ಸದ್ಯದಲ್ಲೇ ವಾಟ್ಸಾಪ್ ವೆಬ್ ಸೇರಲಿದೆ ಹೊಸ ಆಕರ್ಷಕ ಫೀಚರ್ಸ್!
ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ವಾಟ್ಸಾಪ್ ವೆಬ್ ವೃತ್ತಿ ಬಳಸುವವರು ಈ ಫೀಚರ್ಸ್ ಪ್ರಯೋಜನಗಳನ್ನು ಇಂದಿನಿಂದಲೇ ಪಡೆದುಕೊಳ್ಳಬಹುದು.

ಹೌದು, ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಗ್ಲೋಬಲ್ ವಾಯ್ಸ್ ನೋಟ್ ಪ್ಲೇಯರ್ ಫೀಚರ್ಸ್ ಪರಿಚಯಿಸಿದೆ. ಸದ್ಯ ಈ ಫೀಚರ್ಸ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಇದು ಕೆಲವು ವಾರಗಳ ಹಿಂದೆ iOS ನಲ್ಲಿ ಲಭ್ಯವಾಗಿದ್ದು, ಇದೀಗ ವೆಬ್ ಆವೃತ್ತಿಯಲ್ಲಿ ಲಭ್ಯವಿದೆ. ನಿಮ್ಮ ಸಿಸ್ಟಂನಲ್ಲಿ ನೀವು ಹೊಸ ಬೀಟಾ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಿದ್ದರೆ ಈ ಫೀಚರ್ಸ್ ನಿಮಗೆ ಲಭ್ಯವಾಗಲಿದೆ. ಇನ್ನು ಈ ಫೀಚರ್ಸ್ ಸಾಕಷ್ಟು ಆಕರ್ಷಕವಾಗಿದ್ದು ಉಪಯುಕ್ತವಾಗಿದೆ. ಹಾಗಾದ್ರೆ ವಾಟ್ಸಾಪ್ ಪರಿಚಯಿಸಿದ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ತನ್ನ ಬೀಟಾ ಅಪ್‌ಡೇಟ್‌ನಲ್ಲಿ ವೆಬ್ ಬಳಕೆದಾರರಿಗೆ ಗ್ಲೋಬಲ್ ವಾಯ್ಸ್ ನೋಟ್ ಪ್ಲೇಯರ್ ಫೀಚರ್ಸ್ ಪರಿಚಯಿಸಿದೆ. ಇದರಿಂದ ಬಳಕೆದಾರರು ತಮ್ಮ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಫ್ ಬಳಸುವಾಗಲೂ ಇತರ ಅಪ್ಲಿಕೇಶನ್‌ಗಳಿಗೆ ಬದಲಾಯಿಸಬಹುದು. ಅಲ್ಲದೆ ಬ್ಯಾಕ್‌ಗ್ರೌಡ್‌ನಲ್ಲಿ ವಾಯ್ಸ್ ನೋಟ್ ಅನ್ನು ಕೇಳಬಹುದು. ಇದಕ್ಕೆ ಬದಲಾಗಿ, ನೀವು ಚಾಟ್ ಪಟ್ಟಿಯ ಕೆಳಭಾಗದಲ್ಲಿ ಹೊಸ ಆಡಿಯೊ ಪ್ಲೇಯರ್ ಅನ್ನು ಕಾಣಬಹುದಾಗಿದೆ. ಅಲ್ಲದೆ ಬಳಕೆದಾರರು ತಮ್ಮ ಡಿಸ್‌ಪ್ಲೇ ಚಿತ್ರವನ್ನು ಪ್ಲೇಯರ್‌ನ ಎಡಭಾಗದಲ್ಲಿ ಇರಿಸಿರುವುದರಿಂದ ವಾಯ್ಸ್ ನೋಟ್ ಕಳುಹಿಸುವವರನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ವಾಟ್ಸಾಪ್‌ನ ಈ ಫೀಚರ್ಸ್ ಸದ್ಯ ವಾಟ್ಸಾಪ್ ವೆಬ್ ಬೀಟಾ ಆವೃತ್ತಿ 2.2204.4.1 ಅಥವಾ 2.2204.5ನಲ್ಲಿ ಲಭ್ಯವಿದೆ. ಈ ಫೀಚರ್ಸ್ ಇನ್ನು ಕೂಡ ಪರೀಕ್ಷಾ ಹಂತದಲ್ಲಿಯೇ ಇದೆ. ಆದ್ದರಿಂದ ಸಾಮಾನ್ಯ ಬಳಕೆದಾರರು ಅಧಿಕೃತ ಅಪ್ಡೇಟ್ ಮೂಲಕ ಫೀಚರ್ಸ್ ಅನ್ನು ಪಡೆಯಲು ಇನ್ನಷ್ಡು ದಿನ ಕಾಯಬೇಕಾಗಬಹುದು. ಈ ಫೀಚರ್ಸ್‌ನಲ್ಲಿ ಯಾವುದೇ ದೋಷ ಕಂಡುಬರದಿದ್ದಲ್ಲಿ ಈ ಫೀಚರ್ಸ್ ಎಲ್ಲರಿಗೂ ಲಭ್ಯವಾಗಲಿದೆ. ಇನ್ನು ವಾಟ್ಸಾಪ್ ವೆಬ್ ಮೂಲಕ ತಮ್ಮ ಪ್ರೊಫೈಲ್ ಕಾಣುವಂತೆ ಮಾಡಲು ಬಳಕೆದಾರರ ಮೊಬೈಲ್‌ನಲ್ಲಿ ಇಂಟರ್‌ನೆಟ್ ಕನೆಕ್ಟಿವಿಟಿ ಅಗತ್ಯವಿರಲಿದೆ.

