Just In
Don't Miss
- News
2 ಪಟ್ಟಣ ಪಂಚಾಯತಿ ಹಾಗೂ ವಿವಿಧ 27 ವಾರ್ಡ್ಗಳ ಚುನಾವಣಾ ದಿನಾಂಕ ಪ್ರಕಟ
- Automobiles
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- Movies
'ತಲೆದಂಡ' ಸಿನಿಮಾಕ್ಕೆ ಅನ್ಯಾಯ: ಮನವಿ ಮಾಡಿದ ಸಂಚಾರಿ ವಿಜಯ್
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್ ವೆಬ್ ಆವೃತ್ತಿಯಲ್ಲೂ ಬರಲಿದೆ ವಿಡಿಯೋ ಕಾಲ್ ಫೀಚರ್ಸ್!
ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್. ಜಾಗತಿಕವಾಗಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಹಂತಹಂತವಾಗಿ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಆಪ್ಡೇಟ್‌ಗಳನ್ನ ಮಾಡುತ್ತಾ ಬಂದಿದೆ. ಇನ್ನು ವಾಟ್ಸಾಪ್ ಮೊಬೈಲ್ ಅಪ್ಲಿಕೇಶನ್ ಮತ್ತು ಕಂಪ್ಯೂಟರ್‌ನಲ್ಲಿ ವೆಬ್ ಆವೃತ್ತಿಯಲ್ಲಿ ಲಭ್ಯವಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ವೆಬ್ ಆವೃತ್ತಿಯಲ್ಲಿ ಹೊಸದೊಂದು ಫೀಚರ್ಸ್ ಪರಿಚಯಿಸಲು ಸಿದ್ದತೆ ನಡೆಸಿದೆ.

ಹೌದು, ವಾಟ್ಸಾಪ್ ತನ್ನ ವೆಬ್ ಆವೃತ್ತಿಯಲ್ಲಿ ಹೊಸ ಆಪ್ಡೇಟ್ ಮಾಡುವುದಕ್ಕೆ ಮುಂದಾಗಿದೆ. ಈ ಮೂಲಕ ತನ್ನ ವೆಬ್ ಅಪ್ಲಿಕೇಶನ್ ಅನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಸದ್ಯ ಲಭ್ಯ ಮಾಹಿತಿ ಪ್ರಕಾರ ವಾಟ್ಸಾಪ್ ವೆಬ್‌ನಲ್ಲಿ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಮಾಡುವುದಕ್ಕೆ ಅವಕಾಶ ನೀಡುವ ಫೀಚರ್ಸ್ ಅನ್ನು ಪರಿಚಯಿಸುವುದಕ್ಕೆ ವಾಟ್ಸಾಪ್ ಸಿದ್ದತೆ ನಡೆಸಿದ್ದ, ಇದು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಇನ್ನು ಈ ಹೊಸ ಫೀಚರ್ಸ್‌ನ ವಿಶೇಷತೆ ಏನು? ಇದರ ಬಳಕೆ ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಪ್ರಸ್ತುತ ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾತ್ರ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಬೆಂಬಲಿಸುತ್ತದೆ. ಜೊತೆಗೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮಾಡಬಹುದಾದ ಎಲ್ಲ ಪ್ರಮುಖ ಕೆಲಸಗಳನ್ನು ಮಾಡಲು ವಾಟ್ಸಾಪ್ ವೆಬ್‌ನಲ್ಲಿಯೂ ಸಹ ಅವಕಾಶ ನೀಡುತ್ತದೆ. ಆದರೆ ವೆಬ್ ಆವೃತ್ತಿಯಲ್ಲಿ ಇಲ್ಲಿಯವರೆಗೆ ವಾಯ್ಸ್ ಮತ್ತು ವೀಡಿಯೊ ಕರೆ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಅಲ್ಲದೆ ಹೊಸ ಸಂಪರ್ಕಗಳನ್ನು ಸೇರಿಸುವಂತಹ ಫೀಚರ್ಸ್‌ಗಳನ್ನ ಸಹ ನೀಡಿಲ್ಲ. ಇದೀಗ ಶೀಘ್ರದಲ್ಲೇ ವಾಟ್ಸಾಪ್ ವೆಬ್‌ನಲ್ಲಿ ಕರೆಯನ್ನು ಮಾಡುವುದಕ್ಕೆ ಅವಕಾಶ ನೀಡುವ ಫೀಚರ್ಸ್ ಬಿಡುಗಡೆ ಆಗಲಿದೆ.

