Home
ಸುದ್ದಿಜಾಲ

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ತಯಾರಾಗಿದೆ ವಾಟ್ಸ್‌ಆಪ್..!

By Gizbot Bureau

ಇನ್ನು ಮುಂದೆ ವಾಟ್ಸ್ ಆಪ್ ನಲ್ಲಿ ಮೆಸೇಜ್ ಕಳಿಸುವುದು ಉಚಿತ ಎಂಬ ಕಾರಣಕ್ಕೆ ಬೇಕಾಬಿಟ್ಟಿಯಾಗಿ ನಿಮ್ಮ ಕಾಂಟ್ಯಾಕ್ಟ್ ನಲ್ಲಿ ಇರುವವರಿಗೆಲ್ಲ ಅನಗತ್ಯ ಮೆಸೇಜ್ ಗಳನ್ನು ಫಾರ್ವರ್ಡ್ ಮಾಡುತ್ತಲೇ ಇರಬೇಡಿ. ಇಷ್ಟು ದಿನಗಳ ವರೆಗೆ ನಿಮ್ಮ ಕಾಟವನ್ನು ಸಹಿಸುತ್ತಿದ್ದವರು ಇನ್ನು ಮುಂದೆ, ನೀವು ಹೀಗೆ ಫಾರ್ವರ್ಡ್ ಮೆಸೇಜ್ ಕಳಿಸಿದ್ದು ತಿಳಿದಾಗ ನಿಮ್ಮನ್ನು ಬ್ಲಾಕ್ ಮಾಡಿಬಿಡಬಹುದು.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ತಯಾರಾಗಿದೆ ವಾಟ್ಸ್‌ಆಪ್..!

ಸುಳ್ಳು ಸುದ್ದಿಗಳಿಗೆ ವಾಟ್ಸ್ ಆಪ್ ಹಾಕುತ್ತಿದೆ ಕಡಿವಾಣ:

ಸುಳ್ಳು ಸುದ್ಧಿಗಳು ಮತ್ತು ಅನಗತ್ಯ ಸುದ್ಧಿಗಳ ವಿರುದ್ಧ ಸಮರ ಸಾರಿರುವ ಫೇಸ್ಬುಕ್ ಮಾಲೀಕತ್ವದ ವಾಟ್ಸ್ ಆಪ್ ದಿನದಿಂದ ದಿನಕ್ಕೆ ತನ್ನಲ್ಲಿ ಹೊಸ ವೈಶಿಷ್ಟತೆಗಳನ್ನು ಸೇರಿಸಿಕೊಳ್ಳುತ್ತಿದೆ. ವಿಶ್ವದಾದ್ಯಂತ ವಾಟ್ಸ್ ಆಪ್ ಬಳಕೆದಾರರಿಗಾಗಿ ವಾಟ್ಸ್ ಆಪ್ ಒಂದು ಹೊಸ ವೈಶಿಷ್ಟ್ಯತೆಯನ್ನು ಸೇರಿಸಿದ್ದು, ಒಂದು ವೇಳೆ ಯಾರಾದರೂ ಫಾರ್ವರ್ಡ್ ಮೆಸೇಜ್ ನ್ನು ನಿಮಗೆ ಕಳುಹಿಸಿದರೆ ಅದನ್ನು ನೀವು ತಿಳಿದುಕೊಳ್ಳಲು ಅವಕಾಶ ನೀಡಲಿದೆ.

ಇನ್ನು ಮುಂದೆ ಫಾರ್ವರ್ಡ್ ಮಾಡಲಾಗಿರುವ ಮೆಸೇಜ್ ಗಳಿಗೆ ಒಂದು ಇಂಡಿಕೇಟರ್ ಇರಲಿದೆ ಮತ್ತು ಅದನ್ನು ಸುಲಭದಲ್ಲಿ ಮೆಸೇಜ್ ಪಡೆದ ವ್ಯಕ್ತಿ ಗುರುತಿಸಬಹುದಾಗಿದ್ದು, ಅಗತ್ಯ ಬಿದ್ದರೆ ಫಾರ್ವರ್ಡ್ ಮೆಸೇಜ್ ನ್ನು ಇಗ್ನೋರ್ ಮಾಡಬಹುದು.

