ಶೀಘ್ರದಲ್ಲಿಯೆ ಬಳಕೆದದಾರರಿಗೆ ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸಾಪ್‌ ಸಿದ್ದತೆ!

|

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಆಪ್‌ ಅಂದ್ರೆ ಅದು ವಾಟ್ಸಾಪ್‌. ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಉತ್ತಮ ಚಾಟಿಂಗ್‌ ಅನುಭವವನ್ನು ಉತ್ತಮಗೊಳಿಸಲು ಅನೇಕ ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕಾಗಿ ನಿರಂತರವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಇದೆ. ಇದೀಗ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬಯಸುವ 'expiring message' ಫೀಚರ್ಸ್‌ ಜೊತೆಗೆ, ಶೀಘ್ರದಲ್ಲೇ ಗ್ರೂಪ್‌ ಚಾಟ್‌ಗಳನ್ನು 'ಶಾಶ್ವತವಾಗಿ' ಮ್ಯೂಟ್ ಮಾಡುವ ಆಯ್ಕೆಯನ್ನು ನೀಡಲು ವಾಟ್ಸಾಪ್‌ ಸಿದ್ದತೆ ನಡೆಸಿದೆ.

ವಾಟ್ಸಾಪ್‌

ಹೌದು, ಬಳಕೆದಾರರ ಆಶಯಗಳಿಗೆ ತಕ್ಕಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಇದೀಗ ವಾಟ್ಸಾಪ್‌ ಗ್ರೂಪ್ ಚಾಟ್‌ಗಳನ್ನ ನೀವು ಬಯಸಿದರೆ ಶಾಶ್ವತವಾಗಿ ಮ್ಯೂಟ್‌ ಮಾಡುವ ಅವಕಾಶವನ್ನ ನೀಡುವುದಕ್ಕೆ ಸಿದ್ದತೆ ನಡೆಸಿದೆ. ಕೆಲವೊಮ್ಮೆ ನಿಮಗೆ ಇಷ್ಟವಿಲ್ಲದೆ ಹೋದರೂ ಕೆಲವೊಂದು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ನೀವು ಇರಲೇಬೆಕಾದ ಅನಿವಾಯ್ತೆ ಇರುತ್ತದೆ. ಆದರೂ ಆಗ್ರೂಪ್‌ಗೆ ಬರುವ ಸಮದೇಶಗಳನ್ನ ನೊಡುವ ಅವಶ್ಯಕತೆ ನಿಮಗೆ ಇಲ್ಲದೆ ಹೋದರೆ ನೀವು ಆ ಗ್ರೂಪ್‌ ಅನ್ನು ಶಾಶ್ವತವಾಗಿ ಮ್ಯೂಟ್‌ ಮಾಡಬಹುದಾಗಿದೆ. ಅಷ್ಟಕ್ಕೂ ವಾಟ್ಸಾಪ್‌ ಪರಿಚಯಿಸಲು ಸಿದ್ದತೆ ನಡೆಸಿರುವ ಈ ಫೀಚರ್ಸ್‌ ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್

ಇಷ್ಟು ದಿನಗಳ ಕಾಲ ವಾಟ್ಸಾಪ್‌ನಲ್ಲಿ ನಿಮಗೆ ಇಷ್ಟವಿಲ್ಲದ ನಂಬರ್‌, ಅಥವಾ ವಾಟ್ಸಾಪ್‌ ಗ್ರೂಪ್‌ನ ಚಾಟ್‌ಗಳನ್ನ ಕೇವಲ ಎಂಟು ಗಂಟೆಗಳ ಕಾಲ, ಒಂದು ವಾರ ಅಥವಾ ಒಂದು ವರ್ಷದ ಗರಿಷ್ಠ ಸಮಯದವರೆಗೆ ಮ್ಯೂಟ್ ಮಾಡುವ ಅವಕಾಶ ನಿಡಲಾಗಿತ್ತು. ವಾಟ್ಸಾಪ್‌ ಚಾಟ್‌ಗಳು, ಒನ್ ಆನ್ ಒನ್ ಚಾಟ್‌ಗಳು ಮತ್ತು ಗ್ರೂಪ್‌ ಚಾಟ್‌ಗಳನ್ನು ಮಾತ್ರ ಇದು ಅನುಮತಿಸುತ್ತಿತ್ತು. ಈ ಅವಧಿ ಮುಗಿದ ನಂತರ, ಸಂಬಂಧಪಟ್ಟ ಚಾಟ್ ಅನ್ನು ಮತ್ತೆ ಮ್ಯೂಟ್ ಮಾಡಬೇಕಾದ ಅನಿವಾರ್ಯತೆ ಇತ್ತು. ಅಲ್ಲದೆ ಚಾಟ್ ಅನ್ನು ಮ್ಯೂಟ್ ಮಾಡಲು ಕೆಲವು ಸೆಕೆಂಡುಗಳು ತೆಗೆದುಕೊಳ್ಳುತ್ತದೆ, ಆದರೆ ಇನ್ಮುಂದೆ ನೀವು ಶಾಶ್ವತವಾಗಿ ಮ್ಯೂಟ್‌ ಮಾಡುವ ಫೀಚರ್ಸ್‌ ಅನ್ನು ಸದ್ಯದಲ್ಲಿಯೇ ಬಳಕೆದಾರರಿಗೆ ಲಭ್ಯವಾಗಲಿದೆ.

