Home
ಸುದ್ದಿಜಾಲ

ವಾಟ್ಸಾಪ್‌ನ ಈ ಆಯ್ಕೆ ನಿಮಗೆ ಏನೆಲ್ಲಾ ಲಾಭ ತಂದುಕೊಡಲಿದೆ ಗೊತ್ತಾ?

ಮೆಟಾ ಒಡೆತನದ ವಾಟ್ಸಾಪ್‌ ತನ್ನ ಐಒಎಸ್‌ ಬಳಕೆದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ ಆಡಿಯೋ ಮೆಸೇಜ್‌ಗಳನ್ನು ಟೆಕ್ಸ್ಟ್‌ ಮೆಸೇಜ್‌ ಆಗಿ ಲಿಪ್ಯಂತರ (ಟ್ರಾನ್ಸ್ಕ್ರೈಬ್‌) ಮಾಡಲು ಅನುಮತಿಸಲಿದೆ ಎನ್ನಲಾಗಿದೆ. ಸದ್ಯ ಈ ಫೀಚರ್ಸ್‌ ಅನ್ನು iOS 23.3.0.73 ಆವೃತ್ತಿಯ ಬೀಟಾ ವರ್ಷನ್‌ನಲ್ಲಿ ಸೇರಿಸಲಾಗುತ್ತದೆ ಎಂದು ವಾಬೇಟಾಇನ್ಫೋ ವರದಿಮಾಡಿದೆ. ಇದರಿಂದ ಐಒಎಸ್‌ ಬಳಕೆದಾರರು ವಾಯ್ಸ್‌ ಮೆಸೇಜ್‌ಗಳನ್ನು ಟೆಕ್ಸ್ಟ್‌ ಮೆಸೇಜ್‌ ರೂಪದಲ್ಲಿ ನೋಡಲು ಸಾದ್ಯವಾಗಲಿದೆ.

ವಾಟ್ಸಾಪ್‌ನ ಈ ಆಯ್ಕೆ ನಿಮಗೆ ಏನೆಲ್ಲಾ ಲಾಭ ತಂದುಕೊಡಲಿದೆ ಗೊತ್ತಾ?

ಹೌದು, ವಾಟ್ಸಾಪ್‌ ಐಒಎಸ್‌ ಆವೃತ್ತಿಯಲ್ಲಿ ಹೊಸ ಲಿಪ್ಯಂತರ ಫೀಚರ್ಸ್‌ ಸೇರ್ಪಡೆ ಮಾಡಲು ಸಿದ್ಧತೆ ನಡೆಸಿದೆ. ಇದರಿಂದ ಐಒಎಸ್‌ ಬಳಕೆದಾರರಿಗೆ ಸಾಕಷ್ಟು ಉಪಯೋಗವಾಗಲಿದೆ. ಇದರಿಂದ ನಿಮಗೆ ಬಂದಿರುವ ಧ್ವನಿ ಸಂದೇಶದಲ್ಲಿ ಏನು ಹೇಳಲಾಗಿದೆ ಅನ್ನೊದನ್ನ ಗುರುತಿಸಲು ಸುಲಭವಾಗಲಿದೆ. ಅಲ್ಲದೆ ಆಡಿಯೊವನ್ನು ಟೆಕ್ಸ್ಟ್‌ ಆಗಿ ಕನ್ವರ್ಟ್‌ ಮಾಡಲಿದೆ. ಹಾಗಾದ್ರೆ ವಾಟ್ಸಾಪ್‌ ಐಒಎಸ್‌ ಆವೃತ್ತಿ ಸೇರಲಿರುವ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ತನ್ನ ಐಒಎಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಲಿಪ್ಯಂತರ ಆಯ್ಕೆಯನ್ನು ನೀಡುವುದರಿಂದ ಆಡಿಯೋ ಸಂದೇಶದ ವಿವರ ತಿಳಿಯಲು ಸಾಧ್ಯವಾಗಲಿದೆ. ಇದರಿಂದ ನೀವು ಆಡಿಯೋ ಸಂದೇಶವನ್ನು ಟೆಕ್ಸ್ಟ್‌ ಮೆಸೇಜ್‌ ರೀತಿಯಲ್ಲಿಯೇ ಓದುವುದಕ್ಕೆ ಅವಕಾಶ ಸಿಗಲಿದೆ. ಸದ್ಯ ಈ ಆಯ್ಕೆಯು ಇನ್ನು ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಇದಲ್ಲದೆ ಈ ಫೀಚರ್ಸ್‌ನಲ್ಲಿ ಕೆಲವು ಮಿತಿಗಳನ್ನು ಸಹ ವಿಧಿಸಲಾಗಿದೆ. ಅದರಂತೆ ನಿಮ್ಮ ಆಡಿಯೋ ಸಂದೇಶವು ಪ್ರತಿಲೇಖನಗಳಿಗೆ ಹೊಂದಿಸಲಾದ ಭಾಷೆಯಲ್ಲಿದ್ದರೆ, ಆ ಪದಗಳನ್ನು ಗುರುತಿಸುವುದಿಲ್ಲ ಎಂದು ಹೇಳಲಾಗಿದೆ.

ವಾಟ್ಸಾಪ್‌ನ ಈ ಆಯ್ಕೆ ನಿಮಗೆ ಏನೆಲ್ಲಾ ಲಾಭ ತಂದುಕೊಡಲಿದೆ ಗೊತ್ತಾ?