“ ಇಂದಿನಿಂದ, ವಾಟ್ಸ್ ಆಪ್ ನಲ್ಲಿ ನೀವು ರಿಸೀವ್ ಮಾಡಿದ ಮೆಸೇಜ್ ಫಾರ್ವರ್ಡ್ ಮೆಸೇಜ್ ಹೌದಾ ಅಥವಾ ಅಲ್ಲವಾ ಎಂಬುದನ್ನು ನೀವು ಗುರುತಿಸಲು ಅವಕಾಶವಿರುತ್ತದೆ. ಗ್ರೂಪ್ ಚಾಟ್ ನಲ್ಲಿ ಇದು ಬಹಳ ಸಹಾಯಕವಾಗಲಿದ್ದು, ಒನ್-ಆನ್-ಒನ್ ಮಾತುಗಾರಿಕೆಗೆ ನೆರವಾಗಲಿದೆ. ಒಂದು ವೇಳೆ ಅಗತ್ಯವಿಲ್ಲದ ಮೆಸೇಜ್ ಆಗಿದ್ದರೆ ಅದನ್ನು ನೀವು ಕೂಡಲೇ ಗುರುತಿಸಬಹುದು “ ಎಂಬುದಾಗಿ ಹೊಸ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿದ ನಂತರ ವಾಟ್ಸ್ ಆಪ್ ಸಂಸ್ಥೆ ಹೇಳಿಕೊಂಡಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ತಯಾರಾಗಿದೆ ವಾಟ್ಸ್‌ಆಪ್..!

. ವಾಟ್ಸ್ ಆಪ್ ಅಪ್ ಡೇಟ್ ಮಾಡಿಕೊಳ್ಳಿ

ಈ ವೈಶಿಷ್ಟ್ಯವು ನಿಮಗೆ ಸಿಗಬೇಕು ಅಂದರೆ ವಾಟ್ಸ್ ಆಪ್ ಅಪ್ ಡೇಟ್ ಆಗಬೇಕು. ಕಳೆದ ಕೆಲವು ವಾರಗಳಿಂದ ಈ ವೈಶಿಷ್ಟ್ಯವು ಬೆಟ್ ವರ್ಷನ್ ನಲ್ಲಿ ಲಭ್ಯವಿತ್ತು. ಇನ್ನು ಮುಂದೆ ವಾಟ್ಸ್ ಆಪ್ ನಲ್ಲಿ ಮೆಸೇಜ್ ಫಾರ್ವರ್ಡ್ ಮಾಡುವಾಗ ಸ್ವಲ್ಪ ಯೋಚಿಸಿ. ನೀವು ಹೀಗೆ ಪದೇ ಪದೇ ಫಾರ್ವರ್ಡ್ ಮೆಸೇಜ್ ಮಾಡುವುದು ಮಾಡುತ್ತಿದ್ದರೆ ಕಿರಿಕಿರಿಯಾಗುವವರು ಕೂಡಲೇ ನಿಮ್ಮನ್ನ ಬ್ಲಾಕ್ ಮಾಡಬಹುದು ಇಲ್ಲವೇ ಸ್ಪ್ಯಾಮ್ ಮೆಸೇಜ್ ಗಳ ಪಟ್ಟಿಗೆ ಸೇರಿಸಬಹುದು.

ಭಾರತದಲ್ಲಿ ಹೀಗೆ ಫಾರ್ವರ್ಡ್ ಆಗುವ ಮೆಸೇಜ್ ಗಳ ಸಂಖ್ಯೆ ಅತ್ಯಧಿಕವಾಗುತ್ತಿದೆಯಂತೆ. ಸುಳ್ಳು ಸುದ್ದಿಗಳು ಆ ಮೂಲಕ ಹೆಚ್ಚು ಪ್ರಚಾರ ಪಡೆಯುತ್ತಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವೈಶಿಷ್ಟ್ಯವು ಬಹಳ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ. ಅಷ್ಟೇ ಅಲ್ಲ, ಗುಡ್ ಮಾರ್ನಿಂಗ್, ಗುಡ್ ನೈಟ್ ನಂತರ ಶುಭಕೋರುವ ಮೆಸೇಜ್ ಗಳು ಬೇಕಾಬಿಟ್ಟಿಯಾಗಿ ಹರಿದಾಡುವುದು ಕೂಡ ತಪ್ಪುತ್ತದೆ.

ಭಾರತದಲ್ಲಿ ಸುಮಾರು 20 ಮಿಲಿಯನ್ ಬಳಕೆದಾರರಿಗೆ ಈ ವೈಶಿಷ್ಟ್ಯ ಲಭ್ಯವಾಗುತ್ತದೆ. ಹಾಗಾದರೆ ಈ ವೈಶಿಷ್ಟ್ಯವು ಮುಂದಿನ ದಿನಗಳಲ್ಲಿ ಮಾಡುವ ಪರಿಣಾಮವೂ ಕೂಡ ದೊಡ್ಡ ಮಟ್ಟದಲ್ಲೇ ಇರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Best Mobiles in India

English summary
WhatsApp will now let you know which message is forwarded, here's how. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+