ಶೀಘ್ರದಲ್ಲೇ ವಾಟ್ಸಾಪ್‌ ಸೇರಲಿರುವ ಟಾಪ್‌ 5 ಫೀಚರ್ಸ್‌ಗಳು!

|

ವಾಟ್ಸಾಪ್‌ ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ಬಳಕೆದಾರರ ಅನುಕೂಲಕ್ಕಾಗಿ ಹಲವು ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್‌ ಇನ್ನು ಹಲವು ಫೀಚರ್ಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಇವುಗಳ ಪೈಕಿ ಡಿಸ್‌ಅಪೀಯರಿಂಗ್ ಚಾಟ್ಸ್ ಫೀಚರ್, ನ್ಯೂ ಲಾಸ್ಟ್‌ ಸೀನ್‌ ಫೀಚರ್ಸ್, ಹೀಗೆ ಹಲವು ಫೀಚರ್ಸ್‌ಗಳು ಸದ್ಯದಲ್ಲೇ ವಾಟ್ಸಾಪ್‌ ಸೇರ್ಪಡೆಯಾಗಲಿವೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ಸದ್ಯದಲ್ಲೇ ಹಲವು ಆಕರ್ಷಕ ಫೀಚರ್ಸಗಳನ್ನು ಪರಿಚಯಿಸಲಿದೆ. ಇದಕ್ಕಾಗಿ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರೀಕ್ಷೆ ನಡೆಸುತ್ತಿದೆ. ಇವುಗಳಲ್ಲಿ ಕೆಲವು ಫೀಚರ್ಸ್‌ಗಳು ಬೀಟಾ ವರ್ಷನ್‌ ಬಳಕೆದಾರರಿಗೆ ಲಭ್ಯವಾಗಿದೆ. ಇನ್ನು ಅನೇಕ ಫೀಚರ್ಸ್‌ಗಳು ಅಭಿವೃದ್ದಿ ಹಂತದಲ್ಲಿವೆ. ಹಾಗಾದ್ರೆ ಸದ್ಯದಲ್ಲೇ ವಾಟ್ಸಾಪ್‌ ಸೇರಲಿರುವ ಆಕರ್ಷಕ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನ್ಯೂ ಅಪ್ಶನ್ ಫಾರ್ ಲಾಸ್ಟ್ ಸೀನ್

ನ್ಯೂ ಅಪ್ಶನ್ ಫಾರ್ ಲಾಸ್ಟ್ ಸೀನ್

ವಾಟ್ಸಾಪ್‌ ಮುಂದಿನ ದಿನಗಳಲ್ಲಿ, ಲಾಸ್ಟ್‌ ಸೀನ್‌ ಅನ್ನು ಹೈಡ್‌ ಮಾಡುವುದಕ್ಕೆ ಹೊಸ ಫೀಚರ್ಸ್‌ ಸೇರಿಸಲಿದೆ. ಈಗಾಗಲೇ ಈ ಫೀಚರ್ಸ್‌ ಅನ್ನು WaBetaInfo ಗುರುತಿಸಿದೆ. ಇದು ಶೀಘ್ರದಲ್ಲೇ ಸ್ಥಿರ ಆವೃತ್ತಿಗೆ ಬರುವ ನಿರೀಕ್ಷೆಯಿದೆ. ಈ ಹೊಸ ಆಯ್ಕೆಯು ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಈ ಫೀಚರ್ಸ್‌ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ "My contacts except" ಆಯ್ಕೆಯನ್ನು ಸೇರಿಸಲು ಸೆಟ್‌ ಮಾಡಲಾಗಿದೆ. ಇದು ಬಳಕೆದಾರರಿಗೆ ನಿರ್ದಿಷ್ಟ ಸಂಪರ್ಕಗಳಿಗಾಗಿ ಕೊನೆಯದಾಗಿ ನೋಡುವುದನ್ನು ಸಕ್ರಿಯಗೊಳಿಸಲು ಅನುವು ಮಾಡಿಕೊಡುತ್ತದೆ.