ವಾಟ್ಸಾಪ್

ಬಳಕೆದಾರರ ಅನುಕೂಲಕ್ಕಾಗಿ ಹಲವು ವಿಷಯಗಳನ್ನು ಸುಲಭಗೊಳಿಸುವ ಫಿಚರ್ಸ್‌ಗಳನ್ನ ವಾಟ್ಸಾಪ್ ಪರಿಚಯಿಸಲು ಹೊರಟಿದೆ. ಪ್ರಸ್ತುತ ಶಾಶ್ವತ ಮ್ಯೂಟ್‌ ಫೀಚರ್ಸ್‌ ವಾಟ್ಸಾಪ್‌ ಬೀಟಾವರ್ಷನ್‌ನಲ್ಲಿ ಪರೀಕ್ಷಿಸಲು ಸಿದ್ದತೆ ನಡೆಸಲಾಗಿದೆ. ಇನ್ನು ಈಗಾಗಲೇ ಲಬ್ಯವಿರುವ ಎಂಟು ಗಂಟೆ ಮತ್ತು ಒಂದು ವಾರದ ಮ್ಯೂಟ್ ಆಯ್ಕೆಗಳು ಕೂಡ ಮುಂದೆಯೂ ಲಬ್ಯವಿರಲಿವೆ ಎಂದು ಹೇಳಲಾಗ್ತಿದೆ. ಸದ್ಯ ಇಷ್ಟವಿಲ್ಲದ ಗ್ರೂಪ್‌ನಲ್ಲಿ ಇದ್ದುಕೊಮಡು ಕೇವಲ ಗುಡ್‌ಮಾರ್ನಿಂಗ್‌, ಗುಡ್‌ನೈಟ್‌ ಚಾಟ್‌ಗಳನ್ನ ನೋಡಿ ಕಿರಿಕಿರಿ ಅನುಭವಿಸುವವರಿಗೆ ಶಾಶ್ವತ ಮ್ಯೂಟ್‌ ಆಯ್ಕೆ ಉತ್ತಮ ಆಯ್ಕೆ ಆಗಿರಲಿದೆ.

ಮ್ಯೂಟ್‌

ಶಾಶ್ವತವಾಗಿ ಮ್ಯೂಟ್‌ ಮಾಡುವ ಫೀಚರ್ಸ್‌ನಿಂದ ನೀವು ಗ್ರೂಪ್‌ ಬಿಡುವ ಅಗತ್ಯವಿಲ್ಲ. ಆದರೆ ಗ್ರೂಪ್‌‌ನಲ್ಲಿದ್ದರೂ ಅವರನ್ನು ನಿರ್ಲಕ್ಷಿಸಬಹುದಾಗಿದೆ. ಕೇವಲ ಒಂದು ವರ್ಷದ ಮ್ಯೂಟ್‌ ಅವದಿ ಮುಗಿದ ನಂತರ ಮತ್ತೆ ಪರ್ಸನಲ್‌ ಚಾಟ್‌, ಗ್ರೂಪ್‌ ಚಾಟ್‌ಗಳನ್ನ ನೆನಪಿಸಿಕೊಂಡು ಮ್ಯೂಟ್‌ ಮಾಡುವ ಅಗತ್ಯವನ್ನು ಇದು ದೂರ ಮಾಡಲಿದೆ. ಅಲ್ಲದೆ ಸಹಜವಾಗಿಯೇ ನೀವು ಗುಂಪಿನಿಂದ ಅಥವಾ ನೀವು ಮ್ಯೂಟ್ ಮಾಡಿದ ವ್ಯಕ್ತಿಯಿಂದ ಸಂದೇಶಗಳನ್ನು ಸ್ವೀಕರಿಸಲು ಹಿಂತಿರುಗಲು ಬಯಸಿದರೆ, ನೀವು ಅವುಗಳನ್ನು ಅನ್‌ಮ್ಯೂಟ್ ಮಾಡಬಹುದಾದ ಅವಕಾಶವನ್ನು ಸಹ ನೀಡಲಾಗಿದೆ.

Best Mobiles in India

English summary
WhatsApp is going to introduce and option for you to mute chats forever. Currently in beta, this new feature replaces the mute for one year option with an ‘Always’.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X