ಇನ್ನು ವಾಟ್ಸಾಪ್ ಶೀಘ್ರದಲ್ಲೇ ವೈಯುಕ್ತಿಕ ಚಾಟ್ ಬ್ಯಾಕ್‌ಗ್ರೌಂಡ್ ವಾಲ್ ಪೇಪರ್‌ನಲ್ಲಿ ಹೊಸ ಫೀಚರ್ಸ್ ಪರಿಚಯಿಸಲಿದೆ. ಇದರಿಂದ ನಿಮ್ಮ ವೈಯುಕ್ತಿಕ ಚಾಟ್ ವಾಲ್‌ಪೇಪರ್‌ಗಳನ್ನು ವಾಯ್ಸ್ ಕಾಲ್‌ನಲ್ಲಿ ಬದಲಾಯಿಸಲಿದೆ. ಇದನ್ನು ನಿಮ್ಮ ಅನುಭವಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಇನ್ನು ವಾಟ್ಸಾಪ್ ಈಗಾಗಲೇ ಪ್ರತಿ ಚಾಟ್ ಆಧಾರಿತ ವಾಲ್‌ಪೇಪರ್ ಫೀಚರ್ಸ್ ಕೂಡ ಪರಿಚಯಿಸಿತ್ತು. ಇದರಿಂದ ಪ್ರತಿ ಚಾಟ್ ಮತ್ತು ಗುಂಪಿಗೆ ವಿಭಿನ್ನ ಚಾಟ್ ಬ್ಯಾಕ್‌ಗ್ರೌಂಡ್ ಸೆಟ್ ಮಾಡಲು ಅವಕಾಶ ನೀಡಿದೆ.

ಇದಲ್ಲದೆ ವಾಟ್ಸಾಪ್ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ಅಲ್ಲದೆ ನೊಟಿಫಿಕೇಶನ್ ಜೊತೆಗೆ ಗ್ರೂಪ್ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ಇನ್ನು ವಾಟಯ್ಸ್ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ. ವಾಯ್ಸ್ ನೋಟ್ ತೆಗೆದುಕೊಳ್ಳುವಾಗ ಯಾರಾದರೂ ಅಡ್ಡಿಪಡಿಸಿದಾಗ ವಿರಾಮ ತೆಗೆದುಕೊಳ್ಳಬೇಕಾದಾಗ ಈ ಫೀಚರ್ಸ್ ಉಪಯುಕ್ತವಾಗಿರುತ್ತದೆ.

ಇದರೊಂದಿಗೆ ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್ ಮೈಗ್ರೇಷನ್ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಇದಕ್ಕೂ ಮೊದಲು ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ತಮ್ಮ ಚಾಟ್ ಹಿಸ್ಟರಿಯನ್ನು ಟ್ರಾನ್ಸಫರ್ ಮಾಡುವುದು ಕಷ್ಟಕರವಾಗಿತ್ತು. ಇದರಿಂದ ಹೊಸ ಆಪರೇಟಿಂಗ್ ಸಿಸ್ಟಮ್‌ಗೆ ಹೋಗುವುದರಿಂದ ಹಳೆಯ ಚಾಟ್‌ಗಳನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ ಇದೀಗ ವಾಟ್ಸಾಫ್ ತನ್ನ ಚಾಟ್ ಬಿಸ್ಟರಿ ಟ್ರಾನ್ಸಫರ್ ವಿಷಯವನ್ನು ಸಾಕಷ್ಟು ಸರಳಗೊಳಿಸಿದೆ. ಸದ್ಯ iOS ಬಳಕೆದಾರರು ಈಗ ತಮ್ಮ ಚಾಟ್‌ಗಳನ್ನು ಸ್ಯಾಮ್‌ಸಂಗ್ ಹಾಗೂ ಪಿಕ್ಸೆಲ್ ಡಿವೈಸ್‌ಗಳಿಗೆ ಸುಲಭವಾಗಿ ವರ್ಗಾಯಿಸಬಹುದು.ಆದರೆ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 12 ಚಾಲನೆಯಲ್ಲಿರುವ ಎಲ್ಲಾ ಫೋನ್‌ಗಳು ಚಾಟ್ ಟ್ರಾನ್ಸಫರ್ ಫೀಚರ್ಸ್ ಪಡೆಯಲಿವೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