ಡಿಸ್‌ಅಪೀಯರಿಂಗ್‌ ಚಾಟ್ಸ್‌

ಡಿಸ್‌ಅಪೀಯರಿಂಗ್‌ ಚಾಟ್ಸ್‌

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಹೊಸ ಮಾದರಿಯ ಡಿಸ್‌ಅಪೀಯರಿಂಗ್‌ ಚಾಟ್ಸ್‌ ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಇನ್ನು ಈ ಫೀಚರ್ಸ್‌ ವಾಟ್ಸಾಪ್‌ನಲ್ಲಿ ಸಿಂಗಲ್‌ ಚಾಟ್ ಮತ್ತು ಗ್ರೂಪ್‌ ಚಾಟ್‌ ಎರಡಕ್ಕೂ ಲಭ್ಯವಿರುತ್ತದೆ. ಈ ಫೀಚರ್ಸ್‌ ಈಗಾಗಲೇ ಅಸ್ತಿತ್ವದಲ್ಲಿರುವ ಡಿಸ್‌ಅಪೀಯರಿಂಗ್‌ ಚಾಟ್‌ ಫೀಚರ್ಸ್‌ನ ಮುಂದುವರೆದ ಭಾಗವಾಗಿದೆ. ಇದಲ್ಲದೆ ಈ ಫೀಚರ್ಸ್‌ ನ್ಯೂ ಚಾಟ್ ಥ್ರೆಡ್‌ಗಳನ್ನು ಆಟೋಮ್ಯಾಟಿಕ್‌ ಅಲ್ಪಕಾಲಿಕ ಚಾಟ್‌ಗೆ ಪರಿವರ್ತಿಸುತ್ತದೆ. ಒಬ್ಬರು ಇದನ್ನು ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಕಾಣಬಹುದು. ಇದನ್ನು ಸಕ್ರಿಯಗೊಳಿಸಿದ ನಂತರ, ಪ್ರತಿ ಹೊಸ ಚಾಟ್ ಅಥವಾ ಗುಂಪಿನಲ್ಲಿರುವ ಎಲ್ಲಾ ಸಂದೇಶಗಳು ಅಲ್ಪಾವಧಿಯ ನಂತರ ಕಣ್ಮರೆಯಾಗುತ್ತವೆ.

ಗ್ರೂಪ್ ಐಕಾನ್ ಎಡಿಟರ್‌

ಗ್ರೂಪ್ ಐಕಾನ್ ಎಡಿಟರ್‌

ವಾಟ್ಸಾಪ್‌ನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.21.20.2 ರಲ್ಲಿ ಗುರುತಿಸಲಾಗಿರುವ ಈ ಹೊಸ ಫೀಚರ್ಸ್‌ ಆಕರ್ಷಕ. ಈ ಹೊಸ ಫೀಚರ್ಸ್‌ ಬಳಕೆದಾರರಿಗೆ ಇಮೇಜ್‌ ಇಲ್ಲದೆ ಹೋದಾಗ ಗ್ರೂಪ್‌ಗಳಿಗೆ ತ್ವರಿತವಾಗಿ ಐಕಾನ್‌ಗಳನ್ನು ಕ್ರಿಯೆಟ್‌ ಮಾಡಲು ಅನುಮತಿಸುತ್ತದೆ. ಐಕಾನ್‌ನ ಬ್ಯಾಕ್‌ಗ್ರೌಂಡ್‌ ಕಲರ್‌ ಆಯ್ಕೆ ಮಾಡುವ ಆಯ್ಕೆಯನ್ನು ಸಹ ಪಡೆಯಬಹುದಾಗಿದೆ. ವಾಟ್ಸಾಪ್‌ನ ಒಂದು ಆಯ್ಕೆಯಾಗಿ ಎಮೋಜಿಗಳು ಮತ್ತು ಸ್ಟಿಕ್ಕರ್‌ಗಳನ್ನು ಕೂಡ ನೀವು ನೋಡಬಹುದಾಗಿದೆ. ಇದಲ್ಲದೆ ಗ್ರೂಪ್ ಐಕಾನ್ ಎಡಿಟರ್ ಫೀಚರ್ ಹೊರತಾಗಿ, ಮೆಸೇಜಿಂಗ್ ಸೇವೆಯು ಗ್ರೂಪ್ ಇನ್ಫೋ ಪುಟವನ್ನು ಮರುವಿನ್ಯಾಸಗೊಳಿಸುತ್ತಿದೆ, ಮತ್ತು ಬಳಕೆದಾರರು ಚಾಟ್ ಮತ್ತು ಕಾಲ್ ಬಟನ್ಗಳನ್ನು ಮುಂಭಾಗ ಮತ್ತು ಮಧ್ಯದಲ್ಲಿ ನೋಡಬಹುದು.

