Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ ಲಾಗಿನ್‌ ಆಯ್ಕೆಯಲ್ಲಿ ಬರಲಿದೆ ಹೊಸ ಬದಲಾವಣೆ.. ಇದರಿಂದ ನಿಮಗೇನು ಲಾಭ!

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಶೀಘ್ರದಲ್ಲೇ ಹೊಸ ಲಾಗಿನ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಲಾಗಿನ್‌ ಆಗುವ ವಿಧಾನವನ್ನು ಬದಲಾಯಿಸಲಿದೆ. ಪಾಸ್‌ಕೀ ಮೂಲಕ ಬಯೋಮೇಟ್ರಿಕ್‌ ದೃಢೀಕರಣ ಕಾರ್ಯವಿಧಾನವನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗಿನ್‌ ಆಗುವುದಕ್ಕೆ ಅವಕಾಶ ನೀಡಲಿದೆ.

ಹೌದು, ವಾಟ್ಸಾಪ್‌ ಬಯೋಮೇಟ್ರಿಕ್‌ ದೃಢೀಕರಣ ಕಾರ್ಯವಿಧಾನದ ಮೂಲಕ ಲಾಗಿನ್‌ ಆಗುವುದಕ್ಕೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಪಾಸ್‌ಕೀ ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಈ ಆಯ್ಕೆಯು ವಾಟ್ಸಾಪ್‌ ಲಾಗಿನ್‌ಗಾಗಿ ಪಾಸ್‌ವರ್ಡ್‌ ಅನ್ನು ಬಳಸುವ ಸಾಧ್ಯತೆಯನ್ನು ತೆಗೆದುಹಾಕಲಿದೆ. ಇದರಿಂದ ನೀವು ಪಾಸ್‌ವರ್ಡ್‌ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಬರುವುದಿಲ್ಲ. ಹಾಗಾದ್ರೆ ವಾಟ್ಸಾಪ್‌ ಪಾಸ್‌ ಕೀ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೀಘ್ರದಲ್ಲೇ ವಾಟ್ಸಾಪ್‌ ಲಾಗಿನ್‌ ಆಯ್ಕೆಯಲ್ಲಿ ಬರಲಿದೆ ಹೊಸ ಬದಲಾವಣೆ!

ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ ಲಾಗಿನ್‌ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಹಾಗೂ ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಪಾಸ್‌ಕೀ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಪಾಸ್‌ಕೀಯನ್ನು ಕ್ರಿಯೆಟ್‌ ಮಾಡಿಕೊಳ್ಳುವ ಮೂಲಕ ನಿಮ್ಮ ಡಿವೈಸ್‌ನಲ್ಲಿ ವಾಟ್ಸಾಪ್‌ ಲಾಗಿನ್‌ ಆಗುವುದಕ್ಕೆ ಸಾಧ್ಯವಾಗಲಿದೆ. ನೀವು ಫೇಸ್‌ ಡಿಟೆಕ್ಷನ್‌ ಅಥವಾ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಬಳಸಿಕೊಂಡು ಸುರಕ್ಷಿತವಾಗಿ ಅಪ್ಲಿಕೇಶನ್‌ಗಳಿಗೆ ಲಾಗ್ ಇನ್ ಮಾಡಲು ಬಳಸಬಹುದಾಗಿದೆ.

ವಾಟ್ಸಾಪ್‌ ಫೀಚರ್ಸ್‌ಗಳನ್ನು ಟ್ರ್ಯಾಕ್‌ ಮಾಡುವ ವಾಬೇಟಾಇನ್ಫೋ ಪ್ರಕಾರ ವಾಟ್ಸಾಪ್‌ನ ಆಂಡ್ರಾಯ್ಡ್‌ 2.23.20.4 ಬೀಟಾದಲ್ಲಿ ಹೊಸ ಪಾಸ್‌ಕೀ ಫೀಚರ್ಸ್‌ ಅನ್ನು ಗುರುತಿಸಲಾಗಿದೆ. ಆದರೆ ಇತ್ತೀಚಿನ ಬೀಟಾ ಅಪ್ಡೇಟ್‌ ಬಳಕೆದಾರರಿಗೆ ಇನ್ನು ಕೂಡ ಈ ಫೀಚರ್ಸ್‌ಗೆ ಪ್ರವೇಶ ಲಭ್ಯವಿಲ್ಲ. ಇದು "ಸೀಮಿತ ಸಂಖ್ಯೆಯ ಬೀಟಾ ಪರೀಕ್ಷಕರಿಗೆ" ಮಾತ್ರ ಹೊರತರಲಾಗುತ್ತಿದೆ ಎಂದು ವರದಿಯಾಗಿದೆ.

