ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ವಾಟ್ಸ್‌ಆಪ್‌ನಿಂದ ದಿಟ್ಟಕ್ರಮ..!

By GizBot Bureau
|

2019 ರ ಚುನಾವಣೆಯ ವೇಳೆ ಯಾವುದೇ ತಪ್ಪು ಸಂದೇಶಗಳು ವಾಟ್ಸ್ ಆಪ್ ಮೂಲಕ ಹರಿದಾಡದಂತೆ ತಡೆಯಲು ಏನು ಮಾಡಬೇಕು? ವಾಟ್ಸ್ ಆಪ್ ನ ಸೇವೆಯು ಉತ್ತಮ ರೀತಿಯಲ್ಲಿ ನಡೆಯುವಂತೆ ಮತ್ತು ಈ ಸಂದರ್ಬದಲ್ಲಿ ಕೆಟ್ಟ ರೀತಿಯಲ್ಲಿ ಯಾರೂ ಕೂಡ ವಾಟ್ಸ್ ಆಪ್ ನ್ನು ಬಳಕೆ ಮಾಡದಂತೆ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ವಾಟ್ಸ್ ಆಪ್ ನ ಯುಎಸ್ ಪ್ರಧಾನ ಕಛೇರಿಯ ಹಿರಿಯ ಅಧಿಕಾರಿಗಳು ಮತ್ತು ಭಾರತೀಯ ಚುಣಾವಣಾ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.

ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ವಾಟ್ಸ್‌ಆಪ್‌ನಿಂದ ದಿಟ್ಟಕ್ರಮ..!

ವಾಟ್ಸ್ ಆಪ್ ಸಂಸ್ಥೆ ಚುನಾವಣಾ ಪ್ರಾಧಿಕಾರಕ್ಕೆ 2019 ರ ಚುನಾವಣೆಯ ಮಾದರಿ ತಯಾರಾಗುವ ಸಮಯದಿಂದ ಹಿಡಿದು, ಪ್ರಮುಖವಾಗಿ ನೀತಿ ಸಂಹಿತೆ ಜಾರಿಯಾಗುವ 48 ಗಂಟೆಗಳ ಮುಂಚೆಯೂ ಕೂಡ ಸ್ಪ್ಯಾಮ್ ಮೆಸೇಜ್ ಗಳ ಬಗ್ಗೆ ಜಾಗೃತಿ ವಹಿಸಲಾಗುತ್ತದೆ ಮತ್ತು ಅವುಗಳು ಹರಡದಂತೆ ಸೂಕ್ತ ಭದ್ರತೆಯನ್ನ ವಹಿಸಲಾಗುತ್ತದೆ ಎಂಬ ಭರವಸೆಯನ್ನು ನೀಡಿದೆ.

ಇತ್ತೀಚೆಗೆ ಮೆಕ್ಸಿಕನ್ ಜನರಲ್ ಎಲೆಕ್ಷನ್ ಸಮಯದಲ್ಲಿ ಬಳಸಿದಂತೆ ಭಾರತದಲ್ಲೂ ಕೂಡ ವಾಟ್ಸ್ ಆಪ್ ಫೇಕ್ ನ್ಯೂಸ್ ವೆರಿಫಿಕೇಷನ್ ಮಾಡೆಲ್ ನ್ನು ಬಳಕೆ ಮಾಡುತ್ತದೆ ಎಂದು ತಿಳಿಸಲಾಗಿದೆ. ಹೆಸರು ಹೇಳಲು ಇಚ್ಛಿಸಿದ ವಾಟ್ಸ್ ಆಪ್ ನ ವ್ಯಕ್ತಿಯೊಬ್ಬರು ಈ ಸಭೆಯನ್ನು ನಡೆಸಿದ್ದಾರೆ ಎನ್ನಲಾಗಿದೆ ಮತ್ತು ಈ ತಂಡವು ಸಂಶೋಧಕರು, ಸಾರ್ವಜನಿಕ ನೀತಿ,ಗ್ರಾಹಕರ ಕಾರ್ಯಾಚರಣೆಗಳು ಮತ್ತು ವ್ಯವಹಾರ, ಅಭಿವೃದ್ಧಿ ಕಾರ್ಯಕರ್ತರೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದೆ.

