ಇನ್ಮುಂದೆ ವಾಟ್ಸಾಪ್ ವೆಬ್‌ನಲ್ಲಿಯೂ ಲಭ್ಯವಾಗಲಿದೆ ಈ ಉಪಯುಕ್ತ ಫೀಚರ್ಸ್!
ಫೇಸ್‌ಬುಕ್ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಇತರೆ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗಿಂತ ಹೆಚ್ಚಿನ ಪ್ರಸಿದ್ಧಿ ಪಡೆದುಕೊಂಡಿದೆ. ಕಾಲಕಾಲಕ್ಕೆ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇನ್ನು ವಾಟ್ಸಾಪ್ ವೆಬ್ ಆವೃತ್ತಿಯಲ್ಲೂ ಕೂಡ ಲಭ್ಯವಿದೆ. ಇದೀಗ ವೆಬ್ ಆವೃತ್ತಿಯಲ್ಲಿ ವಾಟ್ಸಾಪ್ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ.

ಹೌದು, ವಾಟ್ಸಾಪ್ ತನ್ನ ವೆಬ್ ಮತ್ತು ಡೆಸ್ಕಟಾಪ್ ಆವೃತ್ತಿಯಲ್ಲಿ ಹೊಸ ಡ್ರಾಯಿಗ್ ಟೂಲ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಈ ಟೂಲ್ಸ್ ಪರಿಚಯಿಸಿದ ನಂತರ ವಾಟ್ಸಾಪ್ ವೆಬ್ ಬಳಕೆದಾರರು ತಮ್ಮ ಸಂಪರ್ಕಗಳೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳುವ ಮೊದಲು ಅದನ್ನು ಎಡಿಟ್ ಮಾಡುವ ಹೊಸ ಆಯ್ಕೆಗಳ ಗುಂಪನ್ನು ಪಡೆಯುತ್ತಾರೆ. ವಾಟ್ಸಪ್ ವೆಬ್ ಮತ್ತು ಡೆಸ್ಕ್ ಟಾಪ್ ಆಪ್ ಬಳಕೆದಾರರು ಶೇರ್ ಮಾಡುವ ಮುನ್ನ ಚಿತ್ರಕ್ಕೆ ಎಮೋಜಿಗಳು, ಸ್ಟಿಕ್ಕರ್ ಗಳು, ಪಠ್ಯ ಮತ್ತು ಡೂಡಲ್ ಸೇರಿಸಲು ಸಾಧ್ಯವಾಗಲಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್ ತನ್ನ ವೆಬ್ ಆವೃತ್ತಿಯಲ್ಲಿ ಫೊಟೋಗಳನ್ನು ಎಡಿಟ್ ಮಾಡುವ ಹೊಸ ಟೂಲ್ಸ್ ಪರಿಚಯಿಸಲಿದೆ. ಇದರಿಂದ ನೀವು ಯಾವುದೇ ಕಂಟ್ಯಾಕ್ಟ್ ಜೊತೆ ಫೋಟೋ ಶೇರ್ ಮಾಡುವ ಮುನ್ನ ಎಡಿಟ್ ಮಾಡಬಹುದಾಗಿದೆ. ಅಲ್ಲದೆ ಎಮೋಜಿಗಳು, ಸ್ಟಿಕ್ಕರ್‌ಗಳು, ಡೂಟಲ್ ಅನ್ನು ಸಹ ಸೇರಿಸಲು ಅನುಕೂಲವಾಗಲಿದೆ. ಅಲ್ಲದೆ ಬಳಕೆದಾರರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೊದಲು ಚಿತ್ರವನ್ನು ಕ್ರಾಪ್ ಮಾಡಲು ಸಹ ಸಾಧ್ಯವಾಗುತ್ತದೆ. ಈ ಆಯ್ಕೆಗಳು ವಾಟ್ಸಾಪ್ ಬಳಕೆದಾರರು ಕಂಪನಿಯ ಡೆಸ್ಕ್‌ಟಾಪ್ ಆಧಾರಿತ ಆಪ್‌ಗಳ ಮೂಲಕ ಚಿತ್ರವನ್ನು ಹಂಚಿಕೊಳ್ಳುವ ಮೊದಲು ಪಡೆಯುವ ಆಯ್ಕೆಗಳಂತೆಯೇ ಇರುತ್ತವೆ.