ಇನ್ನು ವಾಬೇಟಾಇನ್ಫೋ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ ಹೊಸ ಪಾಸ್‌ಕೀ ಫೀಚರ್ಸ್‌ ಅನ್ನು ವಾಟ್ಸಾಪ್‌ಗೆ "ಸುರಕ್ಷಿತವಾಗಿ ಸೈನ್ ಇನ್ ಮಾಡಲು ಸರಳ ಮಾರ್ಗ" ಎಂದು ವಿವರಿಸಲಾಗಿದೆ. ಆದರೆ ಇದನ್ನು ನಿಮ್ಮ ಪ್ರೈಮೆರಿ ಡಿವೈಸ್‌ನಲ್ಲಿ ಸುರಕ್ಷಿತ ದೃಢೀಕರಣದ ಮೂಲಕ ಇತರ ಡಿವೈಸ್‌ಗಳಿಗೆ ಸೈನ್ ಇನ್ ಮಾಡಲು ಸಹಾಯ ಮಾಡಲು ಬಳಸಬಹುದು ಎಂದು ಹೇಳಲಾಗಿದೆ.

ಪಾಸ್‌ಕೀಗಳನ್ನು ಬಳಸಿಕೊಂಡು ಲಾಗ್‌ ಇನ್‌ ಆಗುವ ಪರಿಕಲ್ಪನೆ ಇದೇ ಮೊದಲೇನಲ್ಲ. ಈಗಾಗಲೇ ಪಾಸ್‌ಕೀಗಳಿಗೆ ಫಿಂಗರ್‌ಪ್ರಿಂಟ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಹೊಸ ಸಾಧನಕ್ಕೆ ಲಾಗ್ ಇನ್ ಮಾಡುವ ಅವಕಾಶವನ್ನು ಗೂಗಲ್‌ ನೀಡಿದೆ. ಈ ಪಾಸ್‌ಕೀಗಳನ್ನು ನಿಮ್ಮ ಡಿವೈಸ್‌ನಲ್ಲಿ ಸುರಕ್ಷಿತವಾಗಿ ಸ್ಟೋರೇಜ್‌ ಮಾಡಲಾಗಿರುತ್ತದೆ. ಜೊತೆಗೆ ಬಯೋಮೆಟ್ರಿಕ್ ದೃಢೀಕರಣವನ್ನು ಒದಗಿಸಿದಾಗ ಬಳಸಬಹುದಾಗಿದೆ.

ಸದ್ಯ ವಾಬೇಟಾಇನ್ಫೋ ಪೋಸ್ಟ್‌ ಮಾಡಿರುವ ಸ್ಕ್ರೀನ್‌ಶಾಟ್‌ ಪ್ರಕಾರ ವಾಟ್ಸಾಪ್‌ ಪಾಸ್‌ಕೀ ಅನ್ನು ನಿಮ್ಮ ಡಿವೈಸ್‌ನ ಪಾಸ್‌ವರ್ಡ್ ಮ್ಯಾನೇಜರ್‌ನಲ್ಲಿ ಸ್ಟೋರೇಜ್‌ ಮಾಡಲಾಗುತ್ತದೆ ಎನ್ನಲಾಗಿದೆ. ಇದು ಆಟೋಫಿಲ್‌ ಬೆಂಬಲದೊಂದಿಗೆ ಗೂಗಲ್‌ನಿಂದ ನಿರ್ವಹಿಸಲ್ಪಡುವ ಡಿವೈಸ್‌ನ ಡೀಫಾಲ್ಟ್ ಪಾಸ್‌ವರ್ಡ್ ಸ್ಟೋರ್ ಆಗಿರಲಿದೆ. ಇದಲ್ಲದೆ ಈ ಫೀಚರ್ಸ್‌ ಐಫೋನ್‌ನಲ್ಲಿಯೂ ಸಹ ಲಭ್ಯವಾಗುವ ನಿರೀಕ್ಷೆಯಿದೆ.

ಇನ್ನು ಇತ್ತೀಚಿಗೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್‌ ಚಾನಲ್‌ ಫೀಚರ್ಸ್‌ ಪರಿಚಯಿಸಿದೆ. ಇದು ಬಳಕೆದಾರರಿಗೆ ತಮ್ಮ ಸಂಸ್ಥೆಗಳ, ಆಸಕ್ತಿಗಳ, ಇಲ್ಲವೇ ನೆಚ್ಚಿನ ತಾರೆಗಳ ಅಧಿಕೃತ ಚಾನಲ್‌ಗಳನ್ನು ಫಾಲೋ ಮಾಡಲು ಅವಕಾಶ ಸಿಗಲಿದೆ. ಈ ಡೈರೆಕ್ಟರಿಯಲ್ಲಿ, ಬಳಕೆದಾರರು ತಮ್ಮ ಹವ್ಯಾಸಗಳು, ಕ್ರೀಡಾ ತಂಡಗಳಿಗೆ ಸಂಬಂಧಿಸಿದ ಚಾನಲ್‌ಗಳನ್ನು ಕಾಣಬಹುದಾಗಿದೆ. ಇದಲ್ಲದೆ, ಚಾಟ್‌ಗಳು, ಇಮೇಲ್‌ಗಳು ಅಥವಾ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಇನ್ವೈಟ್‌ ಲಿಂಕ್‌ಗಳನ್ನು ಅನುಸರಿಸುವ ಮೂಲಕ ಬಳಕೆದಾರರು ವಾಟ್ಸಾಪ್‌ ಚಾನಲ್‌ಗಳಿಗೆ ಸೇರುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ.

Best Mobiles in India

English summary
WhatsApp will soon allow you to create a passkey: How It Works Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+