ವಾಟ್ಸಾಪ್ ವೆಬ್‌ನಲ್ಲಿಯೂ ವಿಡಿಯೋ ಮತ್ತು ವಾಯ್ಸ್ ಕಾಲ್ ಬೆಂಬಲ ಇದ್ದರೆ ಎಷ್ಟು ಚೆಂದ ಎಂದು ಅಂದುಕೊಂಡಿದ್ದವಾಟ್ಸಾಪ್ ಬಳಕೆದಾರರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ. ಇನ್ನು ವಾಟ್ಸಾಪ್ ವೆಬ್‌ನಲ್ಲಿ ವಾಯ್ಸ್ ಕಾಲ್ ಮತ್ತು ವಿಡಿಯೋ ಕಾಲ್ ಫೀಚರ್ಸ್ ಹೇಗಿರಲಿದೆ ಎನ್ನುವ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ವಾಟ್ಸಾಪ್ ಸಂಸ್ಥೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ. ಇದರಂತೆ ವಾಟ್ಸಾಪ್ ಕಾಲ್ ಮಾಡಲು ಸ್ಮಾರ್ಟ್‌ಫೋನ್ ಬಳಸುವ ಬದಲು ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್‌ನ ವಿಶಾಲ ಪರದೆಯನ್ನು ಬಳಸಬಹುದಾಗಿದೆ.

ಇನ್ನು ವಾಟ್ಸಾಪ್ ವೆಬ್‌ನಲ್ಲಿ ಒಳಬರುವ ಕರೆ ಇದ್ದಾಗ ಹೊಸ ಪಾಪ್-ಅಪ್ ವಿಂಡೋ ಪರದೆಯ ಮೇಲೆ ಕಾಣಿಸುತ್ತದೆ. ವಾಟ್ಸಾಪ್ ವೆಬ್‌ನಿಂದಲೇ ಕರೆಯನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ನೀವು ಆಯ್ಕೆ ಮಾಡುವ ಅವಕಾಶವನ್ನು ಸಹ ನೀಡಿದೆ ಎನ್ನಲಾಗಿದೆ. ಅಲ್ಲದೆ ನೀವು ವಾಟ್ಸಾಪ್ ವೆಬ್‌ನಲ್ಲಿ ಕರೆ ಮಾಡಿದಾಗ ಸಣ್ಣ ವಿಂಡೋ ಕರೆ ಕೊನೆಗೊಳಿಸಲು, ವೀಡಿಯೊಗೆ ಬದಲಾಯಿಸಲು, ಮೈಕ್ರೊಫೋನ್ ಆಫ್ ಮಾಡಲು ಮತ್ತು ಮೆನು ಬಟನ್ ಕ್ರಿಯೆಗಳೊಂದಿಗೆ ಪಾಪ್-ಅಪ್ ಆಗುತ್ತದೆ. ಜೊತೆಗೆ ಈ ಅಪ್‌ಡೇಟ್‌ನಲ್ಲಿ ಗ್ರೂಪ್ ವಾಯ್ಸ್ ಮತ್ತು ವೀಡಿಯೊ ಕರೆಗಳನ್ನು ಸಹ ಬೆಂಬಲಿಸಲಾಗುತ್ತದೆ ಎಂದು ವಾಟ್ಸಾಪ್‌ನ ಮೂಲಗಳು ಖಚಿತಪಡಿಸಿವೆ.

ಸದ್ಯ ವಾಟ್ಸಾಪ್ ವೆಬ್ ಆವೃತ್ತಿಯು ಸಹ ವಿಡಿಯೋ ಕರೆಯನ್ನ ಬೆಂಬಲಿಸುವುದರಿಂದ ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಮೀಟಿಂಗ್ ಅನ್ನು ಮಾಡುವುದಕ್ಕೆ ಅವಕಾಶ ಸಿಗಲಿದೆ. ಅಲ್ಲದೆ ವಾಟ್ಸಾಪ್ ಬಳಕೆದಾರರು ತಮ್ಮ ಫೋನ್‌ಗಳಿಗೆ ಬದಲಾಯಿಸದೆ ಡೆಸ್ಕ್‌ಟಾಪ್‌ನಿಂದ ತ್ವರಿತವಾಗಿ ಕರೆಗಳನ್ನು ಮಾಡಲು ವಾಟ್ಸಾಪ್ ವೆಬ್ ಸುಲಭವಾದ ಮಾರ್ಗವಾಗಿದೆ. ಇನ್ನು ಈ ಫೀಚರ್ಸ್ ಶೀಘ್ರದಲ್ಲಿಯೇ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190