ಹೆಸರು ಹೇಳಲು ಇಚ್ಛಿಸಿದ ಚುಣಾವಣಾ ಪ್ರಾಧಿಕಾರದ ಅಧಿಕಾರಿಯೂ ಕೂಡ ಈ ವಿಚಾರವನ್ನು ಖಾತ್ರಿ ಪಡಿಸಿದ್ದು ವಾಟ್ಸ್ ಆಪ್ ಚುಣಾವಣೆಯ ಸಂದರ್ಬದಲ್ಲಿ ಫೇಕ್ ನ್ಯೂಸ್ ಗಳು ಹರಡದಂತೆ ಕ್ರಮ ಕೈಗೊಳ್ಳಲಿದೆ ಮತ್ತು ನೀತಿ ಸಂಹಿತೆಯ ಜಾರಿಯಾಗುವ ಸಂದರ್ಬಕ್ಕಿಂತಲೂ ಮುನ್ನ ಕೂಡ ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿ ಹಬ್ಬದಂತೆ ಜಾಗರೂಕತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ವಾಟ್ಸ್‌ಆಪ್‌ನಿಂದ ದಿಟ್ಟಕ್ರಮ..!

ಭಾರತದಲ್ಲಿ ಚುನಾವಣಾ ಪ್ರಚಾರ ಕಾರ್ಯವು ಮತದಾನ ಆರಂಭವಾಗುವ 48 ಘಂಟೆಗಳಿಗೂ ಮುನ್ನವೇ ನಿಲ್ಲಿಸಲಾಗುತ್ತದೆ.

ವಾಟ್ಸ್ ಆಪ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ವೈಶಿಷ್ಟ್ಯಕ್ಕೆ ಮತ್ತು ವ್ಯಯಕ್ತಿಕ ಮಾಹಿತಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತದೆ ಎಲೆಕ್ಷನ್ ಕಮಿಷನ್ ಗೆ ತಿಳಿಸಿದೆ. ವಾಟ್ಸ್ ಆಪ್ ನ ಈ ತಂಡವು ಭಾರತದ ಕೆಲವು ಪ್ರಮುಖ ದೊಡ್ಡ ಬ್ಯಾಂಕ್ ಗಳ ಅಧಿಕಾರಿಗಳನ್ನು ಕೂಡ ಭೇಟಿ ಮಾಡಲಿದ್ದು, ಡಿಜಿಟಲ್ ಪೇಮೆಂಟ್ ಸಲ್ಯೂಷನ್ ನಿಟ್ಟಿನಲ್ಲಿ ನೆರವು ನೀಡುವಂತೆ ಕೋರಲಿದೆ ಎನ್ನಲಾಗಿದೆ.

ವಾಟ್ಸ್ ಆಪ್ ಸಂಸ್ಥೆ ಭಾರತವನ್ನು ಒಂದು ದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಿದೆ ಯಾಕೆಂದರೆ ಸುಮಾರು 200 ಮಿಲಿಯನ್ ಆಕ್ಟೀವ್ ಬಳಕೆದಾರರು ವಾಟ್ಸ್ ಆಪ್ ನಲ್ಲಿ ಫೆಬ್ರವರಿ 2018 ರ ಹೊತ್ತಿಗೆ ಇದ್ದರು. 2014 ರ ಮತದಾನದ ಡಾಟಾ ಪ್ರಕಾರ ಅದರಲ್ಲಿ ಸುಮಾರು 24.1ಶೇಕಡಾ ಮತದಾರರಿದ್ದಾರೆ.2019 ರ ಮತದಾನದ ಸಂದರ್ಬಕ್ಕೆ ಇದು ಖಂಡಿತದ ಹೆಚ್ಚಾಗಿಯೇ ಇರುತ್ತದೆ.

ಫೇಸ್ ಬುಕ್ ನ ಅಧಿಕಾರಿಗಳು ಕೂಡ ಜೂನ್ ನಲ್ಲಿ ಚುನಾವಣಾ ಪ್ರಾಧಿಕಾರದ ಅಧಿಕಾರಗಳನ್ನು ಇದೇ ರೀತಿ ಭೇಟಿ ಮಾಡಿ ಕೆಲವು ನಿಯಮಗಳಿಗೆ ಬದ್ಧರಾಗಿದ್ದರು ಎಂದು ತಿಳಿದುಬಂದಿದೆ.

ಭಾರತ ಮತ್ತು ಇತರೆ ಹಲವು ದೇಶಗಳಲ್ಲಿ ವಾಟ್ಸ್ ಆಪ್ ಮತ್ತು ಫೇಸ್ಬುಕ್ ಎರಡೂ ಕೂಡ ಸುಳ್ಳು ಸುದ್ದಿ ಮತ್ತು ವದಂತಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತದೆ. ಇದು ಅವರಿಗೆ ಕಳಂಕ ಎಂದು ಈಗಾಗಲೇ ವಾಟ್ಸ್ ಆಪ್ ಮತ್ತು ಫೇಸ್ಬುಕ್ ಅರಿತಿದೆ.

