Whatsapp:ಹೊಸ ಸೇವಾ ನಿಯಮ ವಿಚಾರದಲ್ಲಿ ಬಳಕೆದಾರರಿಗೆ ಮಹಾ ಮೋಸ!

|

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಹೊಸ ಗೌಪ್ಯತೆ ಮತ್ತು ಸೇವಾ ನಿಯಮಕ್ಕೆ ನೀಡಿದ್ದ ಗಡುವನ್ನು ತೆರವುಗೊಳಿಸಿದೆ. ಇದೇ ಮೇ 15ರ ನಂತರ ಹೊಸ ಸೇವಾ ನಿಯಮವನ್ನು ಒಪ್ಪಿಕೊಳ್ಳದೆ ಹೋದರೆ ನಿಮ್ಮ ಅಕೌಂಟ್‌ ಬಂದ್‌ ಮಾಡಲಾಗುವುದಿಲ್ಲ ಎಂದು ವಾಟ್ಸಾಪ್‌ ಹೇಳಿದೆ. ಆದರೆ ಇದು ಬಳಕೆದಾರರ ಕಣ್ಣೊರೆಸುವ ತಂತ್ರವಾಗಿದೆ. ಏಕೆಂದರೆ ಗೌಪ್ಯತೆ ನೀತಿಯನ್ನು ಸ್ವೀಕರಿಸದ ಕಾರಣ ಬಳಕೆದಾರರು ತಮ್ಮ ಖಾತೆಗಳನ್ನು ಕಳೆದುಕೊಳ್ಳದಿರಬಹುದು. ಆದರೆ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳದೆ ಇರುವ ಬಳಕೆದಾರರು ಕೆಲವು ಮೂಲ ಫೀಚರ್ಸ್‌ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಹೊಸ ಸೇವಾ ನಿಯಮವನ್ನು ಒಪ್ಪಿಕೊಳ್ಳದೆ ಹೋದರೆ ಕೆಲವು ಫೀಚರ್ಸ್‌ಗಳನ್ನು ಬಳಕೆದಾರರು ಕಳೆದುಕೊಳ್ಳಲಿದ್ದಾರೆ. ಅದರಲ್ಲೂ ಮುಖ್ಯವಾಗಿ ವಾಟ್ಸಾಪ್‌ ಕಾಲ್, ವೀಡಿಯೊ ಕಾಲ್‌ ಫೀಚರ್ಸ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲಾಗಿದೆ. ವಾಟ್ಸಾಪ್ ತನ್ನ ಗೌಪ್ಯತೆ ನೀತಿಯ ವಿಚಾರಲ್ಲಿ ಭಾರಿ ವಿರೋದದ ನಂತರ ಅವರ ಖಾತೆಯನ್ನು ಡಿಲೀಟ್‌ ಮಾಡುವುದಿಲ್ಲ ಎಂದು ಹೇಳಿದೆ. ಹಾಗಂತ ವಾಟ್ಸಾಪ್‌ ಬಳಕೆದಾರರಿಗೆ ತಿಳಿಯದಂತೆಯೇ ಅವರ ಮೇಲೆ ಹೊಸ ಗೌಪ್ಯತೆ ನಿಯಮ ಹೇರುವ ಸಾಹಸ ಮಾಡುತ್ತಿದೆ. ಹಾಗಾದ್ರೆ ಹೊಸ ನಿಯಮ ಒಪ್ಪಿಕೊಳ್ಳದೇ ಹೋದರೆ ವಾಟ್ಸಾಪ್‌ನಲ್ಲಿ ಏನೆಲ್ಲಾ ಸೇವೆಗಳು ಸ್ಟಾಪ್‌ ಆಗಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್‌ನ