ಇಂತಹ ಸಮಯದಲ್ಲಿ ನಿಮಗೆ ಆಡಿಯೋ ಸಂದೇಶದ ಭಾಷೆಯನ್ನು ಬದಲಾಯಿಸಲು ಕೇಳುವ ಪ್ರಾಂಪ್ಟ್ ಅನ್ನು ನೀಡುತ್ತದೆ. ಆದರೆ ಈ ಫೀಚರ್ಸ್‌ ಯಾವೆಲ್ಲಾ ಭಾಷೆಗಳನ್ನು ಬೆಂಬಲಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇದಲ್ಲದೆ ನೀವು ಸ್ವೀಕರಿಸುವ ಧ್ವನಿ ಸಂದೇಶಗಳನ್ನು ಮಾತ್ರ ಕೇಳಬಹುದು ಅಥವಾ ಓದಬಹುದು. ಇನ್ನು ವಾಟ್ಸಾಪ್‌ ಪರಿಚಯಿಸಲಿರುವ ಈ ಫೀಚರ್ಸ್ ಐಒಎಸ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಆದರೆ ಇದು ಆಡ್ರಾಯ್ಡ್‌ ಆವೃತ್ತಿಯಲ್ಲಿ ಯಾವಾಗ ಲಭ್ಯವಾಗಲಿದೆ ಅನ್ನೊದು ಇನ್ನು ತಿಳಿದುಬಂದಿಲ್ಲ.

ಪ್ರಸ್ತುತ ಆಂಡ್ರಾಯ್ಡ್‌ ಹಾಗೂ ಐಒಎಸ್‌ ಆವೃತ್ತಿಯಲ್ಲಿ ಲಿಪ್ಯಂತರದ ಆಯ್ಕೆ ಇನ್ನು ಕೂಡ ಲಭ್ಯವಾಗಿಲ್ಲ. ಆದರೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಬಳಸಿಕೊಂಡು ವಾಯ್ಡ್‌ ಮೆಸೇಜ್‌ಗಳನ್ನು ಲಿಪ್ಯಂತರ ಮಾಡಬಹುದು. ಆದರೆ ಇದು ನಿಮ್ಮ ಪ್ರೈವೆಸಿಗೆ ದಕ್ಕೆ ತರುವ ಸಾಧ್ಯತೆಯಿದೆ. ಸದ್ಯಇದೀಗ ವಾಟ್ಸಾಪ್‌ ಐಒಎಸ್‌ನಲ್ಲಿ ಪರಿಚಯಿಸಲಿರುವ ಲಿಪ್ಯಂತರ ಆಯ್ಕೆಯು ಆಪಲ್‌ನ ವಾಯ್ಸ್‌ ಐಡೆಂಟಿಟಿ ಟೆಕ್ನಾಲಜಿಯನ್ನು ಅನುಮತಿಸಬಹುದು ಎನ್ನಲಾಗಿದೆ. ಈ ಆಯ್ಕೆಯು ಬೀಟಾ ಪರೀಕ್ಷೆಯ ನಂತರ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ವಾಟ್ಸಾಪ್‌ನ ಈ ಆಯ್ಕೆ ನಿಮಗೆ ಏನೆಲ್ಲಾ ಲಾಭ ತಂದುಕೊಡಲಿದೆ ಗೊತ್ತಾ?

ಇದಲ್ಲದೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್‌ ಮಾಡುವವರಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಕಾಲಿಂಗ್‌ ಶಾರ್ಟ್‌ಕಟ್‌ ಫೀಚರ್ಸ್‌ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯದೆಯೇ ಕಾಲ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ವಾಟ್ಸಾಪ್‌ನಲ್ಲಿ ನೀವು ಕಾಲ್‌ ಮಾಡಬೇಕಾದರೆ ಕಂಟ್ಯಾಕ್ಟ್‌ ಲಿಸ್ಟ್‌ ತೆಗೆದು ಹೆಸರನ್ನು ಸರ್ಚ್‌ ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ. ಬದಲಿಗೆ ನೀವು ಶಾರ್ಟ್‌ಕಟ್‌ ಆಯ್ಕೆಯಲ್ಲಿರಿಸಿರುವ ಕಂಟ್ಯಾಕ್ಟ್‌ ಮೇಲೆ ಕ್ಲಿಕ್‌ ಮಾಡಿದರೆ ಅವರಿಗೆ ನೇರವಾಗಿ ಕರೆ ಹೋಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ಅಪ್ಲಿಕೇಶನ್‌ ಅನ್ನು ತೆರೆಯಬೇಕಾದ ಅವಶ್ಯಕತೆಯಿರುವುದಿಲ್ಲ ಅನ್ನೊದು ವಾಟ್ಸಾಪ್‌ನ ಐಡಿಯಾ ಆಗಿದೆ. ಈ ಹೊಸ ಫೀಚರ್ಸ್‌ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವಷ್ಟು ಸುಲಭವಾಗಿ ಕರೆ ಮಾಡುವುದಕ್ಕೆ ಅವಕಾಶ ಸಿಗಲಿದೆ ಎನ್ನಲಾಗಿದೆ.

Best Mobiles in India

English summary
WhatsApp working on a new feature for iPhone users which will allow them to transcribe audio messages into text.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+