ವಾಟ್ಸ್ ಆಪ್ ಭಾರತಕ್ಕೆ ವೆರಿಫಿಕಾಡೋ ಮಾದರಿಯನ್ನು ತರಲು ಇಚ್ಛಿಸಿದೆ. ವೆರಿಫಿಕಾಡೋ. ಇದೊಂದು ಸಾಮೂಹಿಕ ಫ್ಯಾಕ್ಟ್ ತಪಾಸಣಾ ವ್ಯಾಯಾಮ ಎಂದು ಹೇಳಬಹುದು. ಈಗಾಗಲೇ ಇದನ್ನು ಮೆಕ್ಸಿಕನ್ ಚುನಾವಣೆಯ ಸಂದರ್ಬದಲ್ಲಿ ಬಳಕೆ ಮಾಡಲಾಗಿತ್ತು. ಇದೇ ಮಾದರಿಯನ್ನ ಬ್ರೆಝಿಲ್ ನಲ್ಲೂ ಕೂಡ ವಾಟ್ಸ್ ಆಪ್ ಬಳಕೆ ಮಾಡುತ್ತಿದೆ. 24 ಬೇರೆಬೇರೆ ಮಾಧ್ಯದಮ ಔಟ್ ಲೆಟ್ ಗಳನ್ನು ಪರೀಕ್ಷಿಸಿ ವೈರಲ್ ವಿಷಯ ಮತ್ತು ವದಂತಿಗಳನ್ನು ಪರೀಕ್ಷಿಸಿದೆ.

ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲು ವಾಟ್ಸ್‌ಆಪ್‌ನಿಂದ ದಿಟ್ಟಕ್ರಮ..!
ಬಿಜೆಪಿಯನ್ನು ಸುಮ್ಮನೆ ಟೀಕಿಸಿದ ಕಾಂಗ್ರೆಸ್:

ವಾಟ್ಸ್ ಆಪ್ ತಂಡವು ಬಿಜೆಪಿ ನಡುವೆ ಯಾವುದೇ ವಿಚಾರ ಸಂಕಿರಣವನ್ನು ಮಾಡಿರಲಿಲ್ಲ. ಆದರೆ ಅದರ ಕಾರ್ಯನಿರ್ವಾಹಕರು ಕಾಂಗ್ರೆಸ್ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದರು.

ಕಾಂಗ್ರೆಸ್ ನ ಐಟಿ ಸೆಲ್ ನ ಮುಖ್ಯಸ್ಥೆಯಾಗಿರುವ ದಿವ್ಯಾ ಸ್ಪಂದನ(ರಮ್ಯಾ) “ವಾಟ್ಸ್ ಆಪ್ ಯಾವುದೇ ವದಂತಿ ಮತ್ತು ಸುಳ್ಳು ಸುದ್ದಿಗಳು ಹರಡದಂತೆ ನೋಡಿಕೊಳ್ಳುವ ಭರವಸೆ ನೀಡಿದೆ. ಆದರೆ ನಾವು ಬಿಜೆಪಿಯವರು ಸುಳ್ಳು ಸುದ್ದಿಗಳನ್ನು ಹರಡಿರುವುದು ಎಂಬುದನ್ನು ತಿಳಿಸಿದ್ದೇವೆ” ಎಂದು ಬಿಜೆಪಿಯನ್ನು ಬೊಟ್ಟು ಮಾಡಿದ್ದಾರೆ.

ಒಟ್ಟಿನಲ್ಲಿ ಸುಳ್ಳು ಪ್ರಚಾರಕ್ಕೆ ಕಡಿವಾಣ ಹಾಕಲು ವಾಟ್ಸ್ ಆಪ್ ತಯಾರಾಗಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಯಾವುದೇ ಒಂದೇ ನಂಬರ್ ನಿಂದ ಒಂದೇ ರೀತಿಯ ಮೆಸೇಜ್ ಗಳು ಗುಂಪುಗಳಿಗೆ ಹರಡಿದರೆ ಅದರ ವಿಮರ್ಷೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದೆ. ಒಳ್ಳೆಯ ಮತ್ತು ಕೆಟ್ಟ ಬಳಕೆದಾರರನ್ನು ಕಂಡುಹಿಡಿಯುವ ಕೆಲಸವು ವಾಟ್ಸ್ ಆಪ್ ನಿಂದ ಆಗಲಿದೆಯಂತೆ.

ಒಟ್ಟಾರೆ 2014 ರ ಚುನಾವಣೆಗಿಂತಲೂ ಹೆಚ್ಚಿನ ಮಹತ್ವವನ್ನು ಈ ಬಾರಿಯ ಚುನಾವಣೆಯ ಸಂದರ್ಬದಲ್ಲಿ ಸೋಷಿಯಲ್ ಮೀಡಿಯಾಗಳು ಪಡೆದುಕೊಳ್ಳುವುದಂತೂ ಗ್ಯಾರೆಂಟಿ.

Best Mobiles in India

English summary
WhatsApp will bring fake news verification model to India. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X