ವಾಟ್ಸಾಪ್‌ನ ಹೊಸ ಸೇವಾ ನಿಯಮ ಇದೇ ಮೇ 15ರ ನಂತರ ಶುರುವಾಗಲಿದೆ ಎನ್ನಲಾಗಿದೆ. ವಾಟ್ಸಾಪ್‌ನ ನಿರಂತರ ನೋಟಿಫಿಕೇಶನ್‌ಗಳ ಹೊರತಾಗಿಯೂ ಬಳಕೆದಾರರು ನೀತಿಯನ್ನು ಸ್ವೀಕರಿಸದಿದ್ದರೆ, ನೀತಿಯನ್ನು ಸ್ವೀಕರಿಸಲು ಬಳಕೆದಾರರನ್ನು ಕೇಳುವ ಪರದೆಯು, ನೀವು ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ತೆರೆದಾಗಲೆಲ್ಲಾ ಸಾಂದರ್ಭಿಕವಾಗಿ ಪಾಪ್ ಅಪ್ ಆಗುತ್ತದೆ. ಅಲ್ಲದೆ ನೀವು ಹೊಸ ಸೇವಾ ನಿಯಮ ಒಪ್ಪಿಕೊಳ್ಳದೇ ಹೋದರೆ ನಿಮ್ಮ ಚಾಟ್‌ ಲಿಸ್ಟ್‌ ಅನ್ನು ಪ್ರವೇಶಿಸಲು ಸಹ ಕಷ್ಟವಾಗಲಿದೆ ಎಂದು ವರದಿ ಆಗಿದೆ.

ವಾರಗಳ

ಅಲ್ಲದೆ "ಕೆಲವು ವಾರಗಳ ಸೀಮಿತ ಕಾರ್ಯದ ನಂತರ, ನಿಮಗೆ ಒಳಬರುವ ಕರೆಗಳು ಅಥವಾ ಅಧಿಸೂಚನೆಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ನಿಮ್ಮ ಫೋನ್‌ಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದನ್ನು ವಾಟ್ಸಾಪ್ ನಿಲ್ಲಿಸುತ್ತದೆ. ಇಂತಹ ಸಮಯದಲ್ಲಿ, ಬಳಕೆದಾರರು ಒಂದೋ ಅವರು ಹೊಸ ನಿಯಮಗಳನ್ನು ಸ್ವೀಕರಿಸಬೇಕು. ಇಲ್ಲವೇ ನಿಮ್ಮ ವಾಟ್ಸಾಪ್‌ ಖಾತೆಯನ್ನು ಡಿಲೀಟ್‌ ಮಾಡಬೇಕಾಗುತ್ತದೆ ಎಂದು ಕಂಪನಿಯು ದಿ ಗಾರ್ಡಿಯನ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.

ವಾಟ್ಸಾಪ್

ವಾಟ್ಸಾಪ್ ಹೊಸ ಸೇವಾ ನಿಯಮದ ವಿಚಾರದಲ್ಲಿ ಸಾಕಷ್ಟು ವಿರೋಧವನ್ನು ಎದುರಿಸಿತ್ತು. ಇದೇ ಕಾರಣಕ್ಕೆ ವಾಟ್ಸಾಪ್‌ ಜಾಣ ನಡೆ ಪ್ರದರ್ಶಿಸಿ ನಿಮ್ಮ ವಾಟ್ಸಾಪ್‌ ಅಕೌಂಟ್‌ ಅನ್ನು ಏನು ಮಾಡುವುದಿಲ್ಲ ಎಂಬ ಭರವಸೆಯನ್ನು ಬಳಕೆದಾರರಿಗೆ ನೀಡಿತ್ತು. ಆದರೆ ಇದೀಗ ವಾಟ್ಸಾಪ್‌ ಬೇರೋದು ಮಾರ್ಗದಲ್ಲಿ ತನ್ನ ಹೊಸ ಸೇವಾ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಸುವುದಕ್ಕೆ ಮುಂದಾಗಿದೆ. ಅದರಂತ ನಿಧಾನವಾಗಿ ವಾಟ್ಸಾಪ್‌ ಚಾಟ್ ಲಿಸ್ಟ್‌ಗೆ ಪ್ರವೇಶ, ಸಂದೇಶಗಳನ್ನು ಕಳುಹಿಸುವುದು ಮತ್ತು ಸ್ವೀಕರಿಸುವುದು ಮತ್ತು ಅಪ್ಲಿಕೇಶನ್‌ನಲ್ಲಿರುವ ಎಲ್ಲವು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವು ಫೀಚರ್ಸ್‌ಗಳನ್ನು ಬಳಕೆದಾರರನ್ನು ಕಸಿದುಕೊಳ್ಳಲು ಮುಂದಾಗಿದೆ.

Best Mobiles in India

English summary
Whatsapp will disable key features if you don't accept new privacy policy

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X