಗಿಯೇ ಉಳಿಸಬಹುದು. ಒಂದು ವೇಳೆ ನಿಮ್ಮ ಗೂಗಲ್‌ ಡ್ರೈವ್‌ ಸ್ಟೋರೇಜ್‌ 15 GB ಮೀರಿದರೆ ನೀವು ಗೂಗಲ್‌ ಒನ್‌ ನಂತಹ ಚಂದಾದಾರಿಕೆ ಖರೀದಿಸುವುದು ಅನಿವಾರ್ಯವಾಗಲಿದೆ. ಇದರಿಂದ ನೀವು 15 GB ಕೋಟಾದೊಳಗೆ ಗೂಗಲ್‌ ಡ್ರೈವ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಹೊಂದಿದ್ದರೆ ವಾಟ್ಸಾಪ್‌ ಚಾಟ್‌ಗಳನ್ನು ಉಚಿತವಾಗಿಯೇ ಬ್ಯಾಕಪ್‌ ಮಾಡಬಹುದು.

Best Mobiles in India

English summary
WhatsApp View Once feature returns to Web and Desktop: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+