ಹೈ ರೆಸಲ್ಯೂಶನ್ ವೀಡಿಯೊಗಳು ಅಥವಾ ಫೋಟೋಗಳು

ಹೈ ರೆಸಲ್ಯೂಶನ್ ವೀಡಿಯೊಗಳು ಅಥವಾ ಫೋಟೋಗಳು

ವಾಟ್ಸಾಪ್‌ನಲ್ಲಿ ಬಳಕೆದಾರರು ತಮ್ಮ ಸಂಪರ್ಕಗಳಿಗೆ ಕಳುಹಿಸುವ ವಾಟ್ಸಾಪ್ ವೀಡಿಯೊಗಳು ಮತ್ತು ಫೋಟೋಗಳ ಗುಣಮಟ್ಟ ಸದ್ಯ ಅಷ್ಟೊಂದು ಉತ್ತಮವಾಗಿಲ್ಲ. ಇದನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಹೈ ರೆಸಲ್ಯೂಶನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು ಬಳಕೆದಾರರಿಗೆ ವೀಡಿಯೊ ಅಥವಾ ಫೋಟೋ ಅಪ್‌ಲೋಡ್ ಗುಣಮಟ್ಟವನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಬಳಕೆದಾರರು ಶೀಘ್ರದಲ್ಲೇ 'ಬೆಸ್ಟ್ ಕ್ವಾಲಿಟಿ' ಮೋಡ್, 'ಡೇಟಾ ಸೇವರ್' ಮೋಡ್ ಮತ್ತು ನೀವು ಹಂಚಿಕೊಳ್ಳುವ ವಿಡಿಯೋ ಕ್ಲಿಪ್‌ಗಳ ಗುಣಮಟ್ಟವನ್ನು ನಿರ್ಧರಿಸುವ ಆಟೋ ಮೋಡ್‌ಗಳ ನಡುವೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಲಿದೆ.

ಇಮೇಜ್‌ನಲ್ಲಿ ಸ್ಟಿಕ್ಕರ್‌ ಕ್ರಿಯೆಟ್‌

ಇಮೇಜ್‌ನಲ್ಲಿ ಸ್ಟಿಕ್ಕರ್‌ ಕ್ರಿಯೆಟ್‌

ವಾಟ್ಸಾಪ್‌ ತನ್ನ ಬಳಕೆದಾರರಿಗೆ ತಮ್ಮ ಚಿತ್ರಗಳನ್ನು ಸ್ಟಿಕ್ಕರ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಈ ಫೀಚರ್ಸ್‌ ಸದ್ಯ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಸ್ಥಿರ ಆವೃತ್ತಿಯನ್ನು ಸೇರಲಿದೆ. ಈ ಫೀಚರ್ಸ್‌ ಅನ್ನು ಬಳಕೆದಾರರಿಗೆ ಪರಿಚಯಿಸಿದಾಗ, ಅವರು ಅಪ್ಲಿಕೇಶನ್‌ನಲ್ಲಿ ಹೊಸ ಚಿತ್ರವನ್ನು ಅಪ್‌ಲೋಡ್ ಮಾಡಿದಾಗ ಅವರು ಶೀರ್ಷಿಕೆ ಪಟ್ಟಿಯ ಪಕ್ಕದಲ್ಲಿ ಹೊಸ ಸ್ಟಿಕ್ಕರ್ ಐಕಾನ್ ಅನ್ನು ನೋಡುತ್ತಾರೆ. ನೀವು ಆ ಐಕಾನ್ ಅನ್ನು ಆಯ್ಕೆ ಮಾಡಿದಾಗ, ವಾಟ್ಸಾಪ್ ಚಿತ್ರವನ್ನು ಸ್ಟಿಕ್ಕರ್ ಆಗಿ ಕಳುಹಿಸುತ್ತದೆ ಎಂದು ಹೇಳಲಾಗಿದೆ. ಸದ್ಯ ಈ ಎಲ್ಲಾ ಫೀಚರ್ಸ್‌ಗಳು ವಾಟ್ಸಾಪ್‌ ಅನ್ನು ಶೀಘ್ರದಲ್ಲೇ ಸೇರಲಿವೆ.

Best Mobiles in India

English summary
WhatsApp is reportedly planning to add a new option for last seen, a new disappearing chats feature and a redesigned group info page.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X