ಇನ್ನು ವಾಟ್ಸಾಪ್ ಈ ಫೀಚರ್ಸ್ ಅನ್ನು ವಾಟ್ಸಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಆಧಾರಿತ ಆಪ್‌ಗಳಲ್ಲಿ ಆರಂಭಿಸಲು ಆರಂಭಿಸಿದೆ ಎಂದು ಬ್ಲಾಗ್ ಸೈಟ್‌ನಲ್ಲಿ ಹೇಳಲಾಗಿದೆ. ಇನ್ನು ಈ ಫೀಚರ್ಸ್‌ಗೆ ಪ್ರವೇಶ ಪಡೆಯಲು ಎಲ್ಲಾ ಬಳಕೆದಾರರು ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಆಪ್‌ಗಳ ಇತ್ತೀಚಿನ ಆವೃತ್ತಿಯನ್ನು ಬಳಸಬೇಕಾಗುತ್ತದೆ. ಇದಲ್ಲದೆ ವಾಟ್ಸಾಪ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಆಪ್‌ಗಳಿಗೆ ಹೊಸ ಎಮೋಜಿಗಳನ್ನು ತರುವ ಕೆಲಸ ಮಾಡುತ್ತಿದೆ.

ಈ ಅಪ್‌ಡೇಟ್ ಎಮೋಜಿಪೀಡಿಯಾದ ಇತ್ತೀಚಿನ ಅಪ್‌ಡೇಟ್‌ನ ಭಾಗವಾಗಿರುವ ಐಫೋನ್‌ಗಳು ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಹಲವಾರು ಹೊಸ ಎಮೋಜಿಗಳನ್ನು ತರುತ್ತದೆ. ಈ ಹೊಸ ಎಮೋಜಿಗಳು ಐಒಎಸ್ ಆವೃತ್ತಿ 2.21.16.10 ಮತ್ತು ಆಂಡ್ರಾಯ್ಡ್ ಆವೃತ್ತಿ 2.21.16.10 ಗಾಗಿ ವಾಟ್ಸಾಪ್ ಬೀಟಾದಲ್ಲಿ ಲಭ್ಯವಿದೆ. ಹೊಸ ಎಮೋಜಿಗಳಲ್ಲಿ ಬರೆಯುವ ಹೃದಯದ ಎಮೋಜಿಗಳು, ವಿವಿಧ ಲಿಂಗ ಗುರುತುಗಳಿರುವ ಎಮೋಜಿ ಪಾತ್ರಗಳು ಮತ್ತು ಇತರರಲ್ಲಿ ನಿಟ್ಟುಸಿರು ಬಿಡುವ ಎಮೊಜಿಗಳು ಸೇರಿವೆ.

ಇದಲ್ಲದೆ ವಾಟ್ಸಾಪ್ ಇತ್ತೀಚಿಗೆ ಒನ್ಸ್ ವ್ಯೂ ಎನ್ನುವ ಫೀಚರ್ಸ್ ಅನ್ನು ಕೂಡ ಪರಿಚಯಿಸಿದೆ. ಈ ಫೀಚರ್ಸ್ ಸ್ವಯಂಚಾಲಿತವಾಗಿ ಒಂದು ನಿರ್ದಿಷ್ಟ ಅವಧಿಯ ನಂತರ ಸಂದೇಶಗಳನ್ನು ತೊಡೆದುಹಾಕುವ ಮೂಲಕ ಬಳಕೆದಾರರ ಗೌಪ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ವಾಟ್ಸಾಪ್‌ನಿಂದ ಬರುವ ಫೋಟೋಗಳಿಂದ ಸ್ಮಾರ್ಟ್‌ಫೋನ್‌ಗಳಲ್ಲಿ ಜಾಗು ತುಂಬಿಹೋಗಬಹುದು, ನಿಮ್ಮ ಕ್ಯಾಮೆರಾ ರೋಲ್ ಅನ್ನು ಅಸ್ತವ್ಯಸ್ತಗೊಳಿಸಬಹುದು. ಇದರಿಂದ ಸ್ಟೋರೇಜ್ ಸ್ಪೇಸ್‌ಗೆ ಸಮಸ್ಯೆಯಾಗಬಹುದು. ಇದಕ್ಕಾಗಿ ನೀವು ನೂರಾರು ಅಥವಾ ಸಾವಿರಾರು ಫೋಟೋಗಳು ಮತ್ತು ವೀಡಿಯೊಗಳನ್ನು ಶೋಧಿಸಿ ನಂತರ ಅವುಗಳನ್ನು ತೆಗೆದುಹಾಕಬೇಕಾಗುತ್ತದೆ. ಇವುಗಳನ್ನು ಶೋದಿಸುವ ಬದಲು ವ್ಯೂ ಒನ್ಸ್ ಫೀಚರ್ಸ್ ಇದ್ದರೆ ತನ್ನಿಂದ ತಾನೆ ಒಂದು ನಿರ್ದಿಷ್ಟ ಅವಧಿಯ ನಂತರ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಲಿದೆ.


Click it and Unblock the Notifications








